ಸದಸ್ಯ:Megeri siddesha/ನನ್ನ ಪ್ರಯೋಗಪುಟ೨
ಸರ್ವೀನ್ ಚೌಧರಿ
[ಬದಲಾಯಿಸಿ]ಸರ್ವೀನ್ ಚೌಧರಿ (ಜನನ ೧೯೬೬) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು ಉತ್ತರ ರಾಜ್ಯವಾದ ಹಿಮಾಚಲ ಪ್ರದೇಶದವರು. ಇವರು ಶಾನಪುರದ ಶಾಸಕಿಯಾಗಿ ಹಿಮಾಚಲ ಪ್ರದೇಶದ ಭಾರತೀಯ ಜನತಾ ಪಕ್ಷದ ಸಚಿವಾಲಯದಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗಳನ್ನು ಹೊಂದಿರುವ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಧುಮಾಲ್ ಸರ್ಕಾರದಲ್ಲಿ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. ಅವರು ಶಹಪುರ್ ವಿಧಾನಸಭಾ ಕ್ಷೇತ್ರದಿಂದ ಕಂಗ್ರಾದಿಂದ ಹಿಮಾಚಲ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಅವರು ನೆಹರು ಯುವ ಕೇಂದ್ರ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿ ಜೀವನದಲ್ಲಿ ಚಟುವಟಿಕೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಮತ್ತು ಐದು ವರ್ಷಗಳ ಕಾಲ ಪಂಜಾಬ್ ವಿಶ್ವವಿದ್ಯಾಲಯದ ಅತ್ಯುತ್ತಮ ಜಾನಪದ ನೃತ್ಯಗಾರರಾಗಿದ್ದರು.
ಆರ್ ಎಸ್ ಎಸ್ ಸಕ್ರಿಯ ಕಾರ್ಯಕರ್ತಯಾಗಿ ೧೯೯೨ ರಲ್ಲಿ ರಾಜಕೀಯ ಪ್ರವೇಶಿಸಿದರು ೧೯೯೨-೯೪ರ ವರೆಗೆ ಮಂಡಲ ಪ್ರಧಾನ, ಮಹಿಳಾ ಮೋರ್ಚಾ, ಬಿ.ಜೆ.ಪಿ. ಸದಸ್ಯ, ಸ್ಟೇಟ್ ಎಕ್ಸಿಕ್ಯೂಟಿವ್ ಬಿ.ಜೆ.ಪಿ. ೧೯೯೩ರಂದು ಅಧ್ಯಕ್ಷರಾದರು. ಇವರು ಭಾರತೀಯ ಜನತಾ ಪಾರ್ಟಿ ಕಾಂಗ್ರಾ ಜಿಲ್ಲೆ೧೯೯೫-೯೭,೧೯೯೮ ರಲ್ಲಿ ರಾಜ್ಯ ವಿಧಾನಸಭೆಗೆ ಚುನಾಯಿತರಾದರು. ೨೦೦೭ ರಲ್ಲಿ ಮರು ಆಯ್ಕೆಯಾಗಿ ಸಂಸದೀಯ ಕಾರ್ಯದರ್ಶಿಯಾದರು, ೦೧-೧೧-೧೯೯೮ ರಿಂದ ಮಾರ್ಚ್ ೨೦೦೩ ರವರೆಗೆ, ೦೯-೦೧-೨೦೦೮ ರಿಂದ ಡಿಸೆಂಬರ್ ೨೦೧೩ ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು.
ಇವರು ಡಿಸೆಂಬರ್ ೨೦೧೭ ರಲ್ಲಿ ನಾಲ್ಕನೇ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು.