ವಿಷಯಕ್ಕೆ ಹೋಗು

ಸದಸ್ಯ:Megha144609/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಣ್ಣು ಮಕ್ಕಳಿಗೆ ಶಿಕ್ಷಣ ಬೇಕು ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯವಾಗಿದೆ. ಏಕೆಂದರೆ ಅವರು ಬೇರೆ ಯಾರ ಮೇಲು ಸಹ ಅವಲಂಬಿತರಾಗದೆ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಶಿಕ್ಷಣವು ಸಹಕಾರಿಯಾಗುತ್ತದೆ. ಈಗಿನ ಸಮಾಜದಲ್ಲಿ ಒಂದು ಘನ ಸ್ಥಾನ ಸಿಗಬೇಕಾದರೆ ಶಿಕ್ಷಣ ಅವಶ್ಯಕ. ಅನಕ್ಷರಸ್ಥರನ್ನು ಈ ಸಮಾಜ ಕೀಳಾಗಿ ಕಾಣುತ್ತದೆ.

   ಇತ್ತೀಚಿನ ದಿನಗಳಲ್ಲಿ ಹೆಣ್ಣಿಗೆ ವಿವಾಹವನ್ನು ನಿಶ್ಚಯ ಮಾಡಲು ಸಹ ವಿದ್ಯಾರ್ಹತೆಯನ್ನು ಕೇಳಿ ನಿಶ್ಚಯಿಸುತ್ತಾರೆ. ಅವಳು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಮತ್ತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಿಕ್ಷಣ ಬೇಕು. ಅವಳು ವಿದ್ಯಾವಂತಳಾದರೆ ತನ್ನ ಹಕ್ಕನ್ನು, ತನ್ನ ಸೌಲಭ್ಯವನ್ನು ಪಡೆದುಕೊಳ್ಳಬಹುದು.
   ಇತ್ತೀಚಿನ ಸಮಾಜದಲ್ಲಿ ಹೆಣ್ಣು ಕುಟುಂಬದಿಂದ ದೂರ ಉಳಿಯುವಂತ ಸಂದರ್ಭ ಜೀವನದಲ್ಲಿ ಎದುರಾದರೆ ಶಿಕ್ಷಣದ ಸಹಾಯದಿಂದಾಗಿ ಅವಳು ಸಮಾಜದಲ್ಲಿ ಬೇರೆ ಯಾರೊಬ್ಬರ ಮೇಲೂ ಸಹ ಅವಲಂಬಿತಳಾಗದೆ ತನ್ನ ಜೀವನದಲ್ಲಿ ತಾನೇ ನೋಡಿಕೊಳ್ಳಲು ಸಶಕ್ತಳಾಗುತ್ತಾಳೆ.
    ಮಹಿಳೆ ಅಬಲೆ ಅಲ್ಲ ಸಬಲೆ....