ಸದಸ್ಯ:Manumitra/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದ್ದಮ್ ಹುಸ್ಸೆಇನ್

ಸದ್ದಾಂ ಹುಸೇನ್[ಬದಲಾಯಿಸಿ]

ಸದ್ದಾಂ ಹುಸೇನ್ ಅಬ್ದ್ ಅಲ್-ಮಜೀದ್ ಅಲ್-ತಿಕ್ರಿತಿ (೨೮ ಏಪ್ರಿಲ್ ೧೯೩೭ - ೩೦ ಡಿಸೆಂಬರ್ ೨೦೦೬) ಇರಾಕ್ ಐದನೇ ಅಧ್ಯಕ್ಷರಾಗಿದ್ದರು. ಏಪ್ರಿಲ್ ೨೦೦೩ರಲ್ಲಿ ಅವರು ಪ್ರಮುಖ ಕ್ರಾಂತಿಕಾರಿ ಅರಬ್ ಸಮಾಜವಾದಿ ಬಾತ್ (ba'ath) ಪಕ್ಷದ ಸದಸ್ಯರಾದರು ಮತ್ತು ನಂತರ ಬಾಗ್ದಾದ್ ಮೂಲದ ಬಾತ್ ಪಾರ್ಟಿ ಮತ್ತು ಅದರ ಸ್ಥಳೀಯ ಸಂಸ್ಥೆ ಬಾತ್‌ನಲ್ಲಿ ೧೬ ಜುಲೈ ೧೯೭೯ರಿಂದ ೯ ಏಪ್ರಿಲ್ ವರೆಗೆ ಈ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಿದರು. ೧೯೬೮ರಲ್ಲಿ ಇರಾಕ್‌ನಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಸದ್ದಾಂ ಅವರ ಸಮಾಜವಾದದ ಮಿಶ್ರಣವು ಪ್ರಮುಖ ಪಾತ್ರವನ್ನು ವಹಿಸಿತು (ನಂತರ ಇದನ್ನು ೧೭ ಜುಲೈ ಕ್ರಾಂತಿ ಎಂದು ಕರೆಯಲಾಯಿತು).

ಸದ್ದಾಂ ೧೯೭೯ರಲ್ಲಿ ಔಪಚಾರಿಕವಾಗಿ ಅಧಿಕಾರಕ್ಕೆ ಬಂದರು, ಅವರು ಹಲವು ವರ್ಷಗಳ ಕಾಲ ಇರಾಕ್‌ನ ವಾಸ್ತವಿಕ ಮುಖ್ಯಸ್ಥರಾಗಿದ್ದರು. ಇರಾನ್-ಇರಾಕ್ ಯುದ್ಧ ಮತ್ತು ಗಲ್ಫ್ ಯುದ್ಧದ ಸಮಯದಲ್ಲಿ, ಅವರು ಸರ್ಕಾರವನ್ನು ಉರುಳಿಸಲು ಅಥವಾ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ಪಡೆಯಲು ಹಲವಾರು ಚಳುವಳಿಗಳನ್ನು, ವಿಶೇಷವಾಗಿ ಶಿಯಾ ಮತ್ತು ಕುರ್ದಿಶ್ ಚಳುವಳಿಗಳನ್ನು ನಿಗ್ರಹಿಸಿದರು ಮತ್ತು ನಾಶಪಡಿಸಿದರು

೨೦೦೩ರಲ್ಲಿ, ಅಮೇರಿಕಾಅಧ್ಯಕ್ಷ ಜಾರ್ಜ್ W. ಬುಷ್ ಮತ್ತು ನಂತರ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ನೇತೃತ್ವದ ಒಕ್ಕೂಟವು ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮತ್ತು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿರುವ ಸದ್ದಾಂ ಹುಸೇನ್ ಅವರನ್ನು ಉರುಳಿಸಲು ಇರಾಕ್ ಮೇಲೆ ದಾಳಿ ಮಾಡಿತು. ೧೩ ಡಿಸೆಂಬರ್ ೨೦೦೩ರಂದು ಸೆರೆಹಿಡಿದ ನಂತರ, ಸದ್ದಾಂನ ವಿಚಾರಣೆಯು ಇರಾಕಿನ ಮಧ್ಯಂತರ ಸರ್ಕಾರದ ಅಡಿಯಲ್ಲಿ ನಡೆಯಿತು. ನವೆಂಬರ್ ೫ರಂದು, ೧೯೮೨ರಲ್ಲಿ ೧೪೮ ಇರಾಕಿಗಳ ಹತ್ಯೆಗೆ ಸಂಬಂಧಿಸಿದ ಆರೋಪದ ಮೇಲೆ ಸದ್ದಾಂಗೆ ಮರಣದಂಡನೆ ವಿಧಿಸಲಾಯಿತು. ಅವರ ಮರಣದಂಡನೆಯನ್ನು ೩೦ ಡಿಸೆಂಬರ್ ೨೦೦೬ರಂದು ನಡೆಸಲಾಯಿತು.

