ವಿಷಯಕ್ಕೆ ಹೋಗು

ಸದಸ್ಯ:Mahammad Sharmil K.A/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಂ.ರಾ.ದಿವಾಕರ: ಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ಅಧ್ವರ್ಯ,ಚಿಂತಕ,ಲೇಖಕ,ಆದಲಿತಗಾರ,ಪತ್ರಿಕೋದ್ಯಮಿ,ಧರ್ಮ ಮತ್ತು ತತ್ತ್ವಜ್ಞಾನವೇತ್ತ, ಕನ್ನಡ,ಇಂಗ್ಲೀಷ್, ಹಿಂದಿಗಳಲ್ಲಿ ಗ್ರಂಥಕರ್ತ. ದಾರವಾಡದ ಮದ್ಯಮ ವರ್ಗದ ಕುಟುಂಬವೊಮದರಲ್ಲಿ ೧೮೯೪ ಸೆಪ್ಟೆಂಬರ್ ೩೦ ರಂದು ಜನಿಸಿದರು ತಂದೆ ರಾಮಚಂದ್ರ ತಾಯಿ ಸೀತಾ.ದಾರವಾಡ,ಬೆಳಗಾವಿ,ಪುಣೆ ಹಾಗು ಮುಂಬೈಗಳಲ್ಲಿ ವಿದ್ಯಭ್ಯಾಸ ಮಾಡಿ ಆಂಗ್ಲಭಾಷಾ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದರು.ಸ್ವಲ್ಪಸಮಯ ಕೊಲ್ಹಾಪುರ ಮತ್ತು ದಾರವಾಡದ ಕಾಲೇಜುಗಳಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ೧೯೧೯ ರಲ್ಲಿ ಎಲ್.ಎಲ್.ಬಿ ಪರೀಕ್ಷೆ ತೇರ್ಗಡೆ ಯಾದರು. ೧೯೨೦ ರಲ್ಲಿ ಎಲ್.ಎಲ್.ಬಿ ಪದವಿಯನ್ನು ನಿರಾಕರಿಸಿ ರಾಜಕೀಯಕ್ಕೆ ಪ್ರವೇಶಿಸಿದರು. ವಿದ್ಯಾರ್ಥಿದೆಸೆಯಲ್ಲಿಯೇ ದೇಶಸೇವೆಯ ಸಂಕಲ್ಪ ಮಾಡಿದ ಅವರು ೧೯೨೦-೨೧ ರಲ್ಲಿ ಗಾಂಧೀಜಿಯವರ ಕರೆಯ ಮೇರೆಗೆ ಸಹಕಾರ ಆಂದೋಲನದಲ್ಲಿ ದುಮುಕಿದರು. ಉತ್ತರ ಕರ್ನಾಟಕದಲ್ಲಿ ಪ್ರಮುಖ ನೇತಾರರಲ್ಲೊಬ್ಬರಾಗಿ ಪ್ರತಿಸಲವು ಕಾರಗೃಹವಾಸವನ್ನು ಅನುಭವಿಸಿದರು. ತಮ್ಮ ಸೆರೆಮನೆವಾಸದ ಅನುಭವಗಲನ್ನು 'ಸೆರೆಯ ಮನೆಯಲ್ಲಿ' ಯಂಬ ಕೃತಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

ದಿವಾಕರ ಅವರು ಕಬ್ಬೂರು ಮದ್ವರಾಯರು ಮತ್ತು ಹುಕ್ಕೇರಿಯ ರಾಮರಾಯರೊಂದಿಗೆ ಸೇರಿ ಕರ್ಮವೀರ ಪತ್ರಿಕೆಯನ್ನು ಪ್ರಾರಂಬಿಸುವಾಗ ದಾರವಾರಡದಲ್ಲಿ ಇನ್ನು ಮೂರು ಪತ್ರಿಕೆಗಳಿದ್ದವು. ಅವುಗಲೊಂದಿಗೆ ಪೈಪೋಟಿ ಅನಿವಾರ್ಯವಾಗಿತ್ತು ಬಂದ ಕಷ್ಟಗಳನ್ನೆಲ್ಲ ಹೆದುರಿಸಲು ನಿರ್ಧರಿಸಿದರು: ಹೋರಾಡಿದರು. ಅವರ ಪ್ರಯತ್ನ ಯಶಸ್ವಿಯಾಯಿತು. ಜನತೆಯ ಬೆಂಬಲ ಸಾಕಷ್ಟುಸಿಕ್ಕಿ ೧೯೨೧ ನೇ ಇಸವಿಯಲ್ಲಿ ಮುದ್ರಣಾಲಯವನ್ನು ಪ್ರಾರಂಬಿಸಿತು. ರಾಜಕೀಯ ಉದ್ದೇಶಕ್ಕಾಗಿ ಪತ್ರಿಕಾಲೇಖನಗಳನ್ನು ಬರೆಯುತ್ತಿದ್ದ ದಿವಾಕರರು ಈ ರೀತಿಯಾಗಿ ೧೯೨೧ರಲ್ಲಿ ಕರ್ಮವೀರ ಪತ್ರಿಕೆಯನ್ನು ಸ್ತಾಪಿಸಿ ನೇರವಾಗಿ ಕನ್ನಡ ಪತ್ರಿಕೋದ್ಯಮವನ್ನು ಪ್ರವೇಶಿಸಿದರು.

