ಸದಸ್ಯ:Meghana belavadi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುಕುಲ ಮತ್ತು ಆಧುನಿಕ ಶಿಕ್ಷಣ ಪದ್ಧಿತಿ ಒ೦ದು ನೋಟ[ಬದಲಾಯಿಸಿ]

'ಶಿಕ್ಷಣ' ಎನ್ನುವುದು ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ 'ಗುರುಕುಲ'ಗಳ ಮೂಲಕವೇ ಬೆಳೆದು ಬಂದುವನ್ನು ಕಾಣುತ್ತೇವೆ. ಸಾಮಾನ್ಯವಾಗಿ ಇಂಥ ಗುರುಕುಲಗಳು ನಗರ ಪ್ರದೇಶದಿಂದ ದೂರದಲ್ಲಿ, ಪ್ರಕೃತಿಯ ಮಡಿಲಿನಲ್ಲಿಯೇ ಇರುತ್ತಿತ್ತು. ಹಚ್ಚಹಸಿರು ತುಂಬಿದ ಪ್ರಶಾಂತ ಪರಿಸರ ಅಧ್ಯಯನದ ಏಕಾಗ್ರತೆಗೆ ಅನುಕೂಲ. ಜಿಂಕೆ, ಹಸು, ಮೊಲ ಮುಂತಾದ ಪ್ರಾಣಿಗಳೊಂದಿಗೆ ಪ್ರೀತಿಯಿಂದ ಜ್ಞಾನಸಾಧನೆ ಮಾಡುತ್ತಿರುವ ಋಷಿಗಳ ಸಾನ್ನಿಧ್ಯ ವಿದ್ಯಾಥಿ‌ಗಳಿಗೆ ಜ್ಞಾನದ ಜೊತೆ ವಿಸ್ತಾರವಾದ ಬದುಕನ್ನೂ ಕಲಿಸುತ್ತದೆ. ಇಂಥ ವಿದ್ಯಾಭ್ಯಾಸ ಸಾಮಾನ್ಯವಾಗಿ ಗಂಡು ಮಕ್ಕಳಿಗೆ ವಿಶೇಷವಾಗಿ ದೊರಕುತ್ತಿತ್ತು. ಸುಮಾರು ೧೨ ವಷ‍ಗಳ ವಿದ್ಯಾಭ್ಯಾಸವನ್ನು ಮಕ್ಕಳು ಗುರುಕುಲದಲ್ಲೇ ಇದ್ದು ಪಡೆಯಬೇಕಾಗಿತ್ತು. ಅಲ್ಲಿ ಅಧ್ಯಯನ ಮಾಡುವ ಮಕ್ಕಳ ಊಟ-ವಸತಿ-ವಿದ್ಯೆ ಎಲ್ಲವನ್ನೂ ಗುರುಗಳೇ ನೋಡಿಕೊಳ್ಳುತ್ತಿದ್ದರು. ಅದಕ್ಕೆ ಅವರನ್ನು 'ಕುಲಪತಿ' ಎಂದೇ ಕರೆಯುತ್ತಿದ್ದರು.

ಮುನೀನಾಂ ದಶಸಾಹಸ್ರಂ ಯೋನ್ನಪಾನಾದಿ ಪೋಷಣಾತ್ ಅಧ್ಯಾಪಯತಿ ವಿಪ್ರಷಿ‍ : ಅಸೌಕುಲಪತಿ ಸ್ನತಃ

ಹತ್ತು ಸಹಸ್ರ ವಿದ್ಯಾಥಿ‍ಗಳಿಗೆ ಅನ್ನಪಾನಾದಿಗಳನ್ನು ಕೊಟ್ಟು ಪೋಷಿಸಿ, ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದೇ ಅಲ್ಲದೆ ತಾನು ಪಾಠವನ್ನು ಹೇಳಿಕೊಡುವವನೇ "ಕುಲಪತಿ" ಎನ್ನಿಸಿಕೊಳ್ಳುತ್ತಿದ್ದನು.ಗುರುಕುಲಕ್ಕೆ ವಿದ್ಯಾಥಿ‍ಯೊಬ್ಬನಿಗೆ ಪ್ರವೇಶ ನೀಡುವಾಗ ಆತನ ವ್ಯಕ್ತಿತ್ವವನ್ನು ಒರೆಹಚ್ಚಿ ನೋಡುತ್ತಿದ್ದರು. ಕಲಿಯುವಿಕೆಯಲ್ಲಿ ಆತನ ಆಸಕ್ತಿ, ಸನ್ನಡತೆ, ಇತ್ಯಾದಿಗಳನ್ನು ಗಮನಿಸಿ ಅವನಿಗೆ ಗುರುಕುಲದಲ್ಲಿ ಪ್ರವೇಶಾವಕಾಶ ನೀಡುತ್ತಿದ್ದರು. ಆ ವಿದ್ಯಾಥಿ‍ ತನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ಬೇರಾವ ಚಿಂತೆಯನ್ನೂ ಮಾಡದೆ ಶ್ರದ್ಧೆಯಿಂದ ಕಲಿತು ಸಕಲವಿದ್ಯಾಪಾರಂಗತ ಆಗುತ್ತಿದ್ದನು. 'ಸ್ನಾತಕ'ನೆನಿಸಿಕೊಂಡು ಹಿಂದಿರುಗುತ್ತಿದ್ದನು. ಸಮಾಜದಲ್ಲಿ ಬಹಳ ಗೌರವ ಸ್ಥಾನ ಹೊಂದುವ ಅವನು ಯಾರು ಏನೇ ಕೇಳಿದರೂ ಅದಕ್ಕೆ ಶಾಸ್ತ್ರೀಯವಾಗಿ ಉತ್ತರ ಹೇಳಬಲ್ಲ ಸಾಮಥ್ಯ‍ ಹೊಂದಿರುತ್ತಿದ್ದನು. ಹಿಂದಿನ ಹಾಗೂ ಇಂದಿನ ಶಿಕ್ಷಣವನ್ನು ಹೋಲಿಸುತ್ತಾ ಕವಿಯೊಬ್ಬರು ಹೀಗೆ ಹೇಳಿದ್ದಾರೆ. "ಹಿಂದೆ ಗುರುವಿದ್ದ, ಮುಂದೆ ಗುರಿಇತ್ತು ನಡೆದಿತ್ತು ಧೀರದಂಡು ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ ನಡೆಯುತಿದೆ ಹೇಡಿ ಹಿಂಡು"

ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿ ಸಾಮಾನ್ಯವಾಗಿ ಧಾಮಿ‍ಕ ತಳಹದಿಯ ಮೇಲಿರುತ್ತಿತ್ತು. ಹೀಗಾಗಿ ಗುರುವಿನ ಬಗ್ಗೆ ಶಿಷ್ಯನಿಗೆ ಎಲ್ಲಿಲ್ಲದ ಗೌರವಾದರಗಳಿದ್ದವು. ತಂದೆಗಿಂತಲೂ ಆತ ಪೂಜ್ಯನೆಂದೇ ಭಾವಿಸಿದ್ದರು. ಮಹಾಭಾರತದ ನಿದಶ‍ನವೊಂದನ್ನು ಈ ಸಂದಭ‍ದಲ್ಲಿ ಹೇಳಬಹುದು. ಅಜು‍ನ ಬೇಟೆಯಾಡಲು ಕಾಡಿಗೆ ಬಂದಾಗ ತನ್ನ ಬಾಣದಿಂದ ಗುರಿಯಿಟ್ಟು ಪ್ರಾಣಿಯೊಂದಕ್ಕೆ ಹೊಡೆಯುತ್ತಾನೆ. ಆಗ ಅದೇ ಸಮಯದಲ್ಲಿ ಏಕಲವ್ಯ 'ಶಬ್ದವೇದಿ' ವಿದ್ಯೆಯಿಂದ ಅದೇ ಪ್ರಾಣಿಗೆ ಗುರಿಯಿಟ್ಟು ಹೊಡೆಯುತ್ತಾನೆ. ಅಜು‍ನನಿಗೆ ಆಶ್ಚಯ‍. ಪ್ರಾಣಿಯನ್ನು ನೋಡದೆ ಹೊಡೆದದ್ದು ಹೇಗೆಂದು, ಆಗ ಆ ಬೇಡನನ್ನು ನೀನಾರು ಎಂದು ಕೇಳುತ್ತಾನೆ. ಆಗ ಅವನು ಕೊಟ್ಟ ಉತ್ತರ 'ದ್ರೋಣಶಿಷ್ಯ' ಎಂದು. ಅಂದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ, ತಂದೆ ತಾಯಿಗಳು ನಮಗೆ ದೇಹವನ್ನು ಕೊಡಬಹುದು ಆದರೆ ಗುರು ನಮ್ಮ ವ್ಯಕ್ತಿತ್ವವನ್ನು ರೂಪಿಸುವವನು. ಆದ್ದರಿಂದ ನಮ್ಮ ಪರಿಚಯ ಹೇಳಿಕೊಳ್ಳುವಾಗ ತಂದೆಗಿಂತ ಗುರುವಿಗೆ ಪ್ರಾಧಾನ್ಯವಿದೆ ನಮ್ಮ ಸಂಸ್ಕೃತಿಯಲ್ಲಿ, ಅದನ್ನೇ ಸವ‍ಜ್ಞ ಕವಿ ಹೀಗೆ ಹೇಳಿದ್ದಾನೆ. ತಂದೆಗೂ ಗುರುವಿಗೂ ಒಂದು ಅಂತರವುಂಟು ತಂದೆ ತೋರುವನು ಸದ್ಗುರುವ, ಗುರುರಾಯ ಬಂಧನವ ಕಳೆವ ಸವ‍ಜ್ಞ. ತಂದೆ ಗುರುವಿನ ಬಳಿ ಮಗನನ್ನು ಬಿಡುತ್ತಾನೆ. ಗುರು ಅವನಿಗೆ ಮಾಗ‍ದಶ‍ನ ಮಾಡಿ 'ಇಹ'ಕ್ಕೂ 'ಪರ'ಕ್ಕೂ ಬೇಕಾದ ವಿದ್ಯೆ ನೀಡಿ, ಉತ್ತಮ ಪ್ರಜೆಯನ್ನಾಗಿ ಮಾಡುತ್ತಾನೆ. ಆದ್ದರಿಂದ ಗುರು ವಿದ್ಯಾಥಿ‍ಗೆ ಆಧ್ಯಾತ್ಮಿಕ ತಂದೆಯಾಗಿದ್ದ. ಅವನ ಅಂತರಂಗದ ಶಕ್ತಿಯ ಪ್ರಚೋದನೆಗೆ ಕಾರಣನಾಗಿದ್ದ. ಇಂಥ ಜ್ಞಾನವನ್ನು ಗುರುಕರುಣೆಯನ್ನು ಮನುಷ್ಯ ಮಾತ್ರ ಪಡೆಯಲು ಸಾಧ್ಯ. ಹೀಗೆ ಗುರುವಿನಿಂದ ಪಡೆದ ಜ್ಞಾನವನ್ನು ಮುಂದೆ ತನ್ನ ಶಿಷ್ಯರಿಗೆ ನೀಡಿ ಅದು ಪರಂಪರೆಯಲ್ಲಿ ಮುಂದುವರಿಯುವಂತೆ ಮಾಡುವುದೇ ಗುರುಪರಂಪರೆಯ ಉದ್ದೇಶ. ಇಂಥ ಗುರುವಿನ ಜೀವನೋಪಾಯಕ್ಕೆ ವಿದ್ಯಾಭ್ಯಾಸದ ನಂತರ ಶಿಷ್ಯರು ಕೊಡುವ ಗುರುದಕ್ಷಿಣೆಯೋ (ಕಡ್ಡಾಯವಲ್ಲ) ಅಥವಾ ರಾಜಮಹಾರಾಜರ ಸಹಾಯವೋ ಆಧಾರವಾಗಿರುತ್ತಿತ್ತು. ಆದರೂ ಅದು ವ್ಯಾಪಾರಿ ದೃಷ್ಠಿಯಲ್ಲಿರಲಿಲ್ಲ. ಅದರಲ್ಲೂ ಗುರು-ಶಿಷ್ಯನ ಉದ್ಧಾರಕ್ಕಾಗಿಯೇ ಸಮಸ್ತವೂ ಆಗಿರುತ್ತಾನೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷುರುನ್ನೀಲಿತಂ ಯೇನ, ತಸ್ಮೈಶ್ರೀ ಗುರವೇ ನಮಃ | ಅಜ್ಞಾನವೆಂಬ ಕಣ್ಣಿನ ಕಾಯಿಲೆಯನ್ನು ಜ್ಞಾನವೆಂಬ ಅಂಜನದ ಕಡ್ಡಿಯಿಂದ ಗುಣಪಡಿಸಿ, ಕಣ್ಣು ಚೆನ್ನಾಗಿ ಕಾಣುವಂತೆ ಮಾಡಿ ಶಿಷ್ಯನ ಕೀತಿ‍ ಜಗತ್ತಿಗೆ ಹರಡುವಂತೆ ಮಾಡಿದ ಸದ್ಗುರುವಿಗೆ ನಮನಗಳು ಸಲ್ಲುತ್ತವೆ. ಶಿಷ್ಯನ ಪ್ರಗತಿಯೇ ಗುರುವಿನ ಗುರಿ. ಆ ಶಿಷ್ಯ ತನಗಿಂತಲೂ ಮೀರಿ ಬೆಳೆದರಂತೂ 'ಶಿಷ್ಯೋದಿಚ್ಚೇತ್ ಪರಾಜಯಂ' ಎಂದು ಗುರು ಸಂತೋಷಪಡುತ್ತಾನೆ. ಶ್ರೀರಾಮ ವಿಶ್ವಾಮಿತ್ರರ ಗುರುಕುಲದಲ್ಲಿ, ಶ್ರೀಕೃಷ್ಣ ಸಾಂದೀಪನಿ ಗುರುಕುಲದಲ್ಲಿ ಕಲಿತು ಬಂದವರು. ಅಂತಹ ಗುರುಗಳಿದ್ದುದರಿಂದಲೇ ರಾಮ-ಕೃಷ್ಣರಂತಹ ಮಹಾನುಭಾವರನ್ನು ನಮ್ಮ ದೇಶ ಕಂಡಿತು. ಇಂಥ ಗುರುಗಳ ಶಿಷ್ಯರಾಗಿ ವಿದ್ಯಾಭ್ಯಾಸ ಮಾಡುವಾಗ ಶಿಷ್ಯರು ವಿನಯ-ವಿಧೇಯತೆಯಿಂದರಬೇಕಿತ್ತು. ಶ್ರದ್ಧೆ, ನಂಬಿಕೆ, ವಿಶ್ವಾಸವಿಟ್ಟು ಅಷ್ಟೇ ಸುಸಂಸ್ಕೃತವಾಗುತ್ತಿತ್ತು. 'ಶಿಕ್ಷಣ'ದಲ್ಲಿ ಕೇವಲ 'ಅಧ್ಯಾತ್ಮ ಜ್ಞಾನ'ವಲ್ಲ ಲೌಕಿಕ ಜ್ಞಾನವನ್ನೂ ಹೇಳಿಕೊಡುತ್ತಿದ್ದರು. ಗುರುಕುಲದ ಅವಶ್ಯಕ ಕೆಲಸಗಳನ್ನು ಮಾಡುವುದೂ ಕಡ್ಡಾಯವಾಗಿತ್ತು. ಅಲ್ಲಿ ಆಹಾರ-ವಿಹಾರ ಉಡುಗೆ ತೊಡುಗೆ ಎಲ್ಲವೂ ಅತ್ಯಂತ ಸರಳವಾಗಿರುತ್ತಿತ್ತು. ಒಬ್ಬ ರಾಜನ ಮಗನೂ ಸಾಮಾನ್ಯ ವಿದ್ಯಾಥಿ‍ಯೂ ಅಲ್ಲಿ ಸಮಾನರು. ರಾಜನ ಮಗನಾದರೂ ಅರಮನೆಯ ಎಲ್ಲಾ ವೈಭವಗಳನ್ನೂ ಬಿಟ್ಟು ಸರಳ ಜೀವನದೊಂದಿಗೆ ಸ್ನೇಹ, ಪ್ರೀತಿ, ವಿನಯ, ಶಿಸ್ತುಗಳನ್ನು ಕಲಿಯಬೇಕಿತ್ತು.

