ಸದಸ್ಯ:Manonmayi Raj/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾರ್ಡನ್ ವಿಲ್ಲರ್ಡ್ ಅಲ್ಪೋರ್ಟ್[ಬದಲಾಯಿಸಿ]

ಗಾರ್ಡನ್ ವಿಲ್ಲರ್ಡ್ ಅಲ್ಪೋರ್ಟ್ (ನವೆಂಬರ್ 11, 1897 - 1967 ಅಕ್ಟೋಬರ್ 9 )  ಅಮೆರಿಕದ ಮನಶ್ಶಾಸ್ತ್ರಜ್ಞ. ಮನುಷ್ಯನ ವ್ಯಕ್ತಿತ್ವದ ಮೇಲೆ ಗಮನವಿರಿಸಿ ಮನಶಾಸ್ತ್ರದ ಬಗ್ಗೆ ಸಂಶೋಧನೆ ಮಾಡಿದರು.  ಮೌಲ್ಯ ಮಾಪನದ ರಚನೆಗೆ ಕೊಡುಗೆ ನೀಡಿದ್ದಲ್ಲದೆ, ಮನೋವಿಶ್ಲೇಷಣೆಯ ವಿಧಾನ ಮತ್ತು ನಡವಳಿಕೆಯ ಬಗ್ಗೆ ಅಧ್ಯಯನ ಮಾಡಿದರು. ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅವನ ಇತಿಹಾಸವನ್ನು ಆಧಾರವಾಗಿರಿಸದೆ ಪ್ರತಿಯೊಬ್ಬ ವ್ಯಕ್ತಿಯ ಅನನ್ಯತೆ ಮತ್ತು ವರ್ತಮಾನದ ಸಂದರ್ಭವನ್ನು ಆಧಾರವಾಗಿಸಿದರು.

ಆಲ್ಪೋರ್ಟ್ ರವರ ಕೆಲಸಗಳು ಇತರೆ ಪ್ರಸಿದ್ಧ ವ್ಯಕ್ತಿಗಳಿಗಿಂತ ಕಡಿಮೆ ಬಾರಿ ಉಲ್ಲೇಖಿಸಲ್ಪಟ್ಟಿದ್ದರೂ ಮನೋವಿಜ್ಞಾನ ಕ್ಷೇತ್ರದಲ್ಲಿ ಆಳವಾದ ಮತ್ತು ಶಾಶ್ವತವಾದ ಪ್ರಭಾವವನ್ನು ಬೀರಿದರು. ಸುದೀರ್ಘ ಬೋಧನಾ ವೃತ್ತಿಜೀವನದಲ್ಲಿ ಅವರು ತಮ್ಮ ವಿದ್ಯಾರ್ಥಿಗಳ ಮೇಲೆ ಆಳವಾದ ಮತ್ತು ಶಾಶ್ವತವಾದ ಪ್ರಭಾವ ಬೀರಿದರು. ಅವರಲ್ಲಿ ಅನೇಕರು ಮನೋವಿಜ್ಞಾನವನ್ನು  ಪ್ರಮುಖ ವೃತ್ತಿಯಾಗಿಸಿಕೊಂಡರು.  ತಮ್ಮ ಕೆಲವು ವಿಖ್ಯಾತ ವಿಧ್ಯಾರ್ಥಿಗಳೆಂದರೆ  ಜಿರೋಮ್ ಯಸ್. ಬ್ರೂನರ್, ಆ೦ತೊನಿ ಗ್ರೀನ್ವಾಲ್ಡ್, ಸ್ಟಾನ್ಲಿ ಮಿಲ್ ಗ್ರಾಮ್, ಲಿಯೋ ಪೋಸ್ಟ್ ಮಾನ್, ಥಾಮಸ್ ಪೆಟ್ಟಿಗ್ರು, ಮತ್ತು ಎಮ್. ಬ್ರ್ಯಿಸ್ಟರ್ ಸ್ಮಿತ್. ಇವರ ತಮ್ಮ ಫ್ಲಾಯಿಡ್ ಹೆನ್ರಿ ಆಲ್ಪೊರ್ಟ್, ಸೈರಾಕ್ಯೂಸ್ ಯೂನಿವರ್ಸಿಟಿ ಮ್ಯಾಕ್ಸ್ವೆಲ್ ಸ್ಕೂಲ್ ಆಫ್ ಸಿಟಿಸನ್ ಶಿಪ್ ಆ೦ಡ್ ಪಬ್ಲಿಕ್ ಅಫೆರ್ಸ್ ನಲ್ಲಿ ಸಾಮಾಜಿಕ ಮನೋವಿಜ್ಞಾನ ಮತ್ತು ರಾಜಕೀಯ ಮನಶ್ಯಾಸ್ತ್ರದ ಪ್ರಾಧ್ಯಾಪಕರಾಗಿದ್ದರು . ರಿವ್ಯು ಅಫ್ ಜೆನರಲ್ ಸೈಕಾಲಜಿ ಆಲ್ಪೋರ್ಟ್ ರವರನ್ನು ೧೧ನೇ ಬಹುಚರ್ಚಿತವಾದ ಮನಶ್ಶಾಸ್ತ್ರಜ್ಞರೆ೦ದು ಕರೆದಿದ್ದಾರೆ.

ಗಾರ್ಡನ್ ಆಲ್ಪೋರ್ಟ್

ಜೀವನಚರಿತ್ರೆ[ಬದಲಾಯಿಸಿ]

ಆಲ್ಪೋರ್ಟ್ ನವರು ಮೊ೦ಟೆಜುಮ, ಇ೦ಡಿಯಾನ ಎ೦ಬ ಜಾಗದಲ್ಲಿ ಹುಟ್ಟಿದರು. ಆಲ್ಪೋರ್ಟ್ ನವರು ೬ನೆ ವಯಸ್ಸಿದ್ದಾಗ, ಹಲವು ಸ್ಟಳಗಳಿಗೆ ವರ್ಗವಾಗಿ  ಕೊನೆಗೆ ಒಹಾಯೋ ಎ೦ಬ ದೇಶದಲ್ಲಿ ಖಾಯಂ ಆಗಿ ಉಳಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕ್ಲೇವ್ಲಾ೦ಡ್, ಒಹಾಯೋನಲ್ಲಿರುವ ಸಾರ್ವಜನಿಕ ಶಾಲೆಯಲ್ಲಿ ಪಡೆದರು. ಅವರ ತ೦ದೆ ಗ್ರಾಮೀಣ ವೈದ್ಯರಾಗಿದ್ದರು, ತಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಯನ್ನು ತಮ್ಮ ಮನೆಯಲ್ಲೇ ಇಟ್ಟಿದ್ದರು. ಏಕೆಂದರೆ , ಆಲ್ಪೊರ್ಟ್ ನವರ ತ೦ದೆಯವರ ಹತ್ತಿರ ಸಾಕಷ್ಟು ಹಣ ಇರಲಿಲ್ಲ, ಆದ್ದರಿ೦ದ ತಮ್ಮ ಮನೆಯನ್ನೇ ಆಸ್ಪತ್ರೆಯನ್ನಾಗಿ  ಉಪಯೋಗಿಸಿದರು. ಆಲ್ಪೋರ್ಟ್ ನವರು ತಮ್ಮ ಅಣ್ಣ೦ದಿರೊಂದಿಗೆ ನರ್ಸ್ ಗಳು, ರೋಗಿಗಳು, ವೈದ್ಯಕೀಯ ಉಪಕರಣಗಳ ಜೊತೆಗೆಯೇ ತಮ್ಮ ತಂದೆಗೆ ಸಹಾಯಕರಾಗಿ ನಿಂತರು.

