ವಿಷಯಕ್ಕೆ ಹೋಗು

ಸದಸ್ಯ:Mahadeva KH/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿವಿಡಿ

[ಬದಲಾಯಿಸಿ]

ಪಿಠೀಕೆ

[ಬದಲಾಯಿಸಿ]

ಬ್ರಹ್ಮಶಿವ

[ಬದಲಾಯಿಸಿ]

ಈತನ ಕಾಲ ಸು.೧೧೫೦, ಜೈನಧರ್ಮದವನಾದ ಈತನು ಪಂಪಯುಗದ ಕವಿಗಳಲ್ಲಿ ಒಬ್ಬ(ಕ್ರಿ.ಶ. ೧೦ನೆ ಶತಮಾನದಿಂದ ೧೨ನೆ ಶತಮಾನ). ಈತನು ೧೨ನೆ ಶತಮಾನದ ಮಧ್ಯಭಾಗದಲ್ಲಿದ್ದ ಕವಿಯಾಗಿದ್ದು. ಈತನು ನಯಸೇನನ ಪರಮತ ಸಂಪ್ರದಾಯವನ್ನು ಮುಂದುವರೆಸಿದನು.

Friezes and the sculptures on the walls of the Kedareshwara temple

ಗ್ರಂಥಗಳು

[ಬದಲಾಯಿಸಿ]

ಸಮಯ ಪರೀಕ್ಷೆ

[ಬದಲಾಯಿಸಿ]

ತ್ರೈಲೋಕ್ಯ ಚೂಡಾಮಣಿ

[ಬದಲಾಯಿಸಿ]

ಸಮಯ ಪರೀಕ್ಷೆ

ಈ ಗ್ರಂಥದಲ್ಲಿ ಕವಿಯು ಸಮಕಾಲೀನ ಮತಗಳನ್ನು ಪರೀಕ್ಷಿಸಿ, ಅವುಗಳ ಯೋಗ್ಯತೆಯನ್ನು ನಿರ್ಣಯಿಸುವ ಗ್ರಂಥವಾಗಿದೆ. ೧೫ ಅಧಿಕಾರಗಳಲ್ಲಿರುವ ಈ ಕಾವ್ಯದಲ್ಲಿ ಕಂದ, ವೃತ್ತಗಳೆ ಹೊರತು ಗದ್ಯದ ಪ್ರಸಕ್ತಿ ಇಲ್ಲ. ಇತರ ಮತಗಳ ದೋಷಗಳನ್ನು ಎತ್ತಿ ತೋರಿಸಿ. ಜೈನಧರ್ಮ ಸರ್ವಗ್ರಾಹ್ಯವೆಂದು ಸಿದ್ದಾಂತ ಮಾಡಲು ಹೊರಟಿದ್ದಾನೆ. ಈತನು ಒಮ್ಮೆ ಜೈನ ಮತದಿಂದ ಶೈವಧರ್ಮಕ್ಕೆ ಹೋಗಿ ಪುನಃ ಜೈನ ಮತಕ್ಕೆ ಹಿಂದಿರುಗಿದನು. ತನಗೆ ಸೌರ, ಕೌಳವ, ವೇದ, ಸ್ಮೃತಿ, ಪುರಾಣಗಳ ಹುರುಳೆಲ್ಲ ತಿಳಿದಿರುವುದೆಂದು ಹೇಳಿಕೊಂಡಿದ್ದಾನೆ. ಬಹುಶಃ ಇತರ ಮತಗಳ ಧರ್ಮಸ್ವರೂಪಕ್ಕಿಂತಲೂ ಮತಾಚಾರಗಳ ಹುಳುಕುಗಳೇ ಈತನಿಗೆ ಎದ್ದು ಕಂಡಿರಬೇಕು. ಅವುಗಳನ್ನು ಎತ್ತಿ ಹಿಡಿದು ಗೇಲಿಗೆಬ್ಬಿಸುವ ಕಾರ್ಯದಲ್ಲಿ ಈತನು ಪ್ರವೃತ್ತನಾಗಿದ್ದಾನೆ.

ಧರೆಗೊಡೆಯಂ ಚಕ್ರೇಶಂ| ತಿರಿವನೆ ಬಲಿಯಲ್ಲಿ ಬೇಡಿ ಮೂಱಡಿನೆಲನಂ?

ಸಿರಿಯೊಡೆಯಂ ಕೀಳಾಳಾ| ಗಿರಲಱೆವನೆ ಪರಿಸುತಂ ಕಿರೀಟಿಯ ರಥಮಂ?