ಗುರುಕುಲ ಶಿಕ್ಷಣದ ಉದ್ದೇಶಗಳು ಉದಾತ್ತವಾಗಿದ್ದವು. ಜ್ಞಾನಾಜ‍ನೆ, ಶೀಲಸಂವಧ‍ನೆ, ವ್ಯಕ್ತಿತ್ವ ವಿಕಾಸ, ಆಧ್ಯಾತ್ಮಿಕ ಉನ್ನತಿ, ಸಂಸ್ಕೃತಿಯ ರಕ್ಷಣೆ ಹಾಗೂ ಪ್ರಸಾರ, ದೈಹಿಕ ವಿಕಾಸ ಇವು ಗುರುಕುಲ ಶಿಕ್ಷಣದ ಮುಖ್ಯ ಉದ್ದೇಶಗಳು. ಹಾಗಾಗಿ ವಿದ್ಯಾಥಿ‍ಯಾದವನು ಮುಂದೆ ತನ್ನ ಬದುಕಿನಲ್ಲಿ ಈ ಎಲ್ಲಾ ಉದ್ದೇಶಗಳನ್ನು ಈಡೇರಿಸಲು ಸಮಥ‍ನಾಗುವ ರೀತಿಯಲ್ಲಿ ತಯಾರಾಗಬೇಕಿತ್ತು. ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ತಕ‍ಶಾಸ್ತ್ರ, ಮಿಮಾಂಸೆ, ಭಾಷೆಗಳನ್ನು ವಿಶೇಷವಾಗಿ ಕಲಿಸುತ್ತಿದ್ದರು. ಹೀಗೆ ಕಠಿಣ ಪರಿಶ್ರಮದಿಂದ ಪಡೆದ ವಿದ್ಯೆಯಿಂದ ಆತ 'ಪರಿಪೂಣ‍' ಮನುಷ್ಯನಾಗುತ್ತಿದ್ದ. 'ಜ್ಞಾನ'ಕ್ಕೆ ಎಷ್ಟು ಮಹತ್ವ ಕೊಟ್ಟಿದ್ದರೋ 'ಶೀಲಾ'ಕ್ಕೂ ಅಷ್ಟೇ ಮಹತ್ವ ಕೊಟ್ಟ ಗುರುಗಳು ಶಿಷ್ಯರನ್ನು ಶೀಲವಂತರನ್ನಾಗಿ ಬೆಳೆಸುತ್ತಿದ್ದರು. ಅವನಲ್ಲಿ ಆತ್ಮವಿಶ್ವಾಸ ಆತ್ಮಸಂಯಮವನ್ನು ಮೂಡಿಸುತ್ತಿದ್ದರು. ಹಾಗಾಗಿ ತನಗರಿವಿಲ್ಲದೆಯೆ ವಿದ್ಯಾಥಿ‍ ಕತ್ತಲಿನಿಂದ ಬೆಳಕಿನಕಡೆಗೆ ಸಾಗುತ್ತಿದ್ದ. ಇಡೀ ಸಮಾಜವನ್ನು ಮಾನವೀಯತೆಯಿಂದ - ಪ್ರೀತಿಯಿಂದ ಕಾಣುತ್ತಿದ್ದ. ಒಂದು ನಿದಶ‍ನ ಹೇಳಬಹುದಾದರೆ, ಚಂದ್ರಾಪೀಡನೆಂಬ ರಾಜಕುಮಾರ ವಿದ್ಯಾಭ್ಯಾಸ ಮುಗಿಸಿ ತನ್ನ ೧೬ನೇ ವಯಸ್ಸಿಗೆ ಅರಮನೆಗೆ ಬಂದ ಒಂದು ವಿಚಿತ್ರವಾದ, ವಿಶಿಷ್ಟವಾದ ಕುದುರೆಯನ್ನು ಯಾರೋ ತಂದು ರಾಜನಿಗೆ ಕಾಣಿಕೆಯಾಗಿ ನೀಡಿದರು. ಯುವರಾಜನಿಗೆ ಆ ಕುದುರೆ ಏರುವ ತವಕ ಮಂತ್ರಿ ಹೇಳುತ್ತಾನೆ. ಪಳಗಿಸದೆ ಕುದುರೆ ಏರಬೇಡಿರೆಂದು, ಆದರೂ ವಯಸ್ಸಿನ ಕುತೂಹಲದಿಂದ ಕುದುರೆ ಏರಲು ಹೋದ ಕುಮಾರ "ಕ್ಷಮೆಯನ್ನು ಮಾಡು ಅಶ್ವ ನೀನಾರೆಂದು ಅರಿಯೆನು ಮದಾರೋಹಣ ಅತಿಕ್ರಮಣವನ್ನು" ಎಂದು ವಿನಿಯದಿಂದ ಕುದುರೆಗೆ ಸಂಬೋಧಿಸಿ ಸವಾರಿ ಮಾಡಿದ. ಅಂದರೆ ಒಂದು ಪ್ರಾಣಿಯನ್ನೂ ಇಷ್ಟೊಂದು ವಿನಿಯದಿಂದ ನಡೆಸಿಕೊಳ್ಳುದ ವ್ಯಕ್ತಿತ್ವ ಈತನಿಗೆ ಬಂದದ್ದು ಅವನು ಗುರುಕುಲದಲ್ಲಿ ಕಲಿತ ವಿದ್ಯೆಯಿಂದ.

'ಗುರುಕುಲ ಶಿಕ್ಷಣ'-ವಿದ್ಯಾಥಿ‍ಯ ದೈಹಿಕ ವಿಕಾಸಕ್ಕೂ ಮಹತ್ವ ಕೊಡುತ್ತಿತ್ತು. 'ಶರೀರಂ ಆದ್ಯಂ, ಖಲುಧಮ‍ ಸಾಧನಂ' ಎಂದು ಕಾಳಿದಾಸ ಹೇಳಿದಂತೆ, ನಮ್ಮ ಎಲ್ಲ ಸಾಧನೆಗಳಿಗೆ ಶರೀರವೇ ಮೂಲ ಸದೃಢವಾದ ದೇಹವಿದ್ದರೆ ಮಾತ್ರ ದೃಢವಾದ ಮನಸ್ಸು ಇರಲು ಸಾಧ್ಯ. ಅದನ್ನೇ ವಿವೇಕಾನಂದರು ಉಕ್ಕಿನಂಥ ಬಲಿಷ್ಟವಾದ ದೇಹವನ್ನು ಯುವಕರು ಬೆಳಸಿಕೊಳ್ಳಬೇಕು ಎಂದಿದ್ದಾರೆ. ಆದ್ದರಿಂದ ಗುರುಕುಲದಲ್ಲಿ ಯೋಗಾಸನ, ಪ್ರಾಣಾಯಾಮ ಹಾಗೂ ಕಸರತ್ತುಗಳ ಮೂಲಕ ದೈಹಿಕ ಸಂವಧ‍ನೆ ಮಾಡಿಕೊಳ್ಳಲು ಪ್ರೇರಣೆ ನೀಡುತ್ತಾರೆ. ಹಾಗೆಯೇ ಶಿಸ್ತಿಗೂ ಮಹತ್ವದ ಸ್ಥಾನವಿದೆ. ಹೀಗೆ ವಿದ್ಯಾಥಿ‍ಗಳು ದೃಢವಾದ ದೇಹ ಮನಸ್ಸುಗಳ ಮೂಲಕ ಉತ್ತಮ ಜ್ಞಾನ ಪಡೆದು ಶೀಲವಂತರಾಗಿ, ಸಮಾಜದ ಆಸ್ತಿಯಾಗಬೇಕು ಎಂಬುದೇ ಗುರುಕುಲದ ಪ್ರಧಾನ ಆಶಯ. ಬಹುಶಃ ಇಂತಹ 'ಗುರುಕುಲ' ಪರಂಪರೆ ಇನ್ನಾವ ದೇಶದಲ್ಲೂ ಇಲ್ಲ. ಭಾರತೀಯ ಸಂಸ್ಕೃತಿಯ ತಳಪಾಯವೇ ಇದು. ಆದಶ‍ ವಿದ್ಯಾಥಿ‍, ಆದಶ‍ ಸಮಾಜ, ಆದಶ‍ ರಾಷ್ಟ್ರ ನಿಮಾ‍ಣ ಗುರುಪರಂಪರೆಯಿಂದ ಸಾಧ್ಯ.

