ಸದಸ್ಯ:Mohammed Thanzil/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                          ಮಳೆಗಾಲಕ್ಕಾಗಿ ಆರೋಗ್ಯಕರ ಸಲಹೆಗಳು

ಬೇಸಿಗೆಯ ಧಗೆಯಿಂದ ಬಸವಳಿದಿರುವ ಎಲ್ಲರೂ, ಬಿಸಿಲಿನ ದಿನಗಳ ತಾಪದಿಂದ ಬಿಡುಗಡೆ ಪಡೆಯಲು ಮಳೆಯನ್ನು ಬಹಳ ಅಕ್ಕರೆ, ಸಂಭ್ರಮಗಳಿಂದ ಬರಮಾಡಿಕೊಳ್ಳುತ್ತಾರೆ. ಋತು ಬದಲಾವಣೆಯನ್ನು ಸ್ವಾಗತಿಸುತ್ತಾರೆ. ಆದರೆ ಮಳೆಗಾಲದ ತಂಪಿನ ಜೊತೆಗೆ ಈ ತೇವಭರಿತ ವಾತಾವರಣದಲ್ಲಿ ಭೇದಿ, ಆಹಾರ ನಂಜಾಗುವಿಕೆ, ಆಮಶಂಕೆ ಮತ್ತು ಕಾಲರಾ... ಇತ್ಯಾದಿ ಕಾಯಿಲೆಗಳೂ ಸಹ ವ್ಯಾಪಕವಾಗಿರುತ್ತವೆ.

ಹಾಗಾಗಿ, ಈ ಅವಧಿಯಲ್ಲಿ ಪೋಷಣಾಭರಿತ ಆಹಾರದ ಜೊತೆಗೆ ಆರೋಗ್ಯಶಾಲಿ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಾವಶ್ಯಕ. ಮಳೆಗಾಲದಲ್ಲಿ ವಾತಾವರಣದಲ್ಲಿನ ಅಧಿಕ ತೇವದ ಕಾರಣ, ಜೀರ್ಣಾಂಗವ್ಯೂಹವು ದುರ್ಬಲವಾಗಿರುತ್ತದೆ. ಹಾಗಾಗಿ, ಮಳೆಗಾಲ ದಲ್ಲಿ ಸರಿಯಾದ ಪೋಷಣಾಭರಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಈ ಕಾರಣಕ್ಕಾಗಿ ಮಾತ್ರವೇ ಅಲ್ಲ, ಪೋಷಣಾಭರಿತ ಆಹಾರವು ಮಳೆಗಾಲದ ಇನ್ನಿತರ ತೊಂದರೆಗಳಿಂದಲೂ ಸಹ ದೇಹಕ್ಕೆ ರಕ್ಷಣೆ ನೀಡುತ್ತದೆ.

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಪೋಷಣೆಯ ಈ ಸಲಹೆಗಳನ್ನು ಅನುಸರಿಸಿ:

ಮಳೆಗಾಲಕ್ಕಾಗಿ ಪೋಷಣಾ ಸಲಹೆಗಳು:

ಯಾವಾಗಲೂ ತಾಜಾ ಆಹಾರ ಮತ್ತು ಶುದ್ಧ ನೀರನ್ನು ಸೇವಿಸಿ.

ಹಣ್ಣು, ತರಕಾರಿಗಳಲ್ಲಿ ಇದ್ದಿರಬಹುದಾದ ಕೊಳೆ ಮತ್ತು ಬ್ಯಾಕ್ಟೀರಿಯಾಗಳನ್ನು ತೊಲಗಿಸಲು, ಅವುಗಳನ್ನು ಸರಿಯಾಗಿ ತೊಳೆದು ಉಪಯೋಗಿಸಿ.
ಸೊಪ್ಪು-ತರಕಾರಿಗಳಲ್ಲಿ ಹುಳ ಹುಪ್ಪಟೆ ಗಳು ಇರಬಹುದು. ಹಾಗಾಗಿ, ಸೊಪ್ಪು$ ತರಕಾರಿಗಳನ್ನು ಉಪಯೋಗಿಸುವ ಮೊದಲು ಅವುಗಳನ್ನು ಸ್ವತ್ಛ ಮಾಡುವಾಗ ಹೆಚ್ಚಿನ ಕಾಳಜಿ, ಎಚ್ಚರಿಕೆಯನ್ನು ವಹಿಸಬೇಕು.
ಮಳೆಗಾಲದಲ್ಲಿ ಧಾನ್ಯಗಳ ರೀತಿಯ ಲಘು ಆಹಾರಗಳನ್ನೇ ಉಪಯೋಗಿಸಿ ಮತ್ತು ತರಕಾರಿಗಳ ಆಹಾರ ತಯಾರಿಕೆಯಲ್ಲಿ  ಕಡಿಮೆ ಎಣ್ಣೆ ಉಪಯೋಗಿಸಿ.  ಜಿಡ್ಡಿನ ಆಹಾರಗಳು ಜೀರ್ಣವಾಗುವುದು ಕಷ್ಟ.
ಬೇವು, ಹಾಗಲಕಾಯಿ, ಅರಿಶಿನ, ತೊಂಡೆಕಾಯಿ, ಕ್ಲಸ್ಟರ್‌ ಬೀನ್ಸ್‌, ಆಪಲ್‌ ಗೋರ್ಡ್‌ ಮತ್ತು ಮೆಂತೆಯಂತಹ ಕಹಿ ಪದಾರ್ಥಗಳು ಮಳೆಗಾಲದಲ್ಲಿ ಉಪಯೋಗಿಸಬಹುದಾದ ಪೋಷಣಾಭರಿತ ಆಹಾರಗಳು.
ತೀರಾ ಕಡಿಮೆ ಅಥವಾ ಅತಿಯಾದ ಆಹಾರ ಸೇವನೆ - ಎರಡೂ ಒಳ್ಳೆಯದಲ್ಲ. ಜೀರ್ಣಾಂಗವ್ಯೂಹವನ್ನು ಸುಸ್ಥಿತಿಯಲ್ಲಿ ಇರಿಸಲು ಮಳೆಗಾಲದಲ್ಲಿ ಆಹಾರವನ್ನು ಹದಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು.
ದೇಹದಲ್ಲಿನ ನೀರಿನಂಶವನ್ನು ಕಡಿಮೆಗೊಳಿಸಿ ಡಿಹೈಡ್ರೇಷನ್‌ ಉಂಟು ಮಾಡುವ ಕಾರಣಕ್ಕಾಗಿ, ಅಧಿಕ ಕಾಫಿ ಅಥವಾ ಟೀ ಸೇವನೆ ಬೇಡ.  ಆದರೆ ರುಚಿ ಬದಲಾವಣೆ ಮತ್ತು ಆರೋಗ್ಯ ವರ್ಧನೆಗಾಗಿ ಕುದಿಯುವ ಚಹಾಕೆ ಸ್ವಲ್ಪ$ ಶುಂಠಿ ಪುಡಿ ಅಥವಾ ಪುದಿನಾ ಎಲೆಗಳನ್ನು ಸೇರಿಸಬಹುದು. 

