ಸದಸ್ಯ:Marvinrajeshsadc/sandbox

ವಿಕಿಪೀಡಿಯ ಇಂದ
Jump to navigation Jump to search
                                             ಶಬ್ದ ಮಾಲಿನ್ಯ

ಶಬ್ದ ಮಾಲಿನ್ಯ ನಾವು ಎದುರಿಸುತ್ತಿರುವ ಬಹು ಮುಖ್ಯ ಸಮಸ್ಯೆಗಳಲ್ಲಿ ಒಂದು. ಗಾಳಿ, ನೀರು, ನಮ್ಮ ಸುತ್ತಮುತ್ತಲಿನ ಸ್ಥಳ ಇವುಗಳಲ್ಲಿ ಮಾಲಿನ್ಯ ಮಾಡದಂತೆ ಸುತ್ತಲಿನ ವಾತಾವರಣದಲ್ಲಿ ಶಬ್ದವನ್ನು ತುಂಬಿಸಿ ಹಾಕಿ ನಾವು ಶಬ್ದ ಮಾಲಿನ್ಯವನ್ನೂ ಉಂಟುಮಾಡುತ್ತಿದ್ದೇವೆ. ಉಳಿದವರು, ಅಸಾಹಾಯಕರೆಂಬಂತೆ ಸಹಿಸಿಕೊಂಡಿದ್ದೇವೆ. ಕೆಲವರೆಗೆ ಕಠೋರ ಶಬ್ದ ಕಿವಿಯ ಮೇಲೆ ಬಿದ್ದಾಗ ಈ ಸಮಸ್ಯೆಯ ಪರಿಹಾರಕ್ಕೆ ಏನಾದರೂ ಮಾಡಲೇಬೇಕು ಎನ್ನಿಸುತ್ತದೆ. ಶಬ್ದ ಕಿವಿಯಿಂದ ಮರೆಯದ ಕೂಡಲೇ ಸಮಸ್ಯೆಯು ಮರೆತು ಹೋಗುತ್ತದೆ. ಅನೇಕರಿಗೆ ಈ ಸಮಸ್ಯೆಯನ್ನು ನಿವಾರಿಸುವ ಮನಸ್ಸಿದ್ದರೂ ಅದಕ್ಕೆ ಯಾವ ದಾರಿಯಲ್ಲಿ ಪ್ರಯತ್ನಿಸಬೇಕು, ಯಾವ ವಿಧಾನವನ್ನು ಅನುಸರಿಸಬೇಕು ಎಂಬುದು ತಿಳಿದಿಲ್ಲ ಅಂಥವರ ಪ್ರಯತ್ನಗಳು ಸೋಲಿಸಲ್ಲಿ ಮುಗಿಯುವ ಸಂದಭ‍ ಗಳೇ ಹೆಚ್ಚು ಬಬ್ಬನ ಸೋಲು ಇನ್ನೋಬ್ಬನ ಪ್ರಯತ್ನವನ್ನು ನಿರುತ್ಸಾಹಗೊಳಿಸುವುದರಿಂದ ಹೋರಾಟ ಕಳೆಗುಂದುತ್ತದೆ. ಆದ್ದರಿಂದ ಹೋರಾಟದ ಸ್ವರೂಪ, ಕಾಯ ವಿಧಾನ ಉದ್ದೇಶವನ್ನು ಸ್ವಷ್ಟ ಪಡಿಸುವುದು ತುಂಬಾ ಅಗತ್ತವಾಗಿದೆ.