ಸದಸ್ಯ:NEOL D'SOUZA/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                        ಅಫ್ರ ಬೆಹ್ನ್
ಅಫ್ರ ಬೆಹ್ನ್

ಅಫ್ರ ಬೆಹ್ನ್ ,ಇವರು ಹುಟ್ಟಿದ್ದು ೧೪ ಡಿಸೆಂಬರ್ ೧೬೪೦ರಲ್ಲಿ. ಇವರು ಒಬ್ಬ ಬ್ರಿಟಿಷ್ ನಾಟಕಕಾರ್ತಿ,ಕವಿಯತ್ರಿ,ಭಾಷಾಂತರವನ್ನು ಕೂಡ ಮಾಡುತ್ತಿದ್ದರು ಮತ್ತು ಪುನಃಸ್ಥಾಪನ ಯುಗದ ಕಾಲ್ಪನಿಕ ಬರಹಗಾರ್ತಿಯಾಗಿದ್ದರು.ಈಕೆ ತಮ್ಮ ಬರವಣಿಗೆಯ ಮೂಲಕ ತಮ್ಮ ಜೀವನವನ್ನು ನಡೆಸುವ ಮೊದಲ ಇಂಗ್ಲಿಷ್ ಮಹಿಳೆಯಾಗಿದ್ದರು.ಇವರು ಎಲ್ಲಾ ತರಹದ ಸಾಂಪ್ರದಾಯಿಕ ಅಡೆತಡೆಗಳನ್ನು ಮುರಿದು,ತಮ್ಮ ನಂತರದ ಪೀಳಿಗೆಯ ಮಹಿಳಾ ಲೇಖಕರಿಗೆ ಮಾದರಿಯಾದರು.ಇವರು ತಮ್ಮ ಯೌವನದ ಕೆಲವು ಸಮಯವನ್ನು ವೆಸ್ಟ್ ಇಂಡೀಸ್ ನ ಡಚ್ ನಲ್ಲಿ ಕಳೆದರು.೧೬೬೪ರಲ್ಲಿ ಇವರು ಜೊಹಾನ್ ಬೆಹ್ನ್ ಎಂಬ ಡಚ್ ವ್ಯಾಪಾರಿಯನ್ನು ಮದುವೆಯಾದರು, ಆದರೆ ಇವರ ವೈವಾಹಿಕ ಜೀವನ ತುಂಬ ಸಮಯ ಉಳಿಯಲಿಲ್ಲ.ಆಂಟ್ವರ್ಪ್ ಅಲ್ಲಿ ೧೬೬೬ರಲ್ಲಿ ಇವರು ಬ್ರಿಟಿಷ್'ಗಾಗಿ ಪತ್ತೆದಾರಿ ಕೆಲಸವನ್ನು ಮಾಡುತ್ತಿದ್ದರು.

ಸಾಲದ ಕಾರಣದಿಂದ ಇವರನ್ನು ಸೆರೆವಾಸದಲ್ಲಿರಿಸಲಾಗಿತ್ತು, ಅಲ್ಲಿ ಇವರು ಹಣಕ್ಕಾಗಿ ಲೇಖನವನ್ನು ಅಭ್ಯಾಸಮಾಡಿಕೊಂಡರು.

ಇವರು ಕೆಲವು ಅಧ್ಬುತವಾದ ನಾಟಕಗಳನ್ನು ಬರೆದಿದ್ದಾರೆ.ಇವರ ಮೊದಲ 'ದಿ ಫೊರ್ಸ್ಡ್ ಮ್ಯಾರೇಜ್' ೧೬೭೧ರಲ್ಲಿ ನಿರ್ಮಿತವಾದುದ್ದು.'ದಿ ರೋವರ್'(೧೬೮೧) ಇದು ಇವರ ಯಶಸ್ವಿ ಲೇಖನಗಳಲ್ಲೊಂ ದು, ಇದನ್ನು ಎರಡು ಭಾಗಗಳಲ್ಲಿ ಇವರು ನಿರ್ಮಿಸಿದ್ದರು.ಬೆನ್ ಅವರ ಮೂಲಗಳಲ್ಲಿ ಇಟಲಿಯನ್ ಭಾಷೆಯ 'ಕೊಮೆಡಿಯಾ ಡೆಲ್ ಆರ್ತೆ'ಇತ್ತು(ಸುಧಾರಿತ ಹಾಸ್ಯ), ಇದನ್ನು ಅವರು ತಮ್ಮ ಪ್ರಹಸನದ 'ದಿ ಎಂಪರರ್ ಆಫ್ ದಿ ಮೂನ್'(೧೬೮೭)ರಲ್ಲಿ ಬಳಸಿದರು.