ಬಾಲ್ಯ[ಬದಲಾಯಿಸಿ]

ಸದ್ದಾಂ ಹುಸೇನ್ ಅಬ್ದ್ ಅಲ್-ಮಜೀದ್ ಅಲ್ ತಿಕ್ರಿತಿ ಇರಾಕಿನ ಟಿಕ್ರಿತ್ ಪಟ್ಟಣದಿಂದ ೧೩ ಕಿಮೀ (೮ ಮೈಲಿ) ದೂರದಲ್ಲಿರುವ ಅಲ್-ಅವ್ಜಾ ಪಟ್ಟಣದಲ್ಲಿ ಬುಡಕಟ್ಟು ಕುರುಬರ ಕುಟುಂಬದಲ್ಲಿ ಜನಿಸಿದರು. ಸದ್ದಾಂ ಹುಟ್ಟುವ ಆರು ತಿಂಗಳ ಮೊದಲು ಅಬಿದ್ ಅಲ್-ಮಜೀದ್ ಅವರ ತಂದೆ ಕಣ್ಮರೆಯಾದರು. ಸ್ವಲ್ಪ ಸಮಯದ ನಂತರ, ಸದ್ದಾಂ ೧೩ ವರ್ಷದ ಸಹೋದರ ಕ್ಯಾನ್ಸರ್ ಬಂದು ಮರಣ ಹೊಂದಿದರು. ಇದರ ನಂತರ ಅವರ ತಾಯಿಯವರು ಮರು ಮದುವೆಯಾದರು ಮತ್ತು ಸದ್ದಾಂ ಈ ಮದುವೆಯ ಮೂಲಕ ಮೂರು ಅರ್ಧ ಸಹೋದರರನ್ನು ಪಡೆದರು. ಸುಮಾರು ೧೦ ವಯಸ್ಸಿನಲ್ಲಿ, ಸದ್ದಾಂ ಕುಟುಂಬ ಪಲಾಯನ ಮತ್ತು ತಮ್ಮ ಚಿಕ್ಕಪ್ಪ ಖರಹಿಲ್ಲಹ ತುಲ್ಫ಼ ಬಾಗ್ದಾದ್ ನಲ್ಲಿ ವಾಸಿಸುತ್ತಿರುವ ಮನೆಗೆ ಮರಳಿದರು. ತನ್ನ ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಅವರು ಬಾಗ್ದಾದ್ ನಲ್ಲಿ ರಾಷ್ಟ್ರೀಯತಾ ಪ್ರೌಢಶಾಲೆಗೆ ಹೋದರು. ಪ್ರೌಢಶಾಲೆಯ ನಂತರ ಸದ್ದಾಂ ಮೂರು ವರ್ಷಗಳ ಕಾಲ ಇರಾಕಿನ ಕಾನೂನು ಶಾಲೆಯಲ್ಲಿ ಅಧ್ಯಯನ ಮಾಡಿ ನಂತರ ೨೦ನೇ ವಯಸ್ಸಿನಲ್ಲಿ ೧೯೫೭ರಲ್ಲಿ ಅರ್ಧದಲ್ಲಿಯೇ ಹೊರಬಂದು ಕ್ರಾಂತಿಕಾರಿ ಪ್ಯಾನ್ ಅರಬ್ ಬಾತ್ ಪಕ್ಷದ ಸೇರಿದರು, ಇದಕ್ಕೆ ತನ್ನ ಚಿಕ್ಕಪ್ಪಕೂಡ ಒಂದು ಬೆಂಬಲಿಗರಾಗಿದ್ದರು.

