ಸದಸ್ಯ:Madivaal Ningappa Kumbar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕನ್ನಡ ವ್ಯಾಕರಣ

ವ್ಯವಸ್ಥಿತವಾಗಿ ಜೋಡಿಸಿದ ಅಕ್ಷರಮಾಲೆಯ ಗುಂಪನ್ನು ವರ್ಣಮಾಲೆ ಎನ್ನಬಹುದು.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ.


ಕನ್ನಡ ವರ್ಣ ಮಾಲೆಯ ವಿದಗಳು

·        ಸ್ವರಗಳು

·        ವ್ಯಂಜನಗಳು

·        ಯೋಗವಾಹಗಳು

ಸ್ವರಗಳು:13[ಬದಲಾಯಿಸಿ]

“ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ”.

ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು[ಬದಲಾಯಿಸಿ]

1.     ಹ್ರಸ್ವಸ್ವರ :ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು.

ಉದಾ:ಅ ಇ ಉ ಋ ಎ ಒ

1.     ದೀರ್ಘ ಸ್ವರ: ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ.

ಉದಾ:ಆ ಈ ಊ ಏ ಓ ಐ ಔ

1.     ಪ್ಲುತ ಸ್ವರ:ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.

ಉದಾ:

·        ಅಕ್ಕಾ=ಕ್+ಆ=ಕಾs

·        ಅಮ್ಮಾ= ಮ್+ಆ=ಮಾs

·        ಅಯ್ಯಾ=ಯ್+ಆ=ಯಾs

ವ್ಯಂಜನಗಳು:34[ಬದಲಾಯಿಸಿ]

ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ.

ವ್ಯಂಜನಗಳ ವಿಧಗಳು:2         [ಬದಲಾಯಿಸಿ]

ವರ್ಗೀಯ ವ್ಯಂಜನಾಕ್ಷರಗಳು :ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

ಉದಾ:

ಕ ವರ್ಗ - ಕ ಖ ಗ ಘ ಙ

ಚ ವರ್ಗ - ಚ ಛ ಜ ಝ ಞ

ಟ ವರ್ಗ - ಟ ಠ ಡ ಢ ಣ

ತ ವರ್ಗ - ತ ಥ ದ ಧ ನ

ಪ ವರ್ಗ- ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು

·        ಅಲ್ಪ ಪ್ರಾಣಾಕ್ಷರಗಳು:10

ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ.

ಉದಾ:

ಕ,ಚ,ಟ.ತ,ಪ,

ಗ,ಜ,ಡ,ದ,ಬ

·        ಮಹಾ ಪ್ರಾಣಾಕ್ಷರಗಳು:10

ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ.

ಉದಾ:

ಖ, ಛ ,ಠ ,ಧ, ಫ , ಘ ,ಝ, ಢ, ಧ, ಭ

·        ಅನುನಾಸಿಕಾಕ್ಷರಗಳು:5

ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ. ಉದಾ:

ಙ ,ಞ ,ಣ, ನ, ಮ,

ಅವರ್ಗೀಯ ವ್ಯಂಜನಾಕ್ಷರಗಳು:9 ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು.

ಉದಾ:

ಯ ,ರ, ಲ, ವ ,ಶ, ಷ ,ಸ ,ಹ, ಳ

ಯೋಗವಾಹಗಳು:2[ಬದಲಾಯಿಸಿ]

ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ.

ಉದಾ : ಅಂ ಅಃ

ಯೋಗವಾಹಗಳ ವಿಧಗಳು[ಬದಲಾಯಿಸಿ]

1.     ಅನುಸ್ವರ- ಅಂ-ಯಾವುದೇ ಅಕ್ಷರವು ಒಂದು ಸೊನ್ನೆ ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು, ಉದಾ:ಅಂಕ , ಒಂದು, ಎಂಬ

2.     ವಿಸರ್ಗ - ಅಃ -ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು,ಉದಾ:ಅಂತಃ , ದುಃಖ, ಸಃ, ನಃ

ಯುಕ್ತಾಕ್ಷರಗಳು[ಬದಲಾಯಿಸಿ]

ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ.

ಉದಾ:

ಕ್ + ತ್ + ಅ = ಕ್ತ

ಪ್ + ರ್ + ಅ = ಪ್ರ

ಗ್ + ಗ್ + ಅ = ಗ್ಗ

ಸ್ + ತ್ + ರ್ + ಅ = ಸ್ತ್ರ

ಸಂಯುಕ್ತಾಕ್ಷರಗಳ ವಿಧಗಳು[ಬದಲಾಯಿಸಿ]

1.     ಸಜಾತಿಯ ಸಂಯುಕ್ತಾಕ್ಷರಗಳು- ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.

ಉದಾ:

ಕತೇ–ಕ್+ತ್+ತ್+ಎ

ಅಕ್ಕ –ಅ+ಕ್+ಕ್+ಅ

ಹಗ್ಗ,ಅಜ್ಜ,ತಮ್ಮ,ಅಪ್ಪ

1.     ವಿಜಾತೀಯ ಸಂಯುಕ್ತಾಕ್ಷರಗಳು-ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.

ಉದಾ:

ಅಗ್ನಿ- ಆ + ಗ್ + ನ್ + ಇ

ಆಪ್ತ – ಆ + ಪ್ + ತ್ + ಅ

ಸೂರ್ಯ , ಮಗ್ನ , ಸ್ವರ , ಪ್ರಾಣ

ಕನ್ನಡ ವರ್ಣಮಾಲೆ ಒಟ್ಟು ಅಕ್ಷರಗಳು ಸಂಖ್ಯೆ
ಕನ್ನಡ ವರ್ಣಮಾಲೆ 49
ಸ್ವರಗಳು 13
ಹ್ರಸ್ವ ಸ್ವರಗಳು 6
ಧೀರ್ಘ ಸ್ವರಗಳು 7
ವ್ಯಂಜನಾಕ್ಷರಗಳು 34
ವರ್ಗೀಯಗಳು ವ್ಯಂಜನಾಕ್ಷರಗಳು 25
ಅವರ್ಗೀಯ ವ್ಯಂಜನಾಕ್ಷರಗಳು 9
ಅಲ್ಪಪ್ರಾಣಗಳು 10
ಮಹಾಪ್ರಾಣಗಳು 10
ಅನುನಾಸಿಕಗಳು 5
ಯೋಗವಾಹಗಳು ಅನುಸ್ವಾರ(ಂ)ವಿಸರ್ಗ(ಃ) 2

ಸಂಧಿ ಪ್ರಕರಣ :

ಸಂಧಿ ಅರ್ಥ : ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು.

ಉದಾ:

ಗಾಣ + ಇಗ =ಗಾಣಿಗ

ಆಡು + ಇಸು =ಆಡಿಸು

ಹಸು + ಇನ =ಹಸುವಿನ

‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

ಸಂಧಿಕಾರ್ಯಗಳಾಗುವ ಸನ್ನಿವೇಶಗಳು:

ಸ್ವರ ಸಂಧಿ :

ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು.

ಉದಾ:

ಊರು(ಉ)+(ವ) ಅನ್ನು = ಊರನ್ನು

ಮನೆ(ಎ)+(ಅ) ಅಲ್ಲಿ =ಮನೆಯಲ್ಲಿ

ವ್ಯಂಜನ ಸಂಧಿ

ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿ ಎನಿಸುವುದು.

ಉದಾ:

ಮಳೆ(ಕ) +(ಗ)ಕಾಲ =ಮಳೆಗಾಲ

ಬೆಟ್ಟದ(ತ)+(ದ)ತಾವರೆ =ಬೆಟ್ಟದಾವರೆ


ಸಂಧಿಗಳ ವಿಧಗಳು:

ಕನ್ನಡ ಸಂಧಿಗಳು[ಬದಲಾಯಿಸಿ]

1.ಲೋಪ ಸಂಧಿ[ಬದಲಾಯಿಸಿ]

ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು

ಉದಾ:

1.     ಹಣದಾಸೆ – ಹಣದ + ಆಸೆ “ಅ” ಕಾರಲೋಪ

2.     ನಿನಗಲ್ಲದೆ – ನಿನಗೆ +ಅಲ್ಲದೆ “ಎ”ಕಾರಲೋಪ

3.     ಅಲ್ಲೊಂದು – ಅಲ್ಲಿ +ಒಂದು “ಇ” ಕಾರಲೋಪ

4.     ಊರಲ್ಲಿ – ಊರು +ಅಲ್ಲಿ “ಉ” ಕಾರಲೋಪ

2.ಆಗಮ ಸಂಧಿ[ಬದಲಾಯಿಸಿ]

ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೇಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”. ಆಗಮ ಸಂಧಿಯ ವಿಧಗಳು

1.     ಯ -ಕಾರ ಆಗಮ ಸಂಧಿ

2.     ವ-ಕಾರ ಆಗಮ ಸಂಧಿ

1.ಯ ಕಾರ ಆಗಮ ಸಂಧಿ ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.

ಉದಾ:

1.     ಕೆರೆಯನ್ನು = ಕೆರೆ + ಅನ್ನು

2.     ಕಾಯದೆ = ಕಾ + ಅದೆ

3.     ಬೇಯಿಸಿದ = ಬೇ + ಇಸಿದ

4.     ಕುರಿಯನ್ನು , ಮೀಯಲು , ಚಳಿಯಲ್ಲಿ

2.ವ ಕಾರ ಆಗಮ ಸಂಧಿ ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”. ಉದಾ:

1.     ಮಗುವಿಗೆ =ಮಗು + ಇಗೆ

2.     ಗುರುವನ್ನು = ಗುರು + ಅನ್ನು

3.     ಹೂವಿದು= ಹೂ + ಇದು

4.     ಗೋವಿಗೆ , ಶಾಂತವಾಗಿ , ರಸವಾಗಿ ,

3.ಆದೇಶ ಸಂಧಿ[ಬದಲಾಯಿಸಿ]

ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.

ಕ – ಗ

ಚ – ಜ

ಟ – ಡ

ತ – ದ

ಪ – ಬ

ಉದಾ:

1.     ಮಳೆಗಾಲ =ಮಳೆ +ಕಾಲ

2.     ಕಂಬನಿ = ಕಣ್ + ಪನಿ

3.     ಕೈದಪ್ಪು = ಕೈ + ತಪ್ಪು

ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,

ಪ್ರಕೃತಿ ಭಾವ ಸಂಧಿ[ಬದಲಾಯಿಸಿ]

ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ . ಉದಾ: ಅಣ್ಣ ಓಡಿಬಾ = ಅಣ್ಣ + ಓಡಿಬಾ ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ? ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?

ಸಂಸ್ಕೃತ ಸಂಧಿ[ಬದಲಾಯಿಸಿ]

ಸಂಸ್ಕೃತ ಸಂಧಿಗಳ ವಿಧಗಳು

1.     ಸಂಸ್ಕೃತ ಸ್ವರ ಸಂಧಿಗಳು

2.     ಸಂಸ್ಕೃತ ವ್ಯಂಜನ ಸಂಧಿಗಳು

ಸಂಸ್ಕೃತ ಸ್ವರ ಸಂಧಿಗಳ ವಿಧಗಳು[ಬದಲಾಯಿಸಿ]

1.     ಸವರ್ಣ ದೀರ್ಘ ಸಂಧಿ

2.     ಗುಣ ಸಂಧಿ

3.     ವೃದ್ಧಿ ಸಂಧಿ

4.     ಯಣ್ ಸಂಧಿ

1.ಸವರ್ಣ ದೀರ್ಘ ಸಂಧಿ ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು . ಅ-ಅ=ಆ , ಅ-ಆ=ಆ, ಇ-ಇ=ಈ , ಇ-ಈ=ಈ ಉ-ಉ=ಊ , ಉ-ಊ=ಊ

ಉದಾ:

1.     ದೇವಾಲಯ= ದೇವ + ಆಲಯ

2.     ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ

3.     ಗಿರೀಶ= ಗಿರಿ + ಈಶ

4.     ಗುರೂಪದೇಶ= ಗುರು + ಉಪದೇಶ

ಶುಭಾಶಯ , ರವೀಂದ್ರ , ದೇವಾಸುರ , ಫಲಾಹಾರ , ಸೂರ್ಯಸ್ತ.

2.ಗುಣ ಸಂಧಿ ಅ .ಆ ಕಾರಗಳ ಮುಂದೆದ ಇ.ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ.ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ , ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”

·        ಅ-ಆ,ಕಾರಗಳಿಗೆ ಇ-ಈ ಕಾರ ಪರವಾದಾಗ=ಏ

·        ಅ-ಆ,ಕಾರಗಳಿಗೆ ಉ-ಊ ಕಾರ ಪರವಾದಾಗ=ಓ

·        ಅ-ಆ,ಕಾರಗಳಿಗೆಋ ಕಾರ ಪರವಾದಾಗ=ಅರ್

ಉದಾ:

1.     ದೇವೇಂದ್ರ=ದೇವ + ಇಂದ್ರ

2.     ಸಪ್ತರ್ಷಿ=ಸಪ್ತ + ಋಷಿ

3.     ಸುರೇಂದ್ರ=ಸುರ + ಇಂದ್ರ

4.     ಜನೋಪಕಾರ=ಜನ + ಉಪಕಾರ

ನಾಗೇಶ , ಏಕೋನ , ಚಂದ್ರೋದಯ ,ಉಮೇಶ

3.ವೃದ್ಧಿ ಸಂಧಿ ಅ.ಆ ಕಾರಗಳಿಗೆ ಏ .ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ .ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ದಿ ಸಂಧಿ ಎನ್ನುವರು”. ಅ,ಆ-ಏ, ಐ=ಐಅ, ಆ-ಒ, ಓ=ಔ

ಉದಾ:

1.     ಏಕೈಕ= ಏಕ + ಏಕ

2.     ವನೌಷಧಿ=ವನ + ಔಷಧಿ

3.     ಜನೈಕ್ಯ=ಜನ + ಐಕ್ಯ

4.     ವನೌಷಧ , ಸಿದ್ಧೌಷದ , ಲೋಕೈಕವೀರ

4.ಯಣ್ ಸಂಧಿ ಇ ,ಈ ಕಾರಗಳ ಮುಂದೆ ಅ ,ಆ ಕಾರಗಳು ಪರವಾದರೆ ಅವೆರಡರಸ್ಥಾನದಲ್ಲಿ “ಯ್” ಕಾರವೂ. ಉ ,ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು” ಇ,ಈ-ಅ,ಆ=’ಯ್’ ಉ,ಊ-ಅ,ಆ=’ವ್’ ಋ-ಅ,ಆ=’ರ್’ ಉದಾ:

1.     ಪ್ರತ್ಯುತ್ತರ= ಪ್ರತಿ +ಉತ್ತರ

2.     ಮನ್ವಂತರ= ಮನು +ಅಂತರ

3.     ಜಾತ್ಯಾತೀತ=ಜಾತಿ +ಅತೀತ

4.     ಮಾತ್ರಂಶ=ಮಾತೃ +ಅಂಶ

ಅತ್ಯವಸರ , ಮನ್ವಾದಿ , ಅತ್ಯಾಶೆ , ಗತ್ಯಂತರ

ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು[ಬದಲಾಯಿಸಿ]

1.     ಜಶ್ತ್ವ ಸಂಧಿ

2.     ಶ್ಚುತ್ವ ಸಂಧಿ

3.     ಅನುನಾಸಿಕ ಸಂಧಿ

1.ಜಶ್ತ್ವ ಸಂಧಿ ಪೂರ್ವ ಪದದ ಕೊನೆಯಲ್ಲಿರುವ ಕ,ಚ,ಟ,ತ,ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”. ಉದಾ:

1.     ವಾಗೀಶ=ವಾಕ್ + ಈಶ

2.     ಅಜಂತ=ಅಚ್ + ಅಂತ

3.     ಷೆಡಂಗ=ಷಟ್ +ಅಂಗ

4.     ಸದ್ಭಾವ=ಸತ್ +ಭಾವ

5.     ಅಜ್ಜ=ಅಪ್ + ಜ

ದಿಗಂತ , ಅಜೌದಿ , ಷಡಾನನ , ಚಿದಾನಂದ , ಅಬ್ಧಿ

2.ಶ್ಚುತ್ವ ಸಂಧಿ ಶ್ಚು- ಎಂದರೆ ಶಕಾರ ಚ ವರ್ಗಾಕ್ಷರಗಳು(ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು”.

