ಸದಸ್ಯ:Manu gowda r/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯುನ್ಮಾನ ಮತಯಂತ್ರಗಳನ್ನು ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿ ವಿಧಾನಸಭ ಚುನಾವಣೆಗಳಲ್ಲಿ ೧೯೯೮ರಲ್ಲಿ ಪ್ರಥಮ ಬಾರಿಗೆ ಬಳಸಲಾಯಿತು. ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬಳಕೆಗೆ ಸಾರ್ವಜನಿಕರು ನೀಡಿದ ಉತ್ತಮ ಪ್ರಕ್ರಿಯೆಯಿಂದ ಉತ್ಸಾಹಗೊಂಡ ಚುನಾವಣ ಆಯೋಗವು ೧೯೯೯ರ ಗೋವ ವಿಧಾನಸಭೆ ಚುನಾವಣೆಯಲ್ಲು ಈ ಯಂತ್ರಗಳನ್ನು ಬಳಸಿತು. ಇವುಗಳ ಬಳಕೆಯೆಂದ ಮತ ಎಣಿಕೆಯನ್ನು ಬೇಗ ಮುಗಿಸಿ ಫಲಿತಾಂಶಗಳನ್ನು ಶೀಘ್ರವಾಗಿ ಪ್ರಕಟಿಸಲು ಸಾಧ್ಯವಾಗುತ್ತದೆ. ಆದರೆ ಈ ಯಂತ್ರಗಳ ಬಳಕೆಗೆ ಸಂಭಂದಿಸಿದ ತರಭೇತಿಯನ್ನು ಚುನಾವಣಾ ಸಿಬ್ಬಂದಿಗೆ ನೀಡುವುದು ಮತ್ತು ಸಾರ್ವಜನಿಕರಲ್ಲಿ ಅರಿವು ಮೂದಿಸುವುದು ಅತ್ಯಗತ್ಯ.. ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆನ್ ಲೈನ್ ಮತದಾನ ಬೇಗನೆ ಬರಲಿದೆ. ಗುಜರಾತ್ ನ ಗಾಂಧಿನಗರದಲ್ಲಿ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ. ಈ ವ್ಯವಸ್ಥೆಯಡಿಯಲ್ಲಿ ಆನ್ ಲೈನ್ ಮೂಲಕವೆ ನೋಂದಾಯಿಸಿಕೊಳ್ಳುವ ಮತದಾರರು ಪ್ರತ್ಯೇಕ ಐಡಿ ಕಾರ್ಡು ಹೊಂದಿರಬೇಕು. ಅವರೊಂದಿಗೆ ಪಾಸ್ ವರ್ಡ್ ಕೂಡ ಇರುತ್ತದೆ. ಅವರ ಮೊಬೈಲ್ ನಂಬರ್ ಮೂಲಕ ಮಾನ್ಯತೆ ನೀಡಲಾಗುತ್ತದೆ. ಅವರ ಮತದಾನದ ಸಮಯವನ್ನು ಎಸ್ ಎಮ್ ಎಸ್ ಮೂಲಕ ತಿಳಿಸಲಾಗುತ್ತದೆ. ಪ್ರತಿಯೊಬ್ಬ ಮತದಾರರಿಗೆ ಮತ ಚಲಾಯಿಸಲು ಎರಡು ನಿಮಿಷಗಳ ಕಾಲಾವಕಾಶವಿರುತ್ತದೆ. ವಿದೇಶದಲ್ಲಿರುವ ಭಾರತೀಯರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಈ ಸಂಭಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಮನಮೊಹನ್ ಸಿಂಗ್ ಅವರು ಇತ್ತಿಚೆಗೆ ೧೦ನೇ ಪ್ರವಾಸಿ ಬಾರತೀಯ ದಿವಸ ಉದ್ಘಾಟನೆ ಸಂಧರ್ಭದಲ್ಲಿ ಹೇಳಿದ್ದಾರೆ. ನಾಗರಿಕ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಐಐಒ ಮತ್ತು ಸಾಗರದಾಚೆಯ ಭಾರತೀಯ ನಾಗರಿಕರ ಯೋಜನೆ(OCIS-overseas citizen of india scheme) ಗಳನ್ನು ವೆಲೀನಗೊಳಿಸಲು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಲಾಗಿದೆ.

