ಸದಸ್ಯ:Madhuri0525/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೌರಾತೀತ ಗ್ರಹಗಳು[ಬದಲಾಯಿಸಿ]

ಸೌರಾತೀತ ಗ್ರಹಗಳ ಪತ್ತೆಗೆ ಗ್ರಹಸಂಕ್ರಮಣ ಇನ್ನೊಂದು ವಿಧಾನ.ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಬಿಂಬ ಮರೆಯಾಗಿ ಸೂರ್ಯಗ್ರಹಣ ಸಂಭವಿಸುತ್ತದೆ. ಇದರ ಬದಲಿಗೆ ಸೂರ್ಯ ಮತ್ತು ಭೂಮಿಯ ನಡುವೆ ಬುಧ ಅಥವ ಶುಕ್ರ ಬಂದರೆ ಸೌರಬಿಂಬದಲ್ಲಿ ಗ್ರಹಗಳ ಚಲನೆ ಕರ್ರಗಿನ ಬಿಂದು ಚಲಿಸಿದಂತೆ ಗೋಚರಿಸುತ್ತದೆ.ಇದಕ್ಕೆ ಸಂಕ್ರಮಣ ಎಂದು ಹೆಸರು.ಇದೇ ಬಗೆಯ ಸಂಕ್ರಮಣ ಅಲ್ಲಿರಬಹುದಾದ ಗ್ರಹಗಳಿಂದ ಬಲು ದೂರದ ನಕ್ಷತ್ರದಲ್ಲೂ ಸಂಭವಿಸುತ್ತದೆ.

ಆ ದೂರದ ನಕ್ಷತ್ರದ ಸುತ್ತ ಸುತ್ತುವ ಗ್ರಹವು ನಕ್ಷತ್ರ ಮತ್ತು ನಮ್ಮ ನಡುವೆ ಬಂದಾಗ ನಕ್ಷತ್ರದ ಉಜ್ವಲತೆ ತುಸು ಕಡಿಮೆಯಾಗುತ್ತದೆ.ಬರಿಗಣ್ಣಿಗೆ ಈ ವ್ಯತ್ಯಾಸ ಗೋಚರಿಸುವುದಿಲ್ಲ. ಅತ್ಯಂತ ನವುರಾದ ದ್ಯುತಿದರ್ಶಕದಿಂದ ವ್ಯತ್ಯಾಸವನ್ನು ಗುರುತಿಸಲು ಸಾಧ್ಯ.

ಬೆಳಕಿನ ಕಿರಣ ಗುರುತ್ವ ಕ್ಷೇತ್ರದಲ್ಲಿ ಬಾಗುತ್ತದೆಂದು ಐನ್ ಸ್ಟೈನರ ಸಾರ್ವತ್ರಿಕ ಸಾಪೇಕ್ಶತಾ ಸಿದ್ಧಾಂತ ಹೇಳುತ್ತದೆ.ಈ ಪರಿಕಲ್ಪನೆ ಗ್ರಹಗಳ ಶೋಧದಲ್ಲಿ ಸಹಕಾರಿ. ದೂರದಲ್ಲಿರುವ ಒಂದು ನಕ್ಷತ್ರ ಮತ್ತು ನಮ್ಮ ನಡುವೆ ಇನ್ನೊಂದು ನಕ್ಷತ್ರ ಬರುತ್ತದೆಂದು ಭಾವಿಸಿ.ಆಗ ಸನಿಹದಲ್ಲಿರುವ ನಕ್ಷತ್ರದ ಗುರುತ್ವ ಕ್ಷೇತ್ರ ದೂರದ ನಕ್ಷತ್ರದಿಂದ ಬರುವ ಬೆಳಕೀನ ಕಿರಣಗಳನ್ನು ಬಾಗಿಸುತ್ತದೆ.ಅಂದರೆ ಗುರುತ್ವ ಕ್ಷೇತ್ರವೇ ಒಂದು ಬಗೆಯಲ್ಲಿ ಮಸೂರದಂತೆ ವರ್ತಿಸುತ್ತದೆ. ಇದರಿಂದ ಮೂಲ ನಕ್ಷತ್ರದ ರೋಹಿತದಲ್ಲಿ ಉಜ್ವಲತೆ ಹಟಾತ್ತನೆ ಹೆಚ್ಚುತ್ತದೆ.ಒಂದು ವೇಳೆ ಸನಿಹದ ನಕ್ಷತ್ರ ಗ್ರಹಗಳನ್ನು ಹೊಂದಿದ್ದರೆ ರೋಹಿತದಲ್ಲಿ ಮತ್ತೊಂದು ಉಜ್ವಲತೆಯ ಹೆಚ್ಚಳ ಕಾಣಿಸುತ್ತದೆ.ಸೂಕ್ಷ್ಮ ಗುರುತ್ವ ಮಸೂರವೆನ್ನುವ ಈ ತಂತ್ರದಿಂದಲೂ ಸೌರಾತೀತ ಗ್ರಹಗಳ ಪತ್ತೆ ಸಾಧ್ಯ.