ಅಧಿಕಾರಪ್ರಾಪ್ತಿ[ಬದಲಾಯಿಸಿ]

೧೯೬೮ರಲ್ಲಿ ಸದ್ದಾಂ ಅಹ್ಮದ್ ಹಸನ್ ಅಲ್-ಬಕ್ರ್ ನೇತೃತ್ವದ ರಕ್ತರಹಿತ ಆಂದೊಲನದಲ್ಲಿ ಭಾಗವಹಿಸಿದರು, ಇದರಿಂದ ಅಬ್ದುಲ್ ರಹಮಾನ್ ಆರಿಫ್ ಹೊರಗಟ್ಟಿ ಆಯಿತು. ಇದಾದನಂತರ ಅಲ್ ಬಕ್ರ್ ಅಧ್ಯಕ್ಷರನ್ನಾಗಿ ಮಾಡಲಾಯಿತು ಮತ್ತು ಸದ್ದಾಂ ತನ್ನ ಉಪ, ಮತ್ತು ಬಾಥಿಸ್ಟ್ (Ba'athist) ಕ್ರಾಂತಿಕಾರಿ ಕಮಾಂಡ್ ಮಂಡಳಿಯ ಉಪ ಸಭಾಪತಿಯಾದರು. ಸದ್ದಾಂ ಸಕ್ರಿಯವಾಗಿ ಅನೇಕ ಕಾರ್ಯಾಚರಣೆ ಮತ್ತು ದಂಗೆಗಳನ್ನು ತಡೆಗಟ್ಟಲು ಪ್ರಬಲ ಭದ್ರತಾ ವ್ಯವಸ್ಥೆಯ ಸೃಷ್ಟಿ ಜೊತೆಗೆ ಇರಾಕಿನ ಆರ್ಥಿಕತೆಯ ಆಧುನೀಕರಣವನ್ನು ಪ್ರೋತ್ಸಾಹಿಸಿದರು. ಈ ತಂತ್ರ ಕೇಂದ್ರದಲ್ಲಿ ಇರಾಕಿನ ತೈಲ ಆಗಿತ್ತು. ೧ ಜೂನ್ ೧೯೭೨ರಂದು, ಸದ್ದಾಂ ಅಂತಾರಾಷ್ಟ್ರೀಯ ದೇಶದ ತೈಲ ಆಸಕ್ತಿಗಳ ಗ್ರಹಣ ಮತ್ತು ತೈಲ ವಲಯದ ಪ್ರಾಬಲ್ಯತೆಯ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಹೆಚ್ಚುತ್ತಿರುವ ತೈಲ ಉದ್ಯಮದ ಸಹಾಯದಿಂದ, ಸದ್ದಾಂ ಹೆಚ್ಚಾಗಿ ತೈಲ ಆಧಾರಿತ ಇರಾಕಿನ ಆರ್ಥಿಕತೆಯನ್ನು ಉದ್ದಿಮೆಗೊಳಿಸಿದರು. ಸದ್ದಾಂ ಮೂಲಸೌಕರ್ಯ ಪ್ರಚಾರ ಜಾರಿಮಾಡಿ ,ರಸ್ತೆ ನಿರ್ಮಾಣ, ಗಣಿಗಾರಿಕೆ ಪ್ರಚಾರ ಮತ್ತು ಇತರ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿದರು. ೧೯೭೨ರಲ್ಲಿ ಸದ್ದಾಂ ಸೋವಿಯತ್ ಯೂನಿಯನ್ ಜೊತೆಗಿನ ಸ್ನೇಹ ಮತ್ತು ಸಹಕಾರದ ೧೫ ವರ್ಷದ ಒಪ್ಪಂದಕ್ಕೆ ಸಹಿ ಮಾಡಿದೆ. ೧೯೬೭ರಲ್ಲಿ ಸದ್ದಾಂ ಇರಾಕ್ ಸೇನೆಯ ಮುಖ್ಯಸ್ತನ ಹುದ್ದೆಗೆ ಏರಿದರು ಮತ್ತು ಅತಿ ವೇಗವಾಗಿ ಸರ್ಕಾರದ ಪ್ರಬಲ ಸದಸ್ಯನಾದರು. ಕೂಡಲೇ ಅವರು ಇರಾಕಿನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ ಎನಿಸಿಕೊಂಡು, ಎಲ್ಲಾ ರಾಜತಾಂತ್ರಿಕ ಸಂದರ್ಭಗಳಲ್ಲಿ ಅವರ ದೇಶವನ್ನು ಪ್ರತಿನಿಧಿಸಿದರು.

