ಸದಸ್ಯ:Maithri Bhat/ನನ್ನ ಪ್ರಯೋಗಪುಟ 3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತಾಡಿ, ಮಾಮೇಶ್ವರ ತುಳು ಶಾಸನ[ಬದಲಾಯಿಸಿ]

ಸ್ಥಳ : ಮಾಮೇಶ್ವರ ದೇವಸ್ಥಾನ, ಅನಂತಾಡಿ ದ.ಕ. ಜಿಲ್ಲೆ

ಶಿಲೆ :ಗ್ರಾನೈಟ್

ಕಾಲ : ಕ್ರಿ.ಶ.

ಅಳತೆ - ಇಂಚು : ಎತ್ತರ ೨೬, ಅಗಲ ೨೩, ದಪ್ಪ ೮

ಬದಿ : ೦೧

ಪ್ರಕಟಣೆ : ೨೦೧೭

ಮಾಹಿತಿ, ಸಂಶೋಧನೆ : ಡಾ. ರಾಧಾಕೃಷ್ಣ ಬೆಳ್ಳೂರು, ೨೦೧೬

ದಾಖಲೀಕರಣ ಮತ್ತು ಛಾಯಾಪ್ರತಿ : ಪ್ರಾಚ್ಯಸಂಚಯ, ೨೦೧೪

ಪಠ್ಯದ ಓದು : ಡಾ. ರಾಧಾಕೃಷ್ಣ ಬೆಳ್ಳೂರು, ಸುಭಾಸ್ ನಾಯಕ್

ಶಾಸನದ ಪಠ್ಯ[ಬದಲಾಯಿಸಿ]

೦೧. ಸ್ವಸ್ತಿಶ್ರಿ ಕುಂಭಚ್ಯಾಗ್ರಮಿ [ಸ್ವಸ್ತಿ ಶ್ರೀ ಕುಂಭಚ್ಚಾಗಮಿತ]

೦೨. ನೆನ್ತಿ ಭೂಮಿಜ್ಜನ್ತ ದೇವೆಋಂದೆ

೦೩. ನಿಪ್ಪ ದಿತ್ಯ ತಿ ವೆಷಮ ಭು [ನಿಪ್ಪ ದಿನನ್ತತಿವೆಷಮನ್ತ]

೦೪. ನ್ವರನ್ಟ್ ವೈಂಕಿದೇವೆಋ ಆಲಯ

೦೫. ರ ದೇವೆರಾ ತಿಣೆಂ ಬೆಗಡೆ [ದೇವರಾ ತಿಣೆ ಬೆನ್ನಡೆ]

೦೬. ಯಾವಳಿರ್‌ವೆಋ ಸಭೆಯಾ ಪಾ

೦೭. ದಮೂಲಂಕ್ ಸಂದ್ ಬಡಚದಿನಸಂಕೇ

೦೮. ತನುಂ ಕಾವ ಉಮಾಮಹೇಶ್ವರಣ್ಟ್

೦೯. -ಸವು[ರ್ವ] ಪರಿಹಾರ ವೆನ್ದೆ[ನ್ದ್ ದೇ]ವೆರೆ

೧೦. ಕದನುಳೆತ್ತಣ್ಟಾದ್ಯಂ ಬೆಂ

೧೧. ಬಟಾ ಆಪತ್ತೊಂಣ್ಡಾಬೆ

೧೨. ಟ್ಟತ್ತಹರಿಪ್ಟ ಪತ್ತಾರ ಬನ್ಧಿ

೧೩. ತ್ ಕಳೆವಟಾ ವರುಶೊಣ್ಟ್

ಶಾಸನದ ಸಾರಾಂಶ[ಬದಲಾಯಿಸಿ]

