ಸದಸ್ಯ:Nandini nandu/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ನಾಪ್ಡೀಲ್
ಸಂಸ್ಥೆಯ ಪ್ರಕಾರಖಾಸಗಿ
ಸ್ಥಾಪನೆ೨೦೧೦ (೨೦೧೦)
ಸಂಸ್ಥಾಪಕ(ರು)ಕುನಾಲ್ ಬಹ್ಲ
ರೋಹಿತ್ ಬನ್ಸಾಲ್
ಮುಖ್ಯ ಕಾರ್ಯಾಲಯದಹಲಿ ಭಾರತ
ವ್ಯಾಪ್ತಿ ಪ್ರದೇಶಭಾರತ
ಉದ್ಯಮಇಂಟರ್ನೆಟ್
ಸೇವೆಗಳುಆನ್ಲೈನ್ ಶಾಪಿಂಗ್


ಪರಿಚಯ[ಬದಲಾಯಿಸಿ]

ಸ್ನಾಪ್ಡೀಲ್ ವ್ಯಾಪರಿಗಳಿಂದ ಗ್ರಾಹಕರಿಗೆ ಸೇವೆಯನ್ನು ಒದಗಿಸುವ ದೊಡ್ಡ ಆನ್ಲೈನ್ ಮಾರುಕಟ್ಟೆಯಾಗಿದೆ. ಕುನಲ್ ಭಾಲ್ ರವರು ತಮ್ಮ ಬಾಲ್ಯ ಸ್ನೇಹಿತರಾದ ರೋಹಿತ್ ಬನ್ಸಾಲ್ ರವರ ಜೊತೆಗೂಡಿ ಸ್ನಾಪ್ಡೀಲ್ ನನ್ನು ಫೆಬ್ರವರಿ ೪,೨೦೧೦ ರಂದು ಆರಂಭಿಸಿದರು. ಸ್ನಾಪ್ಡೀಲ್ ಆನ್ಲೈನ್ ಮಾರುಕಟ್ಟೆಯು ದೈನಂದಿನ ವ್ಯವಹರಿಸುವ ವೇದಿಕೆಯಾಗಿ ಪ್ರಾರಂಭವಾಯಿತು. ಅದರೆ ಸೆಪ್ಟ್ಂಬರ್ ೨೦೧೧ರಲ್ಲಿ ಅದನ್ನು ವಿಸ್ತರಿಸಲಾಯಿತು. ಕುನಲ್ ರವರು ಸ್ನಾಫ್ಡೀಲ್ನ ಸಂಸ್ಥಾಪಕರು ಹಾಗು ಸಿ.ಇ.ಒ. ಸ್ನಾಪ್ಡೀಲ್ ಭಾರತದ ದೊಡ್ಡ ಆನ್ಲೈನ್ ಮಾರುಕಟ್ಟೆ. ಸ್ನಾಫ್ಡೀಲ್ ಗ್ರಾಹಕ ಗಮನ, ಮಾರಾಟಗಾರರಿಗೆ ಮತ್ತು ಖರೀದಿದಾರರಿಗೆ ವೇದಿಕೆಯನ್ನು ಒದಗಿಸುವ ತಂತ್ರಜ್ಞಾನ ಕಂಪನಿ. ಸ್ನಾಪ್ದೀಲ್ ನಲ್ಲಿ ಕೇವಲ ಉತ್ಪನ್ನಗಳನ್ನು ಮಾರಾಟಮಾಡುವುದಲ್ಲದೆ, ಅದರೊಂದಿಗೆ ಉತ್ತಮ ಸೇವೆಗಳನ್ನು ಒದಗಿಸುವ ಮೂಲಕ ತಮ್ಮ "ಸ್ನಾಫ್ಡೀಲ್" ಆನ್ಲೈನ್ ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ. ಕುನಲ್ ಭಾಲ್ ರವರಿಗೆ ಪೆನ್ ದ್ವಿ ಪದವಿ ಎಂ & ಟಿ ಎಂಜಿನಿಯರಿಂಗ್ ಮತ್ತು ವ್ಯಾಪರ ಕಾರ್ಯಕ್ರಮದ ಭಾಗವಾಗಿ ಒಂದು ವಾರ್ಟನ್ ಪದವಿ ದೊರಕಿದೆ ಮತ್ತು ರೋಹಿತ್ ಬನ್ಸಾಲ್ ರಿಗೆ ಐಐಟಿ ದೆಹಲಿ ಪದವಿಧಾರ ಎಂಬ ಪದವಿ ಫೆಬ್ರವರಿ ೨೦೧೦ರಲ್ಲಿ ದೊರಕಿದೆ.ಮಾರ್ಚ್ ೨೦೧೫ರಲ್ಲಿ ಸ್ನಾಪ್ಡೀಲ್ ಭಾರತದಲ್ಲಿ ತನ್ನ ವೆಬ್ಸೈಟ್ ಪ್ರಚಾರಕ್ಕಾಗಿ ನಟ ಅಮೀರ್ ಖಾನ್ ನನ್ನು ಕರೆತಂದರು.