ಇಂದು ಆಧುನಿಕ ವಿದ್ಯಾಭ್ಯಾಸ ಬಹುತೇಕ ವ್ಯಾಪಾರೀಕರಣವಾಗಿದೆ ಈ ಶಿಕ್ಷಣದಿಂದ ಸಂಪತ್ತಿನ ಹೊಳೆ ಹರಿದರೂ, ಸಂಸ್ಕೃತಿಯ ಬೇರು ಕಾಣುತ್ತಿಲ್ಲ. ಹಾಗಾಗಿ ವಿದ್ಯೆಗೂ ಮಾನವೀಯತೆಗೂ ಇರಬೇಕಾಗಿದ್ದ ಹೊಕ್ಕುಳ ಬಳ್ಳಿಯ ಸಂಬಂಧವೇ ಇಲ್ಲದೆ ಅತಂತ್ರವಾಗುತ್ತಿದೆ. ನಿಜವಾದ 'ಜ್ಞಾನ ಸಂಪಾದನೆ' ಎಂಬ ಅಥ‍ವೇ ಶಿಕ್ಷಣದಿಂದ ದೂರವಾಗುತ್ತಿದೆ. ಅಲ್ಲಮ ಪ್ರಭುದೇವರ ವಚನವೊಂದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.

ಭೂಮಿ ನಿನ್ನದಲ್ಲ ಕಾಮಿನಿನಿನ್ನವಳಲ್ಲ ಅದು ಜಗಕ್ಕಿಕ್ಕಿದ ವಿಧಿ ನಿನ್ನ ಒಡವೆ ಎಂಬುದು ಜ್ಞಾನ ರತ್ನ, ಅಂತಪ್ಪ ದಿವ್ಯರಕ್ಕವ ಕೆಡಗುಡದೆ ಆ ರತ್ನವ ನೀನು ಅಲಂಕರಿಸಿದೆಯಾದಡೆ ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಸಿರಿವಂತರಿಲ್ಲ ಕಾಣಾ ಎಲೆ ಮನವೆ. ಈ ವಚನದ ಆಶಯ ಅದ್ಭುತವಾದುದು. ಈ ಲೋಕದಲ್ಲಿನ ಬಹುತೇಕ ಜನರು ಹೋರಾಡುವುದು ಹೊನ್ನಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ ಇನ್ನೂ ಸ್ವಲ್ಪ ಮುಂದುವರಿದು ಹೇಳುವುದಾದರೆ ಆಸ್ತಿಗಾಗಿ, ಅಧಿಕಾರಕ್ಕಾಗಿ, ಕೀತಿ‍ಗಾಗಿ, ಸ್ವಾಥ‍ಕ್ಕಾಗಿ.... ಹೀಗೆ ಅವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಪ್ರಭುದೇವರು ಹೇಳುವಂತೆ ಮಾನವನ ನಿಜವಾದ ಆಸ್ತಿ ಜ್ಞಾನ. ಜ್ಞಾನವೆಂದರೆ ಇಂಜಿನಿಯರ್, ಡಾಕ್ಟರ್ ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಯೋ ಮತ್ತಿನ್ನೇನೋ ಆಗುವುದಲ್ಲ. ಪ್ರತಿಯೊಬ್ಬರೂ ತಮ್ಮನ್ನು ತಾವು ಅಥ‍ಮಾಡಿಕೊಂಡು ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾಧದಿಂದ ಬಾಳುವ ಕಲೆಯನ್ನು ಕರಗತ ಮಾಡಿಕೊಳ್ಳುವುದು. ಇವತ್ತು ಸಿಗುತ್ತಿರುವ ಶಿಕ್ಷಣ ನಮ್ಮನ್ನು ಈ ದಾರಿಯಲ್ಲಿ ಕರೆಯೊಯ್ಯಲು ವಿಫಲವಾಗುತ್ತಿದೆ. ಇಂದಿನ ಶಿಕ್ಷಣ ನಮ್ಮನ್ನು ನೀತಿವಂತರನ್ನಾಗಿ ಮಾಡುತ್ತಿಲ್ಲ. ಸಚ್ಚಾರಿತ್ರ್ಯವಂತರನ್ನಾಗಿ ಬೆಳೆಸುತ್ತಿಲ್ಲ. ಸೌಹಾಧತೆ ಕಲಿಸುತ್ತಿಲ್ಲ. ಬದಲಾಗಿ ಭಯೋತ್ಪಾದಕರನ್ನಾಗಿ, ದುಷ್ಟರನ್ನಾಗಿ, ವಚನಭ್ರಷ್ಠರನ್ನಾಗಿ, ಸ್ವಾಥಿ‍ಗಳನ್ನಾಗಿ ಮಾಡುತ್ತಿದೆಯೇನೋ ಎನ್ನಿಸುತ್ತದೆ. ಶಿಕ್ಷಣ ಪಡೆದ ವ್ಯಕ್ತಿ ತಂದೆ-ತಾಯಿಗಳಿಗೆ, ಮನೆಗೆ, ಸಮಾಜಕ್ಕೆ ಗುರುಹಿರಿಯರಿಗೆ ಭಯೋತ್ಪಾದಕರಾಗುವ ವಾತಾವರಣ ಅಲ್ಲಲ್ಲೇ ಕಾಣುವಂತಾಗಿದೆ. ಹೀಗಾಗಲು ಕಾರಣ ನಮ್ಮಲ್ಲಿ ನೈತಿಕ, ಸಾಂಸ್ಕೃತಿಕ ನೆಲೆಗಟ್ಟು ಕುಸಿದಿರುವುದು. ಇಂದು ಪ್ರತಿಯೊಬ್ಬ ತಂದೆ-ತಾಯಿಯರು ಆಲೋಚಿಸುತ್ತಿರುವುದು ತಮ್ಮ ಮಕ್ಕಳ ನೈತಿಕ ಬೆಳವಣಿಗೆ, ಜ್ಞಾನದ ಬೆಳವಣಿಗೆ ಕುರಿತಲ್ಲ. ತನ್ನ ಮಗ/ಮಗಳು ನೂರಕ್ಕೆ ನೂರು ಅಂಕಗಳನ್ನು ಪಡೆಯಬೇಕೆಂದು. ಹಾಗೆ ಅಂಕಗಳು ಬರದಿದ್ದರೆ ತಮ್ಮ ಮಕ್ಕಳನ್ನೇ ಹೀಯ್ಯಾಳಿಸುತ್ತಾರೆ. ಅಂಕಗಳಿಗಾಗಿ ಮಕ್ಕಳು ಅಡ್ಡದಾರಿ ಹಿಡಿಯಲು ಒಂದು ರೀತಿಯಲ್ಲಿ ಅವರು ಪ್ರಚೋದಕರಾಗುತ್ತಾರೆ. ಹೀಗೆ ಮಾಡದೆ, ಮಕ್ಕಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ ನಿಜವಾದ ಅಥ‍ದಲ್ಲಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕು.

