ವಿಷಯಕ್ಕೆ ಹೋಗು

ಸದಸ್ಯ:Manishchrist/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂದ,

ಸಾಗರ್ ಗಾಂಭೀರಾ

S/o ಪುಷ್ಪರಾಜ್ ಎಸ್ ಗಾಂಭೀರಾ

ಬೊಲಿಯರ್ ಗುಟ್ಟು, VIA ಕುರ್ನಾಡು

ಮಂಗಳೂರು.


ಗೆ,

ನಳಿನ್ ಕುಮಾರ್ ಕಟೀಲ್

ಲೋಕಸಭಾ ಸದಸ್ಯರು

ಮಂಗಳೂರು ಲೋಕಸಭಾ ಕ್ಷೇತ್ರ

ಭಾರತ ಸರ್ಕಾರ


ಮಾನ್ಯರೇ,

ವಿಷಯ: ಭಾರತದ ಕೆಲವು ಅತ್ಯಂತ ಪ್ರಸಿದ್ಧ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಪಡೆಯಲು ಅನುಮತಿ ಕೋರಿ.

ಸಾಗರ್ ಗಾಂಭೀರಾ ಎಂಬ ಹೆಸರಿನವನಾದ ನಾನು, ಹಾಗೂ ನನ್ನ ಮೂವರು ಸಹಪಾಠಿಗಳು ( ಹೆಸರುಗಳನ್ನು ಕೆಳಗೆ ನಮೂದಿಸಿದ್ದೇನೆ) ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ, ಬಿಎಸ್ಸಿ ಮೂರನೇ ವರ್ಷದಲ್ಲಿ ( ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ)ವ್ಯಾಸಂಗ ಮಾಡುತ್ತಿದ್ದೇವೆ.

೧. ಸಾಗರ್ ಗಾಂಭೀರಾ

೨. ಎಸ್. ಕೌಶಿಕ್ ಅಯ್ಯರ್

೩. ಕೆ ಎಮ್ ಮನೋಜ್ ಕುಮಾರ್

೪. ಅಪ್ಪಣ್ಣ ಪಿ ಪಿ

ನಾವೆಲ್ಲರೂ ನಮ್ಮ ಉನ್ನತ ವ್ಯಾಸಂಗವನ್ನು ಭೌತಶಾಸ್ತ್ರದಲ್ಲಿ ಮುಂದುವರೆಸಲು ನಿರ್ಧರಿಸಿದ್ದೂ, ಭೌತಶಾಸ್ತ್ರದ ವಿವಿಧ ಕ್ಷೇತ್ರಗಳಾದ ಖಗೋಳಶಾಸ್ತ್ರ, ವಾಯುಬಲವಿಜ್ಞಾನ, ಸೈದ್ಧಾಂತಿಕ ಭೌತಶಾಸ್ತ್ರ, ರಾಕೆಟ್ ಪ್ರೊಪಲ್ಷನ್ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದೇವೆ. ವಿವಿಧ ವಿಜ್ಣಾನಿಗಳು ಹಾಗೂ ಅಧ್ಯಾಪಕರ ಜೊತೆಗೆ ಇಂಟರ್ನ್‌ಶಿಪ್ ಮಾಡುವುದರಿಂದ ವೈಜ್ಣಾನಿಕ ಸಮುದಾಯದಲ್ಲಿ ನಮಗೆ ಒಳ್ಳೆಯ ಮಾನ್ಯತೆ ಸಿಗುತ್ತದೆ. ಮೇಲ್ಕಂಡ ನಾವು ನಾಲ್ವರೂ ಈಗಾಗಲೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಇಂಟರ್ನ್‌ಶಿಪ್ ಮಾಡಿದ್ದೂ, ನಮಗೆ ಅತ್ಯಂತ ಒಳ್ಳೆಯ ಅನುಭವ ದೊರೆತಿದೆ. ಈಗ ನಾವು ಈ ಕೆಳಕಂಡ ಯಾವುದಾದರೊಂದು ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ಮಾಡಲು ತಮ್ಮಲ್ಲಿ ಅನುಮತಿ ಕೋರುತ್ತಿದ್ದೇವೆ.

1. Indian Space Research Organization (ISRO)

2. Defence Research and Development Organization (DRDO)

3. Indian Institute of Science (IISc)

4. International Centre for Theoretical Sciences (ICTS), run by TATA Institute of Fundamental Research (TIFR)

5. Indian Institute of Astrophysics (IIA).

ಈ ಅವಕಾಶವು ನಮ್ಮ ಜ್ಣಾನವರ್ಧನೆಯ ಜೊತೆಗೆ, ವೈಜ್ಣಾನಿಕ ಜಗತ್ತಿನಲ್ಲಿ ಉನ್ನತ ಮಟ್ಟಕ್ಕೇರಲು ಅತ್ಯಂತ ಮುಖ್ಯ ಅಂಶವಾಗಿದೆ. ನಮಗೆ ಈ ಯಾವುದಾದರೂ ಒಂದು ಸಂಸ್ಥೆಯಲ್ಲಿ ನಮ್ಮ ರಜಾ ದಿನಗಳಲ್ಲಿ/ ವಾರದ ಕೊನೆಗಳಲ್ಲಿ/ ಪ್ರತಿದಿನ ಸಂಜೆ- ೧೫ ರಿಂದ ೩೦ ದಿನಗಳ ಕಾಲ, ಇಂಟರ್ನ್‌ಶಿಪ್ ಮಾಡಲು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ.


ಧನ್ಯವಾದಗಳೊಂದಿಗೆ,


ನಿಮ್ಮ ವಿಧೇಯ, ದಿನಾಂಕ: ೧೭/೦೬/೨೦೧೯

ಸಾಗರ್ ಗಾಂಭೀರಾ ಸ್ಥಳ: ಬೆಂಗಳೂರು