ಮೊತ್ತ ಮೊದಲ ಸೌರಾತೀತ ಹಗ್ರಹವನ್ನು ಪತ್ತೆ ಮಾಡಿದ ಹಿರಿಮೆ ಅಮೇರಿಕದ ಪೆನ್ಸಿಲ್ವೇನಿಯ ವಿಶ್ವ ವಿದ್ಯಾಲಯದ ವಿಙ್ಞಾನೊ ಅಲೆಗ್ಸಾಂಡರ್ ವೋಲ್ಕ್ಸ್ಜಾನ್ ಇವರಿಗೆ ಸಲ್ಲುತ್ತದೆ. ನಮ್ಮಿಂದ ಸುಮಾರು ೬೪ ಜ್ಯೋತಿರ್ವರ್ಶ ದೂರದಲ್ಲಿರುವ ಬೀಟಾ ಪಿಕ್ಟೊರಿಸ್ ಎಂಬ ಪಲ್ಸಾರ್ ನಕ್ಷತ್ರವನ್ನು ಆಧ್ಯಯನಿಸುತ್ತಿದ್ದಾಗ ಅದರಿಂದ ಉತ್ಸರ್ಜನೆಯಾಗುವ ರೇಡಿಯೋ ವಿಕಿರಣದ ತೀವ್ರತೆಯಲ್ಲಿ ಏರಿಳಿತವನ್ನು ಗಮನಿಸಿದರು.ಈ ಏರಿಳಿತಕ್ಕೆ ಆ ನಕ್ಷತ್ರದ ಸುತ್ತ ಪರಿಭ್ರಮಿಸುತ್ತಿರುವ ಗ್ರಹ ಕಾರಣವೆಂದು ಸ್ಪಷ್ಟವಾಯಿತು.ಆದರೆ ಈ ಗ್ರಹದಲ್ಲಿ ಜೀವಿಗಳಿರುವುದು ಅಸಂಭವ.ಏಕೆಂದರೆ ಸೂರ್ಯನಿಗಿಂತ ಸುಮಾರು ಎರಡು ಪಟ್ಟು ಅಧಿಕ ದ್ರವ್ಯರಾಶಿಯ ಮತ್ತು ಎಂಟು ಪಟ್ಟು ಅಧಿಕ ಉಜ್ವಲತೆಯ ನಕ್ಷತ್ರದಿಂದ ಬಿಡುಗಡೆಯಾಗುವ ಶಕ್ತಿಶಾಲಿ ವಿಕಿರಣದ ತೀವ್ರತೆಯಲ್ಲಿ ಆಗ್ರಹ ಬರಡು ನೆಲವಾಗಿರಬಹುದು.

ಸೌರರಾಶಿಯ ನಕ್ಷತ್ರದ ಸುತ್ತ ಸುತ್ತುತಿರುವ ಗ್ರಹವೊಂದು ಪ್ರಪ್ರಥಮ ಬಾರಿಗೆ ಪತ್ತೆಯಾದದ್ದು ೧೯೯೫ರಲ್ಲಿ.ಜಿನೆವ ಖಗೋಳಾಲಯದ ಮೈಕೆಲ್ ಮೇಯರ್ ಮತ್ತು ಡೆಡಿಯರ್ ಕ್ವಿಲೋಜ್ ಅವರು ಪೆಗಾಸುಸ್ ನಕ್ಷತ್ರ ಪುಂಜದಲ್ಲಿ ನಮ್ಮಿಂದ ೫೦ ಜ್ಯೊತಿರ್ವರ್ಶ ದೂರದಲ್ಲಿರುವ ೫೧ ಪಗಾಸಿ ಎಂಬ ನಕ್ಷತ್ರದ ಗ್ರಹವನ್ನು ಪತ್ತೆಮಾಡಿದರು. ಈ ಗ್ರಹವು ಗಾತ್ರದಲ್ಲಿ ಮತ್ತು ರಾಶಿಯಲ್ಲಿ ಗುರು ಗ್ರಹಕ್ಕೆ ಸಮಾನ ಮತ್ತು ಮೇಲ್ಮೈ ಉಷ್ಣತೆ ಸುಮಾರು ಒಂದೂವರೆ ಸಾವಿರ ದೆಗ್ರೀ ಸೆಲ್ಸಿಯಸ್. ಮಾತ್ರು ನಕ್ಷತ್ರದಿಂದ ಕೇವಲ ೦.೦೫ ಖಗೋಳಮಾನ ದೂರದಲ್ಲಿರುವ ದೈತ್ಯ ಗ್ರಹವು ೪.೨ ದಿನಗಳಿಗೊಮ್ಮೆ ಒಂದು ಪರಿಭ್ರಮಣೆ ಮುಗಿಸುತ್ತದೆ.ಅದೇ ನಕ್ಷತ್ರದ ಸುತ್ತ ಇನ್ನೆರಡು ಗ್ರಹಗಳು ಪತ್ತೆಯಾದವು-ಅಮೇರಿಕದ ಸ್ಯಾನ್ ಫ್ರಾನ್ಸಿಸ್ಕೊ ಸ್ಟೇಟ್ ವಿಶ್ವವಿದ್ಯಾಲಯದ ಜೆಫ್ರಿ ದಬ್ಲೂ ಮರ್ಸಿ ಮತ್ತು ಪೌಲ್ ಬುಟ್ಲೆರ್ ಅವರಿಂದ. ಮುಂದಿನ ವರ್ಶಗಳಲ್ಲಿ ಇನ್ನು ಕೆಲವು ಸೌರರಾಶಿಯ ನಕ್ಶತ್ರಗಳ ಸುತ್ತ ಗ್ರಹಗಳು ಪತ್ತೆಯಾದವು.ಹೀಗೆ ೨೦ನೇ ಶತಮಾನದ ಕೊನೆಯೊಳಗೆ ಸೌರಾತೀತ ಗ್ರಹಗಳ ಪಟ್ಟಿಯಲ್ಲಿ ಇಪ್ಪತಕ್ಕೊ ಹೆಚ್ಚು ಗ್ರಹಗಳು ಸ್ಥಾನ ಪಡೆದವು.

ಸೌರಾತೀತ ಗ್ರಹಗಳ ಶೋಧನೆಗಾಗಿಯೇ ೨೦೦೬ರಲ್ಲಿ ಯುರೋಪ್ ಮತ್ತು ಫ್ರಾನ್ಸಿನ ಬಾಹ್ಯಾಕಾಶದ ಸಂಸ್ಥೆ ಜೆಂಟಿಯಾಗಿ CORoT[Convection Rotation and Planetary Transits] ಎಂಬ ಆಕಾಶ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದವು.ಈ ನೌಕೆ ೮೩೦ ಕಿ.ಮಿ ಎತ್ತರದಲ್ಲಿ ಬೂಮಿಸುತ್ತ ಪರಿಭ್ರಮಿಸುತ್ತ ೪ ವರ್ಶಗಳಲ್ಲಿ ೩೦ ಗ್ರಹಗಳನ್ನು ಪತ್ತೆಮಾಡಿತು.

