ಸದಸ್ಯ:Melani M D'Souza/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

' ನನ್ನ ಹೆಸರು ಮೆಲನಿ ಡಿ’ಸೋಜ. ನಾನು ಒದುತ್ತಿರುವ ಸಂಸ್ಥೆಯ ಹೆಸರು [ಸಂತ ಎಲೋಶಿಯಸ್ ಕಾಲೇಜು]. ನಾನು ಪ್ರಥಮ ಬಿ.ಕೊಮ್ ಪದವಿ ವಿದ್ಯಾರ್ಥಿ.

ಸಂತೆ ಹಿಂದಿನ ಕಾಲದಲ್ಲಿ ಅಂದರೆ ಸರಿಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಒಂದು ಸುಂದರ ವಾತಾವರಣ ಹಳ್ಳಿಗಳಲ್ಲಿ ಕಂಡು ಬರುತ್ತಿತ್ತು. ಈಗಲೂ ಕರ್ನಾಟಕದ ಕೆಲವೊಂದು ಜಿಲ್ಲೆಗಳ ಊರಿನಲ್ಲಿ ಈ ದ್ರಶ್ಯ ಕಣ್ಣಿಗೆ ಕಾಣುತ್ತದೆ. ಅಬ್ಬಬ್ಬಾ! ಏನು ಬೊಬ್ಬೆ, ಮಕ್ಕಳ ಕೂಗು, ದೊಡ್ದವರ ಗದ್ದಲ, ವ್ಯಾಪಾರಿಗಳ ಕಿರಿಚಾಟ, ಬೇರೆ ಬೇರೆ ಆಟದ ಯಂತ್ರಗಳ ಶಬ್ದ, ಕೆಲವೊಂದು ಜನರ ಬೇರೆ ಬೇರೆ ಜಾನಪದ ಆಟಗಳು ಈ ಮೊದಲಾದ ದ್ರಶ್ಯಗಳು ಒಟ್ಟು ಸೇರಿದಾಗ ಸಂತೆ ಎಂಬ ಪದ ಸ್ರಷ್ಟಿಯಾಗುತ್ತದೆ. ಸಂತೆ ಎಂದರೆ ವಾರದಲ್ಲಿ ಒಂದು ದಿನ ನಡೆಯುವ ವ್ಯಾಪಾರ. ಇನ್ನೊಂದು ಅರ್ಥದಲ್ಲಿ ರಾತ್ರಿ ಹಗಲು ನಡೆಯುವ ಜಾತ್ರೆಯ ವ್ಯಾಪಾರವನ್ನು ಸಂತೆ ಎಂದು ಕರೆಯುತ್ತಾರೆ.

ಹಳ್ಳಿಯ ವಾರದ ಒಂದು ದಿನದ ಸಂತೆಯಲ್ಲಿ ಬೇರೆ ಬೇರೆ ರೀತಿಯ ವ್ಯಾಪರಿಗಳು ತಮ್ಮ ಮನೆಯಲ್ಲಿ ಬೆಳೆಸಿದ ತರಕಾರಿಗಳನ್ನು, ದವಸ ಧಾನ್ಯಗಳನ್ನು, ಕಾಳುಗಳನ್ನು, ಹಣ್ಣುಗಳನ್ನು, ವಿವಿಧ ರೀತಿಯ ಉತ್ಪನ್ನಗಳನ್ನು ವ್ಯಾಪಾರಕ್ಕಾಗಿ ಸಂತೆಗೆ ತರುತ್ತಿದ್ದ ಕಾಲ ಒಂದಿತ್ತು. ಕೆಲವೊಂದು ವ್ಯಾಪಾರಿಗಳು ಬೇರೆ ಕಡೆಯಿಂದ ಸಿದ್ಧ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿ ಮಾಡಿ, ಸಂತೆಗೆ ತಂದು ಹೆಚ್ಚಿನ ಬೆಲೆಗೆ ಮಾರುವ ದ್ರಶ್ಯಗಳಿದ್ದವು. ಅದರಲ್ಲಿ ಮಕ್ಕಳ ಆಟಿಕೆಗಳು, ವಿವಿಧ ರೀತಿಯ ಉಡುಪುಗಳು, ಚಪ್ಪಲಿಗಳು, ಆಭರಣಗಳು, ಗಾಜಿನ ಬಳೆಗಳು ಮಾರಾಟ ಮಾಡುವ ದ್ರಶ್ಯಗಳಿವೆ. ಸಂತೆಯ ಇನ್ನೊಂದು ಮೂಲೆಯಲ್ಲಿ ಮೀನು, ಮಾಂಸ ಮಾರಾಟವಾಗುತ್ತಿದ್ದರೆ, ಮತ್ತೊಂದು ಮೂಲೆಯಲ್ಲಿ ವಿವಿಧ ಪ್ರಾಣಿಗಳಾದ ಎತ್ತು ಕೋಣಗಳು, ದನ ಎಮ್ಮೆಗಳು, ಆಡು ಕುರಿಗಳು, ಕೋಳಿ ಹುಂಜಗಳು ಮಾರಾಟ ಮಾಡುವ ದ್ರಶ್ಯಗಳನ್ನು ಕೆಲವೊಂದು ಆಯ್ದ ಸಂತೆಗಳಲ್ಲಿ ಕಾಣಬಹುದು.

