ಸದಸ್ಯ:Manjunathgowda.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1.6. ನಿರ್ವಹಣೆಯ ಕಾರ್ಯಗಳು[manaagement functions]

   ನಿರ್ವಹಣೆಯನ್ನು ಸಾಮಾಜಿಕ ಪ್ರಕ್ರಿಯೆ ಎಂದು ವಿಶ್ಲೇಷಿಸಲಾಗದೆ.  ಸಂಘಟನೆಯ ನಿಗದಿಪಡಿಸಿದ ಉದ್ದೆಶಗಳ ಸಾಧನೆಗಾಗಿ ಪರಿಣಾಮಕಾರಿ ,ಮಿತವ್ಯಯದ ಯೋಜನೆಗಳನ್ನು ಸಿದ್ದಪಡಿಸುವ ಹಾಗೂ ಕಾರ್ಯಚಟುವಟೀಕೆಗಳನ್ನು ನಿಯಂತ್ರಿಸುವ ಹೊಣೆಗಳನ್ನು ಒಳಗೊಂಡಿದೆ. ನಿರ್ವಹಣೆಯು ಚಲನಾತ್ಮಕ ಪ್ರಕ್ರಿಯೆಯಾಗಿದ್ದು ಹಲವಾರು ಕಾರ್ಯಚಟುವಟಿಕೆಗಳನ್ನು ಒಳಗೊಂಡಿದೆ.
    ನಿರ್ವಹಣೆಯ ಕಾರ್ಯವನ್ನು ಬೇರೆ ಬೇರೆ ನಿರ್ವಹಣಾ ತಜ್ಣರು ವಿವಿಧ ರೀತಿಯಲ್ಲಿ ವಿಂಗಡಿಸಿದ್ದಾರ
         'ಹೆನ್ರಿ  ಫಯಾಲ್ರವರ ಪ್ರಕಾರ, "ನಿರ್ವಹಣೆಯು ಸಂಘಟಿಸಲು , ನಿರ್ದೇಶಿಸಲು ಮತ್ತು ನಿಯಂತಿಸಲು ಮುಂದಾಲೋಚಿಸುವುದು ಹಾಗೂ ಯೋಜಿಸುವುದು".
    ಲೂಥರ್ ಗುಲಿಕ್ ರವರು ಆಂಗ್ಲಭಾಷೆಯ "POSDCORB" ಎಂಬ ವಿಶಿಷ್ಟ ಪದದ ಪ್ರತಿಯೊಂದು ಅಕರಗಳ ಮೂಲಕ ನಿರ್ವಹಣೆಯ ವಿವಿಧ ಕಾರ್ಯಗಳನ್ನು ತಿಳಿಸಿರುತ್ತಾರೆ.

P = ಫ಼್ಲಾನಿಂಗ್ = ಯೋಜನೆಯನ್ನು ಸಿದ್ದಪಡಿಸುವುದು , O = ಆರ್ಗನೈಸಿಂಗ್‍ = ಸಂಘಟಿಸುವುದು S = ಸಾಫ಼ಿಂಗ್ = ಸಿಬ್ಬಂದಿ ವ್ಯವಸ್ಥೆ (ನೇಮಕಾತಿ) D = ಡೈರಕ್ಟೀಂಗ್ = ನಿರ್ದೇಶಿಸುವಿಕೆ CO = ಕೋ-ಆರ್ಡಿನೇಷನ್‍ = ಸಮನ್ವಯತೆ R = ರಿಪೋರ್ಟಿಂಗ್‍ = ವರದಿ ಮಾಡುವಿಕೆ B = ಬಜೆಟಿಂಗ್ = ಅಂದಾಜು ಪತ್ರ ತಯಾರಿಸುವಿಕೆ