·        ಸ ಕಾರಕ್ಕೆ – ಶ ಕಾರವು

·        ತ ವರ್ಗಕ್ಕೆ- ಚ ವರ್ಗವು (ಆದೇಶವಾಗಿ ಬರುತ್ತವೆ)

ಉದಾ:

1.     ಸಜ್ಜನ=ಸತ್ +ಜನ

2.     ಚಲಚಿತ್ರ= ಚಲತ್ + ಚಿತ್ರ

3.     ಯಶಶ್ಯರೀರ=ಸರತ್ +ಚಂದ್ರ

4.     ಜಗಜ್ಯೋತಿ, ಪಯಶ್ಯಯನ, ಶರಚ್ಚಂದ್ರ

3.ಅನುನಾಸಿಕ ಸಂಧಿ ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು”. ಉದಾ.

1.     ವಾಙ್ಮಯ=ವಾಕ್ +ಮಯ

2.     ಚಿನ್ಮೂರ್ತಿ= ಚಿತ್ + ಮೂರ್ತಿ

3.     ತನ್ಮಯ= ತತ್+ಮಯ

ಸನ್ಮಾನ , ಅಮ್ಮಯ , ಸನ್ಮಣಿ ,ಚಿನ್ಮೂಲ ,


ಸಮಾಸಗಳ ಪ್ರಕರಣ:

ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು.

ಉದಾ:

ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು

ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ವಿಗ್ರಹ ವಾಕ್ಯ

ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು.

ಉದಾ:

1.      ಸಮಸ್ತಪದ = ಪೂರ್ವಪದ + ಉತ್ತರ ಪದ

2.      ದೇವಮಂದಿರ= ದೇವರ + ಮಂದಿರ

3.      ಹೆಜ್ಜೇನು=ಹಿರಿದು + ಜೇನು

4.      ಮುಂಗಾಲು= ಕಾಲಿನ + ಮುಂದು

(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)

ಸಮಾಸ ಪದಗಳಾಗುವ ಸನ್ನಿವೇಷಗಳು:

·        ಸಂಸ್ಕೃತ-ಸಂಸ್ಕೃತ ಶಬ್ಧಗಳು ಸೇರಿ

·        ಕನ್ನಡ-ಕನ್ನಡ ಶಬ್ಧಗಳು ಸೇರಿ

·        ತದ್ಬವ-ತದ್ಬವ ಶಬ್ಧಗಳು ಸೇರಿ

·        ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.

·        ಆದರೆ ಕನ್ನಡಕ್ಕೆ – ಸಂಸ್ಕೃತ ಶಬ್ಧಗಳು ಸೇರಿ ಸಮಾಸವಾಗಲಾರದು.


ಸಮಾಸದ ವಿಧಗಳು :

1.      ತತ್ಪುರುಷ ಸಮಾಸ

2.      ಕರ್ಮಧಾರೆಯ ಸಮಾಸ

3.      ದ್ವಿಗು ಸಮಾಸ

4.      ಅಂಶಿ ಸಮಾಸ

5.      ದ್ವಂದ್ವ ಸಮಾಸ

6.      ಬಹುವ್ರೀಹಿ ಸಮಾಸ

7.      ಕ್ರಿಯಾ ಸಮಾಸ

8.      ಗಮಕ ಸಮಾಸ

1.ತತ್ಪುರುಷ ಸಮಾಸ[ಬದಲಾಯಿಸಿ]

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು.

ಉದಾ:

1.     ಮರದ+ಕಾಲು =ಮರಗಾಲು

2.     ಬೆಟ್ಟದ+ತಾವರೆ =ಬೆಟ್ಟದಾವರೆ

3.     ಕೈಯ+ತಪ್ಪು = ಕೈತಪ್ಪು

4.     ಹಗಲಿನಲ್ಲಿ+ಕನಸು =ಹಗಲುಗನಸು

ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

2.ಕರ್ಮಧಾರೆಯ ಸಮಾಸ[ಬದಲಾಯಿಸಿ]

ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ.

ಉದಾ:

1.     ಹೊಸದು+ಕನ್ನಡ =ಹೊಸಗನ್ನಡ

2.     ಹಿರಿದು+ಜೇನು =ಹೆಜ್ಜೇನು

3.     ಕಿರಿಯ+ಗೆಜ್ಜೆ =ಕಿರುಗೆಜ್ಜೆ

ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ

3.ದ್ವಿಗು ಸಮಾಸ[ಬದಲಾಯಿಸಿ]

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

ಉದಾ:

1.     ಒಂದು + ಕಣ್ಣು = ಒಕ್ಕಣ್ಣು

2.     ಎರಡು+ಬಗೆ=ಇಬ್ಬಗೆ

3.     ಸಪ್ತ+ಸ್ವರ=ಸಪ್ತಸ್ವರ

ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು

4.ಅಂಶಿ ಸಮಾಸ[ಬದಲಾಯಿಸಿ]

ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು. ಅಂಶವೆಂದರೆ ‘ಭಾಗ’ ಅಥವಾ ‘ಅವಯವ’

ಉದಾ:

1.     ತಲೆಯ+ಮುಂದು=ಮುಂದಲೆ

2.     ಬೆರಳಿನ+ತುದಿ = ತುದಿಬೆರಳು

3.     ಕರೆಯ+ಒಳಗು= ಒಳಗೆರೆ

ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ

5.ದ್ವಂದ್ವ ಸಮಾಸ[ಬದಲಾಯಿಸಿ]

ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

ಉದಾ:

1.     ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು

2.     ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ

3.     ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು

4.     ಅಣ್ಣನು +ತಮ್ಮನು= ಅಣ್ಣತಮ್ಮಂದಿರು

ತನುಮನಗಳು, ಕೈಕಾಲು, ಮಳೆಬೆಳೆ, ನಡೆನುಡಿ

6.ಬಹುವ್ರೀಹಿ ಸಮಾಸ[ಬದಲಾಯಿಸಿ]

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ/ ಅನ್ಯಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸ ಎಂದು ಹೆಸರು.

ಉದಾ:

1.     ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ

2.     ಶಾಂತಿಯ + ಖನಿಯಾಗಿರುವನು + ಯಾವನೋ=ಶಾಂತಿಖನಿ

3.     ಸಹಸ್ರ +ಅಕ್ಷಿಗಳು + ಯಾರಿಗೋ =ಸಹಸ್ರಾಕ್ಷ

4.     ಪಂಕದಲ್ಲಿ + ಜನಿಸಿದ್ದು+ಯಾವುದೊ=ಪಂಕಜ

ಚಂದ್ರನಖಿ, ಕುರುಕುಲಾರ್ಕ, ಚಕ್ರಪಾಣಿ, ನಿಶಾಚಾರಿ

7.ಕ್ರಿಯಾ ಸಮಾಸ[ಬದಲಾಯಿಸಿ]

ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪದವಾಗಿದ್ದು, ಉತ್ತರಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನಲಾಗಿದೆ.

ಉದಾ:

1.     ಸುಳ್ಳನ್ನು +ಆಡು=ಸುಳ್ಳಾಡು

2.     ಕಣ್ಣನ್ನು +ತೆರೆ=ಕಣ್ದೆರೆ

3.     ವಿಷವನ್ನು +ಕಾರು =ವಿಷಕಾರು

4.     ಕೈಯನ್ನು +ಮುಗಿ=ಕೈಮುಗಿ

ಆಸೆಹೊತ್ತು, ಹಣ್ಣುತಿನ್ನು , ಕಂಗೆಡು , ಜೀವಬಿಡು

8.ಗಮಕ ಸಮಾಸ[ಬದಲಾಯಿಸಿ]

ಪೂರ್ವ ಪದವು ಸರ್ವನಾಮ, ಕೃದಂತ ಗುಣವಾಚಕ ಸಂಖ್ಯೆಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಕ್ಕೆ ಗಮಕ ಸಮಾಸ ಎಂದು ಹೆಸರು.

ಉದಾ:

ಸರ್ವನಾಮಕ್ಕೆ

1.     ಅವನು +ಹುಡುಗ=ಆ ಹುಡುಗ

2.     ಇವಳು + ಹುಡುಗಿ = ಈ ಹುಡುಗಿ

3.     ಯಾವುದು+ ಮರ=ಯಾವಮರ

ಕೃಂದತಕ್ಕೆ

1.     ಮಾಡಿದುದು+ಅಡುಗೆ =ಮಾಡಿದಡುಗೆ

2.     ತೂಗುವುದು +ತೊಟ್ಟಿಲು =ತೂಗುವ ತೊಟ್ಟಿಲು

3.     ಉಡುವುದು+ದಾರ=ಉಡುದಾರ

4.     ಸುಡುಗಾಡು, ಬೆಂದಡಿಗೆ, ಕಡೆಗೋಲು

ಗುಣವಾಚಕಕ್ಕೆ

1.     ಹಸಿಯದು +ಕಾಯಿ=ಹಸಿಯಕಾಯಿ

2.     ಹಳೆಯದು +ಕನ್ನಡ=ಹಳೆಗನ್ನಡ

ಕಿರಿಮಗಳು, ಬಿಳಿಯಬಟ್ಟೆ , ಅರಳುಮೊಗ್ಗು

ಸಂಖ್ಯೆಗೆ

1.     ನೂರು +ಹತ್ತು =ನೂರಹತ್ತು

2.     ಮೂವತ್ತು+ಆರು=ಮೂವತ್ತಾರು

ಮೂವತ್ತು, ಹೆಪ್ಪತ್ತು, ಇಪ್ಪತೈದು .

ಲಿಂಗಗಳು :

‘ ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು’

ಲಿಂಗಗಳು ಪ್ರಕಾರಗಳು :  

ಲಿಂಗಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು ಕೇಶಿರಾಜನ ಪ್ರಕಾರ ‘ಲಿಂಗಂವೊಂಬತ್ತು ತೆರೆಂ’

1.      ಪುಲ್ಲಿಂಗ

2.      ಸ್ತ್ರೀಲಿಂಗ

3.      ನಪುಂಸಕಲಿಂಗ

1.ಪುಲ್ಲಿಂಗ[ಬದಲಾಯಿಸಿ]

ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.

ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, ಮನುಷ್ಯ, ಪ್ರಧಾನಿ,…..ಇತ್ಯಾದಿ

2.ಸ್ತೀಲಿಂಗ[ಬದಲಾಯಿಸಿ]

ಸ್ತೀಯನ್ನು ಕುರಿತು ಹೇಳುವ ಶಬ್ದಗಳೇ ಸ್ತೀಲಿಂಗ.ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥ ಹೊಳೆಯುವುದೋ ಅದೇ ಸ್ತೀಲಿಂಗ.

ಉದಾ:- ರಾಣಿ, ರಾಧೆ, ತಾಯಿ, ಅಕ್ಕ, ತಂಗಿ, ಚಲುವೆ, ಅರಸಿ, ಚಿಕ್ಕಮ್ಮ,……ಇತ್ಯಾದಿ

3.ನಪುಂಸಕ ಲಿಂಗ[ಬದಲಾಯಿಸಿ]

ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು-ಗಂಡಸು ಎರಡೂ ಅಲ್ಲದ ಅಥ್ರ ವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು. ಪುಲ್ಲಿಂಗವೂ ಅಲ್ಲದ, ಸ್ತೀಲಿಂಗವೂ ಅಲ್ಲದ ಲಿಂಗಗಳು ನಪುಂಸಕ ಲಿಂಗಗಳಾಗಿವೆ.

ಉದಾ:- ಮನೆ, ನೆಲ, ಬೆಂಕಿ, ಹೊಲ, ಗದ್ದೆ, ತೋಟ, ಮರ, ಆಕಾಶ, ಬಂಗಾರ,…..ಇತ್ಯಾದಿ

ಲಿಂಗಗಳ ಅನ್ಯ ವಿಧಗಳು :

ಪುನ್ನಪುಂಸಕ ಲಿಂಗಗಳು[ಬದಲಾಯಿಸಿ]

“ಎಲ್ಲಾ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗ, ಹಾಗೂ ನಪುಂಸಕ ಲಿಂಗದಂತೆಯೂ ಪ್ರಯೋಗದಲ್ಲಿ ಬಳಸುತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ. ಉದಾ:-ಸೂರ್ಯ ಚಂದ್ರ ಶನಿ ಮಂಗಳ……ಇತ್ಯಾದಿ ಚಂದ್ರ ಮೂಡಿತು.-ನಪುಂಸಕ ಲಿಂಗ ಚಂದ್ರ ಮೂಡಿದನು.-ಪುಲಿಂಗ ಶನಿಯು ಕಾಡುತ್ತದ-ನಪುಂಸಕ ಲಿಂಗ ಶನಿಯು ಕಾಡಿದನು-ಪುಲಿಂಗ ಸೂರ್ಯ ಉದಯವಾಯಿತು- ನಪುಂಸಕ ಲಿಂಗ ಸೂರ್ಯ ಉದಯವಾದನು-ಪುಲಿಂಗ

ಸ್ತ್ರೀ ನಪುಂಸಕ ಲಿಂಗಗಳು[ಬದಲಾಯಿಸಿ]

ನಾಮಪದಗಳು ಸಂದರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ ಆದುದರಿಂದ ಇದಕ್ಕೆ ಸ್ತ್ರೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.

