ಸದಸ್ಯ:Mell Pereira/sandbox

ವಿಕಿಪೀಡಿಯ ಇಂದ
Jump to navigation Jump to search

ಓಲಾ ಕ್ಯಾಬ್ಸ್[ಬದಲಾಯಿಸಿ]

ಓಲಾ ಕ್ಯಾಬ್ಸ್ ಸಂಸ್ಥೆಯನ್ನು ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾದ ಭಾವೀಶ್ ಅಗರ್ವಾಲ್ ಮತ್ತು ಅನ್ಕಿತ್ ಭಾತಿ ಜನವರಿ ೨೦೧೧ ರಲ್ಲಿ ಸ್ಥಾಪಿಸಿದರು.ಭಾವೀಶ್ ಅಗರ್ವಾಲ್ ಓಲಾ ಕ್ಯಾಬ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ & ಅನ್ಕಿತ್ ಭಾತಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಇದು ಒಂದು. ಇಲ್ಲಿ ವಾಹನಗಳನ್ನು ಬಾಡಿಗೆಗೆ ಕೊಟ್ಟು & ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ವ್ಯವಸ್ಥೆಯನ್ನು ಒದಗಿಸುತ್ತಾರೆ. ಓಲಾ ಕ್ಯಾಬ್ಸ್ ಕಾರು ಸಾರಿಗೆ,ಇದು ನಗರಗಳಲ್ಲಿ ಪಾಯಿಂಟ್-ಟು-ಪಾಯಿಂಟ್ ಸೇವೆಗಳು, ಗಂಟೆ ಆಧಾರಿತ ಬಾಡಿಗೆ ಸೇವೆಗಳು ಅಥವಾ ಹೊರಗಿನ ಪ್ರಯಾಣ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಅನುಕೂಲತೆ ಮತ್ತು ತ್ವರಿತ ಸೇವೆಯನ್ನು ಒದಗಿಸುತ್ತದೆ. ಗ್ರಾಹಕರಿಗೆ ಓಲಾ ಕ್ಯಾಬ್ಸ್ ಸೇವೆ ಬೇಕಾದಲ್ಲಿ ತಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ಒಂದು ಗ್ರಾಹಕ ಸೇವಾ ಕೇಂದ್ರದ ಮೂಲಕ ಓಲಾ ಕ್ಯಾಬ್ಸ್ ಸಂಪರ್ಕಿಸಬಹುದು.

ಪ್ರಸ್ತುತ ಓಲಾ ಕ್ಯಾಬ್ಸ್ ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಮತ್ತು ವೇಗವಾಗಿ ಇತರ ನಗರಗಳಿಗೆ ವಿಸ್ತರಿಸುತ್ತಿದೆ. ಓಲಾ ಕ್ಯಾಬ್ಸ್ಅಪ್ಲಿಕೇಶನಿಂದ ಸುಲುಭವಾಗಿ ಕಾರು ಬುಕ್ ಮಾಡಾಬಹುದು.ನೀವು ಬಯಸುವ ಸ್ಥಳವನ್ನು ಬರೆಯಬೇಕು.ನೀವು ಅಯ್ಕೆ ಮತ‍್ತು ಲಭ್ಯವಿರುವ ಕ್ಯಾಬ್ಸ್ ನೋಡಿ ಮತ್ತು ನಿಮ್ಮ ಸವಾರಿ ಬುಕ‍್ ಮಾಡುವುದಕ್ಕೆ"ಈಗ ಸವಾರಿ"ಯೆಂದು ಟ್ಯಾಪ್ ಮಾಡಬೇಕು.ಇದರಲ್ಲಿ ಚಾಲಕ ವಿವರಗಳು ಪಡಯಬಹುದು. ಈ ನಕ್ಷೆಯಲ್ಲಿ ನಿಮ್ಮ ದಾರಿಯನ್ನು ನೋಡಬಹುದು.ನಿಮ್ಮ ಸವಾರಿ ಪೂರ್ಣಗೊಂಡ ಮೇಲೆ ಹಣ ಪಾವತಿಸಬಹುದು.ಈ ಸಂಸ್ಥೆಯು ಎಲ್ಲಾ ಓಲಾ ಕ್ಯಾಬ್ಸ್ ಗ್ರಾಹಕರಿಗಾಗಿ ಪ್ಯಾನಿಕ್ ಬಟನ್ ಭದ್ರತೆಯನ್ನು ಪರಿಚಯಿಸಿದರು ಮತ್ತು ಮಹಿಳೆ ಸುರಕ್ಷತೆಗಾಗಿ 'ಪಿಂಕ್' ಎಂಬ ಸ್ತ್ರೀ ಮಾತ್ರ ಕ್ಯಾಬ್ ಪರೀಕ್ಷಾ ಹಂತದಲ್ಲಿ ಆಗಿದೆ.