   ಕೂಂಟ್ಜ್ ಮತ್ತು  ಒ'  ಡೊನೆಲ್ರವರು ವಿಂಗಡಿಸಿರುವ ನಿರ್ವಹಣಾ ಕಾರ್ಯಗಳನ್ನು ಸಾರ್ವತಿಕವಾಗಿ ಎಲ್ಲರೂ ಒಪ್ಪಿಕೊಂಡಿರುತ್ತಾರೆ.  ಅವುಗಳಾವುವೆಂದರೆ ಯೋಜನೆಗಳನ್ನು ತಯಾರಿಸುವಿಕೆ, ಸಂಘಟಿಸುವಿಕೆ,ಸಿಬ್ಬಂದಿ ನೇಮಕಾತಿ,ನಿರ್ದೇಶನ ಹಾಗೂ ನಿಯಂತ್ರಣ .
    ಸೈದ್ದಾಂತಿಕವಾಗಿ ನಿರ್ವಹಣಾ ಕಾರ್ಯಗಳನ್ನು ಪ್ರತ್ಯೆಕಿಸಬಹುದಾದರೂ ಕ್ರಿಯಾರೂಪದಲ್ಲಿ ಅವುಗಳು ಒಂದನ್ನೊಂದು ಅವಲಂಬಿಸಿವೆ.  ಆದುದರಿಂದ ನಿರ್ವಹಣಾ ಕಾರ್ಯಗಳನ್ನು ಪ್ರತ್ಯೆಕವಾಗಿ ವಿಂಗಡಿಸಲು ಸಾಧ್ಯವಿಲ್ಲ.  ನಿರ್ವಹಣೆಯ ಒಂದು ಕಾರ್ಯವು ಇನ್ನೊಂದು ಕಾರ್ಯದಲ್ಲಿ ಬೆರೆತಿರುವುದರಿಂದ ಒಂದು ಕಾರ್ಯ ಇನ್ನೊಂದು ಕಾರ್ಯದ ಪರಿಣಾಮಗಳ ಮೇಲೆ ತನ್ನ ಪ್ರಭಾವ ಹೊಂದಿರುತ್ತದೆ.

1 . ಯೋಜಿಸುವಿಕೆ(planning) : ; ಯೋಜಿಸುವಿಕೆಯು ನಿರ್ವಹಣೆಯ ಪ್ರಥಮ ಕಾರ್ಯವಗಿದೆ. ಇದು ಭವಿಷ್ಯದಲ್ಲಿ ನಿರ್ವಹಿಸಬೇಕಾದ ಕಾರ್ಯಗಳನ್ನುಪೂರ್ವಭಾವಿಯಾಗಿ ನಿರ್ಧರಿಸುವ್ ಪ್ರಕ್ರಿಯಯಾಗಿದೆ. ಸಂಘಟನೆಯ ಪೂರ್ವನಿರ್ಧರಿತ ಉದ್ದೇಶಗಳ ಸಾಧನೆಗೆ ಸೂಕ್ತವಾದ ಕಾರ್ಯ ಯೋಜನೆಗಳನ್ನು ರೂಪಿಸುವ ಕಾರ್ಯಗಳನ್ನು ಒಳಗೊಂಡಿದೆ.

    ಕೂಂಟ್ಜ್ ಮತ್ತು ಒ' ಡೊನೆಲ್‍ರವರ ಪ್ರಕಾರ "ಯೋಜಿಸುವಕೆಯು ಏನನ್ನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎನ್ನುವುದರ ಕಾರ್ಯಚಟುವಟಿಕೆಗಳನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಾಗಿದೆ.  ಇದು ನಾವು ಎಲ್ಲಿದ್ದೇವೆ ಮತ್ತು ಎಲ್ಲಿರಬೇಕಾಗಿತ್ತು ಎಂಬುದರ ನಡುವಿನ ಅಂತರವನ್ನು ಸೇರಿಸುವ ಸೇತುವೆಯಾಗಿದೆ."
    ಯೋಜಿಸುವಿಕೆಯು ಭವಿಷ್ಯದಲ್ಲಿ ನಿರ್ವಹಿಸಬೇಕಾದ ಕಾರ್ಯಚಟುವಟಿಕೆಗಳನ್ನು ನಿರ್ಧರಿಸುವುದಾಗಿದೆ.  ಇದು ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಪ್ರಯತ್ನವಾಗಿರುವತ್ತದೆ. ಸಂಘಟನೆಯ ಉದ್ದೇಶಿತ ಗುರಿ ಸಾಧಿಸಲು ನಿರ್ಧರಿಸುವ್ ಕ್ರಿಯೆಯೇ ಯೋಜಿಸುವಿಕೆ.  ಆದುದರಿಂದ ಯೋಜಿಸುವಿಕೆಯು ಪೂರ್ವನಿರ್ಧರಿತ ಗುರಿ ಯೋಜಿಸುವಿಕೆಯು ಮಾನವ ಸಂಪನ್ಮೂಲಗಳನ್ನು ಯೋಗ್ಯವಾಗಿ ಉಪಯೋಗಿಸಿಕೊಂಡಿರುವುದನ್ನು ಖಚಿತಪಡಿಸುತ್ತದೆ. ಯೋಜಿಸುವಿಕೆಯು ಒಂದು ಸಾರ್ವತ್ರಿಕ ಮತ್ತು ಬೌದ್ದಿಕ್ ಕಾರ್ಯವಾಗಿದೆ.  ಇದು ತಪ್ಪು ಕಲ್ಪನೆಗಳನ್ನು ನಿವಾರಿಸುವ ಸಂಪನ್ಮೂಲಗಳ ಅಪವ್ಯಯವನ್ನು ಹಾಗೂ ಅನಿಶ್ಚಿತತೆಯನ್ನು ಹೋಗಲಡಿಸಲು ಸಹಕರಿಸುತ್ತದೆ.