ಮಕ್ಕಳು ತಮ್ಮ ಕಾಲಮೇಲೆ ತಾವು ನಿಲ್ಲಬೇಕು ಸುಖವಾಗಿರಬೇಕು ಎನ್ನುವುದೇನೋ ಸರಿ. ಆದರೆ ಅದರ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕಲ್ಲವೆ? ಮಕ್ಕಳ ಬೆಳವಣಿಗೆಯ ಹಿಂದೆ ಹೆತ್ತ ತಂದೆ-ತಾಯಿಗಳ, ಗುರುಗಳ, ವಿದ್ಯೆಗೆ ಸಹಕಾರ ನೀಡಿದ ಸಮಾಜ ಇದೆ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಶಿಕ್ಷಣ ಯಾವತ್ತೂ ಇದರ ಬಗ್ಗೆ ಚಿಂತನೆ ಮಾಡಬೇಕು. ಇಂದಿನ ಉನ್ನತ ಶಿಕ್ಷಣ ಪಡೆದ ಮಕ್ಕಳೂ ಕೂಡ ಸ್ವತಂತ್ರ ಉದ್ಯೋಗ ಪಡೆದು ಮದುವೆಯಾಯಿತು ಎಂದರೆ ತಂದೆ-ತಾಯಿಗಳ, ಸಮಾಜದ ಬಗ್ಗೆ ಕಾಳಜಿಯನ್ನೇ ಇಟ್ಟುಕೊಳ್ಳುವುದಿಲ್ಲ. ತಮ್ಮದೇ ಸಂಸಾರದೊಂದಿಗೆ ಸೀಮಿತಗೋಡೆ ಕಟ್ಟಿಕೊಂಡು ಸ್ವಾಥಿ‍ಗಳಾಗಿ ಬಾಳುತ್ತಿದ್ದಾರೆ. ಹಾಗಾಗಿ ಇಂದು ನಮ್ಮ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಏರುತ್ತಿದೆ. ನಮ್ಮನ್ನು ವಿದ್ಯಾವಂತರನ್ನಾಗಿ ಬೆಳೆಸಿದ ತಂದೆತಾಯಿಗಳು ಅಸಹಾಯಕರಾಗಿ ಕೊರಗುತ್ತ ತಮ್ಮ ವೃದ್ಧಾಪ್ಯದಲ್ಲಿ ಮಕ್ಕಳ ಸಂಪಕ‍ ಕಾಣದೆ ವೃದ್ಧಾಶ್ರಮಗಳಲ್ಲಿ 'ಸಾವಿನ ಬೆಳಕ'ನ್ನು ಕಾಣಲು ತವಕಿಸುತ್ತಿದ್ದಾರೆ. ವಿದ್ಯೆ ಕಲಿಸಿದ ಶಿಕ್ಷಕರ ಬಗ್ಗೆ ಗೌರವವಿಲ್ಲ. ಬದುಕಿನಲ್ಲಿ ದುಶ್ಚಟಗಳನ್ನೇ ಬೆಳೆಸಿಕೊಂಡು ಜೀವನವೆಂದರೆ 'ಹಣಗಳಿಸುವುದು-ಸಂತೋಷಪಡುವುದು' ಎಂದು ಭಾವಿಸಿದ್ದಾರೆ. ವಿದ್ಯಾವಂತ ಯುವಜನತೆಯ ಈ ಸ್ಥಿತಿಗೆ ಶಿಕ್ಷಣವೂ ಕಾರಣ ಎನ್ನುವುದನ್ನು ನಾವು ಮರೆಯುವಂತಿಲ್ಲ. ನಾವು ಪಡೆಯುವ ಶಿಕ್ಷಣ ಇಡೀ ಸಮಾಜವನ್ನು ಪ್ರೀತಿಸುವಂತೆ, ಗೌರವಿಸುವಂತೆ, ಆಪತ್ತಿನಲ್ಲಿ ನೆರವು ನೀಡುವಂತೆ ಮಾಡಬೇಕು. ಸುಖಲೋಲುಪರನ್ನಾಗಿ, ಸ್ವಾಥಿ‍ಗಳನ್ನಾಗಿ, ಸಮಾಜಬಾಹಿರ ವ್ಯಕ್ತಿಗಳನ್ನಾಗಿ ಮಾಡಬಾರದು. ಬಸವಣ್ಣ, ಗಾಂಧಿ, ಸ್ವಾಮಿ ವಿವೇಕಾನಂದರಂತೆ ಆದಶ‍ದಿಂದ ಬಾಳುವಂತೆ ಶಿಕ್ಷಣ ಅವಕಾಶ ನೀಡಬೇಕು. ಸ್ವಾಮಿ ವಿವೇಕಾನಂದರು ಕೇವಲ ವಿಶ್ವವಿದ್ಯಾಲಯದ ಪದವಿ ಗಳಿಸುವ ಶಿಕ್ಷಣ ಪಡೆಯಲಿಲ್ಲ. ಬದಲಾಗಿ ನಾನು ಪಡೆದ ಶಿಕ್ಷಣದಿಂದ ಸಮಾಜಕ್ಕೆ ದೇಶಕ್ಕೆ ಏನು ಕೊಡಬಹುದು ಎಂದು ಚಿಂತಿಸಿದರು. ಅವರೆಂದೂ ಈ ನಾಡು ನನಗೇನು ಕೊಟ್ಟಿದೆ ಎಂದು ಹೇಳಲಿಲ್ಲ ನಾನು ಈ ದೇಶಕ್ಕೆ ಏನು ಮಾಡಬಹುದು ಎಂದು ಆಲೋಚಿಸಿದರು. ಸತತವಾಗಿ ಮೂರು ದಿನ ಕನ್ಯಾಕುಮಾರಿಯ ಸಮುದ್ರದ ನಡುವೆ ಬಂಡೆಯ ಮೇಲೆ ಕುಳಿತು ಆಲೋಚಿಸಿದ್ದು ತಮ್ಮ ಸುಖವನ್ನಲ್ಲ ದೇಶದ ಸುಖವನ್ನು. ಐನ್ ಸ್ಟೀನ್ ರವರು ಬಾಲ್ಯದಲ್ಲೇ ಆಲೋಚಿಸುತ್ತಿದ್ದುದು. "ನಾನು ಬದುಕುವುದು ನನಗಾಗಿ ಅಲ್ಲ, ಎಲ್ಲರಿಗಾಗಿ" ಎಂದು ಅದಕ್ಕೆಂದೇ ಇಂಥವರು ನಾಡಿಗೆ ದೊಡ್ಡದನ್ನು ನೀಡಿದರು. ಡಾ|| ಅಬ್ದುಲ್ ಕಲಾಂ ಅವರ ಚಿಂತನೆಗಳು ಸ್ವಂತಕ್ಕಲ್ಲ ದೇಶಕ್ಕೆ. ಇಂತಹ ಹಿರಿಯರು ಎಂದೂ 'ಈ ನಾಡು ನನಗೇನು ಕೊಟ್ಟಿದೆ' ಎಂದು ಕೇಳಲಿಲ್ಲ. ಇದು ಶಿಕ್ಷಣ ಪಡೆದ ಬಹುತೇಕ ವಿದ್ಯಾವಂತರು 'ನನಗೆ ನೀವೇನು ಮಾಡಿದ್ದೀರಿ' ಎಂದು ಕೇಳುವರು. ಒಬ್ಬ ವ್ಯಕ್ತಿಯ ಬೆಳವಣಿಗೆಯ ಹಿಂದೆ ತಂದೆ-ತಾಯಿ, ಮಾತ್ರವಲ್ಲದೆ ಅಕ್ಕ, ಅಣ್ಣ, ತಮ್ಮ, ತಂಗಿ ಗುರುಗಳು ಹಿರಿಯರು ಹೀಗೆ ಹಲವಾರು ಜನರು ಇದ್ದಾರೆ. ಅವರು ನಮಗಾಗಿ ಏನೆಲ್ಲ ಅವಕಾಶಗಳನ್ನು ಕಲ್ಪಿಸಿಕೊಟ್ಟಿರುತ್ತಾರೆ. ಪ್ರತಿಯಾಗಿ ನಾವು ಅವರಿಗೆ ಏನಾದರೂ ಕೊಡಬೇಕಲ್ಲವೆ? ಹೀಗೆ ಚಿಂತನೆ ಮಾಡುವ ವಿದ್ಯಾವಂತರು ಸಿಗುವುದೇ ಅಪರೂಪ ಎನ್ನುವ ಪರಿಸ್ಥಿತಿ ನಿಮಾ‍ಣವಾಗಿದೆ. ಅದಕ್ಕೆಂದೇ ಇಂದಿನ ನಮ್ಮ ವಿದ್ಯಾಭ್ಯಾಸಕ್ಕೆ ಮಾನವೀಯತೆಯ ಲೇಪನ ಮಾಡಬೇಕಾದ ಅಗತ್ಯವಿದೆ.




ಕನ್ನಡ ಸಾಹಿತ್ಯದಲ್ಲಿ ಆಂಜನೇಯ ರಾಮಾಯಣ ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯನಿಧಿಗಳಾಗಿವೆ.