ವಿಸ್ತರಣೆ[ಬದಲಾಯಿಸಿ]

ಸ್ನಾಪ್ಡೀಲ್ ಪ್ರಸ್ತುತವಾಗಿ ದೇಶಾದ್ಯಾಂತ ೨,೭೫,೦೦೦ ಮಾರಾಟಗಾರರನ್ನು ಹೊಂದಿದೆ. ೩೦ ದಶಲಕ್ಷ ಉತ್ಪನ್ನಗಳನ್ನು ೬೦೦೦ ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ತನ್ನ ವ್ಯಾಪ್ತಿಯನ್ನು ಹರಡಿದೆ.ಸ್ನಾಪ್ಡೀಲ್ ಮಾರುಕಟ್ಟೆಯು ೧೦ ಮಿಲಿಯನ್ ಉತ್ಪನ್ನಗಳನ್ನು ವಿವಿಧ ವರ್ಗಗಳಲ್ಲಿ ೫೦೦೦ರಕ್ಕು ಹೆಚ್ಚು ನಗರ ಹಾಗು ಪಟ್ಟಣಗಳಲ್ಲಿ ಮಾರಟವನ್ನು ಮಾಡಲಾಗಿದೆ.[೧]

ಹೂಡಿಕೆದಾರರು[ಬದಲಾಯಿಸಿ]

ಕಂಪನಿಯ ಹೂಡಿಕೆದಾರರು ಸಾಫ್ಟ್ ಬ್ಯಾಂಕ್ ಕಾರ್ಪ್, ರು-ನೆಟ್ ಹೋಲ್ಡಿಂಗ್ಸ್, ಅಲಿಬಾಬಾ ಗ್ರೂಫ್, ಟೆಮಾಸೆಕ್ ಹೋಲ್ಡಿಂಗ್ಸ್, ಬೆಸ್ಸಮರ್ ವೆಂಚರ್ ಪಾಲುದಾರರು, ಕಲಾರಿ ಕ್ಯಾಪಿಟಲ್, ಫಾಕ್ಸ್ಕಾನ್ಗಳ ತಂತ್ರಜ್ಞಾನ ಗುಂಪು, ಬ್ಲ್ಯಾಕ್ರಾಕ್, ಇಬೇ, ನೆಕಸ್ಸ್ ವೆಂಚರ್ಸ್, ಇಂಟೆಲ್ ಕ್ಯಾಪಿಟಲ್ ಸೇರಿವೆ ಅವುಗಳ ಜೋತೆಗೆ, ಬಂಟಾರಿಯಾದ ಶಿಕ್ಷಕರ ಪೆನ್ಷನ್ ಯೋಜನೆ, ಸಿಂಗಪುರ ಮೂಲದ ಹೂಡಿಕೆ ಘಟಕದ ಸೋದರ ಫಾರ್ಚೂನ್ ಉಡುಪು ಮತ್ತು ರತನ್ ಟಾಟಾ.[೨] ಸ್ನಾಪ್ಡೀಲ್ ಶೇರು ವ್ಯವಹಾರದಲ್ಲಿ ಫ್ರೀಚಾರ್ಜ್ ವಶಪಡಿಸಿಕೂಂಡಾಗ ಸಿಕ್ವೊಯ ಕ್ಯಾಪಿಟಲ್ ಭಾರತ, ವೇಲಿಯಂಟ್ ಕ್ಯಾಪಿಟಲ್ ಮತ್ತು ರು-ನೆಟ್ ಹೋಲ್ಡಿಂಗ್ಸ್ ಶೇರುದಾರರು ಹೂಡಿಕೆದಾರರಾದರು.