ರಾಜಕೀಯ ಮತ್ತು ಸಾಂಸ್ಕೃತಿಕ ಚಿತ್ರ[ಬದಲಾಯಿಸಿ]

ಅವರ ಗೌರವಾರ್ಥಕ್ಕಾಗಿ ಸಾವಿರಾರು ಭಾವಚಿತ್ರಗಳು, ಪೋಸ್ಟರ್, ಪ್ರತಿಮೆಗಳು ಮತ್ತು ಭಿತ್ತಿಚಿತ್ರಗಳನ್ನು ಇರಾಕಿನ ಎಲ್ಲಡೆ ಸ್ಥಾಪಿಸಲಾಯಿತು. ಕೆಲವೊಮ್ಮೆ ಅವರ ಪೂರ್ಣ ಶಿರಕಿರೀಟ ಮತ್ತು ನಿಲುವಂಗಿಯನ್ನು ಧರಿಸಿ ಧರ್ಮನಿಷ್ಠ ಮುಸ್ಲಿಂ ಎಂದು ಚಿತ್ರಿಸಲಾಗುತ್ತಿತ್ತು. ಅವರು ಮೆಕ್ಕಾಕಡೆಗೆ ಪ್ರಾರ್ಥನೆ ಮಾಡುತ್ತಿದ್ದರು. ಅವರು ೧೯೯೫ ಮತ್ತು ೨೦೦೨ರಲ್ಲಿ ಎರಡು ಪ್ರದರ್ಶನ ಚುನಾವಣೆ ನಡೆಸಿದರು. ೧೫ ಅಕ್ಟೋಬರ್ ೧೯೯೫ರಂದು ನಡೆಸಿದ ಜನಾಭಿಪ್ರಾಯದಲ್ಲಿ ೮.೪ ಮಿಲಿಯನ್ ಚುನಾಯಕ ಸಮುದಾಯದಲ್ಲಿ ಕೇವಲ ೩೦೫೨ ನಕಾರಾತ್ಮಕ ಮತಗಳನ್ನು ಪಡೆದರು. ೧೫ ಅಕ್ಟೋಬರ್ ೨೦೦೨ ಜನಾಭಿಪ್ರಾಯದಲ್ಲಿ ಅವರು ಅಧಿಕೃತವಾಗಿ ಶೇಕಡ ೧೦೦ ಅನುಮೋದನೆ ಮತಗಳನ್ನು ಸಾಧಿಸಿದರು. ಅವರ ಪ್ರತಿಮೆಗಳನ್ನು ದೇಶದಾದ್ಯಂತ ನಿಲ್ಲಿಸಲಾಯಿತು, ಆದರೆ ಅವರ ಪತನದ ನಂತರ ಇರಾಖಿನ ಜನರು ಅದನ್ನು ನಾಶಮಾಡಿದರು.

ಮರಣದಂಡನೆ[ಬದಲಾಯಿಸಿ]

ಸದ್ದಾಂರನ್ನು ೩೦ ಡಿಸೆಂಬರ್ ೨೦೦೬ ಈದ್ ಉಲ್-ಅಧಾ ಮೊದಲ ದಿನದಂದು ಗಲ್ಲಿಗೇರಿಸಲಾಯಿತು. ಆದರೆ ಅವರನ್ನು ಗುಂಡು ಹಾರಿಸಿ ಕೊಲ್ಲಬೇಕೆನ್ನುವುದೆ ಅವರ ಅಭಿಲಾಷೆಯಾಗಿತ್ತು. ಅವರು ಇದನ್ನು ಹೆಚ್ಚು ಗಂಭೀರ ಎಂದು ಭಾವಿಸಿದರು. ಮರಣದಂಡನೆಯ ವೀಡಿಯೊವನ್ನು ಮೊಬೈಲ್ ಫೋನ್‌ನಿಂದ ರೆಕಾರ್ಡ್ ಮಾಡಲಾಗಿದೆ ಮತ್ತು ಸದ್ದಾಂ ತನ್ನ ಬಂಧನವನ್ನು ಅವಮಾನಿಸುವಂತೆ ಕೇಳಿದನು. ವಿದ್ಯುನ್ಮಾನ ಮಾಧ್ಯಮಕ್ಕೆ ತೆರೆದುಕೊಂಡ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಜಾಗತಿಕ ವಿವಾದಕ್ಕೆ ಕಾರಣವಾಯಿತು. ಸದ್ದಾಂ ಶಿರಚ್ಛೇದನದ ನಂತರ ಆತನ ದೇಹವನ್ನು ಆರು ಬಾರಿ ಇರಿಯಲಾಗಿತ್ತು ಎಂದು ಸಮಾಧಿಯ ಕಾವಲುಗಾರ ಹೇಳಿದನು. ಸದ್ದಾಂ ೩೧ ಡಿಸೆಂಬರ್ ೨೦೦೬ರಂದು, ಅವರ ಮಕ್ಕಳಾದ ಉದಯ್ ಮತ್ತು ಕ್ವಾಸಿ ಹುಸೇನ್ರ ರಿಂದ ತಿಕ್ರಿತ್ ಅಲ್- ಅವ್ಜ- (ಇರಾಕ್),ಅವನ ಜನ್ಮಸ್ಥಳದಲ್ಲಿ ಹೂಳಲಾಯಿತು.

