ಸದಸ್ಯ:Madhuri0593/ನನ್ನ ಪ್ರಯೋಗಪುಟ
ನಮ್ಮ ಊರಿನ ರಸಿಕರು
[ಬದಲಾಯಿಸಿ]thumb| 11 ನೇ ಮರುಮುದ್ರಣ ನಮ್ಮ ಊರಿನ ರಸಿಕರು ಕನ್ನಡ ಸಾಹಿತ್ಯದ ಒಂದು ಕೃತಿ. ಇದು ೧೯೩೨ ವರ್ಷದಲ್ಲಿ ಪ್ರಕಟಿಸಲಾಗಿತ್ತು.
ಈ ಕೃತಿ ಗೊರೂರು ರಾಮಸ್ವಾಮಿ ಅಯ್ಯಂಗಾರರಿನ (೧೯೦೪-೧೯೯೧) ಒಂದು ಹೆಸರುಪಡೆದ ಪುಸ್ತಕ. ಇವರು ಕನ್ನಡ ಸಾಹಿತ್ಯದ ಒಬ್ಬ ಪ್ರಖ್ಯತ ಲೇಖಕರು.ಈ ಕೃತಿಯಲಿ ಲೇಖಕರು ಅವರ ಊರದ ಗೊರೂರಿನ ಬಗ್ಗೆ ವಿಸ್ತಾರವಾಗಿ ಬರೆದ್ದಿದಾರೆ. ಲೇಖಕರು ಊರಿನ ಪರಿಸರ, ನಿವಾಸಿಗಳ ದಿನಚರಿಯು, ಹಬ್ಬದ ಆಚರಣೆಗಳು, ಮದುವೆ ಅಭ್ಯಾಸಗಳು, ಊರಿನ ಗಮನಾರ್ಹವಾದ ಜನರ ಬಗ್ಗೆ, ಕಾಫಿಗೆ ಅವರು ಕೊಟ್ಟ ಮಹ್ತವ, ಇತ್ಯಾದಿಗಳ ಬಗ್ಗೆ ಬರೆದ್ದಿದಾರೆ.
ಈ ಕೃತಿಯನ್ನು ಕವಿಯು ಗೊರೂರಿನ ಪ್ರಕೃತಿಯ ವರ್ಣನೆಯಿಂದ ಪ್ರಾರಂಬಿಸಿದ್ದಾರೆ. ಅವರ ಊರಿನ ನದಿ, ಅದರ ತೀರದಲ್ಲಿ ಬೆಳೆದಿರುವ ಸಣ್ಣ ಸಣ್ಣ ತೋಪುಗಳು, ಸೇತುವೆ ಇತ್ಯಾದಿಗಳು ಪ್ರಕೃತಿ ದೇವಿಯು ಅವರ ಊರಿಗೆ ಕೊಟ್ಟ ವರ ಎಂದು ನಂಬಿದ್ದಾರೆ. ಎರಡನೇ ಅಧ್ಯಾಯದಲ್ಲಿ ಅವರ ಊರಿನ ಜನರ ಬಗ್ಗೆ ವರ್ಣನಿಸಿದ್ದಾರೆ. ಅವರ ಊರಿನ ಜನರು ಬಹಳ ರಸಿಕರು ಮತ್ತು ವಿನೋದಪ್ರಿಯರು, ಮುಂಗೋಪಿಗಳು ಯಾರೇ ಅವರ ಊರಿಗೆ ಬಂದರೂ ನಗಲು ಪ್ರಾರಂಬಿಸುತ್ತಾರೆ ಎಂಬುವುದು ಅವರ ವಿಶ್ವಾಸ.