ಸದಸ್ಯ:Madhupriya Poojari/ನನ್ನ ಪ್ರಯೋಗಪುಟ 1
ಗೋಚರ
ತಪಸಿ
[ಬದಲಾಯಿಸಿ]ರಸಬೀಜ, ಕಾಲಾದ್ರಿ, ಚಿರಬಿಲ್ವ
ಸಸ್ಯದ ವಿವರ
[ಬದಲಾಯಿಸಿ]ದೊಡ್ಡ ಪ್ರಮಾಣದ ಪರ್ಣಪಾತಿ ಮರ, ಮೇಲ್ಮೊಗವಾಗಿ ಹರಿಡಿದ ಕೊಂಬೆಗಳು , ಅಂಡ ವೃತ್ತಾಕಾರದ ಎಲೆಗಳು. ತೊಗಟೆ ಬೂದುಬಣ್ಣ, ಸಾಧಾರಣ ನಯ: ತೊಗಟೆಯನ್ನು ಕೆತ್ತಿದಾಗ ಹಾಗೂ ಎಲೆ ಮತ್ತು ಎಳ ಕಡ್ಡಿಯನ್ನು ಹಿಸುಕಿದಾಗ ಅಹಿತ ವಾಸನೆ ಬರುವುದು. ತೊಗಟೆ ದೊಡ್ಡ ದೊಡ್ಡ ಹೆಪ್ಪಳಿಕೆಗಳಾಗಿ ಕಳಚುವುದು. ಕರ್ನಾಟಕದ ಮಿತ್ರ ಪರ್ಣಪಾತಿ ಕಾಡುಗಳಲ್ಲಿ ಇದರ ವ್ಯಾಪನೆ. ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಹಾಸನ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುವುದು.
ಜನವರಿ-ಫೆಬ್ರವರಿ ತಿಂಗಳಲ್ಲಿ ಎಲೆ ಉದುರಿ, ಫೆಬ್ರವರಿ- ಮಾರ್ಚ್ ತಿಂಗಳುಗಳಲ್ಲಿ ಸಣ್ಣ ಹಸಿರು ಛಾಯೆಯ ಹೂಗಳು ಮೂಡಿ ಇದರ ರೆಕ್ಕೆಗಾಯಿಗಳು, ಏಪ್ರಿಲ್-ಮೇನಲ್ಲಿ ಬಲಿಯುವುವು. ಉದುರಿದ ಕಾಯಿಗಳು ಗಾಳಿಯಲ್ಲಿ ಕೊಂಚ ದೂರ ಹರಡಬಲ್ಲವು ಹೊಸ ಬೀಜಗಳು ಚೆನ್ನಾಗಿ ಮೊಳೆಯುವುವು. ಬೀಜದ ಜೀವಶಕ್ತಿ ಹೆಚ್ಚು ಕಾಲವಿರುವುದಿಲ್ಲ. ಒಂದು ವರ್ಷದ ಒಳಗೆ. ಸಾಧಾರಣ ಬೆಳಕು ಬೇಡವ ಮರ. ಚಿಗರು ಗುಣ ಇರುವುದು. ಒಳ್ಳೆಯ ನೀರೋಟವಿರುವೆಡೆ ಊರ್ಜಿತವಾಗುವುದು. ಬೆಳೆಯ ಗತಿ ಚುರುಕು. ಸ್ವಾಭಾವಿಕ ಪುನರುತ್ಪತ್ತಿ ಸಮರ್ಪಕ. ಬೀಜ ಬಿತ್ತಿ ಇಲ್ಲವೇ ನರ್ಸರಿಗಳನ್ನು ಬೆಳೆಸಿದ ಸಸಿಗಳನ್ನು ನೆಟ್ಟು ಕೃತಕ ಪುನರುತ್ಪನ್ನ ಮಾಡಬಹುದು. ಬೀಜಗಳನ್ನು ಹೊಸದಾಗಿದ್ದಾಗ ಬಳಸಿದರೆ ಸಫಲತೆ ಹೆಚ್ಚು. ದಾರುವು ಹಳದಿ ಛಾಯೆಯ ಬೂದು ಅಥವಾ ಎಳೆಗಂದು ಬಣ್ಣ ಹೊಂದಿದ್ದು, ಬಲಯುತವಾಗಿದ್ದು ಗೃಹ ನಿರ್ಮಾಣ, ಕೃಷಿ ಉಪಕರಣಗಳಿಗೆ ಉಪಯೋಗಿಸಲ್ಪಡುವುದು. ಇದನ್ನು ಕೆತ್ತನೆಗೂ ಹಾಗೂ ಬ್ರಷ್‍ಗಳ ಹಿಂಬಾಗಕ್ಕೆ ಬಳಸಲಾಗುವುದು.s ಆಧಾರ : ವನಸಿರಿ