ಸದಸ್ಯ:Mcjshetty/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗವಾಗಿತ್ತು. ಮಹರ್ಷಿ ಶ್ರೀ ಪರಶುರಾಮನು ತನ್ನ ಕೊಡಲಿ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ ಪಯಸ್ವಿನಿ ನದಿ ಹಾಗೂ ಉತ್ತರದಲ್ಲಿ ಗೋಕರ್ಣಗಳ ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, ರಾಮಾಯಣದ ಸಮಯದಲ್ಲಿ ಶ್ರೀ ರಾಮನು ತುಳುನಾಡಿನ ರಾಜನಾಗಿದ್ದನು. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಕಿರಿಯವನಾದ ಸಹದೇವನು ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ ಬನವಾಸಿಯಲ್ಲಿ ವಾಸವಾಗಿದ್ದ ಪಾಂಡವರು, ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ ಅರ್ಜುನನು ಗೋಕರ್ಣದಿಂದ ಕಾಸರಗೋಡು ಸಮೀಪದ ಅಡೂರಿಗೆ ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ ಕಣ್ವ, ವ್ಯಾಸ, ವಶಿಷ್ಠ, ವಿಶ್ವಾಮಿತ್ರರು ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು.

ಶಿವ ದೇವಾಲಯ