ಸದಸ್ಯ:Meghahamsa/sandbox

ವಿಕಿಪೀಡಿಯ ಇಂದ
Jump to navigation Jump to search

ಬಾಂಬೆ ರಕ್ತ ಗುಂಪು

ಬಾಂಬೆ ರಕ್ತ ಗುಂಪನ್ನು ಎಚ್/ಎಚ್ ರಕ್ತ ಗುಂಪೆಂದು ಸಹ ಕರೆಯಲಾಗುತ್ತದೆ.ಇದು ಒಂದು ಅಪರೂಪದ ರಕ್ತ ಗುಂಪು. ಈ ರಕ್ತ ಗುಂಪು ಮೊದಲ ಬಾರಿಗೆ ೧೯೫೨ ರಲ್ಲಿ ಭಾರತದ ಬಾಂಬೆ ನಗರ ಅಂದರೆ ಇಂದಿನ ಮುಂಬೈಯಿ ನಗರದಲ್ಲಿ ಬೆಳಕಿಗೆ ಬಂದಿತು. ಇದನ್ನು ಕಂಡು ಹಿಡಿದವರು ಡಾ.ವೈ.ಎಂ.ಬೆನ್ಡೆ.ಈ ಅಪರೂಪದ ಫಿನೋಟೈಪ್ ಮಾನವ ಜನಸಂಖ್ಯೆಯಲ್ಲಿ ಸುಮಾರು ೦.೦೦೦೪% ಸಾಮಾನ್ಯವಾಗಿ ಇದೆ. ಈ ರಕ್ತದ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತ ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಯಾವುದೇ ರಕ್ತ ಬ್ಯಾಂಕ್ ಸ್ಟಾಕ್ ಹೊಂದಿರುವುದಿಲ್ಲ. ಒ ರಕ್ತ ಗುಂಪು ಎಂದು ಪರೀಖಕ್ಶಿಸಿದ ರೋಗಿ ಬಾಂಬೆ ಫಿನೋಟೈಪ್ ಹೊಂದಿರುವ ಸಾಧ್ಯತೆ ಇದೆ, ಏಕೆಂದರೆ ಒಂದು ವೇಳೆ ಅವರ ಎರಡು ಗೌಣ ಆನುವಂಶಿಕ ಎಚ್ ಜೀನು ಅನುವಂಶಿಕವಾದಾಗ ಅವರು ಎ ಮತ್ತು ಬಿ ಕಿಣ್ವವನ್ನು ತಯಾರಿಸಲು ಬೇಕಾದ ಎಚ್ ಕಾರ್ಬೋಹೈಡ್ರೇಟ ಉತ್ಪತಿಯಾಗುವುದಿಲ್ಲ. ಇದರಿಂದ ಎ ಮತ್ತು ಬಿ ಕಿಣ್ವಗಳು ಉತ್ಪತಿಯಾಗುವುದೋ ಇಲ್ಲವೋ.... ಎಚ್ ಪ್ರತಿಜನಕ ಇಲ್ಲದ ಕಾರಣ ಎ ಮತ್ತು ಬಿ ಪ್ರತಿಜನಕವು ಉತ್ಪತಿಯಾಗುವುದು ಆಗದಿರುವುದು ಅತಿ ಮುಖ್ಯ ವಿಶಯ ಆಗುವುದಿಲ್ಲ.