ಮದುವೆ ಮತ್ತು ಕುಟುಂಬ ಸಂಬಂಧಗಳು[ಬದಲಾಯಿಸಿ]

೧೯೫೮ರಲ್ಲಿ ಸದ್ದಾಂ ತನ್ನ ಮೊದಲ ಪತ್ನಿ ಮತ್ತು ಸೋದರಸಂಬಂಧಿ ಸಜಿದ ತಲ್ಫ಼ಳೊಂದಿಗೆ ಮದುವೆಯಾದ. ಸಜಿದ ಖರಿಹಲ್ಲ ತಲ್ಫ಼, ಸದ್ದಾಂ ಚಿಕ್ಕಪ್ಪನ ಪುತ್ರಿಯಾಗಿದ್ದಳು. ಸಜಿದ ಏಳು ವರ್ಷದವಳಾಗಿದ್ದಾಗ ಮತ್ತು ಸದ್ದಾಂ ಐದು ವರ್ಷದವನಾಗಿದ್ದಾಗ ಅವರ ಮದುವೆಯನ್ನು ಏರ್ಪಡಿಸಲಾಯಿತು. ಅವರು ಆತನ ಅಜ್ಞಾತವಾಸದ ಸಂದರ್ಭದಲ್ಲಿ ಈಜಿಪ್ಟಿನಲ್ಲಿ ಮದುವೆಯಾದರು. ಅವರಿಗೆ ಐದು ಮಕ್ಕಳ್ಳಿದ್ದರು ೧)ಉದಯ್ ಹುಸೇನ್ ೨)ಕ್ವಾಸಿ ಹುಸೇನ್ ೩)ರಘಾದ್ ಹುಸೇನ್ ೪)ರಾಣಾ ಹುಸೇನ್ ೫)ಕಮೆಲ್

ಸರ್ಕಾರ ಮತ್ತು ಪಕ್ಷದ ಸ್ಥಾನಗಳ ಪಟ್ಟಿ[ಬದಲಾಯಿಸಿ]

  • ಇರಾಕಿನ ಗುಪ್ತಚರ ಸೇವೆ ಮುಖ್ಯಸ್ಥ (೧೯೬೩)
  • ಇರಾಕ್ ಗಣರಾಜ್ಯದ ಉಪಾಧ್ಯಕ್ಷ (೧೯೬೮-೧೯೭೯)
  • ಇರಾಕ್ ಗಣರಾಜ್ಯದ ಅಧ್ಯಕ್ಷ (೧೯೭೯-೨೦೦೩)
  • ಇರಾಕ್ ಗಣರಾಜ್ಯದ ಪ್ರಧಾನ ಮಂತ್ರಿ (೧೯೭೯-೧೯೯೧ ಮತ್ತು ೧೯೯೪-೨೦೦೩)
  • ಇರಾಕಿನ ಕ್ರಾಂತಿಕಾರಿ ಕಮಾಂಡ್ ಕೌನ್ಸಿಲ್ ಮುಖ್ಯಸ್ಥ (೧೯೭೯-೨೦೦೩)
  • ಪ್ರಾದೇಶಿಕ ಕಮಾಂಡ್ ಕಾರ್ಯದರ್ಶಿ (೧೯೭೯-೨೦೦೬)
  • ರಾಷ್ಟ್ರೀಯ ಕಮಾಂಡ್ ಕಾರ್ಯದರ್ಶಿ (೧೯೮೯-೨೦೦೬)
  • ಪ್ರಾದೇಶಿಕ ಕಮಾಂಡ್ ಸಹಾಯಕ ಕಾರ್ಯದರ್ಶಿ (೧೯೬೬-೧೯೭೯)
  • ರಾಷ್ಟ್ರೀಯ ಕಮಾಂಡ್ ಸಹಾಯಕ ಕಾರ್ಯದರ್ಶಿ ಜನರಲ್ (೧೯೭೯-೧೯೮೯)

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://en.wikipedia.org/wiki/Saddam_Hussein
  2. http://www.biography.com/people/saddam-hussein-9347918
  3. http://www.britannica.com/biography/Saddam-Hussein