ಉದಾ:- ದೇವತೆ, ಲಕ್ಷ್ಮೀ, ಸರಸ್ವತಿದೇವತೆ, ಒಲಿಯಿತು, ಸ್ತೀ ನಪುಂಸಕ ಲಿಂಗದೇವತೆ, ಒಲಿದಳು, ಸ್ತ್ರೀ,ಸರಸ್ವತಿ, ಕೃಪೆ ಮಾಡಿತು, ಸ್ತ್ರೀ ನಪುಂಸಕ ಲಿಂಗ ಸರಸ್ವತಿ, ಕೃಪ ಮಾಡಿದಳು, ಸ್ತ್ರೀ,ಹುಡುಗಿ, ಓಡುತ್ತದೆ, ಸ್ತ್ರೀ ನಪುಂಸಕ ಲಿಂಗಹುಡುಗಿ ಓಡುವಳು, ಸ್ತ್ರೀ

ನಿತ್ಯ ನಪುಂಸಕ ಲಿಂಗಗಳು[ಬದಲಾಯಿಸಿ]

ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.

ಉದಾ: ಶಿಶು, ಮಗು, ಕೂಸು, ದಂಡು, ಜನಶಿಶು = ಜನಿಸಿತುಕೂಸು = ಮಲಗಿಸುಮಗು = ಅರಳುತ್ತದೆಜನ = ಸೇರಿದೆದಂಡು = ಬಂತು

ವಾಚ್ಯ ಲಿಂಗಗಳು[ಬದಲಾಯಿಸಿ]

ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ. ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ. ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ ನೀನು ಗಂಡಸು — ಪು

ಕೆಟ್ಟ ಹುಡುಗಿ——ಸ್ತ್ರೀ

ಕೆಟ್ಟ ನಾಯಿ——ನಪುಂ

ನಾನು ದೊಡ್ಡವನು——ಪು

ನಾನು ದೊಡ್ಡವಳು—–ಸ್ತ್ರೀ

ನಾನು ದೊಡ್ಡದು——ನಪುಂ

ಲಿಂಗಗಳ ಪ್ರಯೋಗ[ಬದಲಾಯಿಸಿ]

ಲಿಂಗಗಳ ಪ್ರಯೋಗ ಪುಲಿಂಗ ಸ್ತ್ರೀಲಿಂಗ ನಪುಂಸಕಲಿಂಗ
ಗುಣವಾಚಕ ಶಬ್ದಗಳು ಒಳ್ಳೆಯವನು ಒಳ್ಳೆಯವಳು ಒಳಿತು
ದೊಡ್ಡವನು ದೊಡ್ಡವಳು ದೊಡ್ಡದು
ಹೊಸಬನು ಹೊಸಬಳು ಹೊಸದು
ಸರ್ವನಾಮ ಶಬ್ದಗಳು ಅವನು ಅವಳು ಅದು
ಇವನು ಇವಳು ಇದು
ಯಾವನು ಯಾವಳು ಯಾವುದು
ನಾನು ನಾನು ನಾನು
ನೀನು ನೀನು ನೀನು
ಸಂಖ್ಯಾವಾಚಕ ಶಬ್ದ ಒಬ್ಬನು ಒಬ್ಬಳು ಒಂದು
ಇಬ್ಬರು ಇಬ್ಬರು ಎರಡು
ಮೂವರು ಮೂವರು ಮೂರು

ವಚನಗಳು:

ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – “ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಚನ ಎಂದರೆ ಸಂಖ್ಯೆ ಎಂದರ್ಥ..

ವಚನಗಳ ವಿಧಗಳು :

ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು.ಅವುಗಳೆಂದರೆ :

1.      ಏಕವಚನ.

2.      ಬಹುವಚನ

ಏಕವಚನ[ಬದಲಾಯಿಸಿ]

ಒಬ್ಬ ವ್ಯಕ್ತಿ , ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ. ಉದಾ ; ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು….. ಇತ್ಯಾದಿ

ಬಹುವಚನ[ಬದಲಾಯಿಸಿ]

ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು.. ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ

ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು

(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ. ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ


ವಿಭಕ್ತಿ ಪ್ರತ್ಯಯಗಳು:

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು. ಅಥವಾ“ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”

ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ.ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…

ವಿಭಕ್ತಿ ಪ್ರತ್ಯಯಗಳ ವಿಧಗಳು[ಬದಲಾಯಿಸಿ]

ಕ್ರ ಸಂ ವಿಭಕ್ತಿಯ ಹೆಸರು ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ ಕಾರಕಗಳು
1 ಪ್ರಥಮ ವಿಭಕ್ತಿ ಮ್ ಕರ್ತೃ
2 ದ್ವಿತೀಯ ವಿಭಕ್ತಿ ಅನ್ನು ಅಮ್ ಕರ್ಮ
3 ತೃತೀಯಾ ವಿಭಕ್ತಿ ಇಂದ ಇಮ್ ಕರಣ
4 ಚತುರ್ಥಿ ವಿಭಕ್ತಿ ಗೆ ಕೆ ಸಂಪ್ರಧಾನ
5 ಪಂಚಮಿ ವಿಭಕ್ತಿ ದೆಸೆಯಿಂದ ಅತ್ತಣಿಂ ಅಪಧಾನ
6 ಷಷ್ಠಿ ವಿಭಕ್ತಿ ಸಂಬಂಧ
7 ಸಪ್ತಮಿ ವಿಭಕ್ತಿ ಅಲ್ಲಿ ಒಳ್ ಅಧಿಕರಣ

ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ ಎಂಟು ವಿಧಗಳಿವೆ..

1.     ಪ್ರಥಮವಿಭಕ್ತಿ ಉ

2.     ದ್ವಿತೀಯವಿಭಕ್ತಿ ಅನ್ನು

3.     ತೃತೀಯವಿಭಕ್ತಿ ಇಂದ

4.     ಚತುರ್ಥಿವಿಭಕ್ತಿ ಗೆ, ಇಗೆ

5.     ಪಂಚಮಿವಿಭಕ್ತಿ ದೆಸೆಯಿಂದ

6.     ಷಷ್ಠಿವಿಭಕ್ತಿ ಅ

7.     ಸಪ್ತಮಿವಿಭಕ್ತಿ ಅಲ್ಲಿ

8.     ಸಂಭೋಧನವಿಭಕ್ತಿ ಮ ಏ

ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು

1.     ಪ್ರಥಮ ಕತೃರ್ಥ ಉ

2.     ದ್ವಿತೀಯ ಕರ್ಮಾರ್ಥ ಅನ್ನು

3.     ತೃತೀಯ ಕರಣಾರ್ಥ ಇಂದ

4.     ಚತುರ್ಥೀ ಸಂಪ್ರಧಾನ ಗೆ

5.     ಪಂಚಮಿ ಅಪಧಾನ ದೆಸೆಯಿಂದ

6.     ಷಷ್ಠಿ ಸಂಭಂಧ ಅ

7.     ಅಪ್ತಮಿ ಅಧಿಕರಣ ಅಲ್ಲಿ

ಸಂಬೋಧನ ಅಭಿಮುಖೀ ಏಆಕರಣ ಹಳಗನ್ನಡ ವಿಭಕ್ತಿ ಪ್ರತ್ಯಯಗಳು


ವಿಭಕ್ತಿ ಪ್ರತ್ಯಯಗಳು :

1.      ಪ್ರಥಮಾ ಮ್ ಮ್ ರಾಮಂ

2.      ದ್ವಿತೀಯಾ ಅಮ್ ರಾಮನಂ

3.      ತೃತೀಯ ಇಮ್ ರಾಮನಿಂ

4.      ಚತುರ್ಥೀ ಗೆ ರಾಮಂಗೆ

5.      ಪಂಚಮಿ ಅತ್ತಣಿಂ ರಾಮನತ್ತಣಿಂ

6.      ಷಷ್ಠಿ ಅ ರಾಮನ

7.      ಸಪ್ತಮಿ ಒಳ್ ರಾಮನೊಳ್


ಕ್ರಿಯಾಪದ ಪ್ರಕರಣ :

ಕ್ರಿಯಾಪದ : ” ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ” ಅಥವಾ “ಒಂದು ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ.” ಉದಾ ;

1.      ದೀಪವು ಉರಿಯುತ್ತದೆ.

2.      ಹಸುವು ಹಾಲನ್ನು ಕೊಡುತ್ತದೆ.

3.      ತಾಯಿಯು ಅಡುಗೆಯನ್ನು ಮಾಡುತ್ತಾಳೆ.

4.      ಅಣ್ಣ ಊಟವನ್ನು ಮಾಡುವ್ನು.

5.      ದೇವರು ಒಳ್ಳೆದನ್ನು ಮಾಡಲಿ.

ಮೇಲಿನ ಉದಾ-ಗಳಲ್ಲಿ ಗೆರೆ ಎಳೆದಿರುವ ಪದಗಳೆಲ್ಲವೂ ಕ್ರಿಯೆಯ ಅರ್ಥವನ್ನು ಸೂಚಿಸುವ ಶಬ್ದಗಳಾಗಿರುವುದತಿಂದ ಕ್ತಿಯಾಪದಗಳು ಎನಿಸುತ್ತದೆ..

ಮೇಲಿನ ಶಬ್ದಗಳಲಿ “ಉರಿ ಕೊಡು ಮಾಡು ” ಎಂಬ ಶಬ್ಧ ಕ್ರಿಯೆಯ ಅರ್ಥಕೊಡುವ ಮೂಲ ರೂಪವಾಗಿದೆ..ಧಾತು ಅಥವಾ ಕ್ರಿಯಾ ಪ್ರಕೃತಿ“

ಕ್ರಿಯಾ ಪದದ ಮೂಲ ರೂಪಕ್ಕೆ ಧಾತು / ಕ್ರಿಯಾಪ್ರಕೃತಿ ಎಂದು ಹೆಸರು ”ಅಥವಾ“ಕ್ರಿಯಾರ್ಥವನ್ನು ಕೂಡುವುದಾಗೆಯೂ, ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ / ಧಾತು ಎಂದು ಎಂದು ಹೆಸರು”ಧಾತುಗಳಿಗೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ.

ಉದಾ : ಧಾತು + ಪ್ರತ್ಯಯ + ಕ್ರಿಯಾಪದ ಮಾಡು + ತ್ತಾನೆ + ಮಾಡುತ್ತಾನೆ ಯತ್ನ + ಇಸು + ಯತ್ನಿಸು ಕನ್ನಡ + ಇಸು + ಕನ್ನಡಿಸು ಭಾವ + ಇಸು + ಭಾವಿಸು ರಕ್ಷ + ಇಸು + ರಕ್ಷಿಸು ಓಡು +ತ್ತಾನೆ + ಓಡುತ್ತಾನೆ


ಧಾತುಗಳ ವಿಧಗಳು:

ಧಾತುಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

1.     ಮೂಲಧಾತು (ಸಹಜ) ಗಳು

2.     ಸಾಧಿತ ಧಾತುಗಳು

ಮೂಲ ಧಾತುಗಳು[ಬದಲಾಯಿಸಿ]

“ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು”

ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು, ಹುಟ್ಟು, ಅಂಜು, ಸುತ್ತು, ಬಿತ್ತು , ಹೊಗಳು , ತೆಗಳು , ಎಳೆ , ಸೆಳೆ ತಿಳಿ , ಅರಿ , ಸುರಿ, ಅರಸು, ಸೆಳೆ, ಇತ್ಯಾದಿ

ಮೂಲಧಾತು + ಪ್ರತ್ಯಯ =ಕ್ರಿಯಾಪದ ಮಾಡು + ತ್ತಾನೆ =ಮಾಡುತ್ತಾನೆ ನೋಡು + ಇಸು =ನೋಡಿಸು ತಿನ್ನು +ತ್ತಾನೆ = ತಿನ್ನುತ್ತಾಳೆ

ಸಾಧಿತ ಧಾತುಗಳು[ಬದಲಾಯಿಸಿ]

“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.”ಇವಕ್ಕೆ ಪ್ರತ್ಯಯಾಂತ ಧಾತು ಎಂತಲೂ ಕರೆಯುತ್ತಾರೆ. ಉದಾ : ನಾಮಪ್ರಕೃತಿ + ಪ್ರತ್ಯಯ + ಸಾಧಿತ ಧಾತು ಅಬ್ಬರ + ಇಸು + ಅಬ್ಬರಿಸು ಕಳವಳ + ಇಸು + ಕಳವಳಿಸು ಕನ್ನಡ + ಇಸು + ಕನ್ನಡಿಸು ಚಿತ್ರ + ಇಸು + ಚಿತ್ರಿಸು ಸ್ತುತಿ + ಇಸು + ಸುತ್ತಿಸು ಸಿದ್ದಿ + ಇಸು + ಸಿದ್ದಿಸು ಓಲಗ + ಇಸು + ಓಲಗಿಸು ಮಲಗು + ಇಸು + ಮಲಗಿಸು ಪ್ರೀತಿ +ಇಸು + ಪ್ರೀತಿಸು ರಕ್ಷ + ಇಸು + ರಕ್ಷಿಸು ಧಗಧಗ + ಇಸು + ಧಗಧಗಿಸು ಥಳ ಥಳ + ಇಸು + ಥಳ ಥಳಿಸು

ಭಾವ ಸೂಚಕಗಳಾದ ಸಂಸ್ಕೃತ ಶಬ್ದಗಳು “ಇಸು” ಪ್ರತ್ತಯಯಗಳನ್ನು ಹೊಂದಿ ಸಾಧಿತ ಧಾತುಗಳಾಗುತ್ತವೆ.

ಉದಾ :ಯತ್ತಿಸಯ, ಸ್ತುತಿಸು , ಜಯಿಸು, ಲೇಪಿಸು, ಶೋಕಿಸು, ಭಾವಿಸು , ಇತ್ಯಾದಿ ಎಲ್ಲ ಧಾತುಗಳಿಗೂ ಪ್ರೇರಣಾರ್ಥಕದಲ್ಲಿ ‘ಇಸು’ ಪ್ರತ್ಯಯ ಸೇರುತ್ತದೆ. ಇವಕ್ಕೆ ಪ್ರೇರಣಾರ್ಥಕ ಧಾತುಗಳು ಎಂದು ಹೆಸರು.

