ಸದಸ್ಯ:Madhuvamshi/sandbox

ವಿಕಿಪೀಡಿಯ ಇಂದ
Jump to navigation Jump to search

ಕೆರೆಯ ಪದ್ಮರಸ

ಕನ್ನಡ ಸಾಹಿತ್ಯವನ್ನು ಕಾಲದ ದೃಷ್ಠಿಯಿಂದ ಮೂರು ಪ್ರಮುಖ ವಿಭಾಗಗಳನ್ನಾಗಿ ಮಾಡಿಕೊಂಡು ಅಧ್ಯಯನ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಹಳಗನ್ನಡ, ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡ ಮತ್ತು ಆಧುನಿಕ ಅಥವಾ ಹೊಸಗನ್ನಡ ಸಾಹಿತ್ಯ ಎಂದು ವಿಭಾಗಿಸಿಕೊಂಡು ಧರ್ಮಾಧರಿತ, ಕಾ¯ ಆಧಾರಿತ ಕ್ರಮಗಳಲ್ಲಿ ಅಧ್ಯಯನ ಮಾಡಲಾಗುವುದು. ಚಂಪೂ ಪ್ರಕಾರದ ಮುಖ್ಯಭೂಮಿಕೆಯಲ್ಲಿ ಸ್ಥಾಪಿತವಾದ 10ನೇ ಶತಮಾನದ ಸಂಸ್ಕøತ ಭೂಯಿಷ್ಠವಾದ ಹಳಗನ್ನಡದ ಪಂಪನಾದಿಯಾಗಿ 12ನೇ ಶತಮಾನದ ಉತ್ತರಾರ್ಧದವರೆಗೂ ಇದ್ದ ಸಾಹಿತ್ಯ ಪ್ರಕಾರವು ವಚನಕ್ರಾಂತಿಯ ಪ್ರಾರಂಭ ಮತ್ತು ಪ್ರೇರಣೆಯಿಂದ ಸಾಹಿತ್ಯ ರಚನೆಯ ಪ್ರಕಾರಗಳು ಹಲವು ರೀತಿಯ ಸ್ವರೂಪದಲ್ಲಿ ಬದಲಾವಣೆಗಳ ಮೂಲಕ ಸ್ಥಾಪಿತಗೊಂಡವು. ಈ ದೇಸಿ ಕಾವ್ಯ ಪ್ರಕಾರಗಳು ಸ್ಥಾಪಿತಗೊಂಡ ಫಲವಾಗಿ ಸಾಮಾನ್ಯರೂ ಕೂಡ ಸಾಹಿತ್ಯ ಓದುವ ಮತ್ತು ಬರೆಯುವ ಅವಕಾಶ ಪಡೆದುಕೊಂಡು ರಾಜಾಶ್ರಯವನ್ನು ನಿರಾಕರಿಸಿ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಕಾವ್ಯಗಳು ರಚನೆಗೊಂಡವು. ವಚನಕ್ರಾಂತಿಯ ಧಾರ್ಮಿಕ ಪ್ರೇರಣೆಯಿಂದ ಪ್ರಭಾವಿತರಾದ 13ನೇ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಕೆರೆಯ ಪದ್ಮರಸ ಒಬ್ಬ. ಕೆರೆಯ ಪದ್ಮರಸನ ಕಾಲವು ನಿರ್ದಿಷ್ಟವಾಗಿ ತಿಳಿಯದೇ ಇರುವುದರಿಂದ ಮತ್ತು ಅವನ ಕಾಲದ ಬಗ್ಗೆ ವಿದ್ವಾಂಸರಲ್ಲಿ ಮತ್ತು ಸಾಹಿತ್ಯವಲಯದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಅವನ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಕವಿ ಚರಿತೆಕಾರರು ತಿಳಿಸಿರುವ ಕಾಲವಾದ ಕ್ರಿ.ಶ.1200 ಎಂದು ಇಟ್ಟುಕೊಳ್ಳಬಹುದು.kkkk