ಆದಿಕಾವ್ಯವಾದ ವಾಲ್ಮೀಕಿ ಮಹರ್ಷಿಯ ರಾಮಾಯಣದ ಪಾತ್ರಗಳು ನಮ್ಮ ಜೀವನದ ಮೇಲೆ ವಿಶೇಷ ಪ್ರಭಾವವನ್ನು ಬೀರಿವೆ. ರಾಮಲಕ್ಷ್ಮಣರು ಎಂದರೆ ನಮ್ಮ ಜನರಿಗೆ ತಮ್ಮ ಮನೆಯವರಷ್ಟೇ ಹತ್ತಿರದವರು ಎಂಬ ಭಾವನೆಯಿದೆ. ಇಂಥ ರಾಮಾಯಣದ ಪಾತ್ರಗಳಲ್ಲಿ ಜನಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ರಾಮನ ಗುಡಿಯಿಲ್ಲದ ಊರಿರಬಹುದು ಆಂಜನೇಯನ ಗುದಿಯಿಲ್ಲದ ಊರೇ ಇಲ್ಲ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತರೆ. ಎಷ್ಟರ ಮಟ್ಟಿಗೆ ಹನುಮಂತನ ಪ್ರಭಾವವಿದೆ ಎಂದರೆ 'ರಾಮಾಯಣ' ಎನ್ನುವ ಕಾವ್ಯಕ್ಕೆ ಎನ್ನೊಂದು ಹೆಸರಿಡಬಹುದಾದರೆ 'ಸೀತಾಯಾಶ್ಚರಿತಂ' ಎಂದು ಕರೆಯಬಹುದಂತೆ. ಮತ್ತೊಂದು ಹೆಸರಿನಿಂದ ಕರೆಯಬಹುದಾದರೆ ಅದು 'ಹನುಮಾಯಣ'. ಅಂದರೆ ರಾಮಾಯಣದಲ್ಲಿ ಆಂಜನೇಯನ ಪಾತ್ರ ಅಷ್ಟು ಪ್ರಾಮುಖ್ಯವಾಗಿದೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ 'ಸುಂದರಕಾಂಡ'ವೆಂದು ಕರೆದಿದ್ದರೆ.

ರಾಮಾಯಣದಲ್ಲಿ ಕಿಷ್ಕಿಂಧಾಕಾಂಡದ ನಂತರ ರಾಮಾಯಣದ ಕಥೆಯು ಆಂಜನೇಯನನ್ನೇ ಅವಲಂಬಿಸಿದೆ. ಶ್ರೀರಾಮನಿಗೂ ಸುಗ್ರೀವನಿಗೂ ಸಖ್ಯವನ್ನು ಮಾಡಿಸಿದವನು, ವಾಲಿವಧೆಯ ನಂತರ ತಾರಾದೇವಿಯೂ, ಅಂಗದನೂ, ಸುಗ್ರೀವನೂ ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವನು ಈತನೇ. ದಕ್ಷಿಣದ ದಿಕ್ಕಿನಲ್ಲಿ ಸೀತಾನ್ವೇಷಣೆಗೆ ಹೊರಟ ವಾನರರ ಮುಖಂಡನಾಗಿ ಲಂಕೆಗೆ ಹೋಗಿ ಸೀತೆಯ ವಿಷಯ ತಿಳಿಸಿದವನು ಆಂಜನೇಯನೇ. ಯುದ್ಢ ಸಮಯದಲ್ಲಿ ರಾಮನಿಗೊರಗಿದ ಅನೇಕ ಕಷ್ಟಗಳನ್ನು ತನ್ನ ಮಹತ್ ಶಕ್ತಿ ಹಾಗೂ ಬುದ್ದಿವಂತಿಕೆಯಿಂದ ನಿವಾರಣೆ ಮಾಡಿದವನೂ ಈತನೇ. ಇಂಥ ಮಹಾಮಹಿಮನನ್ನು ಇಡೀ ಭರತಖಂಡವೇ ಹಾಡಿ ಹೊಗಳುತ್ತಿದೆ. ಪುರಾಣಗಳು ಸ್ತುತಿಸುತ್ತಿವೆ. ಸೃಷ್ಟಿಕರ್ತನಾದ ಬ್ರಹ್ಮನಿಗೆ ನೇರವಾಗಿ ಪೂಜೆಯಿಲ್ಲ. ಆದರೆ ಮುಂದಿನ ಬ್ರಹ್ಮನಾಗುವ ಆಂಜನೇಯನಿಗೆ ಪೂಜೆ ಇದೆ. ಇವತ್ತು ಏಕಮುಖೀ ಹನುಮಂತನಿಂದ ಹಿಡಿದು ಸಹಸ್ರಮುಖಿ ಹನುಮಂತನವರೆಗೆ ಅನೇಕ ರೂಪಗಳಲ್ಲಿ ಅವನ ಉಪಾಸನೆ ನಡೆಯುತ್ತಿದೆ.

ಆಂಜನೇಯನು ಅಂಜನಾದೇವಿಯ ಪುತ್ರನು. ವಾಯುದೇವನಿಂದ ಹುಟ್ಟಿದವನು. ಆತನು ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಹಿಡಿಯುವುದಕ್ಕೆಂದು ಹಾರಿದನು. ಇವನನ್ನು ನಿಗ್ರಹಿಸಬೇಕೆಂದು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹನುಮಂತ ಮೂರ್ಛೆಹೋದ. ಇದಕ್ಕೆ ಕೋಪಗೊಂಡ ವಾಯು ಚಲಿಸದೆ ನಿಂತ. ಆಗ ಲೋಕದ ಚರಾಚರ ಪ್ರಾಣಿಗಳು ಮರಣ ಬಂದಂತಾಗಿ ತತ್ತರಿಸಿದವು. ಆಗ ಬ್ರಹ್ಮನು ವಾಯುವನ್ನು ಸಮಾಧಾನಪಡಿಸಿದ. ಆ ಸಮಯದಲ್ಲಿ ದೇವಾನುದೇವತೆಗಳು ಆಂಜನೇಯನಿಗೆ ವರದಾನ ಮಾಡಿದರು. ಜೊತೆಗೆ ತನ್ನ ಬಲ, ವೀರ್ಯ, ಸಾಮರ್ಥ್ಯಗಳಿಂದ ಆಂಜನೇಯ ಗರುಡನಿಗೂ, ವಾಯುವಿಗೂ ಸಮಾನನಾದನು. ಯೋಗಶಾಸ್ತದ ಪರಮ ರಹಸ್ಯವೆಲ್ಲವನ್ನೂ ಅರಿತನು. ಅವನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು, ಮನಸ್ಸಿನದು ಕೂಡ.

ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವಯ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಲುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಣಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಆದ್ದರಿಂದ ವೇದಿಕೆಯಲ್ಲಿ ಒಂದು ಮಣೆ ಹಾಕಿ ಅವನನ್ನು ಆಹ್ವಾನಿಸುತ್ತಾರೆ.

                                    "ಯತ್ರಯತ್ರ ರಘುನಾಥ ಕೀರ್ತನಂ
                                     ತತ್ರತತ್ರ ಕೃತ ಮಸ್ತಕಾಂಜಲಿಂ
                                     ಭಾಷ್ಫಾವಾರಿ ಪರಿಪೂರ್ಣ ಲೋಚನಂ
                                     ಮಾರುತಿಂ ನಮತಾ "