ನಾಸಾ ಉಡ್ಡೈಸಿದ ಕೆಪ್ಲೆರ್ ಎಂಬ ಆಕಾಶ ನೌಕೆಯಿಂದ ಸೌರಾತೀತ ಗ್ರಹಗಳ ಪತ್ತೆ ಮತ್ತು ಆಧ್ಯಯನ ಮತ್ತಷ್ಟು ವೇಗ ಪಡೆದುಕೊಂಡಿತು.೧೦೦೦ ಕೆ.ಜಿ ತೂಕದ ಈ ಆಕಾಶ ನೌಕೆಯು ಭೂಮಿಯಿಂದ ೧.೨ ಖಗೋಳಮಾನ ದೂರದಲ್ಲಿ ೩೭೨ ದಿನಗಳಿಗೊಮ್ಮೆ ಸೂರ್ಯನ ಸುತ್ತ ಪರಿಭ್ರಮಣೆ ಮುಗಿಸುತ್ತ ಆಕಾಶಗಂಗೆಯ ಸಿಗ್ನಸ್[ರಾಜಹಂಸ], ಲೈರ[ವೀಣ] ಮತ್ತು ಡ್ರೆಕೊ[ಸುಯೋಧನ] ಡ್ರಾಕೋ ನಕ್ಷತ್ರಪುಂಜಗಳಲ್ಲಿರುವ ನಕ್ಷತ್ರಗಳನ್ನು ವೀಕ್ಶಿಸುತ್ತಿದೆ-ಆ ನಕ್ಷತ್ರಗಳಲ್ಲಿರುವ ಗ್ರಹಗಳಿಗಾಗಿ.ಇದು ತನಕ ಕೆಪ್ಲೆರ್ ವೀಕ್ಷಿಸಿದ ನಕ್ಷತ್ರಗಳ ಸಂಖ್ಯೆ ಸುಮಾರು ಒಂದೂವರೆ ಲಕ್ಷ.ಇವುಗಳಲ್ಲಿ ಕೆಲವು ನಕ್ಶತ್ರಗಳಲ್ಲಿ ಗಾತ್ರ ಮತ್ತು ದ್ರವ್ಯ ರಾಶಿಯಲ್ಲಿ ಗುರುವನ್ನು ಹೋಲುವ ೨೩೦೦ ಗ್ರಹಗಳನ್ನು ಗುರುತಿಸಿದೆ.ಕುತೋಹಲದ ಸಂಗತಿ ಎಂದರೆ ಇವುಗಳಲ್ಲಿ ಕೆಲವು ಗ್ರಹಗಳು ಮಾತ್ರು ನಕ್ಷತ್ರದಿಂದ ಖಗೋಳಮಾನ ದೂರದಲ್ಲಿದೆ-ಸೂರ್ಯನಿಂದ ಭೂಮಿ ಎಷ್ಟು ದೂರದಲ್ಲಿದೆಯೋ ಅಷ್ಟು ದೂರದಲ್ಲಿ.ಅಂದರೆ ಇತರೆ ತಾಣಗಳಿಗೆ ಹೋಲಿಸಿದರೆ ಅಲ್ಲಿ ಜೀವ ಉಗಮದ ಸಂಭಾವ್ಯತೆ ಹೆಚ್ಚು.

