ಸದಸ್ಯ:Manjula Naikar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

"ಹುಟ್ಟು ನನ್ನದಲ್ಲ ಸಾವು ನನ್ನದಲ್ಲ."ಅಂತೆಯೇ ಜನಿಸಿದೆ ತಂದೆ-ತಾಯಿಯವರಿಂದ.ಅವರ ಹೆಸರು ಹೇಳಲು ಕೊಂಚ ಭಯ,ಆದರೂ ಹೇಳುವೆ ಶ್ರೀ.ಈರಪ್ಪ ನನ್ನ ಪಿತ.ಶ್ರೀಮತಿ. ಬಸಮ್ಮ ನನ್ನ ಹೆತ್ತ ಮಾತ.ಅದೆಷ್ಟೋ ಕನಸುಗಳ ಬುತ್ತಿ ಹೊತ್ತು ಅವರಿಟ್ಟರು ನನಗೊಂದು ಹೆಸರು ಅದುವೇ ಮಂಜುಳಾ. ಅಕ್ಕ ಸುವರ್ಣ, ನನಗಾಕೆ ನಿಜವೂ ಬಂಗಾರ.ತಮ್ಮ ರಾಕೇಶ್.ಹುಟ್ಟಿದ ಸ್ಥಳ ಮಂಗಳೂರಿನ ಪಣಂಬೂರು. ತಾಲ್ಲೂಕು-ಮಂಗಳೂರು,ಜಿಲ್ಲೆ- ದಕ್ಷಿಣ ಕನ್ನಡ,ರಾಜ್ಯ-ಕರ್ನಾಟಕ.ನಾನೊಬ್ಬಳು ಹೆಮ್ಮೆಯ ಹೆಣ್ಣು ಹೆಣ್ಣಾಗಿ ಅಹಂನಿಂದ ಹೇಳುವೆ "ಹೆಣ್ಣಿಂದಲೇ ಈ ಜಗತ್ತು;ಅವಳಿಲ್ಲದೆ ಬರೀ ಹಳತ್ತು".

ವಿದ್ಯಾಭ್ಯಾಸ

"ವಿದ್ಯೆ ಇಲ್ಲದವ ಪಶುವಿಗೆ ಸಮ"ಎಂಬುದರ ಪಟ್ಟಿಗೆ ನಾ ಸೇರಲಿಲ್ಲ.ತಂದೆ-ತಾಯಿಯವರ ಕನಸಿಗೆ ನೀರು ಒಯ್ಯಲಿಲ್ಲ. ಸಾಗುತ್ತ ಬಂದಿದೆ ನನ್ನ ಜೀವನದ ಅತ್ಯಮೂಲ್ಯ ದಿನಗಳು ಆ ದಿನಗಳ ಮೊದಲ ಏಳು ವರುಷಗಳನ್ನು ಕಳೆದೆನು ಸಂತ.ಪೀಠರರ ಹಿರಿಯ ಪ್ರಾಥಮಿಕ ಶಾಲೆ,ಕೊಟ್ಟಾರ,ಮಂಗಳೂರಿನಲ್ಲಿ.ಆ ಶಾಲಾ ದಿನಗಳು ನನ್ನ ಜೀವನದ ಸುಂದರ ನೆನಪುಗಳು.ಮುಂದಕ್ಕೆ ಬಂದೆ ಪ್ರೌಢಾವಸ್ಥೆಗೆ. ಆ ಅವಸ್ಥೆ ಕಳೆದದ್ದು ಪೋಮ್ಪೈ ಪ್ರೌಢ ಶಾಲೆ,ಉರ್ವಾ ಮಂಗಳೂರಿನಲ್ಲಿ.ಆ ಮೂರುವರುಶಗಳನ್ನು ನನಗೆ ನೂರು ವರುಷಗಳಾದರು ಮರೆಯಲಸಾಧ್ಯ.ನಾನೆಂದರೇನು?ನನ್ನಲ್ಲಿನ ಆಸಕ್ತಿ,ಪ್ರತಿಭೆ ಏನು?ಎಂದು ಗುರುತಿಸಿದ ಸುಂದರ ಹಾಗೂ ಅಮೂಲ್ಯ ಮೂರುವರುಶಗಳವು.ಆಯಿತು ಕೀಟಲೆ, ಹಾರಾಟದ ಜೀವನ. ಬಂದೆನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅದುವೇ ನನ್ನ ಪದವಿ ಪೂರ್ವ ಶಿಕ್ಷಣಕ್ಕೆ.ಆ ಶಿಕ್ಷಣ ಮೂಡಿದ್ದು ಪಾದುವ ಪದವಿ-ಪೂರ್ವ ಕಾಲೇಜು,ನಂತೂರ್ ಮಂಗಳೂರಿನಲ್ಲಿ.ವರ್ಣಿಸಲಾಗದ ವಾಣಿಜ್ಯ ವಿಭಾಗದ ಎರಡು ವರುಷಗಳವು.ನಾನು ಓದಿನಲ್ಲಿ ಮುಂಚೂಣಿ ಸಾಧಿಸಿದ್ದು ಇಲ್ಲಿ."ಓದಿನಲ್ಲೂ ಸೈ!ಚಟುವಟಿಕೆಗಳಲ್ಲೂ ಸೈ".ಎನಿಸಿಕೊಂಡಿದ್ದು ಇಲ್ಲಿ. ಶ್ರಮಕ್ಕೆ ಲಭಿಸಿತು ಉತ್ತಮ ಅಂಕ. ಎಲ್ಲರ ಬಾಯಲ್ಲೂ ಬಂತು ನನ್ನ ಹೆಸರು. ಮುಂದಕ್ಕೆ ಪದವಿ ಶಿಕ್ಷಣ ಪಡೆಯಲು ನಿರ್ಧಾರ ಮಾಡಿ ಸೇರಿದೆ ನಮ್ಮದೇ ಪದವಿ ಕಾಲೇಜು ಆದ ಪಾದುವ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿಗೆ.ಕಾತುರವಿದೆ ಇಲ್ಲಿನ ಮೂರುವರುಷಗಳಿಗೆ,ಶಿಕ್ಷಕ ಬಳಗ ಬಹಳ ಉತ್ತಮವೆನಿಸಿದೆ.ಹಿಡಿಸಿದೆ ಕಾಲೇಜು ಅದರಿಂದ ಪ್ರಸ್ತುತ ನಡೆಯುತಿದೆ ನನ್ನ ವಿದ್ಯಾ ಜೀವನ.

