ಸದಸ್ಯ:Madhushree Ponnappa/sandbox
ಗೋಚರ
ಟಿ. ಯಲ್ಲಪ್ಪ:
ಟಿ. ಯಲ್ಲಪ್ಪನವರು ಬೆಂಗಳೂರು ಗ್ರಾಮಾಂತರ ಜಿಲ್ಲಿಯ ಎ.ನಾರಾಯಣಪುರದಲ್ಲಿ ಶ್ರೀಮತಿ ಮುನಿಯಮ್ಮ - ಶ್ರೀ ತಾಯಪ್ಪ ಎಂಬ ಕ್ರುಷಿಕಾರ್ಮಿಕ ದಂಪತಿಗಳ ಮಗನಾಗಿ ದಲಿತ ಕುಟುಂಬದಲ್ಲಿ ಜನಿಸಿದರು. ಪ್ರೌಢಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಯಲ್ಲಪ್ಪ ಅನೇಕ ಪ್ರತಿಷ್ಠಿತ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತ. ಇಪ್ಪತ್ತೆರಡರ ಅಳಲು, ಕಡಲಿಗೆ ಕಳಿಸಿದ ದೀಪ,ಚಿಟ್ಟೆ ಮತ್ತು ಜೀವಯಾನ, ನವಿಲಿಗೆ ಬಿದ್ದ ಕತ್ತಲ ಕನಸು ಇತ್ಯಾದಿ ಕ್ರುತಿಗಳನ್ನು ಹೊರಓರೆ ಅಕ್ಷರಗಳುತಂದಿದ್ದಾರೆ. 'ಕಡಲಿಗೆ ಕಳಿಸಿದ ದೀಪ'ಕತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀಯುತರು ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿಗಳನ್ನೂ ಪಡೆದಿರುವರು.
'ಚಿಟ್ಟೆ ಮತ್ತು ಜೀವಯಾನ' ಕ್ರುತಿಗೆ ವೀಚೀ ಕಾವ್ಯ ಪುರಸ್ಕಾರ ಮತ್ತು ಹರಿಹರಶ್ರೀ ಕಾವ್ಯ ಪುರಸ್ಕಾರಗಳು ಲಭಿಸಿವೆ. ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.