ಅನ್ಯ ಲೋಕದಲ್ಲಿ ಜೀವಿಗಳು[ಬದಲಾಯಿಸಿ]

ಇದು ೧೯೬೩ರಷ್ಟು ಹಿಂದಿನ ಕಥೆ.ಅಮೇರಿಕದ ವರ್ಜಿನಿಯಾ ಪ್ರಾಂತ್ಯದ ಗ್ರೀನ್ ಬ್ಯಾಂಕ್ ಖಗೋಳಾಲಯದಲ್ಲಿ ಸಂಶೋಧನೆ ಮಾಡುತಿದ್ದ ಫ್ರಾಂಕ್ ಡ್ರೇಕ್ ಏಂಬ ವಿಙ್ಞಾನಿಗೆ ಭೂಮ್ಯಾತೀತ ಜೀವಿಗಳ ಪತ್ತೆಯ ಉತ್ಸಾಹ.ಸಂಶೋಧನಾಲಯದ ಡಿಶ್ ಎಂಟೆನಾವನ್ನು ಭೂಮಿಯಿಂದ ೧೦.೫ ಜ್ಯೋತಿರ್ವರ್ಷ ದೂರದಲ್ಲಿರುವ ಎಪ್ಸಿಲಾನ್ ಎರಿಡಾನಿ ಎಂಬ ನಕ್ಶತ್ರದೆಡೆಗೆ ಗುರಿ ಹಿಡಿದರು.ರೇಡಿಯೋ ಸಂಜ್ಞೆಗಳು ಬಂದವು.ಕೂಲಂಕುಷ ಪರಿಶೀಲನೆಯ ಬಳಿಕ ಆ ಸಂಜ್ಞೆಗಳು ಗುಪ್ತಛರ ವಿಮಾನಗಳಿಂದ ಬಂದದ್ದೆಂದು ನಂತರ ಅರಿವಾಯಿತು.

ಫ್ರಾಂಕ್ ಡ್ರೇಕ್

ಡ್ರೇಕ್ ನಿರಾಶೆಗೊಳ್ಳಲಿಲ್ಲ. ನಮ್ಮ ಅಕಾಶಗಂಗೆಯಲ್ಲಿಯೇ ಎಷ್ಟು ಜೀವತಾಣಗಳು ಇರಬಹುದೆಂದು ಲೆಕ್ಕ ಹಾಕುವ ಹಗನಣಿತೋಕ್ತಿಯನ್ನು ರೂಪಿಸುವ ಬಗ್ಗೆ ಚಿಂತನೆಗೆ ತೊಡಗಿದರು ಮತ್ತು ಡ್ರೇಕ್ ಇಕ್ವೇಶನ್ ಎಂದೇ ಸುಪ್ರಸಿದ್ಧವಾದ ಗಣಿತೋಕ್ತಿಯನ್ನು ನಿಗಮಿಸಿದರು.ಆಕಾಶಗಂಗೆಯಲ್ಲಿರುವ ನಕ್ಷತ್ರಗಳು , ಆ ನಕ್ಷತ್ರಗಳಲ್ಲಿ ಇರಬಹುದಾದ ಗ್ರಹಗಳು, ಆ ಗ್ರಹಗಳ ಮೇಲ್ಮೈರಚನೆ ಮತ್ತು ವಾತಾವರಣ , ಅಲ್ಲಿ ಜೀವಲೋಕ ಇರುವ ಸಂಭಾವ್ಯತೆ , ಜೀವಿಗಳಲ್ಲಿ ಬೌದ್ಧಿಕತೆಯ ಸಾಧ್ಯತೆ , ಅವು ಸ್ವಾಂಗೀಕರಿಸಿಕೊಂಡ ತಾಂತ್ರಿಕ ಪರಿಣತಿ...ಹೀಗೆ ಹಲವು ಅಂಶಗಳನ್ನೆಲ್ಲಾ ಗಣನೆಗೆ ತೆಗೆದುಕೊಂಡು ರೂಪಿತವಾದ ಗಣಿತೋಕ್ತಿಯು ಜೀವಿಗಳ ಸಂಶೋಧನೆಗೆ ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸಿತು.ಡ್ರೇಕ್ ನಿರೂಪಿಸಿದ ಗಣಿತೋಕ್ತಿ ಹೀಗಿದೆ

