ಸದಸ್ಯ:MohammadHamzaPuttur

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆತ್ಮೀಯರೇ,

ಯಾವುದೋ ಒಂದು ಮಾಹಿತಿಯನ್ನು ಶೋಧಿಸುವುದಕ್ಕೆ ಕನ್ನಡ ವೀಕಿಪೀಡಿಯ ತೆರೆದು ನೋಡಿದೆ. ಆದರೆ ಕನ್ನಡ ವೀಕಿಪೀಡಿಯ ಇತರ ಭಾಷೆಗಳಂತೆ ಸಮೃದ್ಧವಾಗಿರಲಿಲ್ಲ. ಕೆಲವೊಂದು ಮಾಹಿತಿಗಳು ಸಿಗುತ್ತವೆಯಾದರೂ ಅವು ಪೂರ್ಣವಾಗಿಲ್ಲ. ವಿಶೇಷವಾಗಿ ನಾನು ಶೋಧಿಸುತ್ತಿದ್ದದ್ದು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ವಿಷಯಗಳು. ವಿಷಯಗಳ ತಲೆಬರಹಗಳೇನೋ ಇದ್ದವು. ಆದರೆ ಅವುಗಳಲ್ಲಿರುವ ಮಾಹಿತಿ ಅತ್ಯಂತ ದಯನೀಯವಾಗಿದ್ದವು. ಕೆಲವು ಕಡೆ ಏನು ಬರೆಯಬೇಕೆಂದೇ ಗೊತ್ತಿಲ್ಲದ ರೀತಿಯಲ್ಲಿ ಮಾಹಿತಿಗಳನ್ನು ತುಂಬುವ ಕೆಲಸ ನಡೆಯುತ್ತಿತ್ತು.

ಈ ನಿಟ್ಟಿನಲ್ಲಿ ಕನ್ನಡ ವೀಕಿಪೀಡಿಯವನ್ನು ಮಾಹಿತಿಗಳಿಂದ ತುಂಬಿ ತುಳುಕುವಂತೆ ಮಾಡುವ ಉದ್ದೇಶದಿಂದ ಇಲ್ಲಿ ಬಳಕೆದಾರನಾಗಿ ಸೇರಿದ್ದೇನೆ. ಇದಕ್ಕೆ ಮುಂಚೆ ನಾನು Imageputtur ಎಂಬ ಹೆಸರಲ್ಲಿ ಖಾತೆಯನ್ನು ನಿರ್ವಹಿಸುತ್ತಿದ್ದೆ. ಆದರೆ ಕಾರಣಾಂತರಗಳಿಂದ ಆ ಖಾತೆಯನ್ನು ಉಪೇಕ್ಷಿಸಿ ಹೊಸ ಖಾತೆಯನ್ನು ರಚಿಸಿದ್ದೇನೆ. ಇನ್ನು ಮುಂದಕ್ಕೆ ಇದೇ ಖಾತೆಯಿಂದ ಸಂಪಾದಿಸಲು ಬೆಯಸುತ್ತೇನೆ.

ನನ್ನ ಹೆಸರು ಮೊಹಮ್ಮದ್ ಹಂಝ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನನ್ನ ಹುಟ್ಟೂರು. ಅಲ್ಲೇ ವಾಸವಾಗಿದ್ದೇನೆ. ಕನ್ನಡ, ಇಂಗ್ಲಿಷ್, ಅರೇಬಿಕ್, ತುಳು, ಹಿಂದಿ, ಉರ್ದು, ಮಲಯಾಳಂ ಭಾಷೆಗಳನ್ನು ಬಲ್ಲೆ.