ರಾಮಾಯಣ ಕಥೆದಯಲ್ಲಿ ಹನುಮಂತನ ಪ್ರವೇಶವಾಗುವುದು ಕಿಷ್ಕಿಂಧಾಕಾಂಡದಲ್ಲಿ. 'ಕಿಷ್ಕಿಂಧೆ' ಎಂದರೆ ನಮ್ಮ ಕನ್ನಡ ನಾಡಿನ ಹಂಪೆಯ ಪ್ರದೇಶ. ಇಲ್ಲಿಂದ ಮುಂದೆ ಹನುಮನ ಸಾಧನೆಯ ಪ್ರಭಾವ ವಿಶೇಷವಾಗಿದೆ. ಆತನ ದೇಹಬಲ, ಮನೋಬಲ, ಬುದ್ಧಿಬಲ, ತಪೋಬಲ, ಯೋಗಶಕ್ತಿ ಎಲ್ಲವೂ ಕಂಡುಬರುವುದು ಇಲ್ಲಿಯೇ. ರಾಮಚಂದ್ರ ವನವಾಸಕ್ಕೆ ಬರಲು ಕೈಕೆ-ಮಂಥರೆಯರು ಹೇಗೆ ಕಾರಣರೋ ಹಾಗೆ ಆಂಜನೇಯ ರಾಮಚಂಚ್ರನ ಆಗಮನಕ್ಕಾಗಿ ಅಂತರಂಗದಲ್ಲಿ ಹಾರೈಸುತ್ತಿದ್ದನಂತೆ. ಭಗವಂತ ಭಕ್ತನ ಹಾರೈಕೆಯನ್ನು ಈಡೇರಿಸಲು ಪ್ರತ್ಯಕ್ಷವಾಗುವಂತೆ ರಾಮಚಂದ್ರ ಆಂಜನೇಯನಿಗೆ ಕಂಡ. ಶ್ರೀರಾಮನ ಸಂದರ್ಶನವಾಗುವುದಕ್ಕೆ ಒಂದೆರೆಡು ದಿನ ಮುಂಚಿತವಾಗಿ ಆಂಜನೇಯ ಬೆಟ್ಟದ ಮೇಲೆ ಧ್ಯಾನ ಮಗ್ನನಾಗಿದ್ದ. ನಂತರ ಕಣ್ದೆರೆದು ನೋಡಿದರೆ ದೂರದಲ್ಲಿ ಪಂಪಾ ಸರೋವರದ ತೀರದಲ್ಲಿ ನಡೆದುಬರುತ್ತಿರುವ ನರಾಕೃತಿಗಳನ್ನು ಕಂಡನಂತೆ. ಹಾಗೆಯೇ, ರಾಮ ಬೆಟ್ಟದ ತುದಿಯನ್ನು ದಿಟ್ಟಿಸಿ ನೋಡಿ ಹೇಳುತ್ತಾನೆ. "ಲಕ್ಶ್ಮಣಾ, ಇಲ್ಲಿಯೋ ಎಲ್ಲಿಯೋ ಕಾನಣೆ! ಆದರೆ ನನ್ನ ಮನಸ್ಸಿಗೆ ಸುಳಿದಿದೆ ಇಲ್ಲಿಯೇ ನನ್ನ ಬಾಳ ಗೆಳೆಯನನ್ನು ಕಾಣುವೆನೆಂದು". ಕೊನೆಗೆ ಎದುರಿಗಿದ್ದ ಕಲ್ಬಂಡೆಯನ್ನು ಉದ್ದೇಶಿಸಿ ಆಂಜನೇಯನನ್ನು ಎಚ್ಚರಿಸಿ ಎಬ್ಬಿಸುತ್ತಾನೆ. ಇಬ್ಬರೂ ಪರಸ್ಪರ ನೋಡಿದರು. ಒಂದಾದರು. ರಾಮ-ಆಂಜನೇಯ ಎಂಬ ಎರಡು ನದಿಗಳು ಕೂಡಿ ಒಂದಾಗಿ ಮುಂದುವರಿದಂತೆ ಆಯಿತು. ರಾಮ ಮೊದಲ ನೋಟದಲ್ಲೇ ಆಂಜನೇಯನ ಹಿರಿಮೆ ತಿಳಿದ. ಅವನ ಶುದ್ಧವಾದ ಮಾತು, ಮಿತ ಭಾಷೆ, ಶಾಂತ ಸ್ವಭಾವ, ಬ್ರಹ್ಮಚರ್ಯದ ತೇಜಸ್ಸು ಕಂಡು ರಾಮನಿಗೆ ಅಚ್ಚರಿ. ಆಂಜನೇಯನೇ ರಾಮನಿಗೆ ಕಿಷ್ಕಿಂದೆಯನ್ನು ಪರಿಚಯಿಸಿ, ರಾಮಾ ಸುಗ್ರೀವರಿಗೆ ಸಖ್ಯ ಉಂಟಾಗುವಂತೆ ಮಾಡುತ್ತಾನೆ.

'ಸೀತಾನ್ವೇಷಣೆ' ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಗನೂಬ್ಬನದೇ ಒಂದು ತೂಕ. ಕುವೆಂಪು ರಾಮಾಯಣ ದರ್ಶನದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಸುಗ್ರೀವ, ಆಂಜನೇಯನನ್ನು 'ನೀನು ನಮ್ಮ ಕುಲದ ಕಣ್ಣು, ಸಾಹಸದ ಧೈರ್ಯ, ಎಲ್ಲವೂ. ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇಯಿಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ' ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿಸುತ್ತಾನೆ.

ಸೀತೆಯನ್ನು ಅರಸುತ್ತಾ ಹೋದಂತೆ ಸಂಪಾತಿಯಿಂದ, ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿ ಬಚ್ಚಿಟ್ಟಿರುವ ಸುದ್ದಿ ತಿಳಿಯುತ್ತದೆ. ಲಂಕೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಆಗ ಜಾಂಬವ ಈ ಮಹಾಕಾರ್ಯಕ್ಕೆ ಆಂಜನೇಯನೇ ಸಮರ್ಥನೆಂದು ಹೇಳುತ್ತನೆ. ಉಳಿದ ಕಪಿವೀರರೆಲ್ಲಾ ಸಮುದ್ರ ಲಂಘನಕ್ಕೆ ತಮ್ಮತಮ್ಮ ಸಾಮರ್ಥವೆಷ್ಟು ಎಂದು ಜಂಭದ ಮಾತಾಡುತ್ತಿರುವಾಗ, ಆಂಜನೇಯ ಒಂದು ಬಂಡೆಯ ಮೇಲೆ ಕುಳಿತು ಕಣ್ಣಿನಲ್ಲೇ ಸಮುದ್ರದ ದೂರವನ್ನು, ತನ್ನ ಸಾಮರ್ಥ್ಯವನ್ನು ಅಳೆಯುತ್ತಿದ್ದನಂತೆ. ಆಗ ಜಾಂಬವಂತ

                      ಯೋಗಿ ನೀನಭ್ಯಾಸದಿಂದೆಯುಂ ತಪದಿಂದೆ, ಮೇಣ್
                      ಬ್ರಹ್ಮಚರ್ಯದ ಮಹಿಮೆಯಿಂದಷ್ಟಸಿದ್ಧಿಗಳ್
                      ನಿನಗಿಷ್ಟ ಕಿಂಕರರಲಾ, ಹನುಮಂತ ದೇವಾ ನೀಂ
                      ಧ್ಯಾನದಿಂದಿಕ್ಕಿಸಿದರಾವುದಾಗದೊ? ನಿನಗೆ                                                                                                      ಎಂದು ಅವನ ಮಹಿಮೆಯನ್ನು ಸ್ತುತಿಸಿ, ಶಕ್ತಿಯ ಅರಿವನ್ನು ನೆನಪಿಸುತ್ತಾನೆ. ಅವನಿಗೆ ಅಣಿಮಾದಿ ಸಿದ್ಧಿಗಳೆಲ್ಲಾ ತನ್ನಿಷ್ಟದಂತೆ ವರ್ತಿಸುವ ಸೇವಕರು. ಅವನು ಎಚ್ಛೆಯಿಂದ ಏನುಬೇಕಾದರೂ ಸಾಧಿಸಬಲ್ಲ ಸಿದ್ಧಪುರುಷ. ಇಷ್ಟಾದರೂ ಯಾರಿಗೂ ಅದನ್ನು ತೋರಗೊಡದೆ ದೂರದ ಬಂಡೆಯ ಮೇಲೆ ಕುಳಿತಿದ್ದಾನೆ. ಅಹಂಕಾರವನ್ನೇ ಕಾಣದವನು. ಜಾಂಬವಂತ ಹೇಳುವವರೆಗೆ ಆಂಜನೇಯ ಏಕೆ ಸುಮ್ಮನಿದ್ದ ಎಂದು ನಮಗೆ ಅನಿಸಬಹುದು. ಆದರೆ ತನ್ನ ನಿಶ್ಚಯವನ್ನು ಆತ ಮೊದಲೇ ಮಾಡಿದ್ದ. ಮಾಡುವುದನ್ನು ಆಡದೆಯೇ ಮಾಡಿ ತೋರಿಸುವ ಗುಣ ಇವನದು. 