ಪ್ರೇರಣೆ ಎಂದು ” ಇನೋಬ್ಬರಿಂದ ಕೆಲಸ ಮಾಡಿಸುವುದು” ಉದಾ :ಮೂಡಿಸು ಕಲಿಸು , ಬರೆಯಿಸು , ನುಡಿಸು ಹೇಳಿಸು…..ಇತ್ಯಾದಿ

ಸಾಧಿತ ಧಾತುಗಳ ವಿಧಗಳು[ಬದಲಾಯಿಸಿ]

ಸಕರ್ಮಕ ಧಾತುಗಳು - ಅರ್ಥಪೂರ್ತಿಗಾಗಿ ಅರ್ಮಪದವನ್ನು ಅಪೇಕ್ಷಿಸುವ ಧಾತುಗಳಿಗೆ ಸಕರ್ಮಕ ಧಾತು ಎಂದು ಹೆಸರು .ಈ ಸಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದ ಏನನ್ನು ಎಂಬ ಪ್ರಶ್ನೆಯು ಉದ್ಬವಿಸುತ್ತದೆ. ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಸೂಚಿಸಲು ವನ್ನು ಉಪಯೋಗಿಸಲಾಗುತ್ತದೆ. ಉದಾ : ಕರ್ತೃಪದ ಪರ್ಮಪದ ಕ್ರಿಯಾಪದ ರಾಮನ್ನು ಮರವನ್ನು ಕಡಿಯುತ್ತಾನೆ ಭೀಮನ್ನು ಬಕಾಸುನನ್ನು ಕೊಂದನು ದೇವರು ಲೋಕವನ್ನು ರಕ್ಷಿಸುವನ್ನು ಶಿಲ್ಪಿಗಳು ಗುಡಿಯನ್ನು ಕಟ್ಟಿದರು ವಿದ್ಯಾರ್ಥಿಗಳು ಪಾಠವನ್ನು ಓದಿದರು ಹುಡುಗರು ಕೆಲಸವನ್ನು ಮಾಡುತ್ತಾರೆ ಅನೇಕರು ನದಿಯನ್ನು ದಾಟಿದರು ಸಾಧುಗಳು ದೇವರನ್ನು ನಂಬುತ್ತಾರೆ ಹುಡುಗಿ ಪಾತ್ರೆಯನ್ನು ತೋಳೆಯುತ್ತಾಳೆ

ಅಕರ್ಮಕ ಧಾತುಗಳು -ಕರ್ಮಪದದ ಅಪೇಕ್ಷೆಯಿಲ್ಲದೇ ಪೂಣಾರ್ಥವನ್ನು ಕೊಡಲು ಸಮ್ಥವಾದ ಧಾತುಗಳನ್ನು ಅಕರ್ಮಕ ಧಾತು ಎಂದುಕರೆಯುತ್ತೇವೆ. ಈ ಅಕರ್ಮಕ ಧಾತುಗಳಲ್ಲಿ ಬರುವ ಕ್ರಿಯಾಪದಕ್ಕೆ ಉದ್ಬವಿಸುವ ಪ್ರಶ್ನೆಗೆ ಉತ್ತರವನ್ನು ಸೂಚಿಸಲು ಕರ್ಮಪದವನ್ನು ಪ್ರಯೋಗ ಮಾಡಲಾಗುವುದಿಲ್ಲ. ಉದಾ : ಕರ್ತೃಪದ ಕ್ರಿಯಾಪದ ಧಾತು ಮಗು ಹುಟ್ಟಿತು ಹುಟ್ಟು ರಾಮನು ಬಂದನು ಬಂದ ಮಳೆ ಬೀಳುತ್ತದೆ ಬೀಳು ಮಗುವು ಅಳುತ್ತಿದೆ ಅಳು ಕೂಸು ಮಲಗಿತು ಮೊಲಗು ರಾಮನು ಓಡಿದನ್ನು ಓಡು ಆಕಾಶ ಹೊಳೆಯುತ್ತಿದೆ ಹೊಳೆ ಅವನು ಬದುಕಿದನು ಬದುಕು ಕಳ್ಳರು ಹೆದರಿದರು ಹೆದರು ಅವರು ಸೇರಿದರು ಸೇರು ಇವಳು ನೆನೆದಳು ನೆನೆ ಹುಡುಗರು ಓದಿದರು ಓದು.


ಕತೃಪದ:

“ಕ್ರಿಯೆಯ ಕೆಲಸವನ್ನು ಯಾರು ಮಾಡಿದರು / ಯಾವುದು ಮಾಡಿತು ಎಂದು ತಿಳಿಸುವ ಪದವನ್ನು ಕರ್ತೃಪದವೆಂದು ಕರೆಯುವರು.”

ಕರ್ಮ ಪದ : ” ಕ್ರಿಯಾ ಪದದ ಅರ್ಥವನ್ನು ಪೂರ್ತಿಗೊಳಿಸುವ ಪದಗಳಿಗೆ ಕರ್ಮಪದಗಳೆಂದು ಹೆಸರು.”

ಕ್ರಿಯಾ ಪದ ; ” ಕೆಲಸವನ್ನು ಹೇಳುವ ಪದವನ್ನು ಕ್ರಿಯಾಪದವೆಂದು ಕರೆಯುವರು.”


ಕ್ರಿಯಾ ರೂಪಗಳು:

ಕ್ರಿಯಾ ರೂಪಗಳಲ್ಲಿ ಮುಖ್ಯವಾಗಿ ಎರಡು ವಿಧಗಳುಂಟು

1.      ಕಾಲರೂಪಗಳು

2.      ಅರ್ಥ ರೂಪಗಳು

ಕಾಲರೂಪಗಳು[ಬದಲಾಯಿಸಿ]

ವರ್ತಮಾನ , ಭೂತ , ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲರೂಪಗಳು ಎನ್ನಲಾಗಿದೆ.ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾರ್ಯರೂಪಗಳಾಗುತ್ತವೆ.

ಕಾಲ ರೂಪಗಳ ವಿಧಗಳು[ಬದಲಾಯಿಸಿ]

ಕಾಲ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು.

1.     ವರ್ತಮಾನ ಕಾಲ.

2.     ಭೂತ ಕಾಲ.

3.     ಭವಿಷ್ಯತ್ ಕಾಲ.

ವರ್ತಮಾನ ಕಾಲದ ಕ್ರಿಯಾರೂಪ “ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.” ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು. ಉದಾ : ಧಾತು + ಕಾ.ಸೂ + ಅಖ್ಯಾತ =ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ. ವಚನ ಬ. ವಚನಹೊಗು +ಉತ್ತ + ಆನೆ =ಹೋಗುತ್ತಾನೆ – ತ್ತಾರೆ ಹೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ

ಭೂತ ಕಾಲ ಕ್ರಿಯಾರೂಪ ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾಲ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು” ಉದಾ : ತಿಳಿ – ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ ತಿಳಿ + ದ + ಅನು = ತಿಳಿದನು ತಿಳಿದರುತಿಳಿ + ದ + ಅಳು = ತಿಳಿದಳು ತಿಳಿದರು ತಿಳಿ + ದ + ಇತು = ತಿಳಿಯಿತು ತಿಳಿದವುತಿಳಿ + ದ + ಎ = ತಿಳಿದೆ ತಿಳಿದಿರಿ ತಿಳಿ + ದ + ಎನು = ತಿಳಿದೆನು ತಿಳಿದೆವು

ಭವಿಷ್ಯತ್ ಕಾಲದ ಕ್ರಿಯಾರೂಪ ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.

ಉದಾ : ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ.ವಚನ ಬಹುವಚನ ಕೊಡು + ವ + ಅನು = ಕೊಡುವನು ಕೊಡುವರು ಕೊಟು + ವ + ಅಳು = ಕೊಡುವಳು ಕೊಡುವರು ಕೊಡು + ವ + ಅದು = ಕೊಡುವುದು ಕಡುವುದು ಕೊಡು + ವ + ಎ = ಕೊಡುವೆ ಕೊಡುವಿರಿ ಕೊಡು + ವ + ಎನು = ಕೊಡುವೆನು ಕೊಡುವೆವು.

ಅರ್ಥರೂಪಗಳು[ಬದಲಾಯಿಸಿ]

ಕ್ರಿಯಾಪದಗಳು ಕಾಲ ರೂಪಗಳನ್ನು ಹೊಂದುವುದಲ್ಲದೆ ಅರ್ಥ ರೂಪಗಳನ್ನು ಹೊಂದಿರುತ್ತವೆ .ಅರ್ಥ ರೂಪಗಳಲ್ಲಿ ಧಾತುವಿಗೆ ಅಖ್ಯಾತ ಪ್ರತ್ಯಯ ಗಳು ನೇರವಾಗಿ ಸೇರಿಕೊಳ್ಳುತ್ತವೆ .”“ಅರ್ಥರೂಪಗಳು, ಆಜ್ಞೆ, ಹಾರೈಕೆ , ನಿಷೇಧ, ಸಂಶಯ ಮುಂತಾದ ಅರ್ಥಗಳನ್ನು ಸೂಚಿಸುತ್ತವೆ.”

ಅರ್ಥರೂಪಗಳ ವಿಧಗಳು[ಬದಲಾಯಿಸಿ]

ಅರ್ಥ ರೂಪಗಳಲ್ಲಿ ಮುಖ್ಯವಾಗಿ ಮೂರು ವಿಧಗಳುಂಟು

1.     ವಿದ್ಯರ್ಥಕ ರೂಪ

2.     ನಿಷೇಧಾರ್ಥಕ ರೂಪ

3.     ಸಂಭಾವನಾರ್ಥಕ ರೂಪ

1.ವಿಧ್ಯರ್ಥಕ ರೂಪ ವಿಧಿ ಎಂದರೆ ಆಜ್ಞೆ, ಆಶೇರ್ವಾದ , ಅಪ್ಪಣೆ, ಹಾರೈಕೆ, ಮುಂತಾದ ಅರ್ಥಗಳನ್ನು ಸೂಚಿಸಲು ಧಾತುವಿಗೆ “ಅಲಿ” “ಓಣ ” ಎಂಬ ಅಖ್ಯಾತ ಪ್ರತ್ಯಯಗಳು ಸೇರಿ.ವಿಧ್ಯರ್ಥಕ ರೂಪಗಳಾಗುತ್ತವೆ.”

ಉದಾ : ಧಾತು + ಅಖ್ಯಾತ ಪ್ರತ್ಯಯ = ವಿಧ್ಯರ್ಥಕ ಕ್ರಿಯಾ ಹೋಗು + ಅಲಿ = ಹೋಗಲಿಬರೆ + ಇರಿ = ಬರೆಯಿರಿ ಹೋಗು + ಓಣ = ಹೋಗೋಣ ಬರೆ + ಓಣ = ಬರೆಯೋಣ

ಉದಾ :

1.     ಕಣ್ಣು ಕಾಣದ ಮುದುಕನಿಗೆ ಭಕ್ಷೆ ನೀಡಿ ತಾಯಿ – ಕೋರಿಕೆ

2.     ಮಳೆಬೆಳೆಗಳು ಚೆನ್ನಾಗಿ ನಡೆಯಲಿ.

3.     ದೇವರು ನಿನಗರ ಒಳ್ಳೆಯದನ್ನು ಮಾಡಲಿ.

4.     ಅವರು ಪಾಠವನ್ನು ಓದಲಿ – ಅಜ್ಞೆ.

5.     ಅವನು ಹಾಳಾಗಿ ಹೋಗಲಿ – ಅಪ್ಪಣೆ.

6.     ಅವನಿಗೆ ಜಯವಾಗಲಿ – ಹಾರೈಕೆ.

2.ನಿಷೇಧಾರ್ಥಕ ರೂಪ ಕ್ರಿಯೆಯು ನಡೆಯಲಿಲ್ಲ / ಕೆಲಸ ನಡೆಯುವುದಿಲ್ಲ ಎಂಬರ್ಥ ತೋರುವಾಗ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ನಿಷೇಧಾರ್ಥಕ ಕ್ರಿಯಾಪದಗಳೆನಿಸುವವು.”ಈ ರೂಪಗಳಲ್ಲಿ ಧಾತುವಿಗೆ “ಅಳು ” “ಅನು ” “ಅದು” ಎ ಅವು ಎಂಬ ಅಖ್ಯಾತ ಪ್ರತ್ಯಯಗಳೆಂದು ಸೇರಿ ನಿಷೇದಾರ್ಥಕ ರೂಪಗಳಾಗುತ್ತವೆ.

ಉದಾ : ಧಾತು + ಅ. ಪ್ರತ್ಯಯ + ನಿಷೇದಾರ್ಥಕ ಕ್ರಿ ರೂಪ ಹೋಗು + ಅಳು + ಹೋಗಳು ಬರೆ + ಅನು + ಬರೆಯನು ಮಾಡು + ಎವು + ಮಾಡೆವು ಕುಡಿ + ಅಳು + ಕುಡಿಯಳು ಮಾಡು + ಅದು + ಮಾಡದು

3.ಸಂಭಾವನಾರ್ಥಕ ಕ್ರಿಯಾಪದ ಸಂಭಾವನಾರ್ಥ ಎಂದರೆ ” ಸಮಶಯ / ಊಹೆ ಎಂದರ್ಥ ಕ್ರಿಯೆಯು ನಡೆಯುವಿಕೆಯಲ್ಲಿ ಸಂಶಯವನ್ನು ಸೂಚಿಸುವ / ನಡೆಯಬಹುದೆಂಬ ಊಹೆಯನ್ನು ಸಂಭಾವಿಸುವ ಅರ್ಥದಲ್ಲಿಈ ರೂಪಗಳು ಬಳಕೆಯಾಗುತ್ತವೆ. ”ಈ ರೂಪಗಳಲ್ಲಿ ಧಾತುವಿಗೆ “ಆನು” “ಆಳು” “ಏನು”ಈತು , ಈಯೆ , ಎಂಬ ಅಖ್ಯಾತ ಪ್ರತ್ಯಯಗಳು ಸೇರಿ ಸಂಭಾವನಾರ್ಥಕ ರೂಪಗಳಾಗುತ್ತವೆ.

ಉದಾ : ಧಾತು +ಅಖ್ಯಾತ ಪ್ರ = ಸಂಭಾವನಾರ್ಥಕ ರೂಪ ಮಾಡು +ಆನು = ಮಾಡಾನು ಬರೆ +ಆನು = ಬರೆದಾನು ಕುಡಿ +ಏನು = ಕುಡಿದೇನು ಬರೆ +ಏವು = ಬರೆದೇವು ಕುಡಿ +ಏವು = ಕುಡಿದೇವು ಮಾಡು +ಈತು = ಮಾಡೀತು ತಿಳಿ +ಆನು = ತಿಳಿದಾನು……ಇತ್ಯಾದಿ

ಅಖ್ಯಾತ ಪ್ರತ್ಯಯಗಳು ಪುರುಷ , ವಚನ , ಲಿಂಗಗಳನ್ನು ಸೂಚಿಸುವುದಕ್ಕಾಗಿ ಧಾತುವಿಗೆ ಸೇರುವ ಪ್ರತ್ಯಯಗಳಿಗೆ ಅಖ್ಯಾತ ಪ್ರತ್ಯಯಗಳೆಂದು ಹೆಸರು .”

ಕ್ರಿಯಾ ಪದದ ರೂಪಗಳು[ಬದಲಾಯಿಸಿ]

ರೂಪ ಹಾಗೂ ಕೆಲಸಕ್ಕೆ ಅನುಗುಣವಾಗಿ ಕ್ರಿಯಾಪದಗಳು ಬಳಕೆಯಾಗುತ್ತವೆ.ಅವುಗಳು ಈ ಕೆಳಕಂಡಂತಿವೆ.