2 . ಸಂಘಟಿಸುವಿಕೆ(organising): ಸಂಸ್ಥೆಯ ಭೌತಿಕ, ಆರ್ಥಿಕ್ ಹಾಗೂ ಮಾನವ ಸಂಪನ್ಮೂಲಗಳನ್ನು ಒಗ್ಗೂಡಿಸುವ ಪ್ರಕ್ರಿಯೆಯೇ ಸಂಘಟಿಸುವಿಕೆಯಾಗಿದೆ. ಇದು ವಿವಿಧ ಸಂಪನ್ಮೂಲಗಳ ಮಧ್ಯೆ ಉತ್ಪಾದಕತೆಯ ಸಂಬಂಧವನ್ನು ಕಲ್ಪಿಸಿ ಸಂಘಟನೆಯ ಗುರಿಯನ್ನು ಸಾಧಿಸುತ್ತದೆ.

    ಹೆನ್ರಿ ಫಯೋಲ್ರವರ ಪ್ರಕಾರ "ಸಂಘಟನೆ ಎಂದರೆ ಒಂದು ವ್ಯವಹಾರದ ಸಂಸ್ಥೆಯ ಕಾರ್ಯನಿರ್ವಹಣೆಗೆ ಅಗತ್ಯದ ಕಚ್ಚಾ ವಸ್ತು, ಉಪಕರಣ ,ಬಂಡವಾಳ, ಮಾನವ ಸಂಪನ್ಮೂಲ ಇತ್ಯಾದಿಗಳನ್ನು ಒದಗಿಸುವುದಾಗಿದೆ.  ಸಂಘಟನೆಯು ವ್ಯವಹಾರದ ಸಂಘಟನೆಗೆ ಅಗತ್ಯವಾದ ಮಾನವ ಸಂಪನ್ಮೂಲ ಹಾಗೂ ಇತರೆ ಸಂಪನ್ಮೂಲ ಹಾಗೂ ಇತರೆ ಸಂಪನ್ಮೂಲಗಳನ್ನು ನಿರ್ಧರಿಸಿ ಒದಗಿಸುವುದಾಗಿದೆ."

ಸಂಘಟಿಸುವಿಕೆಯು ಕೆಳಕಂಡ ಪ್ರಕ್ರಿಯೆಯನ್ನು ಒಳಗೊಂಡಿದೆ.

	ಮಾಡುವ ಕೆಲಸ / ಕಾರ್ಯಗಳನ್ನು ಗುರುತಿಸುವುದು.
	ಕೆಲಸ / ಕಾರ್ಯಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸುವುದು
	ಕೆಲಸ / ಕಾರ್ಯಗಳನ್ನು ಹಂಚುವುದು / ವಹಿಸುವುದು
	ಕೆಲಸ / ಕಾರ್ಯ ನಿರ್ವಹಿಸಲು ಅಧಿಕಾರ ನೀಡಿ ಹೊಣೆಗಾರಿಕೆ ನಿಗದಿಪಡಿಸುವುದು
	ಅಧಿಕಾರ ಹಾಗೂ ಜವಾಬ್ದಾರಿಗಳ ನಡುವೆ ಸಂಬಂಧವನ್ನು ಏರ್ಪಡಿಸುವುದು.

