ಸದಸ್ಯ:Melita Martin Ruzario 123456
ಗೋಚರ
ಅಮ್ಮಾ ನಿನ್ನ ಮಡಿಲಿಲ್ಲದೆ
ಅಮ್ಮಾ ಕಾಯುತಿರುವೆ ನಾ ನಿನ್ನ ಮಡಿಲಿಗಾಗಿ ಸಂತಸದಿ ತಂದಿರುವ ಆ ಗುಟುಗಿಗಾಗಿ ಈಗಾಗಲೇ ಆಗಿದೆ ನೀ ಬಾರದೆ ಮೂರು ದಿನ ಕಾಯುತಿದೆ ನಿನಗಾಗಿ ಈ ನನ್ನ ಮನ
ಇಲ್ಲದೆ ನಿನ್ನ ಬೆಚ್ಚಗಿನ ಮಡಿಲು ಕಾಯುತಿದೆ ಈ ನನ್ನ ಮೆತ್ತಗಿನ ಒಡಲು ಯಾರೂ ಇಲ್ಲದ ಈ ಜೀವನಕೆ ಅಂಟಿ ಆಗಿರುವೆ ನಾನೀಗ ಒಬ್ಬಂಟಿ
ಅಮ್ಮಾ ನನಗೆ ತಿಳಿದಿದೆ ನೀನು ಬರುವೆ ಹಲವು ಸಂತಸವ ಹೊತ್ತು ತರುವೆ ಬಾ ಕಂದಾ ಎಂದು ರೂರದಲಿ ಕರೆವೆ ನಿನ್ನ ಪ್ರೀತಿಯ ಜಗವೆ ಇದಕೆ ಪುರಾವೆ
ದೂಡಿ ಬಾ ಅಮ್ಮಾ ಕತ್ತಲೆಯ ಪಂಜರವ ತಣಿಸು ಬಾ ಅಮ್ಮಾ ನನ್ನೊಡಲ ಬೇಸರವ ಇದು ನನ್ನ ಕರೆಯೋಲೆ ನಿನ್ನ ಕಂದನ ಕಾತರದ ಸರಮಾಲೆ.