೩) ರಾಜ್ಯವೇ ಚುನಾವಣಾ ವೆಚ್ಚ ಭರಿಸುವ ಸುಧಾರಣೆ: ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಕೆಲವು ಚುನಾವಣಾ ತ ಅಭಿಪ್ರಾಯಪಡುತ್ತಾರೆ. ಇದರಿಂದ ಚುನಾವಣಾ ವೆಚ್ಚವನ್ನು ಹಾಗೂ ಚುನಾವಣೆಗಳಲ್ಲಿ ಕಪ್ಪು ಹಣ ಚಲಾವಣೆಯಾಗುವುದನ್ನು ನಿಯಂತ್ರಿಸಬಹುದು. ಅಲ್ಲದೆ ಇದರಿಂದ ಹಣ ಬೆಂಬಲವಿಲ್ಲದ ಯೋಗ್ಯ ಮತ್ತು ಸಮರ್ಥ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ದಿಸಲು ಸಾಧ್ಯವಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಿತಿಗಳ ಶಿಫಾರಸ್ಸುಗಳನ್ನು ನಾವು ಇಲ್ಲಿ ಗಮನಿಸಬಹುದು. ಚುನಾವಣಾ ಪ್ರಚಾರದ ವೆಚ್ಚವನ್ನು ಸರ್ಕಾರಗಳು ವಹಿಸಿಕೊಳ್ಳಬೇಕೇಂದು ವಾಂಚು ಸಮಿತಿ, ತಾರ್ಕುಂಡೆ ಸಮಿತಿಗಳು ಶೆಫಾರಸ್ಸು ಮಾಡಿದ್ದವು. ೧೯೯೮ರ ಮೇ ನಲ್ಲಿ ನಡೆದ ಸರ್ವಪಕ್ಷ ಸಮ್ಮೇಳನವು ಸರ್ಕಾರವೆ ಚುನಾವಣ ವೆಚ್ಚವನ್ನು ಭರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ನೀಡಲು ಇಂದ್ರಜಿತ್ ಗುಪ್ತ ರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು ೧೯೯೯ರಲ್ಲಿ ಈ ಕೆಳಗಿನ ಶಿಫಾರಸ್ಸುಗಳನ್ನು ನೀಡಿತು. -ಸರ್ಕಾರವು ಚುನಾವಣಾ ವೆಚ್ಚಕ್ಕೆಂದು ನೀಡುವ ಹಣವು ನಗದು ರೂಪದಲ್ಲಿರದೆ ವಸ್ತು ರೂಪದಲ್ಲಿರಬೇಕು. -ಕೇಂದ್ರ ಸರ್ಕಾರವು ವರ್ಷಕ್ಕೆ ರೂ ೬೦ ಕೋಟಿಗಳನ್ನು ಚುನಾವಣಾ ನಿಧಿಗೆ ನೀಡಬೇಕು. ಪ್ರತಿಯೊಂದು ರಾಜ್ಯವೂ ಕೂಡ ಅಷ್ಟೇ ಮೊತ್ತದ ಹಣವನ್ನು ನೀಡಬೇಕು. -ರಾಜಕೀಯ ಪಕ್ಷಗಳು ತಮ್ಮ ಆದಾಯ ತೆರಿಗೆ ಮತ್ತು ವೆಚ್ಚಕ್ಕೆ ಸಂಬಂದಿಸಿದಂತೆ ವಾರ್ಷಿಕ ಲೆಕ್ಕೆವನ್ನು ಆಧಾಯ ತೆರಿಗೆ ಇಲಾಕೆಗೆ ಕಡ್ಡಾಯವಾಗಿ ಒಪ್ಪಿಸವುದು. -೧೦,೦೦೦ ರೂ ಗಳಿಗೆ ಮೀರಿದ ದೇಣೀಗೆಯನ್ನು ಚೆಕ್ ಅಥವಾ ಡ್ರಾಫ್ಟ್ ರೂಪದಲ್ಲಿ ಸ್ವೀಜಕರಿಸಬೇಕು. ದೇಣಿಗೆ ನೀಡಿದ ವ್ಯಕ್ತಿಗಳ ಹೆಸರುಗಳನ್ನು ಖಾತೆಯಲ್ಲಿ ನಮೋದಿಸಬೇಕು. ಸರ್ಕಾರವು ಚುನಾವಣಾ ವೆಚ್ಚಕ್ಕೆ ಅವಶ್ಯ ಕವಾದ ಹಣವನ್ನು ಪಕ್ಷಗಳಿಗೆ ನೀಡುವ ಬದಲು ಅಭ್ಯರ್ಥಿಗಳಿಗೆ ನೀಡುವುದೇ ಉತ್ತಮ. ಏಕೆಂದರೆ ಪಕ್ಷಗಳಿಗೆ ನೀಡಿದರೆ ಎಲ್ಲ ಅಭ್ಯರ್ಥಿಗಳಿಗೆ ಸಮ ಪ್ರಮಾಣ ಹಣವನ್ನು ಖರ್ಚು ಮಾಡದೆ ತಾರತಮ್ಯ ಮಾಡುವ ಸಾಧ್ಯತೆ ಇರುತ್ತದೆ.

