ವಿಷಯಕ್ಕೆ ಹೋಗು

ಸದಸ್ಯ:Mohammad yusuf mundaje/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                      ರನ್ನ 
   ಹತ್ತನೆಯ ಶತಮಾನದ ಪ್ರಸಿದ್ದ ಕವಿಗಳಲ್ಲಿ ಹಾಗೂ 'ರತ್ನತ್ರಯ' ರಲ್ಲಿ ರನ್ನನೂ ಒಬ್ಬ. ಅಲ್ಲದೆ  ಈತ ಕನ್ನಡದ 'ಕವಿಚಕ್ರವರ್ತಿಯ'ರಲ್ಲಿಯೂ ಒಬ್ಬನಾಗಿದ್ದಾನೆ. ಈತನ ಕಾಲ ಕ್ರಿ.ಶ.ಸು 949. ಬೆಳುಗಲಿ ಐನೂರರ 

ಜಂಬು ಖಂಡಿ ಸೀಮೆಯ ಎಪ್ಪತರ ಮುದುವೊಳಲು(ಈಗಿನ ಬಿಜಾಪುರ ಜಿಲ್ಲೆಯ ಮುಧೋಳ) ರನ್ನದ ಜನ್ಮ ಸ್ಥಳ. ತಂದೆ ಜಿನವಲ್ಲಬ. ತಾಯಿ ಅಬ್ಬಲಬ್ಬೆ. ಶಾಂತಿ ಹಾಗೂ ಜಕ್ಕಿಯರು ಹೆಂಡತಿಯರು. ಗುರುಗಳು ಅಜಿತಸೇನಾರ್ಚಾರು. ಪೋಷಕರು ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಗಂಗಸರ ಮಂತ್ರಿ ಚಾವುಂಡರಾಯ. ಆಶ್ರಯದಾತರು ಚಾಲುಕ್ಯ ಚಕ್ರವರ್ತಿ ಇಮ್ಮಡಿ ತೈಲಪ ಹಾಗೂ ಆತನ ಮಗನಾದ ಇರವಬೆಂಡಗ.

  ಶಕ್ತಿಕವಿಯೆನಿಸದ ರನ್ನ ನಾಲ್ಕು ಕೃತಿಗಳನ್ನು ಬರೆದಿರುವಂತೆ ತಿಳಿದುಬರಿತ್ತದೆ. ಅವುಗಳೆಂದರೆ 'ಪರಶುರಾಮಚರಿತ', 'ಚಕ್ರೇಶ್ವರ ಚರಿತ', ಪುರಾಣ ತಿಲಕ', ಆದರೆ ಮೊದಲ ಎರಡು ಕಾವ್ಯಗಳು ಉಪಲಬ್ಧವಿಲ್ಲ. ಅಲ್ಲದ್ಎ 'ರನ್ನಕಂದ' ಎಂಬ ನಿಘಂಟುಂದನ್ನು ರಚಿರುವಂತೆ ತಿಳಿದು ಬರುವುದಾದರೂ ಅದು ಸಮಗ್ರವಾಗಿ ಉಪಲಬ್ಧವಾಗಿಲ್ಲ.
  
   ಚಾಲುಕ್ಯ ಚಕ್ರವರ್ತಿ ಇಮ್ಮಡಿ ತೈಲಪನ ಆಸ್ಥಾನದಲ್ಲಿದ್ದು'ಅಜಿತ ತೀರ್ಥಕರ ಪುರಾಣತಿಲಕ' (ಅಜಿತಪುರಾಣ) ವನ್ನು ಕ್ರಿ.ಶ.ಸು. 992 ರಲ್ಲಿ ರಚಿಸಿದ ರನ್ನ, ಅನಂತರ ಆತನ ಮಗನಾದ ಸತ್ಯಾಶ್ರಯ ಇರವಬೆಂಡಗನ ಆಸ್ಥಾನದಲ್ಲಿ ಪಟ್ಟದ ಕವಿಯಾಗಿದ್ದು 'ಸಹಾಸಭೀಮವಿಜಯ' (ಗದಾಯುದ್ಧ) ವನ್ನು ರಚಿಸಿ 'ಕವಿಚಕ್ರವರ್ತಿ' ಎಂಬ ಬಿರುದಿ್ಎ ಪಾತ್ರನಾದ. ಪಂಪನ ಆನಂತರದ ಶ್ರೇಷ್ಠ ಕವಿ ಎನಿಸಿರುವ ರನ್ನ ಶಕ್ತಿ ಹಾಗೂ ಸತ್ತ್ವದ ದೃಷ್ಟಿಯಿಂದ ಮೊದಲಿಗನೆನಿಸಿಕೊಂಡಿದ್ದಾನೆ.
   ಪಂಪನಿಂದ ಪ್ರಭಾವಿತನಾಗಿರುವ ರನ್ನ ಅವನಂತೆಯೇ ಲೌಕಿಕ ಹಾಗೂ ಆಗಮಿಕ ಎಂಬ ಎರಡು ಮಾರ್ಗಗಳನ್ನು ಅನುಸರಿಸಿ ಕಾವ್ಯ ರಚನೆ ಮಾಡಿದ್ದಾನೆ. 'ಪಂಪನ ವಿಕ್ರಮಾರ್ಜುನ ವಿಜಯದ 13 ಹಾಗೂ 14 ನೇ ಆಶ್ವಾಸದಿಂದ ವಸ್ತುವನ್ನಾಯ್ದುಕೊಂಡು ಸಿಂಹಾವಲೋಕನಕ್ರಮದಿಂದ ಸಮಸ್ತ ಭಾರತದ ಕಥೆಯನ್ನು ವರ್ಣಿಸಿದ್ದಾನೆ. ತನ್ನ ಕಾವ್ಯದಲ್ಲಿ ವಾಗ್ದೇವಿಯ ಭಂಡಾರದ ಮುದ್ರಯನ್ನು ಮಾಡಿದಾಗ ಅದು ನಿಜವೆನಿಸುತ್ತದೆ. ಕನ್ನಡ ಭಾಷೆಯ ಶಬ್ದಭಂಡಾರವನ್ನು ಸೂರೆ ಮಾಡಿದ ಕವಿಗಳಲ್ಲಿ ರನ್ನ ಮೊದಲಿಗನೆನ್ನಬಹುದು.
   ಕಾವ್ಯ ರಚನೆಯ ಸಂದರ್ಭದಲ್ಲಿ ಪಂಪನ'ವಿಕ್ರಮಾರ್ಜುನ ವಿಜಯ'ವಲ್ಲದೆ ಸಂಸ್ಕೃತ ಕವಿಗಳಾದ ಭಾಸನ 'ಊರುಭಂಗ' ನಾಟಕ, ಭಟ್ಟನಾರಾಯಣನ 'ವೇಣಿಸಂಹಾರ' ನಾಟಕ ಹಾಗೂ ವ್ಯಾಸಭಾರತಗಳು ಆಕರಗಳಾಗಿರುವುದು ಕಂಡುಬರುತ್ತದೆ. 
  ಆಕರಗಳು

1. ಸಾಹಸಭೀಮವಿಜಯಂ- ಸಂ: ಬಿ.ಎಸ. ಸಣ್ಣಯ್ಯ, ಡಾ. ರಾಮೇಗೌಡ. ಮೈಸೂರು ವಿಶ್ವವಿದ್ಯಾನಿಲಯ ಮೈಸೂರು 2. ಸಾಹಸಭೀಮವಿಜಯಂ - ಆರ್.ವಿ. ಕುಲರ್ಣಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪರಾಮರ್ಶನಕ್ಕಾಗಿ: 1. ರನ್ನಕವಿ ಪ್ರಶಸ್ತಿ - ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2. ರನ್ನ - ಎಂ.ವಿ. ಸೀತರಾಮಯ್ಯ 3. ರನ್ನನ ಕೃತಿರತ್ನ- ರಂ. ಶ್ರೀ. ಮುಗಳಿ