1.     ಪೂರ್ಣ ಕ್ರಿಯಾಪದಗಳು.

2.     ಸಾಪೇಕ್ಷ ಕ್ರಿಯಾಪದಗಳು.

೩ಸಂಯುಕ್ತ ಕ್ರಿಯಾಪದಗಳು.

ಪೂರ್ಣಕ್ರಿಯಾಪದಗಳು[ಬದಲಾಯಿಸಿ]

ಕಾಲ, ರೂಪ , ಅರ್ಥಗಳನ್ನು ಹೊಂದಿರುವ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ ಇಂತಹ ಕ್ರಿಯಾ ಪದಗಳಿಗೆ ಪೂರ್ಣಕ್ರಿಯಾಪದ ಎಂದು ಹೆಸರು .” ಉದಾ : ಪದ್ಮಾವತಿಯು ತಿಂಡಿಯನ್ನು ತಿಂದಳು.

ಸಾಪೇಕ್ಷ ಕ್ರಿಯಾ ಪದಗಳು[ಬದಲಾಯಿಸಿ]

ತಮ್ಮ ಅರ್ಥವನ್ನು ಮುಗಿಸುವುದಕ್ಕೆ ಬೇರೊಂದು ಕ್ರಿಯಾ ಪದಗಳು ಎಂದು ಹೆಸರು .ಉದಾ : ಕನಕದಾಸರು ದೇವರ ನಾಮವನ್ನು ಹಾಡುತ್ತಾ ಭಿಕ್ಷೆ ಬೀಡುತ್ತಾರೆ.”

ಸಂಯುಕ್ತ ಪದಗಳು[ಬದಲಾಯಿಸಿ]

ಎರಡು / ಹಲವು ಧಾತುಗಳ ಬೇರೆ ಬೇರೆ ಕ್ರಿಯಾ ರೂಪಗಳು ಸೇರಿ ಆಗುವ ಕ್ರಿಯಾಪದಕ್ಕೆ ” ಸಂಯುಕ್ತ ಕ್ರಿಯಾಪದ” ಎಂದು ಹೆಸರು .


ಕರ್ತರಿ ಪ್ರಯೋಗ :

ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ .”

ಉದಾ : ಕರ್ತೃಪದ ಕರ್ಮಪದ ಕ್ರಿಯಾಪದ

ರಾಮನು ರಾವಣನನ್ನು ಕೊಂದನು

ಈ ಉದಾ ಯಲ್ಲಿ ” ಕೊಂದನು ” ಎಂಬ ಕ್ರಿಯಾಪದವು ” ರಾಮನು” ಎಂಬ ಕರ್ತೃ ಪದವನ್ನು ಅನುಸರಿಸಿದೆ. ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ.

ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡದ್ದು.ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.ಕ್ರಿಯಾ ಪದವು ಕ್ರಿಯೆಯನ್ನು ಸೂಚಿಸುತ್ತದೆ.

ಉದಾ : 1. ರಾಮನು ರಾವಣನನ್ನು ಕೊಂದನು

2. ನಾನು ಕವಿತೆಯನ್ನು ಬರೆಯುತ್ತೇನೆ.

3. ಸೀತೆಯು ಹಣ್ಣನ್ನು ತಿಂದಳು

4. ಮಳೆಯು ಇಳೆಯನ್ನು ತಣಿಸಿತು.

5. ರಾಮನು ಸೇತುವೆಯನ್ನು ಕಟ್ಟಿದನು.

6. ಭೀಮನು ಬಕಾಸುರನನ್ನು ಕೊಂದನು.

7. ಅಣ್ಣನು ನನ್ನನ್ನು ಕೊಂದನು .

8. ಮಕ್ಕಳು ಪುಸ್ತಕವನ್ನು ಓದಿದರು .

9. ಜನರು ಜಾತ್ರೆಯನ್ನು ಕಂಡರು .


ಕರ್ಮಣಿ ಪ್ರಯೋಗ:

ಕರ್ಮಪದವನ್ನು ಅನುಸರಿಸಿ ಕ್ರಿಯಾಪದ ಪ್ರಯೋಗವಾಗಿರುವುದಕ್ಕೆ ಕರ್ಮಣಿ ಪ್ರಯೋಗ ಎಂದು ಹೆಸರು”

ಉದಾ: ಕರ್ಮಪದ ಕರ್ತೃಪದ ಕ್ರಿಯಾಪದ ರಾವಣನು ರಾಮನಿಂದ ಕೊಲ್ಲಲ್ಪಟ್ಟನು

ಈ ಉದಾಹರಣೆಯಲ್ಲಿ“ರಾವಣನು” ಎಂಬ ಕರ್ಮಪದವು ಪ್ರಧಾನವಾಗಿದೆ. ಹಾಗೂ ಪ್ರಥಮ ವಿಭಕ್ತಿಯಿಂದ ಕೂಡಿದೆ.ರಾಮನಿಂದ ಎಂಬ ಕರ್ತೃ ಪದವು ಕರ್ತೃ ಪದವು ತೃತೀಯ ವಿಭಕ್ತಿಯಿಮದ ಕೂಡಿದೆ.


ಕರ್ಮಣಿ ಪ್ರಯೋಗ: ಲಕ್ಷಣಗಳು:

1.      ಕರ್ತರಿ ಪ್ರಯೋಗದಲ್ಲಿ ಕರ್ತೃಪದವು ವಿಭಕ್ತಿಯನ್ನು ಅಂತ್ಯವಾಗಿ ಹೊಂದಿರುತ್ತದೆ.

2.      ಕರ್ತರಿ ಪ್ರಯೋಗದಲ್ಲಿ ಕರ್ಮವಾಗಿದ್ದ ಪದವು ಕರ್ಮವಾಗಿದ್ದ ಪದವು ಕರ್ಮಣಿ ಪ್ರಯೋಗದಲ್ಲಿ ಪ್ರಥಮ ವಿಭಕ್ತಿಯನ್ನು ಅಂತ್ಯವಾಗಿ ಉಳ್ಳ ಕರ್ತೃ ಸ್ಥಾನವನ್ನು ಪಡೆಯುತ್ತದೆ.

3.      ಕರ್ತೃ ಪದವು ಕರ್ಮಣಿ ಪ್ರಯೋಗದಲ್ಲಿ ತ್ರತಿಯಾ ವಿಭಕ್ತಿಯಿಂದ ಕೂಡಿದ್ದು ಮಧ್ಯದಲ್ಲಿ ಬಂದಿರುತ್ತದೆ.

4.      ಕ್ರಿಯಾಪದವು ಅಂತ್ಯದಲ್ಲಿ ಬಂದು ಇದೂ ಧಾತುವಿಗೂ ಅಖ್ಯಾತ ಪ್ರತ್ಯಯಕ್ಕೂ ನದುವೆ “ಅಲ್ಪದು” ಎಮಬುದು ಸೇರುತ್ತದೆ.

5.      ಕ್ರೀಯಾಪದವು ಲಿಂಗ, ವಚನ, ಪುರುಷಗಳನ್ನು, ಅನುಸರಿಸುತ್ತದೆ.

ಉದಾ:

·        ರಾವಣನು ರಾಮನಿಂದ ಕೊಲ್ಲಲ್ಪಟ್ಟನು.

·        ಕವಿತೆಯು ನನ್ನಿಂದ ಬರೆಯಲ್ಪಟ್ಟಿತ್ತು.,

·        ಹಣ್ಣು ಸೀತೆಯಿಂದ ತಿನ್ನಲ್ಪಟ್ಟಿತ್ತು.

·        ಇಳೆಯು ಮಳೆಯಿಂದ ತಣಿಯಲ್ಪಟ್ಟಿತ್ತು.

·        ಸೆತುವೆಯು ರಾಮನಿಂದ ಕಟ್ಟಲ್ಪಟ್ಟಿತ್ತು.

·        ಬಕಾಸುರನು ಭೀಮನಿಂದ ಕೊಲ್ಲಲ್ಪಟ್ಟಿತ್ತು.

·        ನಾನು ಅಣ್ಣನಿಂದ ಕರೆಯಲ್ಪಟ್ಟನು.

·        ಪುಸ್ತಕವು ಮಕ್ಕಳಿಂದ ಓದಲ್ಪಟ್ಟಿತು.

·        ಜಾತ್ರೆಯು ಜನರಿಂದ ಮಾಡಲ್ಪಟ್ಟಿತ್ತು.


ಕಾಲ ಪಲ್ಲಟ :

“ಒಂದೂ ಕಾಲದ ಕ್ರಿಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೂಂದು ಕಾಲದ ರೂಪಗಳನ್ನು ಬಳಸುತ್ತೇವೆ. ಈ ರೀತೀಯ ಬದಲಾವಣೆಯನ್ನು ಕಾಲ ಪಲ್ಲಟ ಅಥವ ಕಾಲ ಬದಲಾವಣೆ ಎನ್ನುವರು.

ಉದಾ;ನಾನು ಮುಂದಿನ ವರ್ಷ ಮೈಸೂರು ದಸರೆಗೆ ಹೋಗುತ್ತೇನೆ.

ಮೇಲಿನ ಉದಾ: “ಹೋಗುತ್ತೇನೆ” ಎಂಬ ಕ್ರಿಯಾಪದವೇ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಭವಿಷ್ಯತ್ ಕಾಲದ “ಹೋಗುವೆನು”ಎಂದು ಪ್ರಯೋಗವಾಗುವ ಬದಲು “ಹೋಗುತ್ತೇನೆ” ಎಂಬ ವರ್ತಮಾನ ಕಾಲದಲ್ಲಿ ಪ್ರಯೋಗವಾಗಿದೆ.ಅದುದರಿಮದ ಇದು ಕಾಲ ಪಲ್ಲಟವಾಗಿದೆ.

ಉದಾ:

1.      ನಿನ್ನೆ ನಾನು ದೇವರ ದರ್ಶನಕ್ಕೆ ಹೋಗುವೆನು.ಮೇಲಿನ ಉದಾಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗುವ ಬದಲು “ಹೋಗುವೆನು” ಎಂದು ಪ್ರಯೋಗವಾಗಿ ಕಾಲ ಪಲ್ಲಟವಾಗಿದೆ.

ಉದಾ: ಈ ರಸ್ತೆ ಹಾಸನಕ್ಕೆ ಹೋಗುತ್ತದೆ, ಈ ರಸ್ತೆ ಹಾಸನಕ್ಕೆ ಹೋಗುವುದು

1.      ಪರೀಕ್ಷೆಯ ಫಲಿತಾಂಶಗಳನ್ನು ಮುಂದಿನ ತಿಂಗಳು 22 ನೆಯ ತಾರೀಖಿನ ವೇಳೆಗೆ ಪ್ರಕಟಿಸುವರು.

ಪರೀಕ್ಷೇಯ ಫಲಿತಾಂಶಗಳನ್ನು………… ಪ್ರಕಟಿಸುತ್ತಾರೆ.


ಕನ್ನಡ ಛಂದಸ್ಸುಗಳು :

ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ.

ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.

ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.


ಛಂದಸ್ಸಿನ ವಿಭಾಗಗಳು :

ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ.

·        ಪ್ರಾಸ

·        ಯತಿ

·        ಗಣ


ಪ್ರಾಸ:

ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.

ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.

ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.


ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.


ಯತಿ :

ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.


ಗಣ :

ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.

ಮಾತ್ರಾಗಣ[ಬದಲಾಯಿಸಿ]

ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.

ಮಾತ್ರೆ[ಬದಲಾಯಿಸಿ]

ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.

ಲಘು[ಬದಲಾಯಿಸಿ]

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.

ಗುರು[ಬದಲಾಯಿಸಿ]

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.

ಪ್ರಸ್ತಾರ[ಬದಲಾಯಿಸಿ]

ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.

ಅಕ್ಷರವು ಗುರು ಎನಿಸುವ ಲಕ್ಷಣಗಳು[ಬದಲಾಯಿಸಿ]

ಲಕ್ಷಣ ಉದಾಹರಣೆ
ದೀರ್ಘಾಕ್ಷರ _ U

ಶಾಲೆ

ಒತ್ತಕ್ಷರದ ಹಿಂದಿನ ಅಕ್ಷರ _ U U U

ಒ ತ್ತಿ ನ ಣೆ

ಅನುಸ್ವಾರದಿಂದ ಕೂಡಿರುವ ಅಕ್ಷರ _   U  U

ಬಂ ದ ನು

ವಿಸರ್ಗದಿಂದ ಕೂಡಿರುವ ಅಕ್ಷರ _  U

ದುಃಖ

ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ U U   _

ಮನದೊಳ್

ಸ್ವರವಿರುವ ಅಕ್ಷರ _   U   U

ಕೈ ಮು ಗಿ

ಸ್ವರವಿರುವ ಅಕ್ಷರ _    U

ಮೌ ನ

ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ

ಅಕ್ಷರವು ಲಘು ಎನಿಸುವ ಲಕ್ಷಣಗಳು[ಬದಲಾಯಿಸಿ]

ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.

ಮಾತ್ರಾಗಣ ಆಧಾರಿತ ಛಂದಸ್ಸುಗಳು[ಬದಲಾಯಿಸಿ]

1.     ಕಂದ ಪದ್ಯ

2.     ಷಟ್ಪದಿ

3.     ರಗಳೆ

4.     ಕಾವ್ಯ

ಅಕ್ಷರಗಣ[ಬದಲಾಯಿಸಿ]

ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ.

ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.

·        ಯಗಣ

·        ಮಗಣ

·        ತಗಣ

·        ರಗಣ

·        ಜಗಣ

·        ಭಗಣ

·        ನಗಣ

·        ಸಗಣ

ಯಮಾತಾರಾಜಭಾನ ಸಲಗಂ ಸೂತ್ರ[ಬದಲಾಯಿಸಿ]

ಅಕ್ಷರಗಣಗಳನ್ನು ಯಮಾತಾರಾಜಭಾನ ಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.

ಗಣ ಅಕ್ಷರಗಳು ಪ್ರಸ್ತಾರ
ಗಣ ಯಮಾತಾ U   _   _
ಗಣ ಮಾತಾರಾ _   _   _
ಗಣ ತಾರಾಜ _   _   U
ಗಣ ರಾಜಭಾ _   U   _
ಗಣ ಜಭಾನ U   _   U
ಗಣ ಭಾನಸ _   U   U
ಗಣ ನಸಲ U   U   U
ಗಣ ಸಲಗಂ U   U   _

ಗಣಗಳನ್ನು ಗುರುತಿಸುವ ಪದ್ಯ[ಬದಲಾಯಿಸಿ]

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.