ಮೊಳೆಗಳನ್ನು ಜೋಡಿಸುವುದು, ಪತ್ರಿಕೆಯನ್ನು ಮುದ್ರಿಸುವುದು, ಪತ್ರಿಕೆಗಳನ್ನು ಹಂಚುವೂದು.ಲೇಖನ ಬರೆಯುವೂದು ಮುಂತಾದ ಪತ್ರಿಕೇಗೆ ಸಂಭಂದಿಸಿದ ಎಲ್ಲಾ ಕೆಲಸಗಳನ್ನು ಇವರೇ ಮಾಡಬೇಕಾಗಿತ್ತು. ಬ್ರಿಟೀಷ್ ಸರ್ಕಾರದ ಆಗ್ರಹಕ್ಕೊಳಗಾಗಿ ಕರ್ಮವೀರ ಹಲವುಸಲ ನಿಂತು ನಿಂತು ಪುನರುಜ್ಜೀವನ ಹೊಂದಿ ೧೯೪೦ ರಿಂದ ನಿರಂತರವಾಗಿ ನಡೆಯುತ್ತಿದೆ. ಕರ್ಮವೀರವು ಮುನ್ನಡೆದು ಕರ್ನಾಟಕ ವೀರ ಪತ್ರಿಕೆಯಾಗಿ ಹೆಸರು ಮಾಡಿತು. ದಾರವಾಡದಲ್ಲಿ ೧೯೨೮ ಮೇ ೨೬-೨೭ ರಂದು ನಡೆದ ಪಾಂತಿಕ ಪರಿಷತ್ತಿನ ಕಾರ್ಯದರ್ಷಿ ದಿವಾಕರರಾದರು. ಸೈಮನ್ ಆಯೋಗವನ್ನು ಕಾಂಗ್ರೇಸ್ ಪಕ್ಷ ಬಹಿಷ್ಕರಿಸಿತ್ತಾದರು ದುಂಡುಮೇಜಿನ ಪರಿಷತ್ತಿಗೆ ಶ್ರೀ ಮಿರ್ಜಾ ಇಸ್ಮಾಇಲರು ಮತ್ತು ಬೆನಗಲ್ ರಾಮರಾಯರು ಮೈಸೂರು ಸಂಸ್ತಾನವನ್ನು ಪ್ರತಿನಿಧಿಸಲು ಹೊರಟಾದ ಸಂಧರ್ಭ ಬಂದರೆ ಕರ್ನಾಟಕ ಏಕೀಕರಣ ಮತ್ತು ಭಾಷಾವಾರು ಪ್ರಾಂತ ರಚನೆಗೆ ಸಂಭಂದಿಸಿದ ಮಾಹಿತಿಗಳು ಜೊತೆಗಿರಲಿ ಎಂದು ಅವಶ್ಯಕ ಅಂಕಿ ಅಂಶಗಳನ್ನು ದಿವಾಕರ ಅವರೇ ವದಗಿಸಿದ್ದರು

ದೇಶಕ್ಕೆ ಸ್ವಾತಂತ್ಯ್ರ ಬರುವ ಸಂಧಿಕಾಲದಲ್ಲಿ ಸಂವಿದಾನ ರಚನಾ ಸಭೇಗೆ ಆಯ್ಕೆಯಾದರು. ಸ್ವಾತಂತ್ರ್ಯ ಭಾರತದ ಸರ್ಕಾರದಲ್ಲಿ ಸಮಾಚಾರ ಮತ್ತು ಆಕಾಶವಾಣಿ ಮಂತ್ರಿ ಯಾಗಿಯು ಆಮೇಲೆ ಬಿಹಾರದ ರಾಜ್ಯಪಾಲರಾಗಿಯು ಇದ್ದು ೧೯೫೭ ಗಾಂಧಿ ಶಾಂತಿ ಪ್ರತಿಷ್ಠಾನದ ಅದ್ಯಕ್ಷರಾಗಿದ್ದರು. ವಿಶ್ವಶಾಂತಿ ಚಳುವಳಿಯಲ್ಲಿ ಚಕ್ರವರ್ತಿ ರಾಜಗೋಪಾಲಚಾರ್ಯರೊಡನೆ ಅಮೇರಿಕ ಸಂಯುಕ್ತ ಸಾಸ್ತಾನದ ಅದ್ಯಕ್ಷ ಜಾನ್ ಕೆನಡಿಯವರನ್ನು ಕಂಡಿದರು.

ರಂ.ರಾ. ದಿವಾಕರರ ಸಾಹಿತ್ಯ ಕಾರ್ಯವನ್ನು ಮೆಚ್ಚಿ ಕನ್ನಡನಾಡು ೧೯೩೮ ಬಳ್ಳಾರಿಯಲ್ಲಿ ಸೇರಿದ ೨೩ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದ್ಯಕ್ಷರಾಗಿ ಆರಿಸಿ ಗೌರವಿಸಿತು . ಕನ್ನಡದ ಶಿವಶರಣರ ವಚನಗಳನ್ನು ಕುರಿತು ಎವರು ಬರೆದಿರುವ ' ವಚನಶಾಸ್ತ್ರ ರಹಸ್ಯ' ಎಂಬ ಬೃಹತ್ ಕೃತಿ ಆ ವಿಶಯದಲ್ಲಿ ರಚಿತವಾಗಿರುವ ಪ್ರತಮ ತೌಲನಿಕ ಮತ್ತು ವಸ್ತುನಿಷ್ಠ ಗ್ರಂಥವಾಗಿದೆ.