ಜೀವನ ಮತ್ತು ಕೆಲಸ[ಬದಲಾಯಿಸಿ]

ಬೆಹ್ನ್ ಅವರ ಜೀವನದ ಪ್ರಾರಂಭದ ದಿನಗಳ ಬಗ್ಗೆ ಮಾಹಿತಿ ಇರುವುದು ಬಹಳ ಕಡಿಮೆ.ಕೆಲವು ಮೂಲಗಳ ಪ್ರಕಾರ ಬೆಹ್ನ್ ಅವರು ಜಾನ್ ಆಮಿಸ್ ಎಂಬ ಕ್ಷೌರಿಕನಿಗೆ ಹುಟ್ಟಿದರು ಎಂದು ಹೇಳಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ 'ಕೂಪರ್' ದಂಪತಿಗಳಿಗೆ ಹುಟ್ಟಿದರು ಎಂದು ಹೇಳಲಾಗಿದೆ.ಈ ರೀತಿ ಇವರ ಹುಟ್ಟಿನ ಬಗ್ಗೆ ಖಚಿತ ಮಾಹಿತಿ ಇಲ್ಲ.

ಇಂಗ್ಲಿಷ್ ಅಂತರ್ಯುದ್ಧದ ನಿರ್ಮಾಣದ ಸಮಯದಲ್ಲಿ ಬೆಹ್ನ್ ಜನಿಸಿದರು,ಆ ಸಮಯದ ರಾಜಕೀಯ ಉದ್ವಿಗ್ನತೆಯ ಪರಿಸ್ಥಿತಿಯನ್ನು ನೋಡಿದ ಒಂದು ಮಗುವಾಗಿದ್ದರು. ಒಂದು ಮೂಲದ ಕಥೆಯ ಪ್ರಕಾರ ಬೆಹ್ನ್ ಅವರು 'ಬಾರ್ತಲೋಮ್ಯೂ ಜಾನ್ಸನ್' ಅವರ ಜೊತೆಗೆ 'ಸುರಿನಾಮ್'ಎಂಬಲ್ಲಿಗೆ ಪ್ರಯಾಣ ಮಾಡಿದ್ದರು.ಈ ಪ್ರಯಾಣದಲ್ಲಿ ಬೆಹ್ನ್ ಅವರು ಆಫ್ರಿಕನ್ ಗುಲಾಮರ ನಾಯಕರನ್ನು ಬೇಟಿ ಮಾಡಿದರು ಮತ್ತು ಇದರಿಂದ ಬೆಹ್ನ್ ಅವರು 'ಓರೋನೊಕೊ'ಎಂಬ ಪ್ರಸಿದ್ಧ ಕೃತಿಯನ್ನು ಸೃಷ್ಟಿಸಿದರು.ಅವರು ಅಲ್ಲಿಯೂ ಕೂಡ ಪತ್ತೆದಾರಿ ಕೆಲಸವನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.'ಓರೋನೋಕೊ'ದಲ್ಲಿ ಬೆಹ್ನ್ ಅವರು ತಮ್ಮನ್ನು ನಿರೂಪಕರಾಗಿ ಗುರುತಿಸಿಕ್ಕೊಂಡಿದ್ದಾರೆ ಮತ್ತು ಅವರು ಅದರಲ್ಲಿ ತಮ್ಮನ್ನು ಸುರಿನಾಮ್'ನ ಲೆಪ್ಟಿನೆಂಟ್ ಜನರಲ್'ರ ಮಗಳಾಗಿ ಗುರುತಿಸಿಕೊಂಡಿದಾರೆ. 'ಓರೋನೋಕೊ'ಎಂಬ ವ್ಯಕ್ತಿ ನಿಜವಾಗಿಯೂ ಇದ್ದನೆಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ,ಮತ್ತು ಅದರಲ್ಲಿ ಬರೆದಿರುವ ಪ್ರಕಾರ ನಿಜವಾಗಿಯೂ ಗುಲಾಮರ ದಂಗೆ ನಡೆದಿತ್ತು ಎಂಬೆದಕ್ಕೆ ಕೂಡ ಯಾವುದೇ ಸಾಕ್ಷಿಯಿಲ್ಲ.