ಉದ್ಯೋಗಿಗಳ ಸಮಸ್ಯೆಗಳು[ಬದಲಾಯಿಸಿ]

ಸ್ನಾಪ್ಡೀಲ್ ಉದ್ಯೋಗಿಗಳು, ಕಂಪನಿ ತಮ್ಮನ್ನು ಫೈರಿಂಗ್ ಮತ್ತು ಕಳೆದ ಒಂದು ವರ್ಷದಿಂದ ರಾಜೀನಾಮೆ ಕೊಡಬೇಕೆಂದು ಬಲವಂತವನ್ನು ಮಾಡುತ್ತಿದೆ ಎಂದು ಫೆಬ್ರವರಿ ೨೦೧೬ರಲ್ಲಿ ಕಾರ್ಮಿಕ ಇಲಾಖೆಗೆ ದೂರನ್ನು ಸಲ್ಲಿಸಿತ್ತು.[೩] ಸ್ನಾಪ್ಡೀಲ್ ನೌಕರರ ಪ್ರತಿಭಟನೆಯ ನಂತರ ದೆಹಲಿ ಸರಕಾರವು ಕಾರ್ಮಿಕ ಇಲಾಖೆಗೆ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿತು.

ಪ್ರಶಸ್ತಿಗಳು[ಬದಲಾಯಿಸಿ]

ವರ್ಷದ ಅತ್ಯುತ್ತಮ ಜಾಹೀರಾತು ಅಭಿಯಾನದ ಭಾರತೀಯ ಚಿಲ್ಲರೆ(e-Retail) ಪ್ರಶಸ್ತಿಗಯನ್ನು ಫೆಬ್ರವರಿ ೨೦೧೨ರಂದು ಪಡೆದಿದೆ. ೨೦೧೧ರಲ್ಲಿ ರೆಡ್ ಹೆರಿಂಗ್ ಏಷ್ಯಾ ಪ್ರಶಸ್ತಿಯನ್ನು ಪಡೆದಿದೆ. ವರ್ಷದ ಇ-ಕಾಮರ್ಸ್ ಸೈಟ್ ಎಂದು ಜನವರಿ ೨೦೧೨ರಲ್ಲಿ ವತ್ ಪ್ರಶಸ್ತಿಯನ್ನು ಗಳಿಸಿದೆ.

ವ್ಯಾಪಾರ ಫಲಿತಾಂಶಗಳು[ಬದಲಾಯಿಸಿ]

ಸ್ನಾಪ್ಡೀಲ್ ೨೦೧೨-೨೦೧೩ರಲ್ಲಿ ೬೦೦ ಕೋಟಿ ಆದಾಯವನ್ನು ನಿರೀಕ್ಷಿಸಿತು. ಅದರೆ ಸ್ನಾಪ್ಡೀಲ್ ಸಿ.ಇ.ಒ. ಕುನಲ್ ಭಾಲ್ ರವರು ಶೇ.೧೫-೨೦ರಷ್ಟು ಆದಾಯವು ಮೊಬೈಲ್ ಕಾಮರ್ಸನಿಂದ ಬಂದಿರುವುದನ್ನು ತಿಳಿಸಿದರು.