ಒ ರಕ್ತ ಗುಂಪಿನಲ್ಲಿರುವ ಎಚ್ ಪ್ರತಿಜನಕ ಅಪರೂಪದ ಬಾಂಬೆ ಫಿನೋಟೈಪ್ ವ್ಯಕ್ತಿಗಳು ಎಚ್ ಪ್ರತಿಜನಕದ ವ್ಯಕ್ತಪಡಿಸುವುದಿಲ್ಲ. ಆದ್ದರಿಂದ ಅವರು ತಮ್ಮ ಕೆಂಪು ರಕ್ತ ಜೀವಕೋಶದಲ್ಲಿ ಎ ಮತ್ತು ಬಿ ಪ್ರತಿಜನಕಗಳನ್ನು ಉತ್ಪತಿ ಮಾಡುವುದಿಲ್ಲ. ಈ ಕಾರಣದಿಂದ ಈ ರಕ್ತ ಗುಂಪೊಂದಿರುವ ವ್ಯಕ್ತಿಗಳು ಎಬಿಒ ರಕ್ತ ಗುಂಪಿನವರಿಗೆ ತಮ್ಮ ಕೆಂಪು ರಕ್ತ ಜೀವಕೋಶಗಳನ್ನು ದಾನ ಮಾಡಬಹುದು. ಆದರೆ ಅವರು ಯಾವುದೇ ರಕ್ತದ ಗುಂಪಿನಿಂದ ರಕ್ತವನ್ನು ಪಡೆಯಲು ಸಾದ್ಯವಾಗುವುದಿಲ್ಲ. ಬಾಂಬೆ ರಕ್ತ ಗುಂಪು ಹೊಂದಿರುವವರು ಮಾತ್ರ ಅವರಿಗೆ ರಕ್ತವನ್ನು ನೀಡಬಹುದು.ಎಚ್ ಪ್ರತಿಜನಕ ಒಂದು ನಿರ್ದಿಶ್ಟ ಕಿಣ್ವ ಫ್ಯೊಕೋಸಿಲ್ಟ್ರಾನ್ಸರೇಸ್ಯ್ ಯಿಂದ ಉತ್ಪಾದಿಸಲಾಗಿದೆ. ಈ ಎಚ್ ಲೋಕಸ್ ಎಫ್ ಯು ಟಿ ಐ ಜೀನ್ನನ್ನು ಹೊಂದಿದೆ. ಕನಿಶ್ಟ ಒಂದು ಎಫ್ ಯು ಟಿ ಐ ಕಾರ್ಯನಿರ್ವಹಣೆಯ ಪ್ರತಿಯು ಎಚ್ ಪ್ರತಿಕಜನಕ ಆರ್ ಬಿಸಿ ಮೇಲೆ ಉತ್ಪತಿಯಾಗುವುದು ಅಗತ್ಯವಿದೆ. ಒಂದು ವೇಳೆ ಎರಡು ಎಫ್ ಯು ಟಿ ಐ ಪ್ರತಿಗಳು ನಿಶ್ಕ್ರಯಾದಲ್ಲಿ ಬಾಂಬೆ ರಕ್ತ ಗುಂಪಾಗಿ ಕೊನೆಗೊಳ್ಳುತ್ತದೆ.

ಬಾಂಬೆ ರಕ್ತಗುಂಪಿನ ತಳಿಶಾಸ್ತ್ರ- ರೋಗಿ ತನ್ನ ರಕ್ತ ಪರೀಕ್ಶೆ ವರದಿಯಲ್ಲಿ ’ಒ’ ತಳಿ ಕಂಡು ಬಂದಲ್ಲಿ ಬಾಂಬೆ ಪ್ರಕಟ ಲಕ್ಶಣವೆಂದು ಕರೆಯಬಹುದು. ಇದನ್ನು ಅವರು ಅನುವಂಶಿಕವಾಗಿ ’ಹೆಚ್’ ಜೀನ್ ಪಡೆದಿರುತ್ತಾರೆ ಈ ರಕ್ತ ಗುಂಪಿನ ವ್ಯಕ್ತಿಯ ರಕ್ತದಲ್ಲಿ ‘ಒ ಹೆಚ್’ ಮತ್ತು ‘ಹೆಚ್ ಹೆಚ್’ ಜೀನೊಟಯ್ಪ್ ಪಡೆದಿರುತ್ತರೆ. ಹಾಗಾಗಿ ಈ ರಕ್ತ ಗುಂಪಿನವರು ‘ಹೆಚ್’ ಕಾರ್ಬೊಹ್ಯ್ಡ್ರೆಟ್ ಉತ್ಪದಿಸುತ್ತಾರೆ ಈ ಅಂಶವು ‘ಎ’ ಹಾಗು ‘ಬಿ’ ಪ್ರತಿಜನಕದ ಪೂರ್ವಗಾಮಿ, ಈ ಕಾರಣದಿಂದ ‘ಎ’ ಅಥವ ‘ಬಿ’ ಎನ್ಜ್ಯ್ಮ್ ರಕ್ತದಲ್ಲಿ ಇರುವುದು ಇಲ್ಲದಿರುವುದು ಯಾವುದೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಇಂತಹ ವ್ಯಕ್ತಿಯಲ್ಲಿ ‘ಎ’ ಹಾಗು ‘ಬಿ’ ಪ್ರತಿಜನಕ ಇರುವುದಿಲ್ಲ ಮತ್ತು ಪೂರ್ವಗಾಮಿ ಪ್ರತಿಜನಕ ‘ಹೆಚ್’ ಇರುತ್ತದೆ. ‘ಒ’ , ‘ಒ ಹೆಚ್-’ ಬೇರೆ ರಕ್ತದ ಗುಂಪಿನ ಉಪಗುಂಪಿಗೆ ಸೇರುವುದಿಲ್ಲ ಏಕೆಂದರೆ ತಮ್ಮ ಪೋಶಕರಿಂದ ಅವರು ಈ ಗುಂಪಿನ ‘ಅಲೀಲ್’ ಅನುವಂಶಿಕವಾಗಿ ಪಡೆದಿರುತ್ತಾರೆ. ಈ ಗುಂಪಿನ ರಕ್ತ ಪಡೆಯುವ ಮಕ್ಕಳಲ್ಲಿ ತಮ್ಮ ಪೊಶಕರು ತುಂಬ ಹತ್ತಿರದ ಸಂಬಧಿಗಳಾಗಿರುತ್ತರೆ ಇಂತಹ ಸಂದರ್ಭದಲ್ಲಿ ಒಂದೆ ತರಹದ ‘ಅಲೀಲ್’ ಪಡೆಯುವ ಸಾಧ್ಯತೆ ಹೆಚ್ಚು. ಆದರೆ ಪೋಶಕರಲ್ಲಿ ಈ ಗುಂಪಿನ ಲಕ್ಶಣ ಕಂಡುಬರುವುದಿಲ್ಲ ಇದಕ್ಕೆ ಕಾರಣ ಅವರಲ್ಲಿ ಹೆಟಿರೋಜಯ್ಗಸ್ ‘ಹೆಚ್’ ಜೀನ್ ಪಡೆದಿರುತ್ತಾರೆ. ಬಹುತೇಕವಾಗಿ ಈ ರಕ್ತ ಗುಂಪಿನವರು ರಾಜವಂಶಸ್ಥರು ಏಕೆಂದರೆ ಇವರಲ್ಲಿ ಸಂಬಧದಲ್ಲಿ ವಿವಾಹವಾಗುವುದು ಹೆಚ್ಚು ಹಾಗಾಗಿ ತಮ್ಮ ಮಕ್ಕಳಿಗೆ ‘ಹೆಚ್’ ಅಲೀಲ್ ವರ್ಗಾಯಿಸುವ ಸಾಧ್ಯತೆ ಹೆಚ್ಚು ಹಾಗು ಸುಲಭ.ಗರ್ಭಾವಸ್ತೆಯಲ್ಲಿರುವ ಮಹಿಳೆಯಲ್ಲಿ ಉತ್ಪತಿಯಾಗುವ ‘ಹೆಚ್’ ಪ್ರತಿಜನಕ "ಹೆಮೊಲಿಟಿಕ್" ಎಂಬ ಖಾಯಿಲೆಯನ್ನು ಭ್ರೂಣಕ್ಕೆ ತರಬಹುದು. ಈ ಖಾಯಿಲೆಯ ಸಾಧ್ಯತೆ ತಾಯಿಯಿಂದ ಮಗು ಬಾಂಬೆ ಪ್ರಕಟಲಕ್ಶಣ ಪಡೆಯದಿದ್ದಾಗ. ಇದಕ್ಕೆ ಕಾರಣ ಬಾಂಬೆ ಪ್ರಕಟಲಕ್ಶಣದ ವೈವಿದ್ಯತೆ ಹಾಗೂ ‘ಐಜಿಎಂ’ ಎಂಬ ಅಂಶ, ಇದು ದೇಹದ ನಿರೋಧಕ ವ್ಯವಸ್ತೆಯಿಂದ ಉತ್ಪತಿಯಾಗುತ್ತದೆ. ಆದರೆ ಇದು ಭ್ರುಂಅದ ಬಳಿ ತಲುಪಲು ಜರಾಯು ಅದ್ದವಾಗಿ ನಿಲ್ಲುತದೆ.