ಆಸಕ್ತಿ

"ಸರ್ವಜ್ಞನೆಂಬವನು ಗರ್ವದಿಂದಾದವನೆ?ಸರ್ವರೊಳಗೊಂದೊಂದು ನುಡಿಗಲಿತು;ವಿದ್ಯೆಯ ಪರ್ವತವೇ ಆದ ಸರ್ವಜ್ಞ!".ನನಗೆ ಸರ್ವಜ್ಞಳಾಗಲು ಅಸಾಧ್ಯ.ಆದರೆ ಅವರಂತೆ ಆಸಕ್ತಿಗಳನ್ನು ಅಳವಡಿಸಿಕೊಂಡು ಉತ್ಸಾಹದಿಂದ ಕೆಲವು ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬಲ್ಲೆ,ಮೈಗೂಡಿಸಿಕೊಂಡಿರುವೆ. ಅವೆಂದರೆ:- ಮಾತನಾಡಲು ಬಹಳ ಇಷ್ಟ ಅದರಲ್ಲಿ ಪರಿಣಿತೆ ಎನಿಸಿ ಭಾಷಣ( ಮಾತನಾಡುವ ಕಲೆ ) ಒಂದು ಪ್ರಿಯ ಹವ್ಯಾಸ, ಉದಾಸೀನತೆ ಹೋಗಲಾಡಿಸಲು- ಬರಹ ಎಂಬ ಆಸಕ್ತಿ ಇದೆ,ನಟನೆ ಅಚ್ಚುಮೆಚ್ಚು ಹಾಗಾಗಿ ನಟಿಸುವ ಆಸಕ್ತಿ ಇದೆ,ಕವನ ಓದಲು ಹುಚ್ಚುತನವಿದೆ ಅದಕಾಗಿ-ಕವನ ಬರೆಯುವ ಆಸಕ್ತಿ ಇದೆ ಕಡೆಯದಾಗಿ ಮನಸ್ಸನ್ನು ಖುಷಿಪಡಿಸಲು ಹಾಡು ಕೇಳುವ ಆಸಕ್ತಿಯಿದೆ.