ಫಂಡಿಂಗ್[ಬದಲಾಯಿಸಿ]

ಸ್ನಾಪ್ಡೀಲ್ ಹಣಸಹಾಯವನ್ನು ೭ ಸುತ್ತುಗಳಲ್ಲಿ(ಹಂತ) ಪಡೆದಿದೆ. ಹಂತ ೧: ಜನವರಿ ೨೦೧೧ರಲ್ಲಿ ಸ್ನಾಪ್ಡೀಲ್ ನೆಕಸ್ಸ್ ವೆಂಚರ್ಸ್ ಪಾಲುದಾರರಿಂದ ಮತ್ತು ಭಾರತ-ಅಮೆರಿಕ ವೆಂಚರ್ ಪಾರ್ಟ್ನಸಿಂದ $೧೨ ಮಿಲಿಯನ್ ಹಣಸಹಾಯವನ್ನು ಸ್ವಿಕರಿಸಿದೆ. ಹಂತ ೨: ಜುಲೈ ೨೦೧೧ರಲ್ಲಿ, ಕಂಪನಿಯ ಬೆಸ್ಸಮರ್ ವೆಂಚರ್ ನಿಂದ ಇನ್ನು $೪೫ ದಶಲಕ್ಷ ಮೊತ್ತದ ಹಣಸಹಾಯವನ್ನು ಅಸ್ತಿತ್ವದಲ್ಲಿರುವ ಹೂಡಿಕೆದಾರರದ ನೆಕಸ್ಸ್ ವೆಂಚರ್ಸ್ ಪಾಲುದಾರರು ಮತ್ತು ಭಾರತ ಅಮೆರಿಕ ವೆಂಚರ್ ನಿಂದ ಪಡೆದರು. ಹಂತ ೩: ಸ್ನಾಪ್ಡೀಲ್ ನಂತರ ಇಬೇ ನಿಂದ $೫೦ ದಶಲಕ್ಷ ಮೊತ್ತದ ಹಣವನ್ನು ೩ನೇ ಸುತ್ತಿನಲ್ಲಿ ಪಡೆದರು. ಹಂತ ೪: ಸ್ನಾಪ್ಡೀಲ್ ಫೆಬ್ರವರಿ ೨೦೧೪ರಂದು $೧೩೩ ಮಿಲಿಯನ್ ಮೊತ್ತದ ಹಣವನ್ನು ೪ನೇ ಸುತ್ತಿನಲ್ಲಿ ನೆಕಸ್ಸ್ ವೆಂಚರ್ಸ್ ಪಾಲುದಾರರು, ಬೆಸ್ಸಮರ್ ವೆಂಚರ್ ನಿಂದ, ಹಾಗೂ ಕಲಾರಿ ಕ್ಯಾಪಿಟಲ್ ನಿಂದ ಪಡೆದರು. ಹಂತ ೫: ಸ್ನಾಪ್ಡೀಲ್ ಮೇ ೨೦೧೪ರಲ್ಲಿ $೧೦೫ ಮಿಲಿಯನ್ ಮೊತ್ತದ ಹಣವನ್ನು ಅದರ ೫ನೇ ಸುತ್ತಿನಲ್ಲಿ ಬ್ಲ್ಯಾಕ್ರಾಕ್, ಟೆಮಾಸೆಕ್ ಹೋಲ್ಡಿಂಗ್ಸ್ ಮತ್ತು ಇತರ ಹುಡಿಕೆದಾರರಿಂದ ಪಡೆದರು. ಹಂತ ೬: ಸ್ನಾಪ್ಡೀಲ್ ಅಕ್ಟೋಬರ್ ೨೦೧೪ರಲ್ಲಿ $೬೪೭ ಮಿಲಿಯನ್ ಮೊತ್ತದ ಹಣವನ್ನು ಸಾಫ್ಟ್ ಬ್ಯಾಂಕ್ ಹುಡಿಕೆದಾರರಿಂದ ಅದರ ೬ನೇ ಸುತ್ತಿನಲ್ಲಿ ಪಡೆದರು. ಹಂತ ೭: ಸ್ನಾಪ್ಡೀಲ್ ಆಗಸ್ಟ್ ೨೦೧೫ರಲ್ಲಿ ಅಲಿಬಾಬಾ ಗ್ರೂಫ್ ಮತ್ತು ಸಾಫ್ಟ್ ಬ್ಯಾಂಕ್ ತಾಜಾ ರಾಜಧಾನಿಯಿಂದ $೫೦೦ ದಶಲಕ್ಷ ಮೊತ್ತದ ಹುಡಿಕೆಯನ್ನು ಸ್ವಿಕರಿಸಿದೆ.