ವಿಟ್ಲ ಸಮೀಪದ ಮಾಮೇಶ್ವರ ಉಮಾಮಹೇಶ್ವರ ದೇವಾಲಯದ ಹಿಂಬದಿಯಲ್ಲಿರುವ ಇದು ತುಳು ಲಿಪಿ ತುಳು ಭಾಷೆಯಲ್ಲಿರುವ ಶಿಲಾಶಾಸನ. ಇದನ್ನು ಹಾಕಿಸಿದವ ಅಳುಪ[೧] ಅರಸನಾದ ಅಳಿಯ ಬಂಕಿದೇವ[೨]. ಈತ ಉಮಾಮಹೇಶ್ವರ ದೇವಾಲಯವನ್ನೂ ‘ದೇವರ ಜಗಲಿ’ಯನ್ನೂ ನಿರ್ಮಿಸಿ, ದೇವಾಲಯಕ್ಕೆ ದತ್ತಿ ಕೊಟ್ಟದ್ದನ್ನು ಈ ಶಾಸನ ಉಲ್ಲೇಖಿಸುತ್ತದೆ. ಇಲ್ಲೂ ‘ಕುಂಭಚ್ಚಾಗಮಿತ’ ಎನ್ನುವ ಉಲ್ಲೇಖವಿದ್ದು ಇದೇ ಉಲ್ಲೇಖ ಗೋಸಾಡ ಶಾಸನದದಲ್ಲಿ ಕಂಡುಬಂದಿದೆ. ವೈಕಿಂದೇವನ ಉಲ್ಲೇಖ ಕುಂಬಳೆಯ ಅನಂತಪುರ ಶಾಸನ[೩]ದಲ್ಲೂ ಇದೆ. ಅನಂತಪುರ ಶಾಸನವೂ ಮಾಮೇಶ್ವರ ಶಾಸನವೂ ಉಲ್ಲೇಖಿಸುವುದು ಒಬ್ಬನೇ ವೈಕಿಂದೇವನನ್ನು. ಅನಂತಪುರ ಶಾಸನದಲ್ಲಿ ಜಯಸಿಂಹನ ಉಲ್ಲೇಖವಿದೆ. ಆದರೆ ಮಾಮೇಶ್ವರ ಶಾಸನದಲ್ಲಿ ಇಲ್ಲ.

ವಿಷಮವಾದ ಯುದ್ಧದಲ್ಲಿ ಸಂದ ಗೆಲುವಿಗಾಗಿ ಉಮಾಮಹೇಶ್ವರನಿಗೆ ಆಲಯವನ್ನೂ ದೇವರ ತಿಣೆಯನ್ನೂ ಕಟ್ಟಿಸಿದ್ದು ಶಾಸನದ ವಿಷಯ. ಈ ಪ್ರದೇಶದಲ್ಲಿದ್ದ ಒಬ್ಬ ಮೂಲನಿವಾಸಿ ಅರ ಎಂದು ಕಲ್ಪಿಸಬಹುದಾದ ಬಡಚ ಅಥವಾ ಬಡಜನ ಉಲ್ಲೇಖವೂ ಈ ಶಾಸನದಲ್ಲಿದೆ. ಲಿಪಿಯ ದೃಷ್ಟಿಯಿಂದ ಈ ಶಾಸನ ಕಿದೂರಿನ ಶಾಸನವನ್ನು ಹೋಲುತ್ತಿದ್ದು, ಅದು ಹನ್ನೆರಡನೇ ಶತಮಾನದ ಶಾಸನ ಎನ್ನುವುದು ಸ್ಪಷ್ಟವಾಗಿಯೇ ಇದೆ. ಈ ಎರಡೂ ಆಧಾರಗಳ ಮೇಲೆ ಮಾಮೇಶ್ವರ ಶಾಸನವನ್ನು ೧೨೦೪ರಲ್ಲಿ ಮುಗರುನಾಡಿನ ಅಧಿಕಾರ ಹಿಡಿದ ಅಳಿಯ ಬಂಕಿದೇವನ ಶಾಸನವೆಂದು ನಿರ್ಧರಿಸಬಹುದಾಗಿದೆ.

ಪ್ರಸ್ತುತ ದೇವಾಲಯದಲ್ಲಿರುವ ಶಿವನ ಎಡ ತೊಡೆಯ ಮೇಲೆ ಕುಳಿತ ಪಾರ್ವತಿಯ ಏಕಶಿಲಾ ವಿಗ್ರಹವೂ ವಿಶಿಷ್ಟವಾದದ್ದು. ಸಾಮಾನ್ಯವಾಗಿ ಹೆಚ್ಚಿನ ದೇವಾಲಯಗಳಲ್ಲೂ ಶಿವಲಿಂಗದಲ್ಲೇ ಪಾರ್ವತಿಯನ್ನೂ ಕಲ್ಪಿಸಲಾಗುತ್ತದೆ. ಆದರೆ ಇಲ್ಲಿ ಉಮಾಮಹೇಶ್ವರನನ್ನು ಮೂರ್ತಿರೂಪದಲ್ಲಿ ಕಲ್ಪಿಸಲಾಗಿದೆ. ಇಂತಹ ವಿಗ್ರಹ ತೀರಾ ಅಪೂರ್ವ ಎಂದು ಭಾವಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://kn.wikipedia.org/s/144p
  2. https://kn.wikipedia.org/s/dh0
  3. https://kn.wikipedia.org/s/1oqg