ಬಾಂಬೆ ರಕ್ತ ಗುಂಪು ಮೊದಲು ಬೆಳಕಿಗೆ ಬಂದಿದ್ದು ೫೦ ವರ್ಶಕ್ಕು ಹಿಂದೆ, ‘ಕೆ.ಇ.ಎಮ್’ ಎಂಬ ಆಸ್ಪತ್ರೆಯಲ್ಲಿ ದಾಖಲೆಯಾದ ಒಬ್ಬ ರೋಗಿಯ ರಕ್ತದ ಮಾದರಿಯನ್ನು ರಕ್ತ ಸಂಗ್ರಹಾಲಯಕ್ಕೆ ಕಳುಹಿಸಲಾಯಿತು ಅವನ ರಕ್ತ ‘ಒ’ ಗುಂಪಿನ ಲಕ್ಶಣ ತೂರಿತು ಹಾಗಗಿ ಅವನಿಗೆ ‘ಒ’ ಗುಂಪಿನ ರಕ್ತವನ್ನು ವರ್ಗಾಯಿಸಲಾಯಿತು ಆದರೆ ಅವನಲ್ಲಿ ತಕ್ಶನವೆ ವ್ಯತ್ಯಾಸ ಕಂಡುಬಂದಿತು ಹಾಗಾಗಿ ವರ್ಗಾವಣೆ ನಿಲ್ಲಿಸಲಾಯಿತು ಈ ಪ್ರತಿಕ್ರಿಯೆಯನ್ನು ‘ಹೆಮೊಲಿಟಿಕ್ ಟ್ರಾನ್ಫ಼್ಯುಶನ್’ ಎಂದು ಕರೆಯಲಾಗುತ್ತದೆ. ಮೊದಲು ‘ಕೆ.ಇ.ಎಮ್’ ಮುಂಬೈನ ಆಸ್ಪತ್ರೆಯಲ್ಲಿ ಮಾತ್ರ ಬಾಂಬೆ ರಕ್ತ ಗುಂಪನ್ನು ಪರೀಕ್ಶಿಸಲಾಗಿತಿತ್ತು ಮತ್ತು ಇಲ್ಲಿ ಏ ರಕ್ತ ಗುಂಪನ್ನು ಹೊಂದಿರುವವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಬಾಂಬೆ ರಕ್ತ ಗುಂಪಿನ ಪರೀಕ್ಶೆಯು ‘ಆರ್ ಹೆಚ್’ ಅಂಶದ ಮೇಲೆ ಅವಲಂಬಿಸುತ್ತದೆ. ವ್ಯಕ್ತಿ ಬಾಂಬೆ ಆರ್ ಹೆಚ್ ಪಾಸಿಟಿವ್ ಅಥವ ನೆಗೆಟಿವ್ ಆಗುವ ಸಾದ್ಯತೆ ಇರುತ್ತದೆ. ಈಗ ಬಹಲಶ್ಟು ರಕ್ತ ಸಂಗ್ರಹಾಲಯಗಲಲ್ಲಿ ಬಾಂಬೆ ರಕ್ತ ಗುಂಪನ್ನು ಪತ್ತೆ ಹಚ್ಚುವ ವಿಧಾನವನ್ನು ಒಳಗೊಂಡಿವೆ. ಈ ರಕ್ತ ಗುಂಪನ್ನು ಮೊದಲಬಾರಿ ಕಂಡುಬಂದಾಗ ಇದನ್ನು ‘ಒ’ ಗುಂಪಿನ ರಕ್ತ ಎಂದು ಭಾವಿಸಿದ್ದರು ಎಕೆಂದರೆ ‘ಎ’ ಮತ್ತು ‘ಬಿ’ ಪ್ರತಿಜನಕ ಇರಲ್ಲಿಲ. ಆದರೆ ಇಂತಹ ವ್ಯಕ್ತಿಯು ‘ಒ’ ಗುಂಪಿನ ರಕ್ತವನ್ನು ಪಡೆಯಳಗುತ್ತಿರಲ್ಲಿಲ, ಆಗ ಪರೀಕ್ಶಿಸಿದಾಗ ಇವರ ರಕ್ತದಲ್ಲಿ ‘ಹೆಚ್’ ಪ್ರತಿಜನಕ ಇಲ್ಲದಿರುವುದು ಕಂಡುಬಂದಿತು, ಆಗ ಇದೊಂದು ಬೇರೆ ಮಾದರಿಯ ರಹ್ತದ ಗುಂಪೆಂದು ದ್ರುದಪಟ್ಟಿತ್ತು.