ಆಂಜನೇಯ ಸಮುದ್ರ ಲಂಘನ ಮಾಡುವ ಸನ್ನಿವೇಶ ಸುಂದರವಾಗಿದೆ. ತನ್ನ ಯೋಗಶಕ್ತಿಯನ್ನು ಜಾಗೃತಗೊಳಿಸಿ, ತನ್ನ ಜಡದೇಹವನ್ನು ಬಿಟ್ಟು ಚೇತನವಾಗಿ ರೂಪಾಂತರ ಹೊಂದಿದ. ಅದನ್ನು ನೋಡಿ ಕಪಿವೀರರೆಲ್ಲ ಜಯ-ಘೋಷವನ್ನು ಮಾಡಿದರು. ಅನಂತರ ಆಂಜನೇಯ ರುದ್ರರೂಪವನ್ನು ತಾಳಿ, ಮನುಷ್ಯನ ಕಲ್ಪನೆಯೇ ತತ್ತರಿಸುವಂತೆ ನೆಲಕ್ಕೂ ಬಾನಿಗೂ ಒಂದೇಯಾಗಿ ನಿಲ್ಲುತ್ತಾನೆ. ಹನುಮನ ಪಾದದ ಹೊಡೆತಕ್ಕೆ ಎಡೀ ಬೆಟ್ಟವೆ ಅಲುಗಾಡಿ ಪ್ರಾಣಿ-ಪಕ್ಷಿಗಳ ಚೀತ್ಕಾರದಿಂದ ಆ ವನಭೂಮಿ ಮಗುವಿನ ಕೈಯ್ಯ ಗಿಲಿಗಿಚ್ಚಿಯಾಯಿತಂತೆ. ಹನುಮತ ಆಗಸದಲ್ಲಿ ಹಾರುತ್ತಿದ್ದರೆ, ಆಕಾಶಕ್ಕೆ ಸಿಡಿದ ಪರ್ವತದಂತೆ ಕಾಣುತ್ತಿದ್ದ. ಹೀಗೆ ಸಾಹಸದಿಂದ ಲಂಕೆಯನ್ನು ತಲುಪಿ ಸೀತೆಗೆ ರಾಮನ ಮುದ್ರಿಕೆ ಕೊಟ್ಟ. ಭಗವಂತನ ಕೆಲಸವನ್ನು ಭಕ್ತಿಯಿಂದ ಮಾಡಿದ.

ಹನುಮಂತನ ಯೋಗಶಕ್ತಿಯನ್ನು ಗುರುತಿಸುವ ಮತ್ತೊಂದು ಸಂದರ್ಭ ನಿಕುಂಭಿಲಾ ಯಾಗ. ರಾವಣ ಮಗ ಇಂದ್ರಜಿತು ಈ ಯಾಗದಲ್ಲಿ ಶಕ್ತಿ ಸಂಪಾದಿಸಲು ತೊಡಗಿದ್ದ. ಅದನ್ನು ಕೆಡಿಸಲು ಲಕ್ಷ್ಮಣ ಬರುತ್ತಾನೆ. ಎಲ್ಲೆಲ್ಲೂ ಅಗ್ನಿಯೇ ಇರುತ್ತದೆ. ಅದನ್ನು ದಾಟುವಾಗ ಲಕ್ಷ್ಮಣ ಸೀದ ಶವದಂತಾಗುತ್ತಾನೆ. ಅವನನ್ನು ಬದುಕಿಸಲು ಇದ್ದುದು ಒಂದೇ ದಾರಿ. ಓಷಧೀ ಪರ್ವತದಲ್ಲಿದ್ದ ಸಂಜೀವಿನೀ ಬಳ್ಳಿ ತರುವುದು. ಅದನ್ನು ತರಲು ಆಂಜನೇಯ ಯೋಗಶಕ್ತಿಯನ್ನು ಬಳಸಬೇಕಾಯಿತು. ಸಾಮಾನ್ಯ ಮಾರ್ಗದಲ್ಲಿ ಸಂಚರಿಸಿದರೆ ಪರ್ವತಕ್ಕೆ ಹೋಗಿ ಬರಲು ಪಒಂದು ದಿನ ಬೇಕು. ಆಂಜನೇಯ ತನ್ನ ಯೋಗಶಕ್ತಿಯಿಂದ ಪರ್ವತಕ್ಕೆ ತೆರಳಿ ಸಂಜೀವಿನಿ ತಂದು ಲಕ್ಷ್ಮಣನಿಗೆ ಬಂದ ವಿಪತ್ತು ಪರಿಹಾರವಾಗಲು ಸಹಾಯ ಮಾಡುತ್ತಾನೆ.

ಆಂಜನೇಯ ಎಂತಹ ನೀತಿ ವಿಶಾರದ ಎಂಬುದನ್ನು 'ವಿಭೀಷಣ ಶರಣಾಗತಿ'ಯಲ್ಲಿ ನೋಡಬೇಕು. ಅದು ಯುಧ್ಹದ ಸಂದರ್ಭ. ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಪಿವೀರರು ಚರ್ಚೆಮಾಡುತ್ತಿದ್ದರು. ಆಗ ಆಂಜನೇಯ ಎರಡೇ ಎರಡು ಮಾತಿನಿಂದ ತನ್ನ ಅಭಿಪ್ರಾಯವನ್ನು ರಾಮನಿಗೆ ತಿಳಿಸುತ್ತಾನೆ "ಮಹಾ ಪ್ರಭುವೆ ನಿನಗೆ ಬೃಹಸ್ಪತಿಯೂ ಸಮನಲ್ಲ ಆದರೂ ನಮ್ಮ ಸಲಹೆಗಳನ್ನು ಕೇಳುತ್ತಿರುವೆ. ವಿಭೀಷಣನನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇದು ಸರಿಯಾದ ಕಾಲ. ಅಣ್ಣನ ದುಷ್ಟತನವನ್ನು ನಿನ್ನ ಗುಣವನ್ನೂ ಕಂಡು ನಿನಗೆ ಶರಣಾಗಿದ್ದನೆ. ನನಗೇನೋ ಅವನು ಕಪಟಿಯಲ್ಲ ಎನ್ನಿಸುತ್ತಿದೆ. ಎದರ ಮೇಲೆ ನಿಮ್ಮ ಚಿತ್ತ" ಎಂದು ಹೇಳುತ್ತನೆ. ಅಪರಿಚೆತನನ್ನೂ ಸೂಕ್ಷ್ಮ ದೃಷ್ಟಿಯಿಂದ ಅಳೆಯುವ ಗುಣ ಈತನದು.

ಆಂಜನೇಯನ ಇಂಥಾ ಗುಣಗಳೇ ಇಂದಿಗೂ ಜನಸಾಮಾನ್ಯರಲ್ಲಿ ನೆಲೆಸಿದೆ. ಜನಪದರು, ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತಮ್ಮ ಊರುಗಳಾ ಮುಂದೆಯೇ ಹೋದನೆಂದು ನಂಬುತ್ತಾರೆ. ಮಕ್ಕಳು ರಕ್ಷೆಗಾಗಿ ಆಂಜನೇಯನ ತಾಯ್ತ ಕಟ್ಟುತ್ತಾರೆ. ಊರಿನ ಗಡಿಯಲ್ಲಿ ಆಂಜನೇಯನವ ಗುಡಿ ಕಟ್ಟಿಸಿ ಊರ ರಕ್ಷಕನೆಂದು ಭಾವಿಸುತ್ತಾರೆ. ಹಾಗೆಯೇ ಕನ್ನಡದ ಕವಿಗಳು ತಮ್ಮ ವಿಶೇಷ ದರ್ಶನವನ್ನು ಆಂಜನೇಯನ ಪಾತ್ರದಲ್ಲಿ ಕಾಣಿಸಿದ್ದಾರೆ.


ಸಹಾಯಕ ಗ್ರಂಥಗಳು ದೇವುಡು "ರಾಮಾಯಣದ ಮಹಾಪುರುಷರು", ಸಾಹಿತ್ಯ ನಂದನ, ಬೆಂಗಳೂರು, ೧೯೭೬ ಕೋ.ಚೆನ್ನಬಸಪ್ಪ "ಶ್ರೀರಮಾಯಣ ದರ್ಶನಂ- ಮಹಾಕಾವ್ಯ ಸಮೀಕ್ಷೆ", ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೧೯೯೯ ಡಾ.ಎ.ಎಸ್.ವೇಣುಗೋಪಾಲ ರಾವ್ "ಮೌಲ್ಯಾಲಿಂಗನ", ರಮಣ ಪ್ರಕಾಶನ, ಹಾಸನ, ೨೦೦೯ ದೇ.ಜ.ಗೌ "ವಚನ ಚಂದ್ರಿಕೆ", ಸುರುಚಿ ಪ್ರಕಾಶನ, ಮೈಸೂರು, ೧೯೭೨