ತ್ರೈಲೋಕ್ಯ ಚೂಡಾಮಣಿ

ಈ ಗ್ರಂಥವು ೩೬ ವೃತ್ತಗಳಿಂದ ಕೂಡಿದ ಜನಸ್ತೋತ್ರಗನ್ನು ಹೊಂದಿದೆ. ಇದರಲ್ಲಿ ಜಿನಭಕ್ತಿಗಿಂತ ಮತವಿಡಂಬನೆಯೇ ಹೆಚ್ಚು. ಆ ಕಾಲದ ಸಾಮಾಜಿಕ, ಧಾರ್ಮಿಕ ಸ್ತಿತಿಗಳಲ್ಲಿ ಅರಿತುಕೊಳ್ಳಲು ಸಹಾಯಕವಾಗಿವೆ ಈ ಗ್ರಂಥಗಳು ಈತನು ಬಳಸಿರು ಭಾಷೆ ಸುಲಭ, ಬಂಧುರ, ಕವಿಯ ನಾಲಿಗೆ ಮಾತ್ರ ಬಹು ಹರಿತ. ನಿರ್ದಯವಾಗಿ, ನಿರ್ದಾಕ್ಷಿನ್ಯವಾಗಿ, ನಿರ್ಭಯವಾಗಿ, ಕಠೋರವಾಗಿ ಆತ ಪರಮತ ಖಂಡನೆಗೆ ತೊಡಗುತ್ತಾನೆ.

ಅಱೆವಿಲ್ಲೆಂಬುದನಕ್ಷ ಸೂತ್ರ ಮಣಿಯಿಂ, ಕಾರುಣ್ಯ ಮಿಲ್ಲೆಂಬುದುಂ

ವಿಱುಗುತ್ತಿರ್ಪೆ ತ್ಇಸೂಳದಿಂ, ತನಗಣಂ ನಾಣ್ ಮುನ್ನಮಿಲ್ಲೆಂಬುದಂ

ಮೊಱೆಗೆಟ್ಟರ್ಚಿಪ ಲಿಂಗಂದಿಂ ತಪದ ಮಾತಿಲ್ಲೆಂ ಬುದಂ ಗೌರಿಯಿಂ

ದಱೆದೇನೆಂದು ಜಡರ್ ಮೃಡಂಗೆಱಗುವರ್ ತ್ರೈಲೋಕ್ಯ ಚೂಡಾಮಹೀ?

ಈ ಪದ್ಯಗಳು ಆತನ ಎರಡು ಕಾವ್ಯಗಳಿಂದ ಕ್ರಮವಾಗಿ ಆಯ್ದುಕೊಮಡವು. ಇವು ಆತನ ಕಾವ್ಯಗಳ ಸ್ವರೂಪವನ್ನು ದಿಗ್ದರ್ಶಿಸುತ್ತವೆ. ಬ್ರಹ್ಮನೇ ಮೊದಲಾದ ಎಲ್ಲ ದೈವಗಳೂ ಆತನ ವಿಡಂಬನೆಗೆ ಆಗುತಿಯಾಗಿವೆ. ಜೈನಧರ್ಮದ ಭೇಲಿನಿನಾದವು ಡಂಗುರ ಹೊಡೆದು ಹೀಗೆ ಸಾರುತ್ತಿದೆಯಂತೆ|

ಪುಸಿವವನೆ ತೊಲಗು, ಹಿಂಸೆಯೊ|ಳೆಸುಗುತ್ತಿರ್ಪವನೆ ತೊಲಗು, ಪರವಧುವಿಂಗಾ

ಟಿಸುವವನೆ ತೊಲಗೆನುತ್ತುಂ|ಪಸರಿಸುವುದು ಜೈನಧರ್ಮ ಭೇರೀ ನಿನದಂ.

ಈತನ ವಿಡಂಬನೆಯಲ್ಲಿಯೂ ಮೋಹಕವಾದ ತಿಳಿಹಾಸ್ಯವಿದೆ. ಅವನ ಕೈಲಿ ಬೈಸಿಲೊಳ್ಳುವುದು ಅನೇಕ ವೇಳೆ ಹಿತವಾಗಿರುತ್ತದೆ.

--Mahadeva KH (ಚರ್ಚೆ)

ಉಲ್ಲೇಖಗಳು

[ಬದಲಾಯಿಸಿ]

[] []

  1. ಕನ್ನಡ ಸಾಹಿತ್ಯ ಚರಿತ್ರೆ-ತ.ಸು.ಶಾಮರಾಯ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ೨೦೧೦
  2. ಕನ್ನಡ ಸಾಹಿತ್ಯ ಚರಿತ್ರೆ-ರಂ.ಶ್ರೀ.ಮುಗಳಿ, ಗೀತಾ ಬುಕ್ ಹೌಸ್: ಮೈಸೂರು.೨೦೦೯