ಗುರು ಲಘು ಮೂರಿರೆ - - ಗಣ

ಗುರು ಲಘು ಮೊದಲಲ್ಲಿ ಬರಲು - - ಗಣಮೆಂಬರ್

ಗುರು ಲಘು ನಡುವಿರೆ - - ಗಣ

ಗುರು ಲಘು ಕೊನೆಯಲ್ಲಿ ಬರಲು - - ಗಣಮಕ್ಕುಂ

ವೃತ್ತಗಳು[ಬದಲಾಯಿಸಿ]

ಅಕ್ಷರಗಣದ ಛಂದಸ್ಸನ್ನು ವೃತ್ತ ಎಂದು ಕರೆಯಲಾಗುತ್ತದೆ.ಇದರಲ್ಲಿ ಪ್ರತಿ ಪದ್ಯವೂ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ.

ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಅವನ್ನು ಖ್ಯಾತಕರ್ಣಾಟಕ ವೃತ್ತಗಳೆಂದು ಕರೆಯುತ್ತಾರೆ. ಅವು

1.     ಉತ್ಪಲ ಮಾಲಾ ವೃತ್ತ

2.     ಚಂಪಕಮಾಲಾವೃತ್ತ

3.     ಶಾರ್ದೂಲವಿಕ್ರೀಡಿತ ವೃತ್ತ

4.     ಮತ್ತೇಭವಿಕ್ರೀಡಿತ ವೃತ್ತ

5.     ಸ್ರಗ್ಧರಾ ವೃತ್ತ

6.     ಮಹಾಸ್ರಗ್ಧರಾ ವೃತ್ತ

ಅಂಶಗಣ[ಬದಲಾಯಿಸಿ]

ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ.ಇದನ್ನು ನಾಗವರ್ಮನು "ಕರ್ಣಾಟಕ ವಿಷಯಜಾತಿ" ಎಂದೂ ಹಾಗೇ ಜಯಕೀರ್ತಿಯು "ಕರ್ಣಾಟಕವಿಷಯಭಾಷಾಜಾತಿ" ಎಂದೂ ಕರೆದಿದ್ದಾರೆ.

ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ.

ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.

ಉದಾ:- "ಕವಿತೆ" ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. 'ಕವಿ' ಎಂಬುದು ಒಂದು ಅಂಶವಾದರೆ 'ತೆ' ಎಂಬುದು ಇನ್ನೊಂದು ಅಂಶವಾಗುತ್ತದೆ,

ಇದರಲ್ಲಿ ಮೂರು ವಿಧ. ಅವನ್ನು ಬ್ರಹ್ಮಗಣ,ವಿಷ್ಣುಗಣ,ರುದ್ರಗಣ ಎಂದು ಕರೆಯುವರು.

(ವಿ.ಸೂ- ಗು-ಗುರು, ಲ-ಲಘು,ಅಲ್ಪವಿರಾಮ(,)ದಿಂದ ಅಂಶಗಳನ್ನು ಬೇರ್ಪಡಿಸಿದೆ.) ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆ. ಅವು ಈ ನಾಲ್ಕು ರೀತಿಯಲ್ಲಿಯೂ ಇರಬಹುದು

೧. ಗು,ಗು

೨. ಗು,ಲ

೩,ಲಲ,ಗು

೪.ಲಲ,ಲ

ಹಾಗೆಯೇ ವಿಷ್ಣುಗಣದಲ್ಲಿ ಮೂರು ಅಂಶಗಳು ಇರುತ್ತವೆ. ಅವುಗಳ ವಿಧಗಳು ಹೀಗಿವೆ-

೧.ಗು,ಲ,ಲ

೨.ಗು,ಗು,ಲ

೩.ಗು,ಗು,ಗು

೪.ಗು,ಲ,ಗು

೫.ಲಲ,ಗು,ಗು

೬.ಲಲ,ಗು,ಲ

೭.ಲಲ,ಲ,ಗು

೮.ಲಲ,ಲ,ಲ

ಹಾಗೆಯೇ ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆ, ಅವುಗಳ ವಿಧಗಳನ್ನೂ ಹೀಗೆ ತೋರಿಸಬಹುದು

೧.ಗು,ಲ,ಲ,ಲ

೨.ಗು,ಗು,ಲ,ಲ

೩.ಗು,ಗು,ಗು,ಲ

೪.ಗು,ಗು,ಗು,ಗು

೬,ಗು,ಲ,ಗು,ಲ

೭,ಗು,ಲ,ಲ,ಗು

೮. ಗು,ಗು,ಲ,ಗು

೯.ಗು,ಲ,ಗು,ಗು,ಇತ್ಯಾದಿ, ಹಾಗೆಯೇ ಮೊದಲ ಗುರುವಿನ ಬದಲು ಎರಡು ಲಘುಗಳನ್ನು ಇಟ್ಟುಕೊಂಡು ಕೂಡ ಗಣಗಳನ್ನು ರಚಿಸಬಹುದು. ಸಾಂಗತ್ಯ, ತ್ರಿಪದಿ, ಅಕ್ಕರ, ಸೀಸಪದ್ಯ ,ಅಕ್ಕರಿಕೆ, ಏಳೆ, ಗೀತಿಕೆ, ಅಂಶಷಟ್ಪದಿ, ಚೌಪದಿ, ಛಂದೋವತಂಸ, ಮದನವತಿ, ಪಿರಿಯಕ್ಕರ,ಇತ್ಯಾದಿಗಳು ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು.

ಪದ್ಯಪಾನ ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದ


ಕನ್ನಡ ಛಂಧೊಗ್ರಂಥಗಳ ಪರಿಚಯ:

1.      ಕವಿರಾಜ ಮಾರ್ಗ:

ನೃಪತುಂಗನ ಆಸ್ಥಾನದಲ್ಲಿದ್ದ “ಶ್ರೀವಿಜಯ’ನಿಂದ ರಚಿಸಲ್ಪಟ್ಟಿತು.ಇದರ ಕಾಲ ಕ್ರಿ.ಶ. 850 ಇದು ಅಲಂಕಾರಿಕ ಗ್ರಂಥವಾದರೂ ವ್ಯಾಕರಣ ಮತ್ತು ಛಂದಸ್ಸುಗಳ ಕೆಲ ಅಂಶಗಳನ್ನು ಪ್ರಸ್ತಾಪಿಸಿದೆ.ಇಲ್ಲಿ ಯತಿ ವಿಚಾರ, ಛಂದೋಭಂಗ, ಗುರು ಲಘು ದೋಷಗಳು ಪ್ರಾಸ ವಿಚಾರ ಮೊದಲಾದವನ್ನು ತಿಳಿಸುತ್ತದೆ.

1.      ಗುಣಗಾಂಕಿಯಂ :

ಜೈನ ಲಾಕ್ಷಣಿಕನಾದ “ಅಮೃತ ಸಾಗರ”ಎಂಬುವನಿಂದ ರಚಿತವಾದ “ಯಾಪ್ಪರುಂಗ ಲಕ್ಕಾರಿಹೈ” ಎಂಬ ಛಂದೋಗ್ರಂಥವೊಂದು ತಮಿಳು ಭಾಷೆಯಲ್ಲಿದೆ.ಇದು 11ನೇ ಶತಮಾನಕ್ಕಿಂತ ಹಿಂದೆ ರಚಿತವಾಗಿರಬಹುದೆಂದು ತಿಳಿಯಲಾಗಿದೆ. ಇದಕ್ಕೆ ಚೈನವ್ಯಾಖ್ಯಾತೃವದ “ಗುಣಸಾಗರನೆಂಬುವನು” ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ.


ಅಲಂಕಾರ ಶಾಸ್ತ್ರ:

ಕನ್ನಡ ಅಲಂಕಾರಗಳು:


ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ.

ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ‍್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದ-ಇತ್ಯಾದಿ ಗ್ರಂಥ ಬರೆದಿದ್ದಾರೆ.


ನವರಸಗಳು :

ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಒಂಭತ್ತು ರೀತಿಯ ಭಾವನೆಯ ಅಭಿವ್ಯಕ್ತಿಗಳನ್ನು ಒಟ್ಟಾಗಿ ನವರಸ ಎಂದು ಕರೆಯುತ್ತಾರೆ. ಇದನ್ನು ಮೊದಲು ಭರತಮುನಿ ತನ್ನ ನಾಟ್ಯಶಾಸ್ತ್ರ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾನೆ. ಆಗವನು ಹೇಳಿದ್ದು ಎಂಟು ರಸಗಳ ಬಗ್ಗೆ. ಆನಂತರ ಬಂದ ಭಾಮಹನೆಂಬ ಲಾಕ್ಷಣಿಕ ಒಂಭತ್ತನೆ ರಸದ ಬಗ್ಗೆ ಹೇಳಿದ್ದಾನೆ. ನವರಸಗಳಲ್ಲಿ ಸ್ಥಾಯಿಭಾವಗಳು ಬಹಳ ಮುಖ್ಯ. ಸ್ಥಾಯಿಭಾವಗಳೆಂದರೆ ರಸಗಳ ಉತ್ಪತ್ತಿಗೆ ಕಾರಣೀಭೂತವಾಗಿ ಇರುವಂತಹವು.

ಒಂಭತ್ತು ನವರಸಗಳು : :

ಅಭಿನವ ಗುಪ್ತನ ಪ್ರಕಾರ ರಸಗಳು 9 ಪ್ರಕಾರಗಳು

ರಸ ಸ್ಥಾಯಿ ಭಾವ ಬಣ್ಣ ಅಧಿ ದೇವತೆ
1 ಶೃಂಗಾರ ರತಿ ನೀಲಿ ವಿಷ್ಣು
2 ಹಾಸ್ಯ ಹಾಸ ಬಿಳಿ ಗಣಪತಿ
3 ರೌದ್ರ ಕ್ರೋಧ ರಕ್ತ ಈಶ್ವರ
4 ವೀರ ಉತ್ಸಾಹ ಹೇಮ
5 ಕರುಣಾ ಶೋಕ ಕಪೋತ ಯಮ
6 ಭೀಭತ್ಸ ಜಿಗುಪ್ಸೆ ನೀಲಿ ಮಹಾಕಾಲ
7 ಅದ್ಭುತ ವಿಸ್ಮಯ ಹಳದಿ
8 ಭಯಾನಕ ಭಯ ಕಪ್ಪು ಕಾಲದೇವತೆ
9 ಶಾಂತ ಶಮ

1.      ಶೃಂಗಾರಕ್ಕೆ ಸ್ಥಾಯಿಭಾವ ರತಿ

2.      ರುದ್ರದ ಸ್ಥಾಯಿಭಾವ ಕ್ರೋಧ

3.      ವೀರದ ಸ್ಥಾಯಿಭಾವ ಉತ್ಸಾಹ

4.      ಹಾಸ್ಯದ ಸ್ಥಾಯಿಭಾವ ಹಾಸ

5.      ಕರುಣೆಯ ಸ್ಥಾಯಿಭಾವ ಶೋಕ

6.      ಭೀಭತ್ಸದ ಸ್ಥಾಯಿಭಾವ ಜಿಗುಪ್ಸೆ

7.      ಅದ್ಭುತದ ಸ್ಥಾಯಿಭಾವ ವಿಸ್ಮಯ

8.      ಭಯಾನಕದ ಸ್ಥಾಯಿಭಾವ ಭಯ

9.      ಶಾಂತದ ಸ್ಥಾಯಿಭಾವ ಶಮ

ಅಲಂಕಾರಗಳು ಆರಂಭದಲ್ಲ ಭರತನು ಗುರಿತಿಸಿದ ಅಲಂಕಾರಗಳು ನಾಲ್ಕು (4)

1. ಉಪಮಾ ಅಲಂಕಾರ

2. ರೂಪಕ ಅಲಂಕಾರ

3. ದೀಪಕ ಅಲಂಕಾರ

4. ಯಮಕ ಅಲಂಕಾರ

ನಂತರ ಇವುಗಳ ಸಂಖ್ಯ ಬೆಳೆದರೂ ಸಹ ಮುಖ್ಯವಾಗಿ ಗುರಿತಿಸಿಕ್ಕೊಂಡಿದ್ದು ಮಾತ್ರ ಎರಡೆ ಮುಖ್ಯವಾಗಿ ಅಲಂಕಾರಗಳು 2 ವಿಧಗಳು

1. ಶಬ್ದಾಲಂಕಾರಗಳು : ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು.

2 ಅರ್ಥಾಲಂಕಾರಗಳು : ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು


1 ಶಬ್ದಾಲಂಕಾರಗಳು

ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ ಸೌಂದರ್ಯವನ್ನು ಉಂಟುಮಾಡುವುದು

ಉದಾ:

·        ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ

ಹಳ್ಳದ ನೀರು ತರುತಾಳ ನನ್ನ ಗೆಳತಿ

ಹಳ್ಳಿ ಗೌಡರ ಕಿರಿಮಗಳು

·        ಮಾರಯರು ಬೈದಾರು ಬಾರವೋ ಕಣ್ಣೀರು

ಮಾರಯರ ತಮ್ಮ ಮೈದುನ ಬೈದಾರ

ಮಾಡಿಲ್ಲದ ಮಳೆ ಸುರಿದಾಂಗ

ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ

1.ಅನುಪ್ರಾಸ

2.ಯಮಕ

3.ಚಿತ್ರಕವಿತ್ವ

1.ಅನುಪ್ರಾಸ:[ಬದಲಾಯಿಸಿ]

ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ

ಉದಾ:

ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು

ಅನುಪ್ರಾಸದಲ್ಲಿ 2 ವಿಧ

1.ವೃತ್ತಾನುಪ್ರಾಸ

2. ಛೇಕಾನುಪ್ರಾಸ

·        ವೃತ್ತಾನುಪ್ರಾಸ : ಒಂದು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು

ಉದಾ: ಕರಮಿಶದತ್ತ ಕಾಮುದಿಯ ಚಿತ್ತ ಚಕೋರಿಯ ತುತ್ತ ನೀರತೋತದ ವಿಪತ್ತು ತಾರೆಗಳ ತುತ್ತು

·        ಛೇಕಾನುಪ್ರಾಸ: ಎರಡು ವ್ಯಂಜನ ಪದ್ಯದ ಒಂದು ಚರಣದಲ್ಲಿ ಅಥವಾ ಸಂಪೂರ್ಣ ಪದ್ಯದಲ್ಲಿ ಪುನರಾವರ್ತನೆಯಾಗುವುದು

ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

2.ಯಮಕಾಲಂಕಾರ:[ಬದಲಾಯಿಸಿ]

ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು

ಉದಾ:

ಬರಹೇಳ್ ನಿಕುಂಭನಂ ಶುಂಭನಂ ಜಂಭನಂ

ಬರಹೇಳ್ ಸಬಲನಂ ಪ್ರಬಲನಂ ಸುಬಲನಂ

ಬರಹೇಳ್ ಮಾಹ ನಂಭನಂ

3. ಚಿತ್ರಕವಿತ್ವ :[ಬದಲಾಯಿಸಿ]

ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ

ಉದಾ:

ನನ್ದನ ನನ್ದನ ನುನ್ನೊನ್ದನ

ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ


2 ಅರ್ಥಾಲಂಕಾರಗಳು :

ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ

1. ಉಪಮಾ ಅಲಂಕಾರ

2. ರೂಪಕ ಅಲಂಕಾರ

3. ದೃಷ್ಠಾಂತ ಅಲಂಕಾರ

4. ಶ್ಲೇಷಾಲಂಕಾರ

5. ದೀಪಕ ಅಲಂಕಾರ

6. ಉತ್ಪ್ರೇಕ್ಷಾಲಂಕಾರ

1. ಉಪಮಾ ಅಲಂಕಾರ :[ಬದಲಾಯಿಸಿ]

ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ ಗಳನ್ನೊಳಗೊಂಡಿರುತ್ತದೆ.

