ಸದಸ್ಯ:Manjula sahukar/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂವಹನ ತೊಂದರೆಗಳು-ಮಕ್ಕಳಲ್ಲಿ[ಬದಲಾಯಿಸಿ]

ಮಾನವನ ಬಾಳಿನಲ್ಲಿ ಸಂವಹನ ಪ್ರಧಾನ ಪಾತ್ರ ವಹಿಸುತ್ತದೆ. ಸಂವಹನ ಪ್ರಧಾನವಾಗಿ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಪರಸ್ಪರ ಕ್ರಿಯೆಯಾಗಿದ್ದು ಮಾಹಿತಿ, ಭಾವನೆ, ಅಭಿಪ್ರಾಯ,ಸಿದ್ಧಾಂತ ಇತ್ಯಾಗಳ ವಿನಿಮಯವಗುತ್ತದೆ.ಭಾಷೆಗೆ ಲಿಖಿತ ಹಾಗೂ ಮೌಖಿಕ ಎಂದು ಎರಡು ಆಯಾಮಗಳು ಇವೆ.ವಿವಿಧ ಮೌಖಿಕ ಧ್ವನಿವಿನ್ಯಾಸಗಳ ವ್ಯವಸ್ಥಿತ ಉತ್ಪಾದನೆಯೇ ಮಾತು. ಇದು ಅತ್ಯಂತ ವೇಗವಾದ ಮತ್ತು ದಕ್ಷವಾದ ಸಂವಹನ ಸಾಧನ. ಮಾತು ಅತ್ಯಂತ ಸಂಕೀರ್ಣ ಹಾಗೂ ಕಠಿಣ.ವಿವಿಧ ಧ್ವನಿ ಉಗಮಸ್ಥಾನ ಹಾಗೂ ಕರಣಗಳ ನಡುವೆ ಪರಸ್ಪರ ಸಮನ್ವಯ ಹಾಗೂ ನರ ಸ್ನಾಯು ಸಂಬಂಧದಿಂದ ಮಾತು ಉತ್ಪನ್ನವಾಗುತ್ತದೆ. ಭಾಷಾ ವ್ಯವಸ್ಥೆ ಸಂಕೀರ್ಣವಾಗಿದ್ದರೂ,ಮಾತಿನ ಉತ್ಪಾದನೆಯಲ್ಲಿ ವಿವಿಧ ಅಂಗಾಗಗಳ ಸಮ್ಮೇಳನವಿದ್ದರೂ ಮಕ್ಕಳು ಯಾವುದೇ ತರಬೇತಿಯಿಲ್ಲದೆ ಕಲಿತು ಆಡುತ್ತಾರೆ.