ವಿಲೀನ[ಬದಲಾಯಿಸಿ]

ಆಗಸ್ಟ್ ೨೦೧೬ ರಲ್ಲಿ, ಸ್ನಾಪ್ಡೀಲ್ ಮೇಲೆ ಒಂದು ವದಂತಿಯಿತ್ತು. ಅದು ಸ್ನಾಪ್ಡೀಲ್ ತನ್ನ ದೊಡ್ಡ ಪ್ರತಿಸ್ಪರ್ಧಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ವಿಲೀನಗಳ ಸಾಧ್ಯತೆಗಳನ್ನು ಪರಿಗಣಿಸಿ ಎಂದು ವಿ.ಸಿ. ಸರ್ಕಲ್ ವಿಶೇಷ ಲೇಖನವನ್ನು ಆವರಿಸಿತು.[೪]

ಸ್ವಾಧೀನಗಳು[ಬದಲಾಯಿಸಿ]

ಜೂನ್ ೨೦೧೧ರಲ್ಲಿ, ಸ್ನಾಪ್ಡೀಲ್ (Grabbon.com)ನನ್ನು ಸ್ವಾಧೀನಪಡಿಸಿಕೊಂಡಿತು. ಏಪ್ರಿಲ್ ೨೦೧೨ ರಲ್ಲಿ, ಸ್ನಾಪ್ಡೀಲ್ ಆನ್ಲೈನ್ ಕ್ರೀಡಾ ವಸ್ತುಗಳ ಚಿಲ್ಲರೆ, (esportsbuy.com)ನನ್ನು ಸ್ವಾಧೀನಪಡಿಸಿಕೊಂಡಿತು. ಮೇ ೨೦೧೩ ರಲ್ಲಿ, ಸ್ನಾಪ್ಡೀಲ್ (Shopo.in) ಭಾರತೀಯ ಕರಕುಶಲ ಉತ್ಪನ್ನಗಳ ಆನ್ಲೈನ್ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಂಡಿತು. ಏಪ್ರಿಲ್ ೨೦೧೪ ರಲ್ಲಿ, ಸ್ನಾಪ್ಡೀಲ್ (Doozton.com)ನನ್ನು ಸ್ವಾಧೀನಪಡಿಸಿಕೊಂಡಿತು. ಡಿಸೆಂಬರ್ ೨೦೧೪ ರಲ್ಲಿ, ಸ್ನಾಪ್ಡೀಲ್ (Wishpicker.com)ನನ್ನು ಸ್ವಾಧೀನಪಡಿಸಿಕೊಂಡಿತು. ಫೆಬ್ರವರಿ ೨೦೧೫ ರಲ್ಲಿ, ಸ್ನಾಪ್ಡೀಲ್ ಐಷಾರಾಮಿ ಫ್ಯಾಷನ್ ಉತ್ಪನ್ನಗಳ ಆವಿಷ್ಕಾರ ಸೈಟ್ ನನ್ನು, (Exclusively.in) ಸ್ವಾಧೀನಪಡಿಸಿಕೊಂಡಿತು. ಏಪ್ರಿಲ್ ೨೦೧೫ ರಲ್ಲಿ, ಸ್ನಾಪ್ಡೀಲ್ ಮೊಬೈಲ್ ಪಾವತಿ ಕಂಪನಿಯ (FreeCharge.com)ನನ್ನು ಸ್ವಾಧೀನಪಡಿಸಿಕೊಂಡಿತು.

ಉಲ್ಲೇಖಗಳು[ಬದಲಾಯಿಸಿ]

  1. Gooptu, Biswarup (28 February 2014). "Snapdeal co-founder Kunal Bahl: A rising star of India's e-commerce space". The Economic Times. Retrieved 16 November 2014.
  2. "Venture Backed Startups turn Acquisitive". Venture Intelligence.
  3. "Protesting Snapdeal employees approach labour department - The Economic Times". The Economic Times. Retrieved 2016-02-28.
  4. "Snapdeal explores merger talks with Flipkart, Amazon". VCCircle.