ಸದಸ್ಯ:Meghana Shivanand

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

⚜️ಆಕೆಯ ಸಾವಿನ ರಹಸ್ಯ⚜️


               ನಂದಿನಿ ಅಂದು ಬೆಳಿಗ್ಗೆ ತನ್ನ ಬಂಗಾರದ ಕಿವಿಯ ಓಲೆ ಕಾಣಿಸುತ್ತಿಲ್ಲವೆಂದು ಎಲ್ಲಾ ಕಡೆ ಹುಡುಕಾಡಿದಳು. ಆದರೆ ಆ ಕಿವಿಯ ಓಲೆ ಕಂಡದ್ದು ಕಸದ ಬುಟ್ಟಿಯಲ್ಲಿ! ಅಷ್ಟು ಬೆಲೆಯುಳ್ಳ ಓಲೆಯನ್ನು ಕಸದ ಬುಟ್ಟಿಗೆ ಹಾಕಿರುವುದು, ಮನೆ ಕೆಲಸದ ಕವಿತಾಳೇ ಇರಬಹುದೆಂದು ಆಕೆಯನ್ನು ಕರೆಸಿ ವಿಚಾರಿಸಿದರು. 'ಬೆಳಿಗ್ಗೆ ತಾನೇ ತನ್ನ ಕೋಣೆಯಲ್ಲಿ ಕಸ ತೆಗೆದು ಸ್ವಚ್ಛಗೊಳಿಸಿದರೂ, ಮತ್ತೊಮ್ಮೆ ಕಸಗುಡಿಸುವ ಅಗತ್ಯ ಏನಿತ್ತು? ನೀನು ಎರಡನೇ ಬಾರಿ ನನ್ನ ಕೋಣೆಗೆ ಬಂದ ನಂತರದಿಂದ ಕಿವಿ ಓಲೆ ಕಾಣಿಸುತ್ತಿರಲಿಲ್ಲ. ನಿಜ ಹೇಳು ಯಾಕೆ ಹೀಗ್ ಮಾಡಿದೆ' ಎಂದು ನಂದಿನಿ ಖಾರವಾಗಿಯೇ ಕೇಳಿದಳು. ಅದಕ್ಕೆ ಕವಿತಾ 'ಕಸ ಇತ್ತು ಅಂತ ಮತ್ತೊಮ್ಮೆ ಗುಡಿಸಲು ಬಂದಿದ್ದೆ. ಅಷ್ಟಕ್ಕೂ ನಾನು ಕಸಗುಡಿಸುತ್ತಿರುವಾಗ ನಿಮ್ಮ ಗಂಡ ಕಾರ್ತಿಕ್ ಸರ್ ಕೂಡ ಅಲ್ಲೇ ಇದ್ರು. ನಾನು ಬೇಕು ಅಂತ ಆ ಓಲೆಯನ್ನು ಕಸದ ಬುಟ್ಟಿಗೆ ಹಾಕಿಲ್ಲ, ಗೊತ್ತಿಲ್ಲದೆ ನಡೆದಿದೆ' ಎಂದು ಕ್ಷಮೆಯಾಚಿಸಿದಳು! ಕಾರ್ತಿಕ್ ಕೂಡ ನಂದಿನಿಗೆ ತಿಳಿ ಹೇಳಿದರೂ ಆಕೆಗೆ ಮಾತ್ರ ಅದು ಆಕಸ್ಮಿಕವೆನಿಸಲಿಲ್ಲ. ಕವಿತಾಳ ಮೇಲೆ ಅನುಮಾನ ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಆ ದಿನ ಆಕೆಯ ಮನೆಯವರೆಲ್ಲ ಸಂಬಂಧಿಕರ ಮನೆಯಲ್ಲಿ ಮದುವೆಯೆಂದು ಒಟ್ಟಾಗಿ ಹೊರಟರು. ಆದರೆ ನಂದಿನಿ ಮಾತ್ರ ಖಡಾ ಖಂಡಿತವಾಗಿ ತಾನು ಬರುವುದೇ ಇಲ್ಲವೆಂದು ಹೇಳಿ ಮನೆಯಲ್ಲೇ ಉಳಿದಳು‌. ಕವಿತಾ ಕೂಡ ಅಂದು ಕೆಲಸಕ್ಕೆ ಬಂದಿರಲಿಲ್ಲ. ಏನನ್ನೋ ಶೋಧಿಸುವ ಹುರುಪಿನಲ್ಲಿದ್ದ ನಂದಿನಿ, ಮನೆಯವರೆಲ್ಲ ಮರಳಿ ಬರುವಷ್ಟರಲ್ಲಿ ಸ್ನಾನದ ಕೋಣೆಯಲ್ಲಿ ಶವವಾಗಿ ಬಿದ್ದಿದ್ದಳು!!