1.ಉದಾ:

·        ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತಿದ್ದ

·        ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ರತ್ನ

·        ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಶ್ರೀ ಕೃಷ್ಣ

·        ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ

·        ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಹೊಳೆಯುವುದು

2.ಉದಾ:

·        ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ

·        ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ

·        ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು

·        ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

·        ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

ಉಪಮಾಲಂಕಾರಗಳಲ್ಲಿ ಪ್ರಮುಖವಾಗಿ ಎರಡು ವಿಧ

1. ಪೂರ್ಣೋಪಮೇ ಅಲಂಕಾರ

2. ಲುಪ್ತೋಪಮೇ ಅಲಂಕಾರ

1. ಪೂರ್ಣೋಪಮೇ ಅಲಂಕಾರ : ಇದು ನಾಲ್ಕು(4) ಅಂಶಗಳಾದ ಉಪಮಾನ, ಉಪಮೇಯ, ಉಪಮವಾಚಕ ಮತ್ತು ಸಮಾನಧರ್ಮ/ಉಭಯವಾಚಕ ಗಳನ್ನೊಳಗೊಂಡಿರುತ್ತದೆ

ಉದಾ:

·        ದಸರಾ ಕಾಲದ ಮೈಸೂರು ಇಂದ್ರನ ಅಮರಾವತಿಯಂತೆ ಝಗ ಝಗಸುತ್ತದೆ

·        ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಅಮರಾವತಿ

·        ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮೈಸೂರು

·        ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

·        ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಝಗ ಝಗಸುತ್ತದೆ

2.ಲುಪ್ತೋಪಮೇ ಅಲಂಕಾರ : ಇದರಲ್ಲಿ ನಾಲ್ಕು(4) ಅಂಶಗಳಲ್ಲಿ ಯಾವುದಾದರೊಂದು ಅಂಶ ಇಲ್ಲವಾಗಿರುತ್ತದೆ

ಉದಾ:

ಅವಳ ಮುಖವು ಚಂದ್ರನಂತಿದೆ

·        ಉಪಮಾನ, (ಯಾವುದಕ್ಕೆ ಹೋಲಿಸುತ್ತೇವೋ ಅದು) : ಚಂದ್ರ

·        ಉಪಮೇಯ, (ಯಾವುದನ್ನು ಹೋಲಿಸುತ್ತೇವೆ) : ಮುಖ

·        ಉಪಮವಾಚಕ (ಹೋಲಿಕೆಯ ರೀತಿ. ಅಂತೆ, ಅಂತಿರೆ, ಓಲ್) : ಅಂತೆ :

·        ಸಮಾನಧರ್ಮ/ಉಭಯವಾಚಕ : ಉಪಮಾನ ಮತ್ತು ಉಪಮೇಯದಲ್ಲಿರುವ ಸಮಾನ ಅಂಶ : ಮೇಲಿನ ಉದಾಹರಣೆಯಲ್ಲಿ : ಇಲ್ಲ

2. ರೂಪಕ ಅಲಂಕಾರ:[ಬದಲಾಯಿಸಿ]

ಉಪಮಾನ(ಹೋಲಿಸಿಕೊಳ್ಳುವುದು) ಉಪಮಾನ(ಹೋಲಿಸಲ್ಪಡುವುದು) ಒಂದೆ ಎಂದು ವರ್ಣಿತವಾಗುವುದು

ಉದಾ:

·        ಎನ್ನ ಕಾಲೇ ಕಂಬ, ದೇಹವೇ ದೇಗುಲ,

·        ಶಿರವೇ ಹೊನ್ನ ಕಳಸವೈಯ್ಯಾ

3. ದೃಷ್ಠಾಂತ ಅಲಂಕಾರ:[ಬದಲಾಯಿಸಿ]

ಬಳಕೆಗೊಳ್ಳುವ ಎರಡು ವಾಕ್ಯಗಳು ಪ್ರತಿಬಿಂಬದಂತೆ ವರ್ಣಿತವಾಗುವುದು ಸಾಮಾನ್ಯವಾಗಿ ಇದರಲ್ಲಿ ಬರುವುದು ಗಾದೆ ಮಾತುಗಳು

ಉದಾ:

·        ಊರ ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು

·        ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ

4.ಶ್ಲೇಷಾಲಂಕಾರ:[ಬದಲಾಯಿಸಿ]

ಒಂದೇ ಶಬ್ದದಲ್ಲಿ ನಾನ ಅರ್ಥಗಳು ಬರುವಂತೆ ವರ್ಣಿಸುವುದು.

ಉದಾ:

·        ಶ್ರೀಯುವತಿ ಪ್ರಿಯಂ ಬಲವಿತಂ ಬಲಿದರ್ಪ ಹರಂ.

ಇಲ್ಲಿ: ಶ್ರೀಯುವತಿ ಪ್ರಿಯಂ ಎಂದರೆ ಒಂದೇ ಅರ್ಥ ವಿಷ್ಣು ಇನ್ನೊಂದು ಅರ್ಥದಲ್ಲಿ ಸಂಪತ್ತಿನ ಒಡೆಯ ರಾಜ

5. ದೀಪಕ ಅಲಂಕಾರ:[ಬದಲಾಯಿಸಿ]

ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳ ವ್ಯಕ್ತಿಗಳಿಗೆ ಒಂದೆ ಧರ್ಮವಿದೆ ಎಂದು ವರ್ಣಿಸುವುದು

ಉದಾ:

·        ಗಿಳಿಮರಿ ನೆರೆಯದ ನಂದನ ವಳಿಸಿಸು ವಿಹರಿಸು ಪೂಗಳ ಕಳವರದಿಂ

ದೆಳೆಯಂಚೆಡಿಯಿಡದ ತಣ್ಬುಳ್ಳಿ ಬರ್ಬರ ನಾಡದ ದಂಗಳಂ ಮಂಜುಳ ಮಲ್ಲಿ

ಮೇಲಿನ ಉದಾಹರಣೆಯಲ್ಲಿ ::ಗಿರಿಮರಿಯಿಲ್ಲದ ತೋಟ, ಮರಿದುಂಬಿಯಿಲ್ಲದ ತೋಟ, ಹಂಸಗಳಿಲ್ಲದ ಸರೋವರ ಇವೆಲ್ಲವೂ ಅಪ್ರಸ್ತುತ ಮಕ್ಕಳಾಡದ ಅಂಗಳ ಅಂಗಳವಲ್ಲ ಎನ್ನುವುದು ಪ್ರಸ್ತುತ

6.ಉತ್ಪ್ರೇಕ್ಷಾಲಂಕಾರ:[ಬದಲಾಯಿಸಿ]

ಉಪಮಾನ ಅಥವಾ ಉಪಮೇಯ ಕವಿ ಕಲ್ಪಿತವಾಗಿರುವುದು

ಉದಾ;

·        ನೀ ಉಟ್ಟ ರೇಷ್ಮೆಗಿಂತ ನಿನ್ನ ಮೈ ನುಣುಪ

ಬೆಟ್ಟದ ಅರಿಗಿಳಿಗಿಂತ ನಿನ್ನ ನುಡಿ ಇಂಪು.


ಪತ್ರ ಲೇಖನ :

ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು.

ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಕೂಡ ಪತ್ರಲೇಖನವು ಒಂದು ಕಲೆ. ತನ್ನಲ್ಲಿನ ವಿಚಾರವನ್ನು ಇನ್ನೊಬ್ಬರಿಗೆ ಹೇಳಲು ಇರುವ ಪರಿಣಾಮಕಾರಿ ವಿಧಾನವೇ. ಇಲ್ಲಿ ಪತ್ರ ಬರವಣಿಗೆಯ ಆಕರ್ಷಣೆ ಪ್ರಧಾನವಾದುದು. ಬರವಣಿಗೆ ಸುಂದರವಾಗಿರಬೇಕು ಎನ್ನುವುದರ ಜೊತೆಗೆ ಪದಗಳ ಬಳಕೆ ಸೊಗಸಾಗಿರಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಅದು ಕಾಗದದಲ್ಲಿ ನೀಡುವ ಒಂದು ಭೇಟಿ. ಬರಹ ರೂಪದಲ್ಲಿ ಕಣ್ಣಿಗೆ ಕಾಣುವ ಸಾಧನ . ಹಲವು ಕಾಲ ಇರಿಸಿಕೊಂಡು ಮತ್ತೆ ಮತ್ತೆ ಓದಬಹುದು. ಗಾಂಧೀಜಿಯವರ ಪತ್ರಗಳು ,ನೆಹರೂರವರು ತಮ್ಮ ಮಗಳು ಇಂದಿರಾ ಪ್ರಿಯದರ್ಶಿನಿಗೆ ಬರೆದ ಪತ್ರಗಳು ಇಂದಿಗೂ ವಿಶ್ವವಿಖ್ಯಾತವಾಗಿರುವಂತವು.


ಸಾಮಾನ್ಯವಾಗಿ ಪತ್ರದಲ್ಲಿ 2 ವಿಧಗಳು:

·        ಖಾಸಗಿ ಪತ್ರಗಳು ಅಥವಾ ವೈಯಕ್ತಿಕ ಪತ್ರಗಳು (ಔಪಚಾರಿಕ ಪತ್ರಗಳು )

·        ವ್ಯಾವಹಾರಿಕ ಪತ್ರಗಳು ಅಥವಾ ಮನವಿ ಪತ್ರಗಳು (ಅನೌಪಚಾರಿಕ ಪತ್ರಗಳು )

·        ಪತ್ರಲೇಖನದಲ್ಲಿ ಅರಿಯಬೇಕಾದ ಮುಖ್ಯವಾದ ಸಂಗತಿಯೆಂದರೆ ಪತ್ರದ ಪ್ರಾರಂಭ, ಸಂಬೋಧನೆ, ವಿಷಯವಿವರಣೆ, ಅಂತ್ಯ ಈ ಅಂಶಗಳಲ್ಲಿ ವೈಯಕ್ತಿಕ ಮತ್ತು ವ್ಯಾವಹಾರಿಕ ಪತ್ರಗಳಲ್ಲಿ ಹೇಗೆ ಬಳಕೆ ಮಾಡಬೇಕು ಎಂಬುದರ ಅರಿವಿರಬೇಕು. ವ್ಯತ್ಯಾಸ ಅರಿತಿರಬೇಕು.


ಪತ್ರದ ಅಂಗಗಳು :

ಸಾಮಾನ್ಯವಾಗಿ ಪತ್ರ ಲೇಖನವು ಐದು ಅಂಗಗಳನ್ನು ಹೊಂದಿರಬೇಕು . ಇದನ್ನು ಪತ್ರದ ಚೌಕಟ್ಟು ಎಂದು ಕರೆಯಬಹುದು. ಖಾಸಗಿ ಪತ್ರವೇ ಆಗಿರಲಿ ಅಥವಾ ವ್ಯಾವಹಾರಿಕ ಪತ್ರವಾಗಿರಲಿ ಅದರಲ್ಲಿ ಈ ಕೆಳಗಿನ ಅಂಶಗಳು ಇರಬೇಕು.

·        ಪತ್ರ ಶೀರ್ಷಿಕೆ (ಪತ್ರದ ಪ್ರಾರಂಭ )

·        ಸಂಬೋಧನೆ

·        ಪತ್ರದ ಒಡಲು (ವಿಷಯವಿವರಣೆ)

·        ಮುಕ್ತಾಯ (ಪತ್ರದ ಅಂತ್ಯ )

·        ಸಹಿ ಮತ್ತು ಹೊರವಿಳಾಸ


ಪತ್ರದ ಶಿರ್ಷಿಕೆ (ತಲೆಬರಹ ಅಥವಾ ಆದಿಭಾಗ)

ಯಾರು ಪತ್ರ ಬರೆಯುತ್ತಿದ್ದಾರೋ ಅವರ ಪೂರ್ಣ ವಿಳಾಸವನ್ನು ಪತ್ರದ ಮೇಲೆ ಬಲ ಭಾಗದಲ್ಲಿ ಬರೆಯಬೇಕು . ಹೀಗೆ ಬರೆಯುವುದರಿಂದ ಯಾರು ಪತ್ರ ಬರೆಯುತ್ತಿದ್ದಾರೆ? ಎಲ್ಲಿಂದ ಬರೆಯುತ್ತಿದ್ದಾರೆ ? ಇತ್ಯಾದಿ ಅಂಶಗಳು ತಿಳಿಯುತ್ತವೆ.

·        ಒಂದರ ಕೆಳಗೆ ಒಂದರಂತೆ ಕ್ರಮವಾಗಿ ಬರೆಯುವುದು ಸೂಕ್ತ

·        ದಿನಾಂಕವನ್ನು ಬರೆಯುತ್ತಿರುವವ ವಿಳಾಸದ ಕೆಳಗೆ ನಮೂದಿಸುವುದು ಸೂಕ್ತ.

·        ವ್ಯಾವಹಾರಿಕ ಪತ್ರವಾಗಿದ್ದರೆ ಇಂದ ವಿಳಾಸದ ನಂತರ ಸ್ವಲ್ಪ ಅಂತರ ಉಳಿಸಿ ಪತ್ರದ ಎಡಭಾಗದಲ್ಲಿ ಯಾರಿಗೆ ಬರೆಯುತ್ತಿದ್ದೇವೆಯೋ ಅವರ ವಿಳಾಸವನ್ನು ನಮೂದಿಸಬೇಕಾಗುತ್ತದೆ.


ಸಂಭೋಧನೆ(ಗೌರವಯುತ ಸಂಭೋಧನೆ ಓಕ್ಕಣಿ) :

·        ಇದು ಯಾರಿಗೆ ಪತ್ರವನ್ನು ಬರೆಯುತ್ತದ್ದೇವೆಯೋ ಅವರಿಗೆ ಸಲ್ಲಿಸುವ ಮರ್ಯಾದಾಸೂಚಕ ಮಾತು ಅಥವಾ ಗೌರವಯುತ ಅಭಿವಂದನೆ ಅಥವಾ ಶುಭಾಶಯ .ಇದು ಪತ್ರ ಬರೆಯುವವನಿಗೂ ಬರೆಯಿಸಿಕೊಳ್ಳುತ್ತಿರುವ ವ್ಯಕ್ತಿಗೂ ನಡುವಿನ ಸಂಬಂಧವನ್ನು ಅವಲಂಬಿಸಿರುತ್ತದೆ.

