ವಿಷಯಕ್ಕೆ ಹೋಗು

ಸದಸ್ಯ:Megeri siddesha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇಣು ದೇವಿ

[ಬದಲಾಯಿಸಿ]

ರೇಣು ದೇವಿ (ಜನನ ೧ನೇ ನವೆಂಬರ್ ೧೯೫೮) ಒಬ್ಬ ಭಾರತೀಯ ರಾಜಕಾರಣಿಯಗಿದ್ದು. ಅವರು ೧೬ನೇ ನವೆಂಬರ್ ೨೦೨೦ ರಿಂದ ೯ನೇ ಆಗಸ್ಟ್ ೨೦೨೨ ರವರೆಗೆ ಬಿಹಾರದ ೭ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರು ೨೦೨೦ ರಲ್ಲಿ ಬಿಹಾರದಿಂದ ಭಾರತದ ಐದನೇಯ ಮಹಿಳಾ ಉಪಮುಖ್ಯಮಂತ್ರಿ ಹಾಗೂ ರಾ‍ಷ್ಟ್ರೀಯ ಭಾರತೀಯ ಜನತಾ ‍‍ಪ‍‍‍‍‍ಕ್ಷದ ಮಾಜಿ ಉಪಾಧ್ಯಕ್ಷರಾಗಿದ್ದರು.ಪ್ರಸ್ತುತ ಇವರು ಬಿಹಾರ ವಿಧಾನಸಭೆಯ ಸದಸ್ಯರು ಮತ್ತು ರಾ‍ಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಪ‍‍‍‍‍ಕ್ಷದ ಉಪ ಶಾಸಕಾಂಗ ಸಭೆಯ ನಾಯಕಿಯಾಗಿದ್ದಾರೆ.


ವೈಯಕ್ತಿಕ ಜೀವನ

[ಬದಲಾಯಿಸಿ]

ರೇಣು ರವರು ತನ್ನ ತಂದೆ-ತಾಯಿಯ ೩ ಗಂಡು ಮತ್ತು ೫ ಹೆಣ್ಣು ಮಕ್ಕಳಲ್ಲಿ ಹಿರಿಯಾ ಮಗಳಾಗಿದ್ದು ಇವರು ನೊನಿಯ ಜಾತಿ ಎಂಬ ಅತ್ಯಂತ ಹಿಂದುಳಿದ ವರ್ಗದ ಸಮುದಾಯದವರಾಗಿದ್ದರು.ಇವರು ಮಾಧ್ಯಮಿಕ ಶಿಕ್ಷಣವನ್ನು ೧೯೭೭ ರಲ್ಲಿ ಬಿಹಾರನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು.

ಇವರು ೧೯೭೩ ರಲ್ಲಿ ದುರ್ಗಾ ಪ್ರಸಾದ್ ಎಂಬ್ ಕೊಲ್ಕತ್ತಾ ಮೂಲದ ಇನ್ಸೂರೆನ್ಸ್ ಇನ್ಸ್ ಪೆಕ್ಟರ್ ಅವರನ್ನು ವಿವಾಹವಾದರು. ಆದರೆ ಮದುವೆಯಾದ ೭ ‍ವರ್ಷಗಳಲ್ಲಿ ಆಕೆಯ ಪತಿಯ ಹಠಾತ್ ಮರಣವು ತನ್ನ ತಾಯಿಯ ತವರುಮನೆಯಾದ ಬೆಟ್ಟಯ್ಯ ಹಿಂತಿರುಗುವಂತೆ ಮಾಡಿತು ಮತ್ತು ಇದನ್ನೇ ತನ್ನ ಕರ್ಮಭೂಮಿಯನ್ನಾಗಿ ಸ್ವೀಕರಿಸಿ ಅವರು ತನ್ನ ಎರಡು ಮಕ್ಕಳಿಗೆ ಒಂಟಿ ಪೊಷಕರಾಗಿದ್ದಾರೆ.

ರಾಜಕೀಯ ಜೀವನ

[ಬದಲಾಯಿಸಿ]

ರೇಣು ದೇವಿಯವರ ತನ್ನ ತಾಯಿಯ ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿದ್ದರು. ಇದು ಅವರ ಮೇಲೆ ಬಲವಾಗಿ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತದೆ ರೇಣು ದೇವಿ ವಿಶ್ವ ಹಿಂದು ಪರಿಷತ್ತಿನ ಮಹಿಳಾ ವಿಭಾಗವಾದ ದುರ್ಗಾ ವಾಹಿನಿಯ ಭಾಗವಾಗಿದ್ದರು.

೧೯೮೧ ರಲ್ಲಿ ಸಾಮಾಜಿಕ ಚಟುವಟಿಕೆಯ ಮೂಲಕ ತನ್ನ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ೧೯೮೮ ರಲ್ಲಿ ಬಿಜೆಪಿ ಮಹಿಳಾ ಮೋರ್ಚ ಅಥವಾ ಬಿಜೆಪಿ ಮಹಿಳಾ ವಿಭಾಗಕ್ಕೆ ಸೇರಿದವರು. ಮುಂದಿನ ವರ್ಷ ಚಂಪಾರಣ್ ಪ್ರದೇಶದಲ್ಲಿ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಅವರು ೧೯೯೩ ಮತ್ತು ೧೯೯೬ ರಲ್ಲಿ ಎರಡು ಅವಧಿಗೆ ವಿಭಾಗದ ರಾಜ್ಯ ಮುಖ್ಯಸ್ಥರಾಗಿ ಆಯ್ಕೆಯಾದರು.

ಇವರು ೧೯೯೫ ರಲ್ಲಿ ನೂತನ ಶಾಸಕಾಂಗ ಸ್ಥಾನದಿಂದ ತಮ್ಮ ಮೊದಲ ಚುನಾವಣೆಯಲ್ಲಿ ವಿಫಲರಾಗಿದ್ದರೂ, ಅವರು ನಾಲ್ಕು ಬಾರಿ ಪಶ್ಚಿಮ ಚಂಪಾರಣ್ ಜಿಲ್ಲೆಯ ಮತ್ತೊಂದು ವಿಭಾಗವಾದ ಬೆಟ್ಟಿಯಾ (೨೦೦೦-೨೦೧೫;೨೦೨೦ ಇಂದಿನವರೆಗೆ) ಬಿಹಾರ ವಿಧಾನಸಭೆಗೆ ಚುನಾಯಿತರಾದರು. ಅವರು ೨೦೧೫ ರ ಚುನಾವಣೆಯಲ್ಲಿ ಸೋತರು. ೨೦೨೦ ರಲ್ಲಿ ಮಹಾಘಟಬಂಧನ್ ಅಭ್ಯರ್ಥಿಯಿಂದ ಅವರು ಸ್ಥಾನವನ್ನು ಮತ್ತೆ ಪಡೆದರು.

ಇವರು ೨೦೦೫ ಮತ್ತು ೨೦೦೯ ರ ನಡುವೆ ಬಿಹಾರ ರಾಜ್ಯ ಸರ್ಕಾರದಲ್ಲಿ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ೨೦೧೪ ಮತ್ತು ೨೦೨೦ ರ ನಡುವೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡರು. ಅಮಿತ್ ಶಾ ರಿಂದ ಇವರು ೨೦೨೦ ರಲ್ಲಿ ಬಿಹಾರದ ಉಪಮುಖ್ಯಮಂತ್ರಿಯಾಗಿ ಸಕಾರಾತ್ಮಕವಾಗಿ ನೇಮಕಗೊಂಡರು.

ಉಲ್ಲೇಖಗಳು

[ಬದಲಾಯಿಸಿ]