3 . ಸಿಬ್ಬಂದಿ ನೇಮಕಾತಿ (staffing): ಸಿಬ್ಬಂದಿ ನೇಮಕಾತಿಯು ಸಂಘಟನೆಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸುವುದಾಗಿದೆ. ಇತ್ತೀಚಿಗೆ ಮುಂದುವರೆಯುತ್ತಿರುವ ತಾಂತ್ರಿಕತೆ, ವ್ಯವಹಾರದ ಪ್ರಮಾದಲ್ಲಾದ ಹೆಚ್ಚಳ, ಮಾನವೀಯ ಸ್ವಭಾವಗಳ ಸಂಕೀರ್ಣತೆ, ಸಿಬ್ಬಂದಿ ನೇಮಕಾತಿಯ ಪ್ರಾಮುಖ್ಯತೆಯನ್ನು ಹೆಚ್ಚಿಸಿವೆ. ಸಿಬ್ಬಂದಿ ನೇಮಕಾತಿಯ ಮುಖ್ಯ ಉದ್ದೇಶ ಸರಿಯಾದ ವ್ಯಕ್ತಿಗೆ ಸರಿಯಾದ ಕೆಲಸ ನೀಡುವುದು.

    ಕೂಂಟ್ಜ್ ಮತ್ತು ಒ'ಡೊನೆಲ್ರವರ ಪ್ರಕಾರ "ಸಿಬ್ಬಂದಿ ನೇಮಕಾತಿಯು ಸಂಘಟನೆಯ ರಚನೆಯಲ್ಲಿ ನಿಗದಿಪಡಿಸಿದ ಸ್ಥಾನಗಳಿಗೆ ಸಿಬ್ಬಂದಿಗಳನ್ನು ಸರಿಯಾದ ಮತ್ತು ಪರಿಣಾಮಕಾರಿಯಾದ ಆಯ್ಕೆ, ಗುಣವಿಮರ್ಶೆ ಮತ್ತು ಅಭಿವೃದ್ದಿಯ ವಿಧಾನಗಳ ಮೂಲಕ ಆ ಸ್ಥಾನಗಳ ಹೊಣೆಯನ್ನು ನಿರ್ವಹಿಸಲು ಸಮರ್ಥವಿರುವ ಸಿಬ್ಬಂದಿಯನ್ನು ಒದಗಿಸುವ ಕ್ರಿಯೆಗಳನ್ನು ಒಳಗೊಂಡಿರುತ್ತದೆ".

ಸಿಬ್ಬಂದಿ ನೇಮಕಾತಿಯು ಕೆಳಕಂಡ ಪ್ರಕ್ರಿಯೆಯನ್ನು ಒಳಗೊಂಡಿದೆ.

	ಮಾನವಶಕ್ತಿಯ ಯೋಜನೆ (ಸೂಕ್ತ ವ್ಯಕ್ತಿಯನ್ನು ಸೂಕ್ತ ಸ್ಥಳಕ್ಕೆ ಆಯ್ಕೆ ಮಾಡಲು ಹಾಗೂ ಅಗತ್ಯ ಪ್ರಮಾಣದ ಅವಶ್ಯಕ ಸಿಬ್ಬಂದಿಯನ್ನು ಅಮಂದಾಜಿಸುವುದು)
	ನೇಮಕಾತಿ, ಆಯ್ಕೆ, ಸ್ಥಳ ನಿಯೋಜನೆ
	ತರಬೇತಿ ಮತ್ತು ಅಭಿವೃದ್ದಿ
	ಸಂಭಾವನೆ ನೀಡುವುದು
	ಕಾರ್ಯಕ್ಷಮತೆಯನ್ನು ಅಳೆಯುವುದು
	ಬಡ್ತಿ ಹಾಗೂ ವರ್ಗಾವಣೆ.

4. ನಿರ್ದೇಶಿಸುವಿಕೆ (Directing): ಸಂಘತನೆಯ ಉದ್ದೇಶಗಳನ್ನು ದಕ್ಷತೆಯಿಂದ ಸಾಧಿಸಲು ಅದರ ಕಾರ್ಯವಿಧಾನಗಳನ್ನುಪ್ರಚೋದಿಸುವ ನಿರ್ವಹಣಾ ಕಾರ್ಯಗಳ ಭಾಗಕ್ಕೆ ನಿರ್ದೇಶನವನ್ನುತ್ತಾರೆ. ಸಿಬ್ಬಂದಿಯನ್ನು ಕೆಲಸದಲ್ಲಿ ತೊಡಗಿಸುವ ಮೂಲಕ ನಿರ್ದೇಶನವು ಸಂಘಟನೆಗೆ ಜೀವಂತಿಕೆಯನ್ನು ಮತ್ತು ಸಿಬ್ಬಂದಿ ನೇಮಕಾತಿಯು ಸಂಘಟನೆಯ ನಿರ್ವಹಣಾ ಕಾರ್ಯಗಳಲ್ಲಿ ತಯಾರಿಕಾ ಕಾರ್ಯಗಳಾಗಿರುತ್ತವೆ. ನಿರ್ದೇಶಿಸುವಿಕೆಯು ಸಂಘಟನೆಯು ಸಿಬ್ಬಂದಿವರ್ಗಕ್ಕೆ ಮಾರ್ಗದರ್ಶನ, ಮೇಲ್ವಿಚಾರಣೆ,ಪ್ರೇರೇಪಣೆ ಮತ್ತು ಉತ್ತೇಜನಗಳ ಮೂಲಕ ವ್ಯವಹರಿಸಿ ಸಂಘಟನೆಯ ಉದ್ದೇಶ ಸಾಧಿಸುವುದಾಗಿದೆ.

ಇದು ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

	ಮೇಲ್ವಿಚಾರಣೆ.
	ಉತ್ತೇಜನ ನೀಡುವುದು
	ನಾಯಕತ್ವ
	ಸಂವಹನ

5. ನಿಯಂತ್ರಿಸುವಿಕೆ(controlling): ನಿಯಂತ್ರಿಸುವಿಕೆ ಎಂದರೆ ಸಂಘಟನೆಯ ನೈಜ ಕಾರ್ಯತತ್ಪರತೆಯನ್ನು ಪೂರ್ವನಿರ್ಧರಿತ ಮಾನಕಗಳೊದಿಗೆ ತುಲನೆ ಮಾಡುವ, ವ್ಯತ್ಯಾಸಗಳನ್ನು ಕಂಡುಹಿಡಿಯುವ ಹಾಗೂ ವ್ಯತ್ಯಾಸಗಳಿದ್ದರೆ ಸರಿಪಡಿಸುವ ಪ್ರಕ್ರಿಯೆಯ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿರುತ್ತದೆ. ನಿಯಂತ್ರಣದ ಉದ್ದೇಶ ನೈಜ ಕಾರ್ಯಚಟುವಟಿಕೆಗಳು ಈಗಾಗಲೇ ಯೋಜಿಸಿದಂತೆ ನಡೆದಿರುತ್ತವೆಯೇ ಎಂಬುದನ್ನು ಮನಗಾಣುವುದಾಗಿದೆ. ಒಂದು ಉತ್ತಮ ನಿಯಂತ್ರಣ ಪದ್ದತಿಯು ಭವಿಷ್ಯದಲ್ಲಿ ಸಂಭವಿಸಬಹುದಾದ ವ್ಯತ್ಯಾಸಗಳನ್ನು ಸಂಭವಿಸುವ ಪೂರ್ವದಲ್ಲಿ ನಿರೀಕ್ಷಿಸಿ ಆ ಮೂಲಕ ನಿಯಂತ್ರಿಸಲು ಸಹಕರಿಸುತ್ತದೆ.

    ಕೂಂಟ್ಜ್ ಮತ್ತು ಒ'ಡೊನೆಲ್‍ರವರ ಪ್ರಕಾರ "ನಿಯಂತ್ರಣವು, ಸಿಬ್ಬಂದಿಗಳು ನಿರ್ವಹಿಸಲಾದ ಚಟುವಟಿಕೆಗಳು ಯೋಜಿಸಿದ ಕ್ರಿಯೆಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಳತೆ ಮಾಡುವುದು ಮತ್ತು ಸರಿಪಡಿಸುವುದಾಗಿದೆ.