೪)ಅಭ್ಯರ್ಥಿಗಳ ಪೂರ್ವ ಚರಿತ್ರೆಯನ್ನು ಬಹಿರಂಗಗೊಳಿಸಲು ಕಡ್ದಾಯ ಆದೇಶ : ರಾಜಕೀಯ ಅಪರಾಧೀಕರಣವು ಎಂದು ನಮ್ಮ ರಾಜಕೀಯ ವ್ಯವಸ್ತೆಯನ್ನು ಕಾಡುತ್ತಿರುವ ಪೆಡಂಭೂತವಾಗಿದೆ. ರಾಜಕಾರಣಿಗಳಲ್ಲಿ ಕಂಡುಬರುವ ಅಪರಾಧಿಕರಣ, ಅಪರಾಧಿಗಳೊಂದಿಗಿನ ಸಖ್ಯ ,ಅಕ್ರಮ ಆಸ್ತಿ ಸಂಪಾದನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯವು ಮೇ ೨೭ ,೨೦೦೩ರಂದು ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಪ್ರತಿಯೊಬ್ಬ ಅಭ್ಯರ್ಥಿಯಿಂದ ನಾಮಪತ್ರದ ಜೊತೆಗೆ ಕಡ್ಡಾಯವಾಗಿ ಒಂದು ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಪ್ರಮಾಣ ಪತ್ರವು ಅಭ್ಯರ್ಥಿಯ ಅಫರಾಧದ ಹಿನ್ನೆಲೆ,ಚರ ಮತ್ತು ಸ್ಥಿರ ಆಸ್ತಿಯ ವಿವರಗಳು, ಅವಲಂಬಿತರ ವಿವರಗಳು,ಸಾಲಗಳು ಮತ್ತು ಶೈಕ್ಷಣಿಕ ಅರ್ಹತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರಬೇಕು. ಹೀಗೆ ಸುಪ್ರಿಂ ಕೋರ್ಟ್ ಚುನಾವಣೆಗೆ ಸ್ಪರ್ಧಿಸಬಯಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಪೂರ್ವ ಚರಿತ್ರೆ ಘೋಷಿಸುವುದನ್ನು ಕಡ್ಡಾಯಗೊಳಿಸಿದೆ.

೫) ಮತ ತಿರಸ್ಕಾರ ಹಕ್ಕು ಜಾರಿಗೆ : ಸ್ವತಂತ್ರ್ಯ ಭಾರತದ ಚುನಾವಣಾ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗೆ ದೊರೆತಿದೆ. ಈ ಕುರಿತಾಗಿ ಸುಪ್ರಿಂ ಕೋರ್ಟ್ ಅಕ್ಟೋಬರ್ ೦೫, ೨೦೧೩ರಂದು ಮಹತ್ವದ ತೀರ್ಪು ನೀಡಿದೆ. ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರಿಗೂ ಮತ ಹಾಕುವುದಿಲ್ಲ ಎನ್ನುವ ಮತದಾರರಿಗೆ 'ನಿರಾಕರಣೆಯ ಮತ ಚಲಾಯಿಸುವ ಹಕ್ಕನ್ನು ಸುಪ್ರಿಂ ಕೋರ್ಟ್ ನೀಡಿದ್ದು ಶ್ಲಾಘನೀಯವಾಗಿದೆ. ವಿಧ್ಯುನ್ಮಾನ ಮತಯಂತ್ರದಲ್ಲಿ 'non of the above ' ಎಂಬ ಆಯ್ಕೆಯನ್ನು ಸೇರಿಸಲು ಚುನಾವಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಳುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಚುನಾವಣಾ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರು ಯೋಗ್ಯರಲ್ಲ ಎಂಬ ಭಾವನೆ ಎಷ್ಟೋ ಜನರಲ್ಲಿರುತ್ತದೆ. ಹೀಗಾಗಿ ಅವರು ಮತದಾನದಿಂದ ದೂರವೆ ಉಳಿದು ಬಿಡುತ್ತಾರೆ. ಆದರೆ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆ ನೀಡುವುದರಿಂದ ನಿರಾಸತ್ತ ಜನರು ಕೂಡ ಮತದಾನದಲ್ಲಿ ಹೆಚ್ಚಿನ ಸಖ್ಯೆಯಲ್ಲಿ ಫಾಲ್ಗೊಳುತ್ತಾರೆ. ಅಲ್ಲದೆ ಈ ಸೌಲಭ್ಯ ವು ಚುನಾವಣಾ ಪ್ರಕ್ರಿಯೆಯನ್ನೇ ಸ್ವಚ್ಚಗೊಳಿಸುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ರವರು ಹೇಳಿದ್ದಾರೆ . ಮತದಾರರಿಗೆ ಈ ಹಕ್ಕು ನೀಡುವಂತೆ ಕೋರಿ 'ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ '(PVCL) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು .