ಸದಸ್ಯ:Muhammadsafwanthurkalike/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search


ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶರೀ ಪದ್ಮಾವತಿ ಅಮ್ಮನವರ ಬಸದಿ, ಬೈಲು ಪಲ್ಲದ ಬೀಡು

ಸ್ಥಳ[ಬದಲಾಯಿಸಿ]

ಈ ಬಸದಿಯು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಬಜಪೆಯಲ್ಲಿದೆ. ಬಸದಿಯ ಹತ್ತಿರ ಮನೆ ತೋಟ ಗದ್ದೆಗಳಿವೆ. ಇದಕ್ಕೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ವಾಮಂಜೂರು ಬಸದಿ. ಅದು ಸುಮಾರು 10-16 ಕಿಮೀ ದೂರದಲ್ಲಿದೆ. ಈ ಬಸದಿಗೆ ಬರುವ ಕುಟುಂಬಗಳು ಶ್ರೀಮತಿ ರೇವತಿ ಬಲ್ಲಾಳ್ ಮತ್ತು ಶ್ರೀಮದನ ಕೀರ್ತಿಯವರು ಅವರು ಇಲ್ಲಿ ಶುಭ ಸಂಧರ್ಭದಲ್ಲಿ ಬರುತ್ತಾರಂತೆ. ಇದು ಮೂಡಬಿದಿರೆ ಮಠಕ್ಕೆ ಸೇರಿದೆ.

ಮಾರ್ಗ[ಬದಲಾಯಿಸಿ]

ಇಲ್ಲಿಗೆ ಬರುವ ದಾರಿ ಕೈಕಂಬ- ಬಜಪೆ ಮಾರ್ಗ. ನಮ್ಮ ಬಸದಿ ಅಂಚಿನ ಮಾಡಿನದ್ದು. ಈಗ ಈ ಬಸದಿಯನ್ನು ಶ್ರೀ ಹರಿಶ್ಚಂದ್ರ ಮತ್ತು ಸಹೋದರರು ನಡೆಸುತ್ತಿದ್ದಾರೆ. ಆಡಳಿತ ಮಂಡಳಿ ಇಲ್ಲ. ಅದರ ಪ್ರಮುಖ ಸದಸ್ಯರು ಹರಿಶ್ಚಂದ್ರ ಮತ್ತು ಸಹೋದರರು ಬಸದಿಯಲ್ಲಿ ಈಗ ಶ್ರೀ ಯಶೋಧರ ಪೂಜೆ ಮಾಡುತ್ತಿದ್ದಾರೆ. ಇದನ್ನು ಸುಮಾರು 90 ವರ್ಷದ ಹಿಂದೆ ಕಟ್ಟಿಸಿದ್ದರಂತೆ. ಆ ಮನೆಯವರು ಈಗ ಇಜಿಲಂಪಾಡಿಯಲ್ಲಿದ್ದಾರೆ. ಬಸದಿ ಇತ್ತೀಚೆಗೆ ಜೀರ್ಣೋದ್ದಾರಗೊಂಡಿಲ್ಲ.

ಆವರಣ[ಬದಲಾಯಿಸಿ]

ಅಂಗಳದಲ್ಲಿ ಒಂದು ಪಾರಿಜಾತ ಹೂವಿನ ಒಂದು ಗಿಡ ಹಾಗೂ ದಾಸವಾಳದ ಗಿಡ ಇದೆ. ಅಶೋಕದ ಗಿಡವು ಇದೆ. ಬಸದಿಯನ್ನು ಪ್ರವೇಶಿಸುವಾಗ ದ್ವಾರಪಾಲಕರ ಚಿತ್ರಗಳು ಕಂಡುಬರುತ್ತದೆ. ಪ್ರಾರ್ಥನಾ ಮಂದಿರದಲ್ಲಿ ಜಯ ಘಂಟೆಯನ್ನು ತೂಗುಹಾಕಲಾಗಿದೆ. ಬಸದಿಯ ಮೂಲ ಸ್ವಾಮಿ ಶ್ರೀ ಚಂದ್ರನಾಥ ಸ್ವಾಮಿಯ ಬಿಂಬ ಪಂಚಲೋಹದ್ದು. ಅಂದಾಜು ಎರಡು ಅಡಿ ಎತ್ತರವಿದೆ. ಪ್ರಭಾವಳಿ ಇದೆ. [೧]

ಪೂಜೆ[ಬದಲಾಯಿಸಿ]

ನಿತ್ಯ ಪೂಜೆ ನಡೆಯುತ್ತಿದೆ. ಭಾನುವಾರ ಮೂಲ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ.ಒಂದು ಪೂಜೆ ಮಾತ್ರ ನಡೆಯುತ್ತದೆ. ವಿಶೇಷವಾಗಿ ವಾರ್ಷಿಕೋತ್ಸವ ಪೂಜೆ ಮಾತ್ರ ನಡೆಯುತ್ತದೆ. ಈ ಬಸದಿಗೆ ಹೊಂಬುಜದ ಹಿಂದಿನ ಭಟ್ಟಾರಕರು ಬಂದಿದ್ದರು.


ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. pp. ೨೭೯.