N = ಆಕಾಶಗಂಗೆಯಲ್ಲಿ ನಮ್ಮಂತೆ ರೇಡಿಯೋ ಸಂಜ್ಞೆಗಳನ್ನು ಪ್ರೇಶಿಸುವ ಮತ್ತು ಸ್ವೀಕರಿಸುವ ತಾಂತ್ರಿಕ ಪರಿಣತಿಯನ್ನು ಹೊಂದಿರುವ ನಾಗರೀಕತೆಗಳ ಸಂಖ್ಯೆ

ಮತ್ತು

N* = ಪ್ರತಿವರ್ಷ ಸೂರ್ಯನಂಥ ನಕ್ಷತ್ರವೊಂದು ಆಕಾಶಗಂಗೆಯಲ್ಲಿ ಉಗಮವಾಗುವ ಸಂಖ್ಯೆ.
fp = ಆ ನಕ್ಷತ್ರಗಲಳಲ್ಲಿ ಗ್ರಹಗಳಿರುವ ಸಾಧ್ಯತೆಗಳ ಪ್ರಮಾಣ.
ne = ಜೀವ ಉಗಮಕ್ಕೆ ಯುಕ್ತ ವಾತಾವರಣ ಇರುವ ಗ್ರಹಗಳ ಸಂಖ್ಯೆ.
fl = ಉಗಮವಾದ ಜೀವ ವಿಕಸಿಸಲು ಎಲ್ಲ ಅನುಕೂಲ ಕಲ್ಪಿಸುವ ವಾತಾವರಣ ಇರುವ ಗ್ರಹಗಳ ಪ್ರಮಾಣ.
fi = ಉಗಮವಾದ ಜೀವಲೋಕ ವಿಕಸಿಸಿ ಬುದ್ಧಿಶಕ್ತಿ ಇರುವ ನಾಗರೀಕತೆಯ ನಿರ್ಮಾಣವಾಗುವ ಪ್ರಮಾಣ.
fc = ಅನ್ಯಲೋಕದ ಜೀವಿಗಳ ಸಂಪರ್ಕಕ್ಕೆ ವಿದ್ಯುತ್ಕಾಂತಿಯ ಸಂಜ್ಞ್ಗಳನ್ನು ರವಾನಿಸಲು ಅಥವ ಸ್ವೀಕರಿಸಲು ಸಾಮರ್ಥ್ಯವಿರುವ ಜೀವಲೋಕದ ಪ್ರಮಾಣ.
L = ಬಾಹ್ಯಾಕಾಶಕ್ಕೆ ಸಂಜ್ಞೆಯನ್ನು ರವಾನಿಸಿ ಮತ್ತೆ ಅನ್ಯಲೋಕದ ಜೀವಿಯನ್ನು ಸಂಪರ್ಕಿಸಿ ಅಲ್ಲಿಂದ ಕಳುಹಿಸಿದ ಸಂಜ್ಞೆಯನ್ನು ಪುನರ್ಸ್ವೀಕರಿಸಲು ತೆಗೆದುಕೊಳ್ಳಬಹುದಾದ ಕಾಲಾವದಿ.

ಡ್ರೇಕ್ ಗಣಿತೋಕ್ತಿ ಅಂದಾಜಿಸುವ ಪ್ರಕಾರ ನಮ್ಮ ಆಕಾಶಗಂಗೆಯಲ್ಲಿಯೇ ಸಾವಿರದಿಂದ ಹತ್ತು ಕೋಟಿ ಗ್ರಹಗಳಲ್ಲಿ ಜೀವಿಗಳಿರಬಹುದು.ಭೂಮಿಯೊಂದೇ ಜೀವಲೋಕದ ತಾಣವಲ್ಲ.