ಬಾಂಬೆ ರಕ್ತ ಗುಂಪನ್ನು ಪತ್ತೆಹಚ್ಚಲು "ಸೆರಮ್ ಗ್ರೋಪಿಂಗ್ ಅಥವ ರಿವರ್ಸ್ ಗ್ರೋಪಿಂಗ್" ಎಂಬ ವಿಧಾನದಿಂದ ಪತ್ತೆಹಚ್ಚುತ್ತಾರೆ ಇದರಲ್ಲಿ ‘ಹೆಚ್ ಲಾಕ್ಟೆನ್’ ಎಂಬ ಕಾರಕವನ್ನು ಬಳಸಿ ‘ಹೆಚ್’ ಪ್ರತಿಕಾಯವನ್ನು ಕಂಡುಹಿಡಿಯುತ್ತಾರೆ. ಈ ರಕ್ತ ಗುಂಪು ಹೊಂದಿರುವ ವ್ಯಕ್ತಿ ಯಾವುದಾದರು ಒಳ್ಳೆಯ ರಕ್ತ ಸಂಗ್ರಹಾಲಯ ಅಥವ ಆಸ್ಪತ್ರೆಯಲ್ಲಿ ತಮ್ಮನ್ನು ನೊಂದಾಯಿಸಿಕ್ಕೊಳಬೇಕು ಎಕೆಂದರೆ ಈ ರಕ್ತ ಗುಂಪು ಹೊಂದಿರುವವರ ಸಂಖ್ಯೆ ಕಮ್ಮಿ ಹಾಗಾಗಿ ನೊಂದಾಯಿಸಿ ಕೊಂಡಾಗ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಂದ ಸಹಾಯ ಒದಗಿಬರು.

ಈ ರಕ್ತ ಗುಂಪನ್ನು ಹೊಂದಿರುವ ಜನರ ಪ್ರತಿಹೊಂದು ರಕ್ತದ ಬ್ಯಾಂಕ್ ಅಥವಾ ಆಸ್ಪತ್ರೆಯಲ್ಲಿ ತಮ್ಮ ಹೆಸರುನ್ನು ನೊಂದಣಿ ಮಾಡಬೇಕು. ಈ ರೀತಿ ಮಾಡುವುದರಿಂದ ತುರ್ತು ಸಮಯದಲ್ಲಿ ಈ ರಕ್ತ ಗುಂಪನ್ನು ಹೊಂದಿರುವ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಇಂತಹ ರಕ್ತ ಗುಂಪು ತುರ್ತು ಸಮಯದಲ್ಲಿ ಉಪಯೋಗಿಸುವುದಕ್ಕಾಗಿ ಈ ರಕ್ತವನ್ನು ಫ್ರೋಜನ್ ನಲ್ಲಿ ಇಟ್ಟು, ಅದನ್ನು ಸಂಪರ್ಕಿಸಲು ಪ್ರಸ್ತಾಪಿಸಲಾಗಿದೆ. ಇದು ಒಂದು ಅಪರೂಪದ ರಕ್ತ ಗುಂಪು ಆಗಿರುವುದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆಟೋಲೋಗಸ್ ರಕ್ತದಾನವನ್ನು ಮಾಡಬಹುದು.

ಈ ರಕ್ತ ಗುಂಪು ೧೭೦೦೦ ಜನಸಂಖ್ಯೆಗೆ ಒಬ್ಬರಲ್ಲಿ ಈ ಬಾಂಬೆ ರಕ್ತ ಗುಂಪನ್ನು ನೋಡಬಹುದು. ಈ ರಕ್ತ ಗುಂಪನ್ನು ಆಂದ್ರ ಪ್ರದೇಶ, ಕರ್ನಾಟಕ, ಮಹಾರಾಶ್ಟ್ರ, ಗುಜರಾತ್ ರಾಜ್ಯಗಳಲ್ಲಿ ಕಾಣಬಹುದು. ಕೆಲಹು ಸ್ಥಳಗಳಲ್ಲಿ ೪೫೦೦ ಜನಸಂಖ್ಯೆಗೆ ಒಬ್ಬರು ಈ ರಕ್ತ ಗುಂಪು ಹೊಂದಿರುತ್ತಾರೆ. ತುರ್ತು ಸಮಯದಲ್ಲಿ ಈ ರಕ್ತ ಗುಂಪನ್ನು ಜನರಿಗೆ ಸಿಗದಿದ್ದಾಗ "ಸಂಕಲ್ಪ ಇಂಡೀಯಾ ಪೌಂಡೇಶನ್", ಈ ರಕ್ತ ಗುಂಪನ್ನು ಹುಡುಕುವುದರಲ್ಲಿ ಸಹಾಯ ಮಾಡುತ್ತದೆ. ಈ ಪೌಂಡೇಶನ್ ಅಪರೂಪದ ರಕ್ತದ ಗುಂಪುಗಳ ರಕ್ತ ವರ್ಗಾವಣೆಯ ಔಶಧಿ ಮೇಲೆ ಕೆಲಸ ಮಾಡುತ್ತದೆ, ಏಕೆಂದರೆ ಬಾಂಬೆ ರಕ್ತ ಅಪರೂಪದ ರಕ್ತ ಗುಂಪು, ರೋಗಿಗಳಿಗೆ ಈ ರಕ್ತ ಸರಿಯಾದ ಸಮಯದಲ್ಲಿ ಸಿಗುವುದು ತುಂಬಾ ಕಶ್ಟ. ಈ ರಕ್ತ ಗುಂಪನ್ನು ಹೊಂದಿರುವ ವ್ಯಕ್ತಿಯನ್ನು ಕಂಡುಹಿಡಿಯುವ ಸಂಭವನೀಯತೆ ೨೫೦೦೦ರಲ್ಲಿ ಒಬ್ಬ ವ್ಯಕ್ತಿ. ಭಾರತದಲ್ಲಿ ಅತಿಹೆಚ್ಛು ಜನ ಈ ರಕ್ತ ಗುಂಪನ್ನು ಹೊಂದಿದ್ದಾರೆ. ೭೬೦೦ ಜನಸಂಖ್ಯೆಗೆ ಒಬ್ಬ ವ್ಯಕ್ತಿ ಈ ರಕ್ತ ಗುಂಪನ್ನು ಹೊಂದಿರುತ್ತಾನೆ.

ಈ ರಕ್ತ ಗುಂಪನ್ನು ಹೊಂದಿರುವ ವ್ಯಕ್ತಿ ಅಪಘಾತಕ್ಕೆ ಸಿಲುಕಿದ್ದಾಗ, ಅವನ ಜೀವನ ತೊಂದರೆಗೆ ಸಿಲುಕುತ್ತದೆ, ಏಕೆಂದರೆ ಈ ವ್ಯಕ್ತಿಗಳಿಗೆ ಸಮಾನ್ಯ ಜನರು ರಕ್ತ ನೀಡಲು ಸಾಧ್ಯವಾಗುವುದಿಲ್ಲ. ಅಪಘಾತಕ್ಕೆ ಸಿಲುಕಿದ ಈ ರಕ್ತ ಗುಂಪಿಗೆ ಸೀರಿದ ವ್ಯಕ್ತಿಗಳ ಜೀವವನ್ನು ಉಳಿಸಭೇಕಾದರೆ ಔಶಧಿಗಳು ಹರ ಸಾಹಸ ಮಾಡಬೇಕು. ಅತಿ ಕಡಿಮೆ ಜನಸಂಖ್ಯೆಯ ಈ ರಕ್ತ ಗುಂಪು ಈ ಎಲ್ಲಾ ತೊಂದರೆಗಳಿಗೆ ಮುಖ್ಯ ಕಾರಣವಾಗಿದೆ. ಈ ರಕ್ತ ಗುಂಪು ನಮ್ಮ ಸಮಾಜಕ್ಕೆ ಒಂದು ಶಾಪ ಮತ್ತು ಈ ರಕ್ತ ಗುಂಪನ್ನು ನಾವು 'ಕಿಲ್ಲರ್ ರಕ್ತ ಗುಂಪು' ಎಂದು ಕರೆಯುತ್ತಾರೆ. ಇದು ಒಂದು ಭಯಾನಕ ರಕ್ತ ಗುಂಪು. ಔಶದಿಗಳನ್ನು ಮತ್ತು ಹೊಸ ಪ್ರಯೋಗಗಳ ಸಹಾಯದಿಂದ ಈ ಎಲ್ಲಾ ತೊಂದರೆಗಳಿಗೆ ಒಂದು ಪರಿಹರ ಹುಡುಕಬೇಕು.ಒಬ್ಬೊಬ ವ್ಯಕ್ತಿಯ ಜೀವನವನ್ನು ಈ ತೊಂದರೆಯಿಂದ ಹೊರತರಬೇಕು.