ನಿಯಂತ್ರಣವು ಕೆಳಕಂಡ ಹಂತಗಳನ್ನು ಒಳಗೊಂಡಿದೆ.

   o	ಕಾರ್ಯತತ್ಪರತೆಯ ಪ್ರಮಾಣ ನಿಗದಿಪಡಿಸುವುದು.
   o	ನೈಜ ಕಾರ್ಯತತ್ಪರತೆಯನ್ನು ಅಳೆಯುವುದು
   o	ನೈಜ ಕಾರ್ಯತತ್ಪರತೆಯನ್ನು ಪ್ರಮಾಣಗಳಿಗೆ ಹೋಲಿಸಿ ವ್ಯತ್ಯಾಸಗಳಿದ್ದರೆ ಕಂಡುಹಿಡಿಯುವುದು
   o	ಕ್ರಮವಹಿಸಿ ಸರಿಪಡಿಸುವುದು

1.7. ಸಮನ್ವಯತೆ(Co-ordintion): ವ್ಯವಸ್ಥಾಪಕನು ಮೇಲ್ಕಂಡ ಎಲ್ಲಾ ಪರಸ್ಪರ ಸಂಬಂಧವಿರುವ ನಿರ್ವಹಿಸಬೇಕಾಗುತ್ತದೆ. ಸಮನ್ವಯತೆಯು ಪರಸ್ಪರ ಅವಲಂಬಿತ ಮತ್ತು ಆಂತರಿಕವಾಗಿ ಜೋಡಣೆಯಾದ ವ್ಯವಸ್ಥೆಗಳನ್ನು ಹೋದಿರುತ್ತದೆ. ವ್ಯವಸ್ಥಾಪಕನು ವಿವಿಧ ಗುಂಪುಗಳ ಕಾರ್ಯಗಳ ಮಧ್ಯೆ ಸಾಮರಸ್ಯವೇರ್ಪಡಿಸಿ ಸಂಘಟನೆಯ ಉದ್ದೇಶಗಳನ್ನು ಸಾಧಿಸಬೇಕಾಗುತ್ತದೆ. ವ್ಯವಸ್ಥಾಪಕನು ವಿವಿಧ ಇಲಾಖೆಗಳ ಕಾರ್ಯ/ಚಟುವಟಿಕೆಗಳನ್ನು ಒಂದುಗೂಡಿಸಿ ಸಮಗ್ರತೆಯಿಂದ ಕಾರ್ಯನಿರ್ವಹಿಸುವ ಪ್ರಕ್ರಿಯೆಯೇ 'ಸಮನ್ವಯತೆ'.

    ಸಮನ್ವಯತೆ ಸಂಘಟನೆಯ ಸಾಮಾನ್ಯವಾದ ಗುರಿ ಸಾಧಿಸುವ ದೃಷ್ಟಿಯಿಂದ ಗುಂಪಿನಲ್ಲಿರುವ ಎಲ್ಲಾ ಸದಸ್ಯರ ಪರಿಶ್ರಮವನ್ನು ಒಂದುಗೂಡಿಸಿ ಸಮಗ್ರತೆಯಿಂದ ಅವರ ಕಾರ್ಯಗಳು ಒಂದೇ ಸಮಯದಲ್ಲಿ ಜರುಗಿಸುವುದಾಗಿರುತ್ತದೆ.  ಸಮನ್ವಯತೆಯು ನಿರ್ವಹಣೆಯ ಎಲ್ಲಾ ಕಾರ್ಯಗಳನ್ನು ಒಂದುಗೂಡಿಸುವ ಅಗೋಚರ ಶಕ್ತಿಯಾಗಿದೆ.

ವ್ಯಾಖ್ಯೆ(Defination):

    ಮೂನಿ ಮತ್ತು ರೀಲೆ ರವರ ಪ್ರಕಾರ "ಸಂಸ್ಥೆಯ ಸಾಮಾನ್ಯ ಉದ್ದೇಶಗಳ ಸಾಧನೆಗಾಗಿ ಗುಂಪುಗಳ ಕಾರ್ಯದಲ್ಲಿ ಏಕರೂಪತೆ ಸಾಧಿಸಲು ರೂಪಿಸುವ ಕ್ರಮಬದ್ದ ವ್ಯವಸ್ಥೆ ಸಮನ್ವಯತೆ'.

ಸಮನ್ವಯತೆಯ ಲಕ್ಷಣಗಲು(Features of coordination): ಸಮನ್ವಯತೆಯು ಕೆಳಕಂಡ ಗುಣಲಕ್ಷಣಗಳನ್ನು ಒಳಗೊಂಡಿದೆ. 1. ಗುಂಪುಗಳ ಪರಿಶ್ರಮವನ್ನು ಒಗ್ಗೂಡಿಸುವುದು(It integrates group efforts): ಇದು ವಿವಿಧ ಹಿತಾಸಕ್ತಿಗಳನ್ನು ಹೊಂದಿರುವ್ ಗುಂಪು ಚಟುವಟಿಕಗಳನ್ನು ಒಂದುಗೂಡಿಸಿ ಯೋಜಾನೆ ಮತ್ತು ವೇಳಾಪಟ್ಟಿಗಳಿಗನುಗುಣವಾಗಿ ಕೆಲಸ ಕಾರ್ಯಗಳು ನಡೆಯುವುದು ಮಾರ್ಗದರ್ಶನ ಮಾಡುವುದಾಗಿರುತ್ತದೆ.

2. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಏಕತೆ ಮೂಡಿಸುವುದು(It ensures unity of action): ಸಮನ್ವಯತೆ ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಒಂದುಗೂಡಿಸಿ ಐಕ್ಯತೆಯಿಂದ ಸಂಘಟನೆಯ ಉದ್ದೇಶಗಳನ್ನು ಸಾಧಿಸುತ್ತದೆ. ಉದಾಹರಣೆಗೆ: ಒಂದು ಉತ್ಪಾದನಾ ಕೈಗಾರಿಕೆಯಲ್ಲಿ ಉತ್ಪಾದನೆ, ಮಾರಾಟ, ಖರೀದಿ, ಹಣಕಾಸು ವಿಭಾಗಗಳು ಪರಸ್ಪರ ಅವಲಂಬಿಗಳಾಗಿದ್ದು, ಈ ಎಲ್ಲಾ ವಿಭಾಗಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸಂಘಟನೆಯ ಸಾಮಾನ್ಯ ಉದ್ದೇಶಗಳಾನು ಸಾಧಿಸಲು ಸಾಧ್ಯವಾಗುತ್ತದೆ. 3. ನಿರಂತರ ಪ್ರಕ್ರಿಯೆಯಾಗಿದೆ (It is a continuous process): ಸಮನ್ವಯತೆಯು ನಿರಂತರ ಪ್ರಕ್ರಿಯೆಯಾಗಿದ್ದು, ಯೋಜನೆಗಳನ್ನು ತಯಾರಿಸುವುದರಿಂದ ಪ್ರಾರಂಭವಾಗಿ ನಿಯಂತ್ರಿಸುವವರೆಗೂ ಮುಂದುವರೆದು ಸಂಘಟನೆಯ ಕಾರ್ಯಾಚರಣೆಯಲ್ಲಿ ದಕ್ಷತೆಯನ್ನು ಕಾಪಾಡುತ್ತದೆ.

