ಸದಸ್ಯ:Manjunathgvt88/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಜುನಾಥ.ಎಚ್ ದ್ವಿತೀಯ ಪತ್ರಿಕೋದ್ಯಮ ವಿದ್ಯಾಥಿ ಆಳ್ವಾಸ್ ಕಾಲೇಜು, ಮೂಡಬಿದರೆ ನನ್ನ ಹವ್ಯಾಸ: ಸಣ್ಣಕಥೆ ಬರೆಯುವುದು


ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಬೆಟ್ಟ[ಬದಲಾಯಿಸಿ]

ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಕೋಟೆಯ ಸ್ಥಳ

ಗಂಗಾವತಿ ತಾಲೂಕಿನಿಂದ ಕೊಪ್ಪಳಕ್ಕೆ ಹೋಗುವ ದಾರಿಯಲ್ಲಿ ಜಬ್ಬಲಗುಡ್ಡ ಎನ್ನುವ ಊರು ಇದೆ ಅಲ್ಲಿ ಇಂದು ಬೆಟ್ಟ ಇದೆ ಇದಕ್ಕೆ.ಗಂಡುಗಲಿ ಕುಮಾರರಾಮ ಬೆಟ್ಟ ಎಂದು ಪ್ರತಿಥಿ ಇದೆ ಸುಮಾರು ೧೫ನೇ ಶತಮಾನದಿಂದಲೂ ಪೂಜೆ ನೆಡೆಯುತ್ತಿದೆ ಎಂದು ತತ್ವಜ್ಞಾನಿಗಳ ವಾದ. ಈ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಾಸಿಸವ ಜನರೆಲ್ಲ ಗಂಡುಗಲಿ ಕುಮಾರರಾಮನ ಜಾತ್ರೆ ಮಾಡುತ್ತಾರೆ. ಈ ಬೆಟ್ಟದಲ್ಲಿ ಕುಮಾರರಾಮ ತನ್ನ ಕೋಟೆಯನ್ನು ಕಟ್ಟಿದಾನೆ. ಈ ಕೋಟೆಯು ೧೪ನೇಶತಮಾನದಲ್ಲಿ ಕಟ್ಟಲು ಪಟ್ಟಿದೆ ಎಂಬುದು ಅಲ್ಲಿನ ಶಿಲಾಶಾಸನಗಳನ್ನು ನೋಡಿದರೆ ತಿಳಿಯಬಹುದು . ಕೋಟೆಕಟ್ಟಲು ಹಲವಾರು ದಿನಗಳು ಆಗಿವೆ . ಬೆಟ್ಟದ ಮೇಲೆ ಕೋಟೆ ಕಟ್ಟಿದ ಮಹಾ ನಾಯಕನೆಂದರೆ ಅದು ಗಂಡುಗಲಿ ಕುಮಾರರಾಮ ಎನ್ನಬಹುದು. ಸುಮಾರು ಜನರ ಪರಿಶ್ರಮ ದಿಂದಾಗಿ ಕೋಟೆಯನ್ನು ಕಟ್ಟಲು ಸಾಧ್ಯವಾಯಿತು. ಹಲವು ರೀತಿಯ ಕಲ್ಲುಗಳನ್ನು ಬಳಸಿಕೊಂಡು ಕಂಬಗಳನ್ನು ಕಟ್ಟಲಾಗಿದೆ ಅಷ್ಟೇ ಅಲ್ಲದೇ ಕಂಬಗಳಲ್ಲಿ ಹಲವು ಚಿತ್ರಗಳನ್ನು ಚಿತ್ರಿಸಿರುವುದು ವಿಶೇಷವಾಗಿದೆ.

ಕಂಬದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಯಾವ ದೇಶದ ಕಲಾವಿದರು ಚಿತ್ರಿಸಿದ್ದಾರೆ ಎಂಬುದು ಇನ್ನೂ ನಿಗೂಢವಾಗಿರು ವಿಷಯವಾಗಿದೆ. ಪ್ರತಿಯೊಂದು ಚಿತ್ರದಲ್ಲಿ ಒಂದೊಂದು ವ್ಯಶಿಷ್ಟತೆ ಇರುವುದನ್ನು ಕಾಣಬಹುದು. ಕಂಬಗಳಿಗೆ ಬಳಸಿರುವ ಕಲ್ಲುಗಳು ಬಹಳ ವಿಶೇಷತೆಯ ಎಲ್ಲೂ ದೊರೆಯದ ಕಲ್ಲುಗಳು ಎನ್ನಬಹದು. ಮುಖ್ಯವಾಗಿ ತಿಳಿಯಬೇಕಾದ ವಿಷಯ ಎಂದರೆ ಬೆಟ್ಟದ ಮೇಲೆ ಕಟ್ಟುವುದು ಸವಾಲಿನ ಕೆಲಸ.

ಕೋಟೆಯ ಇತಿಹಾಸ: ಗಂಡುಗಲಿ ಕುಮಾರರಾಮ ಕಟ್ಟಿರುವಂತಹ ಕೋಟೆಯು ಬಹಳ ದೊಡ್ಡದಾಗಿದ್ದು, ಕೋಟೆಯ ನಿಮಾ‍ಣಕ್ಕಾಗಿ ಬೆಟ್ಟದಲ್ಲಿಯೇ ೯ ಭಾವಿಗಳನ್ನು ತೊಡಿಸಲಾಗಿತ್ತು. ಈ ಭಾವಿಗಳು ಇಂದಿಗೂ ಇವೆ ಹಾಗೇ ನಿರಂತರವಾಗಿ ನೀರಿರುವುದು ಒಂದು ವಿಸ್ಮಯವೇ ಸರಿ. ಎಷ್ಟೇ ಬರಗಾಲ ಬಂದರೂ ನೀರು ಮಾತ್ರ ಖಾಲಿಯೇ ಆಗಲ್ಲ ಇದು ವಿಚಿತ್ರವೇ ಸರಿ. ಹಾಗೇ ಸುತ್ತಮುತ್ತಲಿನ ಪ್ರದೇಶವು ಬಹಳಷ್ಟು ಸುಂದರಮಯವಾಗಿದೆ.