·        ಈ ಸಂಬೋಧನೆ ಆಯಾ ವ್ಯಕ್ತಿಗಳ ಅನುಸಾರ ಬೇರೆ ಬೇರೆಯಾಗಿರುತ್ತದೆ.

ಹಿರಿಯರಿಗೆ ಗೌರವ ಸೂಚಕ ಶಬ್ದಗಳು

·        ತಂದೆಗೆ : ತೀರ್ಥರೂಪುರವರಿಗೆ /ಪೂಜ್ಯ ತಂದೆಯವರಿಗೆ ----- ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .

·        ತಾಯಿಗೆ :ಮಾತೃಶ್ರೀಯವರಿಗೆ / ಪೂಜ್ಯತಾಯಿಯವರಿಗೆ ------ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು .

·        ಚಿಕ್ಕಪ್ಪ,ದೊಡ್ಡಪ್ಪ ,ಮಾವ ,ಅಣ್ಣ ಇತ್ಯಾದಿ ಹಿರಿಯರಿಗೆ : ತೀರ್ಥರೂಪ ಸಮಾನರಾದ …. ಅವರಿಗೆ ಅಥವಾ ಪೂಜ್ಯರಾದ …. ಅವರಿಗೆ ------- ಸಾಷ್ಟಾಂಗ ನಮಸ್ಕಾರಗಳು ಅಥವಾ ಅವರಲ್ಲಿ ಬೇಡುವ ಆಶೀರ್ವಾದಗಳು .

·        ಚಿಕ್ಕಮ್ಮ ,ದೊಡ್ಡಮ್ಮ ,ಅತ್ತೆ,ಅಕ್ಕ -ಮುಂತಾದ ಹಿರಿಯರಿಗೆ : ಮಾತೃಶ್ರೀ ಸಮಾನರಾದ-----ಅವರಿಗೆ ಸಾಷ್ಟಾಂಗ ನಮಸ್ಕಾರಗಳು /ಬೇಡುವ ಆಶೀರ್ವಾದಗಳು.

·        ತಮ್ಮನಿಗೆ(ಕಿರಿಯರಿಗೆ) :ಪ್ರೀತಿಯ ತಮ್ಮನಿಗೆ /ಚಿರಂಜೀವಿ ಸಹೋದರನಿಗೆ ಆಶೀರ್ವಾದಗಳು

ತಂಗಿ,ಮಗಳು ,ಸೊಸೆ ಮೊದಲಾದವರಿಗೆ :ಚಿರಂಜೀವಿ ಸೌಭಾಗ್ಯವತಿ ---- ಅಥವಾ ಪ್ರೀತಿಯ ಸಹೋದರಿ,------ ಆಶೀರ್ವಾದಗಳು .

·        ಸಂಬಂಧಿಕರಲ್ಲದ ಹಿರಿಯರಿಗೆ :ಶ್ರೀಯುತರಾದ ----ಅಥವಾ ಶ್ರೀಮಾನ್ ರವರಿಗೆ ಗೌರವಪೂರ್ವಕ ಪ್ರಣಾಮಗಳು ಅಥವಾ ಮಾಡುವ ವಿಜ್ಞಾಪನೆಗಳು .

·        ಗುರುಗಳಿಗೆ (ಶಿಕ್ಷಕರಿಗೆ ):ಪೂಜ್ಯರಾದ ಅಧ್ಯಾಪಕರಿಗೆ /ಗುರುಗಳಿಗೆ --ಸಾದರ ನಮಸ್ಕಾರಗಳು,ಪ್ರಣಾಮಗಳು.

·        ಗೆಳೆಯರಿಗೆ : ಪ್ರಿಯ /ಆತ್ಮೀಯ/ನಲ್ಮೆಯ /ಸ್ನೇಹಿತನಿಗೆ --- ವಂದನೆಗಳು .

·        ಬಂಧುಗಳಿಗೆ : ಪ್ರಿಯ ಬಂಧುಗಳಿಗೆ ----ಮಾಡುವ ನಮಸ್ಕಾರಗಳು .

·        ಅಧಿಕಾರಿಗಳಿಗೆ :ಅವರವರ ಸ್ಥಾನಗಳಿಗೆ -ಅರ್ಹತೆಗಳಿಗೆ ಅನುಸರಿಸಿ ಇರಬೇಕು

ಉದಾ : ಮಾನ್ಯ ಮುಖ್ಯೋಪಾಧ್ಯಾಯರು, ಮಾನ್ಯ ಅಧ್ಯಕ್ಷರು ,ಮಾನ್ಯ ನಿರ್ದೇಶಕರು,ಮಾನ್ಯ ಜಿಲ್ಲಾಧಿಕಾರಿಯವರ


ವಿಷಯ (ಒಡಲು) :

ಪತ್ರದ ಮುಖ್ಯವಾದ ಭಾಗವಿದು . ಖಾಸಗಿ ಪತ್ರಗಳಲ್ಲಿ ಇದು ಕ್ಷೇಮ ಸಮಾಚಾರದ ಮಹತ್ವವನ್ನು ಒಳಗೊಂಡಿರುತ್ತದೆ. ಏನಾಗಿದೆ? ಏನಾಗಬೇಕು, ಇತ್ಯಾದಿ ವಿವರಗಳನ್ನು ಬೇರೆ ಬೇರೆ ವಾಕ್ಯ ವೃಂದಗಳಲ್ಲಿ ಸ್ಪಷ್ಟವಾಗಿ ಅರ್ಥವಾಗುವಂತೆ ಬರೆಯಬೇಕು .ಓದುಗರಿಗೆ ಪತ್ರ ಬರೆದವರು ಯಾಕೆ ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುವಂತಿರಬೇಕು . ವ್ಯಾವಹಾರಿಕ ಪತ್ರಗಳಲ್ಲಿ ಪತ್ರ ಬರೆಯುತ್ತಿರುವ ಉದ್ದೇಶವನ್ನು ಒಂದು ಚಿಕ್ಕ ವಾಕ್ಯದಲ್ಲಿ ಮೊದಲು ಹೇಳಿ ಅದರ ಕೆಳಗೆ ಅದರ ಸ್ಪಷ್ಟವಾದ ವಿವರಣೆ ನೀಡಬೇಕು. ವಿವರಣೆಯಲ್ಲಿ ಪತ್ರದ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಬೇಕು.


ಪತ್ರದ ಅಂತ್ಯ (ಮುಕ್ತಾಯ) :

ಪತ್ರದ ವಿವರ ಮುಕ್ತಾಯವಾದ ಮೇಲೆ ಪತ್ರದ ಸಂಬೋಧನೆಯಲ್ಲಿ ಬಳಸಿದ ಹಾಗೆ ನಮಸ್ಕಾರಗಳು /ಪ್ರಣಾಮಗಳು /ವಂದನೆಗಳು /ಬೇಡುವ ಆಶೀರ್ವಾದಗಳು ಹೀಗೆ ಒಕ್ಕಣೆಯನ್ನು ಬಳಸಬೇಕು. ವಿವರಣೆ ಮುಕ್ತಾಯವಾದಮೇಲೆ ಪತ್ರದ ಎಡಭಾಗದಲ್ಲಿ ಇಂತಿ ತಮ್ಮ ವಿಶ್ವಾಸಿ ----- ಒಕ್ಕಣೆಯಲ್ಲಿ ಪ್ರಾರಂಭದಲ್ಲಿ ತಮ್ಮನ್ನು ಕರೆದುಕೊಂಡ ಹಾಗೆ ಬರೆಯುವುದು ಸೂಕ್ತ .

·        ತಂದೆಗೆ /ತಾಯಿಗೆ : ಇಂತಿ ತಮ್ಮ ಪುತ್ರ -ಪುತ್ರಿ

·        ಹಿರಿಯ ಬಂಧುಗಳಿಗೆ : ಇಂತಿ ತಮ್ಮ ಪ್ರೀತಿಯ

·        ಅಧಿಕಾರಿಗಳಿಗೆ : ಇಂತಿ ತಮ್ಮ ವಿಶ್ವಾಸಿ /ಇಂತಿ ತಮ್ಮ ನಂಬುಗೆಯ

·        ಗುರುಗಳಿಗೆ : ಇಂತಿ ತಮ್ಮ ವಿಧೇಯ /ಇಂತಿ ತಮ್ಮ ಪ್ರೀತಿಯ ಶಿಷ್ಯ

·        ಗೆಳೆಯ/ಗೆಳತಿ : ಇತಿ ನಿನ್ನ ಪ್ರೀತಿಯ /ನಲ್ಮೆಯ ಗೆಳೆಯ/ಗೆಳತಿ

·        ಕಿರಿಯರಿಗೆ : ಇತಿ ನಿನ್ನ ಶ್ರೇಯೋಭಿಲಾಷಿ /ಹಿತಚಿಂತಕ

·        ವ್ಯಾಪಾರಿಗೆ :ಇತಿ ನಿಮ್ಮ ವಿಶ್ವಾಸಿ /ಗ್ರಾಹಕ


ಸಹಿ ಮತ್ತು ಹೊರ ವಿಳ್ಳಾಸ:

ವಂದನಾ ಪೂರ್ವಕ ಮುಕ್ತಾಯದ ಕೆಳಗೆ ಪತ್ರ ಬರೆದವರು ತಮ್ಮ ಸಹಿ ನಮೂದಿಸಬೇಕು ಪತ್ರದ ಎಡಭಾಗದಲ್ಲಿ ಕೆಳಗೆ ಯಾರಿಗೆ ಪತ್ರ ತಲುಪಬೇಕಿದೆಯೋ ಅವರ ವಿಳಾಸ ನಮೂದಿಸಬೇಕು .ಅವರ ಹೆಸರು ,ಮನೆನಂಬರ್,ಬೀದಿ ,ವಿಭಾಗ ,ಊರು ,ಜಿಲ್ಲೆ ಇವುಗಳ ವಿವರ ವಿಳಾಸದ ಜೊತೆ ಇರಬೇಕು.


ಖಾಸಗಿ ಪತ್ರಗಳ ಮಾದರಿ:

ಖಾಸಗಿ ಪತ್ರಗಳು ನಮ್ಮ ತಂದೆ/ತಾಯಿ, ಅಣ್ಣ /ತಮ್ಮ ,ಅಕ್ಕ /ತಂಗಿ ,ಗೆಳೆಯ /ಗೆಳತಿ ಮತ್ತು ಹತ್ತಿರದ ಬಂಧುಗಳಿಗೆ ಬರೆಯುವ ಪತ್ರಗಳು .

·        ಪ್ರಶ್ನೆ : ನಿಮ್ಮ ವಿದ್ಯಾಭ್ಯಾಸ ಪ್ರಗತಿ ತಿಳಿಸಿ ಕೊಡಗಿನ ವಿರಾಜಪೇಟೆಯಲ್ಲಿರುವ ನಿಮ್ಮ ತಾಯಿ ಭಾಗ್ಯಳಿಗೆ ಪತ್ರ ಬರೆಯಿರಿ.

ಕ್ಷೇಮ ಶ್ರೀ ಸವಿತಾ ೧೦ ನೇ ತರಗತಿ ನೂತನ ವಿದ್ಯಾ ಮಂದಿರ ಧಾರವಾಡ .

           ಮಾತೃಶ್ರೀಯವರ ಪಾದಾರವಿಂದಗಳಲ್ಲಿ ನಿಮ್ಮ ಮಗಳಾದ ಸವಿತಾಳು ಮಾಡುವ ಸಾಷ್ಟಾಂಗ ನಮಸ್ಕಾರಗಳು ಮತ್ತು ಬೇಡುವ ಆಶಿರ್ವಾದಗಳು .ಇಲ್ಲಿ ನಾನು ಆರೋಗ್ಯವಾಗಿದ್ದೇನೆ ಮತ್ತು ನೀವೂ ಸಹ ಆರೋಗ್ಯದಿಂದಿರುವಿರೆಂದು ಭಾವಿಸುವೆ ಮತ್ತು ತಮ್ಮ ಕ್ಷೇಮ ಸಮಾಚಾರ ಪತ್ರದ ನಿರೀಕ್ಷೆಯಲ್ಲಿದ್ದೇನೆ.

ನಾನು ಚೆನ್ನಾಗಿ ಓದುತ್ತಿದ್ದೇನೆ. ಇಲ್ಲಿಯವರೆಗೆ ನಡೆದ ಎಲ್ಲ ಸಾಧನಾ ಪರೀಕ್ಷೆಗಳಲ್ಲಿಯೂ ನಾನು ಚೆನ್ನಾಗಿ ಅಂಕ ಪಡೆದಿರುತ್ತೇನೆ. ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ನನ್ನ ಎಲ್ಲ ವಿಷಯಗಳ ಶೇಕಡಾವಾರು ಅಂಕ ೯೨ ಇರುತ್ತದೆ. ಈಗ ಬರಲಿರುವ ಪೂರ್ವ ಸಿದ್ಧತಾ ಪರೀಕ್ಷೆಗೆ ನಾನು ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಶಿಕ್ಷಕರೆಲ್ಲರೂ ಚೆನ್ನಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಏಪ್ರಿಲ್‌ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಕಡೆಯ ಪಕ್ಷ ೯೫% ಮೇಲೆ ಅಂಕಗಳಿಸಿ ಜಿಲ್ಲೆಗಾದರೂ ಪ್ರಥಮ ಸ್ಥಾನ ಪಡೆಯಬೇಕೆಂಬ ಅಭಿಲಾಷೆ ನನ್ನದು . ಈ ವಿಚಾರವನ್ನು ತೀರ್ಥರೂಪು ತಂದೆಯವರಿಗೂ ತಿಳಿಸಿ ಅವರ ಆಶಿರ್ವಾದ ಕೇಳಿರುವೆನೆಂದು ತಿಳಿಸಿರಿ.ಮನೆಯಲ್ಲಿನ ಎಲ್ಲ ಹಿರಿಯರಿಗೆ ನನ್ನ ಪ್ರಣಾಮಗಳು. ಕಿರಿಯರಿಗೆ ಆಶಿರ್ವಾದ ತಿಳಿಸಿರಿ. ಏಪ್ರಿಲ್ ಪರೀಕ್ಷೆ ಮುಗಿದ ಮೇಲೆ ಊರಿಗೆ ಬರುತ್ತೇನೆ.

                       ಪ್ರಣಾಮಗಳೊಂದಿಗೆ                  

ನಿಮ್ಮ ಪ್ರೀತಿಯ ಮಗಳು ಸವಿತಾ ಗೆ : ಭಾಗ್ಯ

1.      ೩೨ , ೩ ನೇ ಮುಖ್ಯ ರಸ್ತೆ ,೨ ನೇ ಅಡ್ಡ ರಸ್ತೆ

           ಕಯ್ಯಾರ ನಗರ ವಿರಾಜಪೇಟೆ , ಕೊಡಗು