4. ಸಮನ್ವತೆಯು ಸಾರ್ವತ್ರಿಕ ಪ್ರಕ್ರಿಯೆ (It is a pervasive function): ಸಂಘಟನೆಯ ವಿವಿಧ ವಿಭಾಗಗಳ ಕಾರ್ಯಗಳು ಒಂದನ್ನೊಂದು ಅವಲಂಬಿಕೊಂಡಿರುವುದರಿಂದ ಎಲ್ಲಾ ಹಂತದ ನಿರ್ವಹಣೆಯ ಕಾರ್ಯಗಳಲ್ಲಿ ಸಮನ್ವಯತೆ ಅವಶ್ಯಕವಾಗಿರುತ್ತದೆ. ಬೇರೆ ಬೇರೆ ವಿಭಾಗದ ಕಾರ್ಯಚಟುವಟಿಕೆಗಳನ್ನು ಬೇರೆ ಬೇರೆ ನಿರ್ವಹಣಾ ಹಂತದ ಕಾರ್ಯಗಳಲ್ಲಿ ಸಮನ್ವಯತೆ ಸಾಧಿಸುವ ಮೂಲಕ ಅವುಗಳಲ್ಲಿ ಐಕ್ಯತೆಯನ್ನು ಮೂಡಿಸುತ್ತದೆ. ಉತ್ಪಾದನೆ, ಖರೀದಿ ಮತ್ತು ಮಾರಾಟ ವಿಭಾಗಳ ಕಾರ್ಯಗಳಲ್ಲಿ ಸಮನ್ವಯತೆ ಸಾಧಿಸಿ ಸಾಂಘಟನೆಯ ಉದ್ದೇಶಗಳನ್ನು ಸಾಧಿಸಬಹುದಾಗಿದೆ. 5. ಸಮನ್ವಯತೆಯು ಎಲ್ಲಾ ವ್ಯವಸ್ಥಾಪಕರ ಜವಾಬ್ದಾರಿ (It is the responsibility of all managers): ಪ್ರತಿಯೊಬ್ಬ ವ್ಯವಸ್ಥಾಪಕನು ಸಂಘಟನೆಯ ಕಾರ್ಯಗಳಲ್ಲಿ ಸಮನ್ವಯತೆಯನ್ನು ಸಾಧಿಸುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಉನ್ನತ ಹಂತದ ನಿರ್ವಾಹಕರು ಮಧ್ಯಮ ಹಾಗೂ ಕೆಳಹಂತದ ನಿರ್ವಾಹಕರುಗಳೊಂದಿಗೆ ಸಮನ್ವಯತೆಯನ್ನು ಸಾಧಿಸುವ ಮೂಲಕ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ. ಅದೇ ರೀತಿ ಮಧ್ಯಮ ಹಂತದ ವ್ಯವಸ್ಥಾಪಕರು ಉನ್ನತ ಹಂತ ಹಾಗೂ ಕೆಳಹಂತದ ವ್ಯವಸ್ಥಾಪರೊಂದಿಗೆ ಸಮನ್ವಯತೆಯನ್ನು ಏರ್ಪಡಿಸಬೇಕಾಗುತ್ತದೆ. ಹಾಗೆಯೇ ಕೆಳಹಂತದ ವ್ಯವಸ್ಥಾಪಕರುಗಳು ತಮ್ಮ ಸಿಬ್ಬಂದಿಗಳ ಕೆಲಸ ಕಾರ್ಯಗಳು ಯೋಜಿಸಿದಂತೆ ನಡೆಯುತ್ತಿವೆಯೇ ಎಂಬುದನ್ನು ಸಮನ್ವಯತೆಯ ಮೂಲಕ ಖಚಿತಪಡಿಸಿಕೊಳ್ಳಬೇಕು.

6. ಸಮನ್ವತೆಯು ಒಂದು ಉದ್ದೇಶಪೂರ್ವಕ ಕಾರ್ಯ (It is a deliberate function): ಎಲ್ಲಾ ವ್ಯವಸ್ಥಾಪಕರೂ ಉದ್ದೇಶಪೂರ್ವಕವಾಗಿ ಸಮನ್ವಯತೆಯನ್ನು ಬೇರೆ ಬೇರೆ ವ್ಯಕ್ತಿಗಳೊಡನೆ ಏರ್ಪಡಿಸುವುದರ ಮೂಲಕ ಸಂಘಟನೆಯ ಸಾಮಾನ್ಯ ಉದ್ದೇಶಗಳನ್ನು ಸಾಧಿಸುತ್ತಾರೆ.

    ಸಮನ್ವಯತೆಯು ನಿರ್ವಹಣೆಯಿಂದ ಪ್ರತ್ಯೇಕವಾದುದಲ್ಲ.  ಇದು ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ.  ಆದುದರಿಂದ ಸಮನ್ವತೆಯು ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ನಿರ್ವಹಣೆಯ ಎಲ್ಲಾ ಕಾರ್ಯಗನ್ನು ಸುಗಮವಾಗಿ ನಿರ್ವಹಿಸಲು ಸಹಕಾರಿಯಾಗಿದೆ.
This user is a member of WikiProject Education in India