ಹೀಗೆ ಜನಸಾಮನ್ಯರು ತಮಗೆ ಬೇಕಾದ ಒಂದು ವಾರದ ವಸ್ತುಗಳನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದರು. ಸಂತೆಯಿಂದ ಮನೆಗೆ ವಸ್ತುಗಳನ್ನು ಕೊಂಡೊಯ್ಯುವ ದ್ರಶ್ಯ ಅವಿಸ್ಮರಣೀಯ. ತಲೆಯಲ್ಲಿ ವಸ್ತುಗಳ ಮೂಟೆ, ಎಡ ಬಲ ಕೈಗಳಲ್ಲಿ ಪುಟ್ಟ ಕೂಸು, ಬರಿಗಾಲಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ, ನದಿ ಕಣಿವೆಗಳನ್ನು ದಾಟಿ, ಆ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಹಲವಾರು ಮೈಲುಗಳವರೆಗೆ ನಡೆದಾಡುವ ದ್ರಶ್ಯಗಳನ್ನು ಹಿರಿಯರು ವರ್ಣಿಸಿದನ್ನು ಕಿವಿಯಾರೆ ಕೇಳಿ ಮೈ ಮರೆದೆ.

ಇನ್ನೊಂದು ಸಂತೆಯಾದ ಜಾತ್ರೆಯಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು, ಆಟಿಕೆಗಳು, ವಿವಿಧ ರೀತಿಯ ಆಟದ ಯಂತ್ರೋಪಕರಣಗಳು, ಐಸ್ ಕ್ಯಾಂಡಿ ಅಂಗಡಿಗಳು, ಚಾ ಕಾಪಿ, ಸೋಜಿ ಅಂಗಡಿಗಳು, ಕೆಲವೊಂದು ವಸ್ತುಗಳ ಅಂಗಡಿಗಳು, ಭಿಕ್ಷುಕರು ಮೊದಲಾದವರು ಕಾಣಸಿಗುತ್ತಾರೆ. ಸಂತೆಯು ಬೊಬ್ಬೆ, ಕೂಗು, ಕಿರಿಚಾಟದಿಂದ ಕೂಡಿರುವುದರಿಂದ ಕೆಲವೊಂದು ಕಿರಿಕಿರಿಯಾಗಿ ಓಡಿ ಹೋಗುವ ದ್ರಶ್ಯಗಳಿವೆ. ಒಂದು ಗಾದೆ ಮಾತಿನಂತೆ “ಚಿಂತೆ ಇಲ್ಲದವನಿಗೆ ಸಂತೆಯಲ್ಲು ನಿದ್ದೆ” ಎಂಬಂತೆ ಸಂತೆ ಎಂಬ ಪದವು ಅಸ್ಟೊಂದು ಶಬ್ದದಿಂದ ಕೂಡಿರುತ್ತದೆ.

ಈಗಲೂ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂತೆ ನಡೆಯುವ ಸ್ಥಳಗಳಿವೆ. ಹಿಂದೆ ವಾಹನಗಳ ಸೌಕರ್ಯ ಹಳ್ಳಿಗಳಲ್ಲಿ ಇಲ್ಲದ ಕಾರಣ ಸಂತೆಗೆ ಬಂದ ಕೆಲವರು ಕುದುರೆ ಗಾಡಿ, ಎತ್ತಿನ ಗಾಡಿಗಳಲ್ಲಿ ತಮ್ಮ ಸರಕುಗಳನ್ನು ತೆಗೆದುಕೊಂಡು ಪ್ರಯಾಣಿಸುವ ದ್ರಶ್ಯವನ್ನು ದೂರದರ್ಶನದಲ್ಲಿ ವೀಕ್ಷಿಸಿದ್ದೇನೆ.

ಸಮಾಜ ಬದಲಾವಣೆಯಾದಂತೆ ಸಂತೆ ಎಂಬ ಪದ ನಾಶವಾಗುತ್ತಿದೆ. ಯಾಕೆಂದರೆ ನಮ್ಮ ಪುಟ್ಟ ಮಕ್ಕಳಲ್ಲಿ ಸಂತೆ ಏನೆಂದು ಕೇಳಿದರೆ ಅವರಿಗೆ ಉತ್ತರ ಗೊತ್ತಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಅಭಿವ್ರದ್ಧಿಯಾಗುತ್ತಿರುವ ನಮ್ಮ ಸಮಾಜ. ಸಮಾಜ ಬದಲಾವಣೆಯಾದಂತೆ ಜನರ ವೇಷ ಭೂಷಣ, ಜೀವನ ಶೈಲಿ, ಚಿಂತನ ಸಾಮರ್ಥ್ಯದಲ್ಲೂ ಬದಲಾವಣೆಯಾಗುತ್ತದೆ. ಈ ರೀತಿಯ ಬದಲಾವಣೆಯಿಂದ ಶ್ರೀಮಂತ ಬಡವ ಎಂಬ ಎರಡು ಗುಂಪುಗಳು ಸ್ರಷ್ಟಿಯಾಗಿವೆ. ಶ್ರೀಮಂತರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಪೇಟೆಗೆ ಹೋದರೆ, ಬಡವರು ಎಲ್ಲ ರೀತಿಯ ತೆರಿಗೆಗಳಿಂದ ಮುಕ್ತವಾದ ಸಂತೆಗೆ ಹೋಗಿ ವಸ್ತುಗಳನ್ನು ಖರೀದಿಸಿತ್ತಾರೆ.