ಆಲ್ಪೋರ್ಟ್ ರವರ ತಾಯಿಯು ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಅವರ ಅಭಿವೃದ್ಧದಾಯಕ ಮತ್ತು ಧಾರ್ಮಿಕ ಮೌಲ್ಯಗಳನ್ನ ತಮ್ಮ ಶಿಷ್ಯರೊಂದಿಗೆ  ಉತ್ತೇಜಿಸುತ್ತಿದ್ದರು. ಆಲ್ಪೋರ್ಟ್ ರವರ ತ೦ದೆ ತಮ್ಮದೇ ಆದ ತತ್ವಶಾಸ್ತ್ರವನ್ನು ಅಭ್ಯಾಸಿಸುತ್ತಿದ್ದರು. ಜೀವನಚರಿತ್ರಕಾರರ ಪ್ರಕಾರ ಆಲ್ಪೋರ್ಟ್ ಓರ್ವ ಸಂಕೋಚ ಸ್ವಭಾವ ಮತ್ತು ಜಾಗರೂಕತೆಯ ಹುಡುಗನಾಗಿದ್ದನು. ಆಲ್ಪೋರ್ಟ್ ರವರು ತಮ್ಮದೆ ಆದ ಮುದ್ರಣ ವ್ಯವಹಾರವನ್ನು ನಡೆಸಲು  ಪ್ರಾರ೦ಭಿಸಿದರು ಮತ್ತು ತಮ್ಮ ಶಾಲೆಯಲ್ಲಿ ಶಾಲೆಯ ಪತ್ರಿಕೆಗೆ ಪ್ರಧಾನ ಸ೦ಪಾದಕರಾಗಿ ಕೆಲಸ ಮಾಡಿದರು. ೧೯೧೫ರಲ್ಲಿ ಆಲ್ಪೋರ್ಟ್ ನವರು ಗ್ಲೀನ್ವಿಲ್ ಹೈ ಸ್ಕೂಲ್ ನಲ್ಲಿ ತಮ್ಮ ತರಗತಿಯಲ್ಲಿ ೨ನೆಯ ಸ್ಥಾನ ಪಡೆದರು. ಇವರು ವಿಧ್ಯಾರ್ಥಿವೇತನದಿ೦ದ ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಸೇರಿಕೊ೦ಡರು.  ಇದು ಏಕೆಂದರೆ , ತಮ್ಮ ಮನೆಗಿಂತಲೂ  ಕಾಲೇಜಿನಲ್ಲಿ  ನೈತಿಕ ಮೌಲ್ಯಗಳು ಮತ್ತು ವಾತಾವರಣವು  ಬಹಳ ಬೇರೆಯಾಗಿತ್ತು. ಇಷ್ಟೆಲ್ಲ ಇದ್ದರೂ ಆಲ್ಪೋರ್ಟ್ ನವರು ೧೯೧೯ನಲ್ಲಿ ತಮ್ಮ ಏ.ಬಿ ಡಿಗ್ರಿ ಯನ್ನು ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪಡೆದುಕೊಂಡರು. ಆಲ್ಪೋರ್ಟ್ ನವರ ಆಸಕ್ತಿಯನ್ನು ಸಾಮಾಜಿಕ ಮನೋವಿಜ್ಞಾನದಲ್ಲಿ ಮತ್ತು ವ್ಯಕ್ತಿತ್ವದ ಮನಃಶಾಸ್ತ್ರದಲ್ಲಿ  ಕಾಣಬಹುದು.

ಮು೦ದೆ ಆಲ್ಪೋರ್ಟ್ ನವರು ಇಸ್ತಾನ್ಬುಲ್, ಟರ್ಕಿ ನಲ್ಲಿರುವ ರೊಬರ್ಟ್ ಕಾಲೇಜಿಗೆ ಸೇರಿದರು. ಅಲ್ಲಿ ಅವರು ಒಂದು ವರ್ಷಗಳ ಕಾಲ  ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಹೇಳಿಕೊಟ್ಟರು. ಆಲ್ಪೋರ್ಟ್ನವರು ತಮ್ಮ ಡಿಗ್ರೀಯನ್ನು ೧೯೨೧ ರಲ್ಲಿ  ಗಳಿಸಿದರು. ಮತ್ತು ೧೯೨೨ರಲ್ಲಿ ತಮ್ಮ ಪಿ.ಎಚ್.ಡಿ ಯನ್ನು ಗಳಿಸಿದರು. ಹಾರ್ವರ್ಡಿನವರು ಆಲ್ಪೋರ್ಟಿಗೆ ಶೆಲ್ಡ್೦ನ್ ಟ್ರಾವೆಲ್ಲಿ೦ಗ್ ಫೆಲೊಶಿಪ್ ಕೊಟ್ಟರು. ಇವರು ತಮ್ಮ ಮೊದಲನೆಯ ಶೆಲ್ಡ್೦ನ್ ವರ್ಷವನ್ನು ಹೊಸದಾದ ಜೆಸ್ಟಾಲ್ಟ್ ಸ್ಕೂಲಿನಲ್ಲಿ ಕಳೆದರು. ಮತ್ತು ತಮ್ಮ ಎರಡನೆಯ ವರ್ಷ ಕೇ೦ಬ್ರಿಜ್ ಯೂನಿವರ್ಸಿಟಿಯಲ್ಲಿ ಕಳೆದರು. ೧೯೩೯ರಲ್ಲಿ, ಆಲ್ಪೋರ್ಟ್ನವರನ್ನು ಅಮೇರಿಕನ್ ಸೈಕಾಲಜಿಕಲ್ ಅಸೋಸಿಯೆಶನ್ನಿನ ಅಧ್ಯಕ್ಷರನ್ನಾಗಿ ಮಾಡಲಾಯಿತು. ಇವರು ಅಕ್ಟೋಬರ್ ೯, ೧೯೬೭ರ೦ದು, ಕೇ೦ಬ್ರಿಜ್ನಲ್ಲಿ ಶ್ವಾಸಕೋಶದ ಕ್ಯಾನ್ಸರ್ನಿಂದ  ಮರಣಹೊಂದಿದರು.

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://en.wikipedia.org/wiki/Gordon_Allport
  2. http://psychology.about.com/od/profilesal/p/gordon-allport.htm
  3. http://psychology.jrank.org/pages/23/Gordon-Willard-Allport.html