ಸದಸ್ಯ:Manasa Bollur/sandbox
ಶಕ್ತಿ ಮುಗ್ಗಟ್ಟು
ನಾವು ಬಳಸುತ್ತಿರುವ ಶಕ್ತಿಯ ಮುಖ್ಯ ಆಕರಗಳೆಂದರೆ ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಈಚೆಗೆ ಬೈಜಿಕ ಇಂಧನಗಳು. ಈ ಎಲ್ಲ ಆಕರಗಳೂ ವಾಸ್ತವಿಕವಾಗಿ ನವೀಕರಿಸಲಾಗದ ಆಕರಗಳು. ಅತಿದೀರ್ಘ ಕಾಲಾವಧಿಯಲ್ಲಿ ನಿಸರ್ಗದಲ್ಲಿ ಶೇಕಹ್ರವಾಗಿರುವ ಇವುಗಳನ್ನು ಶೀಘ್ರದಲ್ಲಿ ಮರು ಪೂರೈಕೆ ಮಾಡಲಾಗುವುದಿಲ್ಲ.
ಶಕ್ತಿ ಮುಗ್ಗಟ್ಟಿಗೆ ಕಾರಣಗಳು : ೧. ನವೀಕರಿಸಲಾಗದ ಇಂಧನಗಳ ಸತತ ಬಳಕೆಯಿಂದ ಈ ಆಕರಗಳು ಬರಿದಾಗುತ್ತಿವೆ. ೨. ಜನಸಂಖ್ಯಾ ಸ್ಪೋಟವು ಅತಿಮುಖ್ಯ ಅಂಶ. ಕಳೆದ ಮುರು ದಶಕಗಳಲ್ಲಿ ವಿಶ್ವದ ಜನಸಂಖ್ಯೆ ೧೦೦% ರಷ್ಟು ಹೆಚ್ಚಿದೆ, ನಮ್ಮ ರಾಷ್ಟ್ರದ ಜನಸಂಖ್ಯೆ ೮೦% ಹೆಚ್ಚಿದೆ, ಇದರ ಪರಿಣಾಮವಾಗಿ ಶಕ್ತಿ ಬಳಕೆಯೂ ಬಹಳ ಹೆಚ್ಚಿದೆ. ೩. ಆಟೊಮೊಬೈಲ್ ವಾಹನಗಳ ಸಂಖ್ಯೆಯ ಹೆಚ್ಚಳದಿಂದ ಶಕ್ತಿ ಬಳಕೆ ಹೆಚ್ಚಿದೆ. ೪. ಶಕ್ತಿ ಬೇಡಿಕೆ ಹೆಚ್ಚುತ್ತಾ ಇದೆ ಆದರೆ ಶಕ್ತಿ ಉತ್ಪಾದನೆಯು ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಈ ಮೇಲಿನ ಅಂಶಗಳಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಶಕ್ತಿಯ ನಷ್ಟ ಅಥವಾ ಅಪವ್ಯಯ ಇದೆ.
ಶಕ್ತಿಯ ನಷ್ಟಕ್ಕೆ ಕಾರಣಗಳು : ೧. ಯಂತ್ರಗಳು ಚಾಲನೆಯಲ್ಲಿರಬೇಕಾದರೆ ಶಕ್ತಿಪೂರೈಕೆಯಾಗಬೇಕು. ಯಂತ್ರಗಳು ದೋಷಪೂರಿತವಾದರೆ ಹೆಚ್ಚು ಶಕ್ತಿ ಬೇಕಾಗುತ್ತದೆ. ೨. ಯಂತದ ಇಂಧನ ಟ್ಯಾಂಕಿನ ಸೂಕ್ಷ್ಮ ಸೋರಿಕೆಯೂ ಒಟ್ಟಾರೆ ಹೆಚ್ಚು ಶಕ್ತಿಯ ದಂಡಕ್ಕೆ ಕಾರಣವಾಗುವುದು. ೩. ಕೆಲವು ವೇಳೆ ವಾಹನ ಚಲಿಸದಿರುವಾಗಲೂ ಕೆಲವರು ಎಂಜಿನನ್ನು ಚಾಲೂ ಸ್ಥಿತಿಯಲ್ಲಿಯೇ ಇಟ್ಟಿರುತ್ತಾರೆ ೪. ನೀರಿನ ಕೊಳವೆಗಳಲ್ಲಿ ಸೋರುವ ನಲ್ಲಿಗಳು, ತೊಟ್ಟಿಕ್ಕುವ ನಲ್ಲಿಗಳು ಮತ್ತು ಸೋರುವ ಕವಾಟಗಳು ನೀರು ಪೋಲಾಗಲು ಕಾರಣವಾಗುತ್ತವೆ. ಇದರಿಂದ ಶಕ್ತಿಯ ನಷ್ಟವಾಗುತ್ತದೆ.
ಕೆಲವು ಪರಿಹಾರ ಕ್ರಮಗಳು : ೧. ಜನಸಂಖ್ಯಾ ಹೆಚ್ಚಳವನ್ನು ತಡೆಯಲು ಮತ್ತು ತಲಾವಾರು ಶಕ್ತಿ ಬಳಕೆಯನ್ನು ಮಿತಿಯಲ್ಲಿಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. ೨. ಹೆಚ್ಚು ದಕ್ಷತೆಯ ಎಂಜಿನುಗಳನ್ನು ವಿನ್ಯಾಸಗೊಳಿಸಲು ಸಮರ್ಪಕ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ೩. ಎಂಜಿನುಗಳನ್ನು ಆಗಾಗ್ಗೆ ಪರೀಕ್ಷಿಸಿ ಇಂಧನ ಉಳಿತಾಯ ಮಾಡಲು ಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು. ೪. ಸೋರಿಕೆಯನ್ನು ತಡೆಗಟ್ಟಿ ನೀರಿನ ನಷ್ಟವನ್ನು ತಪ್ಪಿಸಬೇಕು. ೫. ವಿದ್ಯುತ್ ಚ್ಛಕ್ತಿ ಮತ್ತು ನೀರನ್ನು ಉಳಿತಾಯ ಮಾಡಲು ಜನರಿಗೆ ಶಿಕ್ಷಣ ನೀಡಬೇಕು.