ಇರಬಹುದಾದ ಭೂಮ್ಯಾತೀತ ಜೀವಿಗಳೊಂದಿಗೆ ಸಮ್ಪರ್ಕಿಸಲು ರಮ್ಯ ಪ್ರಯತ್ನವನ್ನು ಖಗೋಳ ವಿಙ್ಞಾನಿಗಳು ಮಾಡಿದ್ದಾರೆ.೧೯೭೨ರಲ್ಲಿ ಗುರುವಿನೆಡೆಗೆ ನೆಗೆದ ಪಯೊನೀರ್-೧೦ ಆಕಾಶನೌಕೆಯಲ್ಲಿ ಲೋಹದ ಪಲಕವಿತ್ತು.ಅದರಲ್ಲಿ ಉಬ್ಬು ಚಿತ್ರ ಕೊರೆಯಲಾಗಿತ್ತು.ಚಿತ್ರದಲ್ಲಿ ಗಂಡು ಮತ್ತ್ ಹೆಣ್ಣು , ಹೈಡ್ರೊಜನ್ ಪರಮಾಣು , ಆಕಾಶಗಂಗೆಯಲ್ಲಿ ಸೌರವ್ಯೂಹ ಮತ್ತು ನಮ್ಮ ನೆಲೆ ಇತ್ಯಾದಿ ವಿವರಗಳು ಇದ್ದವು.ಆ ಫಲಕದಿಂದ ಭೂಮ್ಯಾತೀತ ಜೀವಿಗಳಿಗೆ ನಮ್ಮ ಬಗ್ಗೆ ಮಾಹಿತಿ ದೊರೆಯಲೆಂಬ ಕಲ್ಪನೆಯನ್ನು ರೂಪಿಸಿದವರು ಫ್ರಾಂಕ್ ಡ್ರೇಕ್ ಮತ್ತು ಸುಪ್ರಸಿದ್ಧ ಖಗೋಳವಿದ ಹಾಗು ವಿಙ್ಞಾನ ಬರಹಗಾರ ಕಾರ್ಲ್ ಸಾಗಾನ್.

೫ ವರ್ಷಗಳ ಬಳಿಕ ಸೌರವ್ಯೂಹದಂಚಿಗೆ ಹಾರಿತು ವೊಯೇಜರ್ ಎಂಬ ಆಕಾಶ ನೌಕೆ.ಈ ಬಾರಿ ಸಾಗಾನ್ ತಮ್ಮ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಿದರು. ಚಿತ್ರ ಫಲಕದೊಂದಿಗೆ ಧ್ವನಿಮುದ್ರಿತ ತಟ್ಟೇಯನ್ನು ಇರಿಸಲಾಯಿತು.ತಟ್ಟಯಲ್ಲಿ ಪ್ರಕೃತಿಯ ಬೇರೆ ಬೇರೆ ದನಿಗಳನ್ನು ಮತ್ತು ೫೦ ಭಾಷೆಗಳಲ್ಲಿ ಸಂಗೀತವನ್ನು ಮುದ್ರಿಸಲಾಗಿತ್ತು-ಬಹು ದೂರದ ವಸುಧರೆಯಲ್ಲಿ ನಾವಿದ್ದೇವೆ ಎಂದು ಹೇಳುವುದಕ್ಕೆ.ಈ ನೌಕೆಗಳು ಇಂದು ಸೌರವ್ಯೂಹದಂಚನ್ನು ದಾಟಿ, ಅಂತರ್ ಬ್ರಹ್ಮಾಂಡೀಯ ಆಕಾಶದಲ್ಲಿ ಸಾಗುತ್ತಿವೆ ಅನೂಹ್ಯಲೋಕದತ್ತ.

