ಸದಸ್ಯ:Mamatha chandru

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
     Swami Vivekananda

ಹಿಂದೆ ಕಲ್ಕತ್ತಾದಲ್ಲಿ ವಿಶ್ವನಾಥದತ್ತ ಮತ್ತು ಭುವನೇಶ್ವರಿ ಎಂಬ ದಂಪತಿಗಳಿದ್ದರು.ಅವರ ಮಗನೇ ನರೇಂದ್ರನಾಥ.ಪುಟ್ಟ ನರೇಂದ್ರನಾಥ ಬಹಳ ತುಂಟ ಅವನು ಚೇಷ್ಟೆ ಮಾಡಿದಾಗಲೆಲ್ಲಾ ಅವನ ತಾಯಿಯು ಅವನನ್ನು ಒಂದು ಕಡೆ ಕೂರಿಸಿ‌"ಶಿವಶಿವಾ"ಎನ್ನುತ್ತ ತಲೆಯ ಮೇಲೆ ನೀರು ಸುರಿಯುತ್ತಿದ್ದಳು.ಇದರಿಂದ ಅವನು ಧ್ಯಾನ ಪರವಶನಾಗಿ ಸುಮ್ಮನಾಗಿ ಬಿಡುತ್ತಿದ್ದನು.ನರೇಂದ್ರನಿಗೆ ಸನ್ಯಾಸಿಗಳೆಂದರೆ ತುಂಬಾ ಮಮತೆಯಿತ್ತು.ಯಾರಾದರೂ ಸನ್ಯಾಸಿಗಳನ್ನು ಕಂಡರೆ ಅವನಿಗೆ ಕೈಗೆ ಸಿಕ್ಕದ್ದನ್ನು ಕೊಟ್ಟು ಕಳುಹಿಸಿಬಿಡುತ್ತಿದ್ದನು.

ನರೇಂದ್ರನಾಥನ ತುಂಬಾ ಬುದ್ಧಿವಂತನಾಗಿದ್ದ ಬಾಲ್ಯದಿಂದಲೂ ಆತನಿಗೆ ಧರ್ಮ,ತತ್ವಶಾಸ್ತ್ರದ ಬಗ್ಗೆ ತುಂಬಾ ಆಸಕ್ತಿಯಿತ್ತು.ಇವುಗಳನ್ನು ಕುರಿತಂತೆ ಆತನ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತಿದ್ದವು ಮಿತ್ರನೊಬ್ಬನ ಸಲಹೆಯಂತೆ ಕೋಲ್ಕತ್ತಾದ ಕಾಳಿ ದೇವಾಲಯದಲ್ಲಿದ್ದ ರಾಮಕೃಷ್ಣ ಪರಮಹಂಸರ ಶಿಷ್ಯನಾದ.ಸನ್ಯಾಸತ್ವವನ್ನು ಪಡೆದ ನಂತರ 'ವಿವೇಕಾನಂದ' ಎಂಬ ಹೆಸರಿನಿಂದ ಪ್ರಖ್ಯಾತರಾದರು. ಇತರ ಸನ್ಯಾಸಿಗಳೊಡನೆ ಸೇರಿ ಧಾರ್ಮಿಕ ಕೆಲಸಗಳ ಜೊತೆಗೆ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದರು.
ಪ್ರಶ್ನೆಗಳು-

1.ನರೇಂದ್ರನಾಥನ ಗುರುಗಳು ಯಾರು? 2.ಸನ್ಯಾಸತ್ವವನ್ನು ಪಡೆದ ನಂತರ ನರೇಂದ್ರನಾಥ ಯಾವ ಹೆಸರಿನಿಂದ ಪ್ರಖ್ಯಾತರಾದರು? 3.ನರೇಂದ್ರನಾಥನ ತಂದೆ-ತಾಯಿಯ ಹೆಸರೇನು? 4.ನರೇಂದ್ರನಾಥನಿಗೆ ಯಾವುದರಲ್ಲಿ ತುಂಬಾ ಆಸಕ್ತಿಯಿತ್ತು? 5.ನರೇಂದ್ರನಾಥನು ಚೇಷ್ಟೆ ಮಾಡಿದಾಗ ತಾಯಿಯು ಏನು ಮಾಡುತ್ತಿದ್ದಳು?