                   ದೇಹದಲ್ಲೆಲ್ಲೂ ಸಣ್ಣ ಗಾಯದ ಗುರುತುಗಳು ಇರದ ಕಾರಣ, ಅದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎಂದು ಮೇಲ್ನೋಟಕ್ಕೆ ತಿಳಿಯಲಿಲ್ಲ. ಆದರೂ ಆಕೆಯ ಅಲ್ಲಿಯವರೆಗಿನ ವರ್ತನೆ, ವಿಚಿತ್ರ ಮಾತುಗಳ ಮೇರೆಗೆ ಅದು ಕೊಲೆಯಾಗಿರಬಹುದೆಂದು ಕಾರ್ತಿಕ್ ಪತ್ತೆ ಹಚ್ಚಲಾರಂಭಿಸಿದ. ಸತ್ಯ ತಿಳಿಯುವುದು ಕಷ್ಟವೇನಲ್ಲವೆಂದು ಪೊಲೀಸರಿಗೂ ದೂರು ನೀಡದೆ ತಾನೇ ತನಿಖೆ ಆರಂಭಿಸಿದ. ಪ್ರತಿದಿನ ವಿಶ್ವಾಸದಿಂದ ಮಾತನಾಡುತ್ತಿದ್ದ ಬಾಡಿಗೆ ಮನೆಯ ಸದಾಶಿವ್, ನಂದಿನಿ ಸಾವಿನ ನಂತರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದುದು ಕಾರ್ತಿಕ್ ಗೊಂದಲಕ್ಕೆ ಕಾರಣವಾಯಿತು! ತಕ್ಷಣವೇ ಸದಾಶಿವ್ ಬಳಿಗೆ ಹೋಗಿ ವಿಚಾರಿಸಿದಾಗ ಆತ ಹೇಳಿದ: 'ಅಂದು ನೀವೆಲ್ಲ ಮನೆಯಿಂದ ಹೊರಟಾಗ ನಂದಿನಿ ಒಬ್ಬಳೇ ಮನೆಯಲ್ಲಿದ್ದಳು. ಸುಮಾರು ಒಂದು ಗಂಟೆಯ ನಂತರ ಒಬ್ಬ ವ್ಯಕ್ತಿ ಮನೆಯೊಳಗೆ ಹೋಗಿ ಬಹಳ ಸಮಯದ ಬಳಿಕ ಅವಸರವಸರವಾಗಿ ಕೋಪದಿಂದ ಹೊರ ನಡೆದ. ಅವನು ಬರುವ ಸ್ವಲ್ಪ ಹೊತ್ತಿನ ಮುಂಚೆ ಕವಿತಾ ಕೂಡ ನಿಮ್ಮ ಮನೆಗೆ ಬಂದಿದ್ದಳು. ಆ ವ್ಯಕ್ತಿ ಓಡಿಹೋದ ನಂತರ ಕವಿತಾ ಕೂಡ ಅಳುತ್ತಾ ಹೋಗಿದ್ದಳು. ಹಾಂ, ಅಂದು ನಂದಿನಿ ಓಲೆ ಕಾಣಿಸ್ತಿಲ್ಲ ಅಂತಿದ್ಲಲ್ಲ, ಅಂದು ಕೂಡ ಇದೇ ವ್ಯಕ್ತಿ ನಿಮ್ಮ ಮನೆಗೆ ಎಲ್ಲರ ಕಣ್ಣು ತಪ್ಪಿಸಿ ಬಂದಿದ್ದ. ಇದೆಲ್ಲ ನೋಡಿ ಏನೋ ಪಿತೂರಿ ನಡೆಯುತ್ತಿದೆ,  ಕೊನೆಗದು ನನ್ನ ತಲೆ ಮೇಲೆ ಬರಬಹುದೆಂದು ಹೆದರಿ ನಾನು ಸುಮ್ಮನಾದೆ!'