ಬರಹಗಾರ ಜರ್ಮೈನ್ ಗ್ರೀರ್, ಬೆಹ್ನ್ ಅವರನ್ನು 'ಒಂದು ಪಾಲಿಮ್ಪ್ಸೆಸ್ಟ್' ಎಂದು ಕರೆಯುತ್ತಿದರು.ಮುಖವಾಡಗಳನ್ನು ನಿರಂತರವಾಗಿ ಸಂಯೋಜಿಸದೆ ಇರುವಂತಹ ಒಬ್ಬ ಮಹಿಳೆಯಾಗಿದ್ದರು.ತೆರಿಗೆ ಅಥವಾ ಚರ್ಚ್ ದಾಖಲೆಗಳಲ್ಲಿ ಅವಳ ಹೆಸರನ್ನು ಉಲ್ಲೇಖಿಸಲಾಗಿಲ್ಲಾ ಎಂಬುದು ಗಮನಾರ್ಹವಾಗಿದೆ.ಆಕೆಯ ಜೀವಿತಾವಧಿಯಲ್ಲಿ ಅವರು ಆನ್ ಬೆಹ್ನ್, ಶ್ರೀಮತಿ ಬೀನ್, ಏಜೆಂಟ್ ೧೬೦ ಮತ್ತು ಆಸ್ಟ್ರಿಯೆ ಎಂದು ಸಹ ಕರೆಯಲ್ಪಟ್ಟಿದ್ದರು.

ವೃತ್ತಿಜೀವನ[ಬದಲಾಯಿಸಿ]

ಅವರು ಸುರಿನಾಮ್ನಿಂದ ಇಂಗ್ಲೆಂಡ್ಗೆ ೧೬೬೪ರಲ್ಲಿ ಹಿಂತಿರುಗಿದರು.ಹಿಂತಿರುಗಿದ ನಂತರ ಅವರು ಜೊಹಾನ್ ಬೆಹ್ನ್ ಅವರನ್ನು ಮದುವೆಯಾದರು ಎಂದು ಹೇಳಲಾಗಿದೆ,ಇದಾದ ನಂತರ ಇವರು ಬೇರ್ಪಟ್ಟರು, ಮತ್ತು ಇದಕ್ಕೆ ಕಾರಣ ಅವರ ಪತಿಯ ಸಾವೊ ಅಥವ ಹಾಗೆಯೇ ಬೇರೆಯಾದರೋ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಇದಾದ ನಂತರ ಅಫ್ರ ಬೆಹ್ನ್ ಅವರು"ಶ್ರೀಮತಿ ಬೆಹ್ನ್ "ಎಂಬ ಹೆಸರನ್ನು ತಮ್ಮ ವೃತ್ತಿಪರ ಹೆಸರಾಗಿ ಬಳಸಿದರು.

ಬೆಹ್ನ್ ಅವರು ಕ್ಯಾಥೋಲಿಕ್ ಸಂಪ್ರದಾಯಕ್ಕೆ ಸೇರಿದವರು.ಅವರು ಒಮ್ಮೆ ಹೀಗೆಂದು ಹೇಳಿದ್ದರು"ನಾನು ಸನ್ಯಾಸಿನಿ ಆಗುವುದಕ್ಕಾಗಿಯೇ ವಿನ್ಯಾಸಗೊಂಡಿರುವುದು". ಅವರು ಹೀಗೆ ಹೇಳಲು ಕಾರಣವೇನೆಂದರೆ, ವಾಸ್ತವವಾಗಿ ಅವರು ಕ್ಯಾಥೋಲಿಕ್ ಧರ್ಮಸಭೆಯೊಂದಿಗೆ ಅವರು ಅನೇಕ ರೀತಿಯಲ್ಲಿ ಸಂಪರ್ಕವನ್ನು ಹೊಂದಿದ್ದರು.ಅವರಿಗೆ ಕ್ಯಾಥೋಲಿಕ್ ಧರ್ಮಸಭೆಗೆ ಸೇರಿದ ಜನರ ಬಗ್ಗೆ ಎನೋ ಒಂದು ತರಹದ ಒಳ್ಳೆಯ ಸಂಭದವಿತ್ತು ಮತ್ತು ಅವರ ಮೇಲೆ ಸಹಾನುಭೂತಿ ಹಾಗು ವಿಶೇಷ ಪ್ರೀತಿಯಿತ್ತು.