ಬೆಳ್ಳುಳ್ಳಿ, ಕರಿಮೆಣಸು, ಇಂಗು, ಶುಂಠಿ, ಜೀರಿಗೆ ಪೌಡರ್‌, ಅರಿಶಿನ ಮತ್ತು ಕೊತ್ತಂಬರಿಗಳು ಸುಲಭವಾಗಿ ಜೀರ್ಣವಾಗುವ ಕಾರಣಕ್ಕಾಗಿ ಮಳೆಗಾಲಕ್ಕೆ ಸೂಕ್ತ ತರಕಾರಿ ಮತ್ತು ಪೋಷಣಾಭರಿತ ಆಹಾರಗಳಾಗಿವೆ.

ಮಾಂಸಾಹಾರಿಗಳು ಸೂಪ್‌ ಮತ್ತು ಸ್ಟೂ$Âಗಳನ್ನು ಸೇವಿಸಬಹುದು. ಮಳೆಗಾಲದಲ್ಲಿ ಮೀನು, ಮಾಂಸ ಮತ್ತು ಅಂತ ಪದಾರ್ಥಗಳಿಂದ ದೂರವಿದ್ದರೆ ಒಳ್ಳೆಯದು.

ತರಕಾರಿಗಳಲ್ಲಿ ಇರುವ ಕೆಲವು ಬ್ಯಾಕ್ಟೀರಿಯಾಗಳು ತೊಳೆದರೂ ನಾಶವಾಗದಿರುವ ಕಾರಣಕ್ಕಾಗಿ, ಮಳೆಗಾಲದಲ್ಲಿ ಹಸಿ ಸಲಾಡ್‌ಗಳಿಗೆ ಬದಲಾಗಿ ಹಬೆಯಲ್ಲಿ ಬೇಯಿಸಿದ ಸಲಾಡ್‌ಗಳನ್ನು ಸೇವಿಸಿ.
ಶೀತ, ಕೆಮ್ಮುಗಳ ವಿರುದ್ಧ ರಕ್ಷಣೆ ಪಡೆಯಲು, ತಾಜಾ ಮೂಲಂಗಿ ರಸವನ್ನು ಸೇವಿಸಿ.
ನೀರಿನ ಮೂಲಕ ಹರಡುವ ರೋಗಗಳಿಂದ ದೇಹವನ್ನು ಕಾಪಾಡಲು ಕುದಿಸಿದ ಅಥವಾ ಫಿಲ್ಟರ್‌ ಮಾಡಿದ ನೀರನ್ನೇ ಕುಡಿಯಿರಿ.

ರಸ್ತೆ ಬದಿಯ ವ್ಯಾಪಾರಿಗಳ ಮಸಾಲೆಭರಿತ ಚಾಟ್‌ಗಳು, ಮತ್ತು ಕರಿದ ತಿಂಡಿಗಳು, ಅದರಲ್ಲೂ ವಿಶೇಷವಾಗಿ ಮಳೆಗಾಲದ ಪ್ರಸಿದ್ಧ ತಿಂಡಿ ಬೀದಿಬದಿಯಲ್ಲಿ ಮಾರುವ ಪಕೋಡಾದಿಂದ ದೂರವಿರಿ.

ಮನೆಯನ್ನು ಶುಚಿಯಾಗಿಡಿ, ಬೇಡದ ಅತಿಥಿಗಳಾದ ನೊಣ, ಸೊಳ್ಳೆಗಳ ಪ್ರವೇಶವನ್ನು ತಡೆಯಿರಿ.

ಮಳೆಗಾಲದಲ್ಲಿ, ನಿಮ್ಮ ಆಹಾರದಲ್ಲಿ ಈ ಪೋಷಣೆಯ ಸಲಹೆಗಳನ್ನು ಅನುಸರಿಸಿ, ಪೋಷಕಾಂಶಭರಿತ ಆಹಾರಗಳನ್ನೇ ಸೇವಿಸಿ, ಆರೋಗ್ಯಶಾಲಿಯಾಗಿರಿ ಮತ್ತು ಮಳೆಯನ್ನು ಆನಂದಿಸಿ.