     ನಂತರ ಕಾರ್ತಿಕ್ ಕವಿತಾಳನ್ನು ಪತ್ತೆ ಹಚ್ಚಿ ಕರೆಸಿ ಸತ್ಯವನ್ನು ಹೊರಹಾಕಿಸಿದ!! ಕಾರ್ತಿಕ್ ಸಂಪಾದಿಸಿದ ಹಣ, ಆಸ್ತಿ, ಕಂಪನಿಯ ಮೇಲೆ ಕಣ್ಣು ಹಾಕಿದ್ದ ಪವನ್ ಆ ದಿನ ಕಾರ್ತಿಕ್ ರೂಮಲ್ಲಿದ್ದ ಒಂದು ಫೈಲ್ ಕದಿಯಲು ಪಿತೂರಿ ಹೂಡಿದ್ದ. ಆಕಸ್ಮಿಕವಾಗಿ ಆ ಕೋಣೆಗೆ ಬಂದು ಅದನ್ನು ನೋಡಿದ ಕವಿತಾಳಿಗೆ ಬೆದರಿಕೆ ಹಾಕಿ ಅಲ್ಲಿಂದ ಫೈಲ್ ಸಮೇತ ಕಾಲ್ಕಿತ್ತ. ಆದರಷ್ಟರಲ್ಲಿ ಕಾರ್ತಿಕ್ ಕೋಣೆಯ ಬಳಿ ಬಂದಾಗ ಕವಿತಾ ಹೆದರಿ, ತಾನು ಕಸಗುಡಿಸುತ್ತಿರುವಂತೆ ನಟಿಸಿ ಗಾಬರಿಯಲ್ಲಿ ಕಿವಿಯ ಓಲೆಯನ್ನು ಕಸಕ್ಕೆ ಸೇರಿಸಿದಳು. ಅಂದು ಮನೆಯವರೆಲ್ಲ ಮದುವೆಗೆ ಹೋದಾಗ, ಕವಿತಾ ಮತ್ತು ನಂದಿನಿ ಪವನ್ಗೆ ಬುದ್ಧಿ ಕಲಿಸಲು ಆತನನ್ನು ಕರೆಸಿದರು. ಆತನ ಬಳಿ "ಕಾರ್ತಿಕ್ ಸಂಪಾದಿಸಿದ್ದ ಆಸ್ತಿಯನ್ನೆಲ್ಲ ತನ್ನ ಹೆಸರಿಗೆ ಬರೆಸಿಕೊಂಡು, ಮೋಸದಿಂದ ಸಹಿ ಹಾಕಿಸಿಕೊಂಡ ಫೈಲ್ ಇದ್ದುದ್ದನ್ನು ಕಂಡು ಅದನ್ನು ಆತನ ಮುಂದೆಯೇ ಸುಟ್ಟು ಹಾಕಿದ್ದಳು. ಅದರಿಂದ ತನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತೆಂದು, ಪವನ್ ನಂದಿನಿಯನ್ನು ಬಾತ್ ರೂಮ್ಗೆ ಎಳೆದುಕೊಂಡು ಹೋಗಿ ಉಸಿರು ಕಟ್ಟಿಸಿ ಸಾಯಿಸಿ, ಆ ವಿಷಯವನ್ನು ಬಹಿರಂಗಪಡಿಸಿದರೆ ಕವಿತಾಳ ಮಗುವನ್ನು ಕೊಲ್ಲುವುದಾಗಿ ಆಕೆಗೆ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ. ಅಷ್ಟಕ್ಕೂ ಪವನ್ ಕಾರ್ತಿಕ್ ನ ಆತ್ಮೀಯ ಗೆಳೆಯನಾಗಿದ್ದ!


@~~~ಮೇಘನಾ ಶಿವಾನಂದ್

ಬಿಕಾಂ ವಿದ್ಯಾರ್ಥಿನಿ

ಬೇಡ್ಕಣಿ, ಸಿದ್ದಾಪುರ (ಉ.ಕ)