ನಾವು ಆಕಾಶನೌಕೆಯಲ್ಲಿ ಸಾಗುತ್ತಾ ಜೀವಿಗಳ ಹುಡುಕಾಟ ಮಾಡಬೇಕು.ಇದಕ್ಕೆ ಬೆಳಕಿನ ವೇಗದಲ್ಲಿ ಸಾಗುವ ನೌಕೆಗಳನ್ನು ನಿರ್ಮಿಸಬೇಕಾಗುತ್ತದೆ.ಅಂಥ ನೌಕೆಗೆ ಬಳಸುವ ಇಂಧನವು ಅಗಾಧ ಪ್ರಮಾಣದಲ್ಲಿ ಬೇಕಾಗುತ್ತದೆ.ಹೈಡ್ರೊಜನ್ ಅಥವ ಆಕ್ಸಿಜನ್ ಚಾಲಿತ ನೌಕೆಗಳ ಬದಲಾಗಿ ದ್ರವ್ಯ ಮತ್ತು ಪ್ರತಿದ್ರವ್ಯಗಳು ಒಟ್ಟೈಸಿ ಸೃಷ್ಟಿಯಾಗಿವ ಶಕ್ತಿಯನ್ನು ಬಳಸಿಕೊಳ್ಳಬಹುದು. ಆದರೆ ಇದರ ಬದಲಾಗಿ ಬೆಳಕಿನ ವೇಗದಲ್ಲಿ ಸಾಗುವ ವಿದ್ಯುತ್ಕಾಂತಿಯ ಸಂಜ್ಞೆಗಳನ್ನು ವಿಶ್ವದಂತರಾಳಕ್ಕೆ ತೂರಿಬಿಡುವುದೆ ಹೆಚ್ಚು ವ್ಯಾವಹಾರಿಕ.ಕಡಿಮೆ ಶಕ್ತಿಯ , ದೀರ್ಘ ತರಂಗಾಂತರದ ರೇಡಿಯೋ ಅಲೆಗಳು ಬಾಹ್ಯಾಂತರಿಕ್ಶದ ಅನಿಲ ಮೇಘದ ಮೂಲಕ ಕಿಂಚಿತ್ತೂ ಹೀರಲ್ಪಡದೆ ಸರಾಗವಾಗಿ ಸಾಗುವ ಕಾರಣದಿಂದ ರೇಡಿಯೋ ಸಂಜ್ಞೆಗಳನ್ನು ಪ್ರೇಶಿಸುವ ಮತ್ತು ಸ್ವೀಕರಿಸುವ ರೇಡಿಯೋ ದೂರದರ್ಶಕಗಳು ಇಲ್ಲಿ ಉಪಯುಕ್ತ.

ಕಾರ್ಬನ್ ಮತ್ತು ಹೌಡ್ರೊಜನ್ ಭೂಜೀವಿಗಳ ಮುಖ್ಯ ಘಟಕ.ಅನ್ಯ ಜೀವಿಗಳಲ್ಲು ಇದೇ ಇರಬಹುದು.ಅವು ಇನ್ನಾವುದೊ ರಾಸಾಯನಿಕಗಳಿಂದ ಸೃಷ್ಟಿಯಾಗಿರಬಹುದು.ಅತ್ಯಧಿಕ ಉಷ್ಣತೆ ಅಥವ ನೀಮ್ನೋತಿನಿಮ್ನ ಉಶ್ಣತೆಯಲ್ಲೂ ಜೀವಿಸಬಹುದಾದ ಸಾಮರ್ಥ್ಯ ಇರಬಹುದು.ಬಾಹ್ಯಾಕಾಶದಲ್ಲಿ ಸೂಕ್ಷ್ಮಾಣುಜೀವಿಗಳು ಇರುವ ಬಗ್ಗೆ ತಿಳಿದಿಲ್ಲ.ಭವಿಶ್ಯದ ಅತ್ಯಾಧುನಿಕ ದೂರದರ್ಶಕಗಳು ಗ್ರಹಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದಾಗ ಇನ್ನಷ್ಟು ಹೊಸ ಕಾಣಿಕೆ ಲಭ್ಯವಾಗಬಹುದು.ಇಂಥ ಸಂಶೋಧನೆಗಳಿಂದ ವಿಶ್ವದ ಅನೂಹ್ಯ ತಾಣದಲ್ಲಿರುವ ಜೀವಲೋಕ ಪತ್ತೆಯಾಗುತಾದೆ.