೧೬೬೬ರ ಹೊತ್ತಿಗೆ ಬೆಹ್ನ್ ಅವರು ನ್ಯಾಯಾಲಯಕ್ಕೆ ತುಂಬಾ ಹತ್ತಿರವಾಗಿದ್ದರು, ಬಹುಶಃ ಥಾಮಸ್ ಕಲ್ಪೆಪರ್ ಮತ್ತು ಇತರೆ ಸಹವರ್ತಿಗಳ ಪ್ರಭಾವದ ಕಾರಣದಿಂದ ಹೀಗಾಗಿರಬಹುದು.೧೬೬೫ರಲ್ಲಿ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ನಡುವೆ ಎರಡನೇ ಆಂಗ್ಲೋ-ಡಚ್ ಯುದ್ದವು ಶುರುವಾಗಿತ್ತು ಮತ್ತು ಅಫ್ರ ಬೆಹ್ನ್ ಅವರನ್ನು 'ರಾಜ ಚಾರ್ಲ್ಸ್ ಎರಡು' ಅವರ ಬದಲಾಗಿ ರಾಜಕೀಯ ಪತ್ತೆದಾರಿಯಾಗಿ ನೇಮಕಮಾಡಲಾಗಿತ್ತು. ಇದು ಇವರ ಮೊದಲ ಉತ್ತಮವಾಗಿ ದಾಖಲ್ಪಟ್ಟ ಚಟುವಟಿಕೆಯ ಖಾತೆಯಾಗಿದೆ. ಬೆಹ್ನ್ ಅವರ ಪತ್ತೆದಾರಿ ಕೆಲಸದ ರಹಸ್ಯ ಕೋಡ್ 'ಆಸ್ಟ್ರಿಯಾ'ಎಂದು ಹೇಳಲಾಗಿದೆ, ಮತ್ತು ಬೆಹ್ನ್ ಅವರು ಕೆಲ ಕಾಲದ ನಂತರ ಇದೇ ಹೆಸರಿನಲ್ಲಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.


ಥಾಮಸ್ ಸ್ಕಾಟ್ ಅವರ ಮಗನಾದ ವಿಲಿಯಮ್ ಸ್ಕಾಟ್ ಅವರೊಂದಿಗೆ ಅನ್ಯೋನ್ಯತೆಯನ್ನು ಸ್ಥಾಪಿಸುವುದು ಅವರ ಮುಖ್ಯ ಪಾತ್ರವಾಗಿತ್ತು, ಮತ್ತು ವಿಲಿಯಮ್ ಸ್ಕಾಟ್ ಅವರನ್ನು ೧೬೬೦ರಲ್ಲಿ ಮರಣದಂಡನೆಗೆ ಒಳಪಡಿಸಲಾಗಿತ್ತು. ಸ್ಕಾಟ್ ಅವರು ಇಂಗ್ಲಿಷ್ ಸೇವೆಯಲ್ಲಿ ಪತ್ತೇದಾರಿಯಾಗಿ ಕೆಲಸ ಮಾಡಲು ಸಿದ್ದರಾಗಿದ್ದರು ಎಂದು ನಂಬಲಾಗಿದೆ, ಮತ್ತು ರಾಜನ ವಿರುದ್ದವಾಗಿ ಸಂಚುಹಾಕುತ್ತಿದ ಇಂಗ್ಲಿಷರಿಗೆ ಇವರು ಮಾಹಿತಿ ನೀಡುತ್ತಿದ್ದರು ಎಂದು ಹೇಳಲಾಗಿದೆ.ಬೆಹ್ನ್ ಅವರು ಜುಲೈ ೧೬೬೬ರಲ್ಲಿ ಬ್ರೂಗ್ಸ್ ಎಂಬ ಸ್ಥಳಕ್ಕೆ ಬಂದು ತಲುಪಿದರು,ಬಹುಶಃ ಇವರೊಂದಿಗೆ ಇತರೆ ಇಬ್ಬರು ಕೂಡ ಇದ್ದಿರಬಹುದು.ಇದೇ ಸಮಯದಲ್ಲಿ ಲಂಡನ್ ಪ್ಲೇಗ್ ಮತ್ತು ಬೆಂಕಿಯಿಂದ ಹೊಡೆತಕಂಡಿತ್ತು.ಇಲ್ಲಿ ಬೆಹ್ನ್ ಅವರ ಕೆಲಸ ಸ್ಕಾಟ್ ಅವರನ್ನು ದ್ವಿಪಾತ್ರ ಪತ್ತೆದಾರಿಯಾಗಿ ಬದಲಿಸುವುದು,ಆದರೆ ಸ್ಕಾಟ್ ಅವರು ಬೆಹ್ನ್'ಗೆ ಮೋಸ ಮಾಡಿ ಅವರನ್ನು ಡಚ್'ಗೆ ಹಿಡಿದುಕೊಟ್ಟರು.


ಇವರ ಬರವಣಿಗೆಗಳು.[ಬದಲಾಯಿಸಿ]

  • ದಿ ಫೊರ್ಸ್ಡ್ ಮ್ಯಾರೇಜ್(೧೬೭೦)
  • ದಿ ಅಮೋರೌಸ್ ಪ್ರಿನ್ಸ್(೧೬೭೧)
  • ದಿ ಡಚ್ ಲವರ್(೧೬೭೩)
  • ದಿ ಟೌನ್ ಫೊಪ್(೧೬೭೬)

ಉಲೇಖಗಳು[ಬದಲಾಯಿಸಿ]

[೧] [೨]

  1. https://writersinspire.org/content/who-aphra-behn
  2. https://www.britannica.com/biography/Aphra-Behn