ಸದಸ್ಯ:Maddhumitha S/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

ಎಲ್ಲಾ ಓದುಗಾರರಿಗೂ ನನ್ನ ನಮಸ್ಕಾರಗಳು !!!


ನನ್ನ ಕುಟುಂಬ

ನನ್ನ ಹೆಸರು ಮಧುಮಿತ. ನಾನು ಮೂಲತಃ ಬೆಂಗಳೂರಿನಲ್ಲಿ ಜನಿಸಿದ್ದೆ. ನನ್ನ ಜನ್ಮವು ೦೬ನೇ ನವೆಂಬರ್, ೨೦೦೪ರಲ್ಲಿ ಬೆಂಗಳೂರಿನ ಸೇಂಟ್ ಮಾರ್ತಾಸ್ ಆಸ್ಪತ್ರೆಯಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಆರ್.ಶ್ರೀನಿವಾಸನ್ ಹಾಗೂ ತಾಯಿಯ ಹೆಸರು ಜಿ.ಸರಸ್ವತಿ . ನಾನು ನನ್ನ ತಂದೆ ತಾಯಿಯವರಿಗೆ ಮೂರನೇ ಸಂತಾನವಾಗಿ ಜನಿಸಿದ್ದೇನೆ. ಹಾಗೂ ನನಗೆ ಒಬ್ಬ ಸಹೋದರನಿದ್ದಾನೆ ಅವನ ಹೆಸರು ಸೂರಜ್ ಹಾಗೂ ನನಗೆ ಒಬ್ಬ ಸಹೋದರಿ ಇದ್ದಾಳೆ ಅವಳ ಹೆಸರು ನಂದಿನಿ. ನನ್ನ ಸಹೋದರ ತನ್ನ ೧ ನೇ ತರಗತಿಯಿಂದ ೧೦ ನೇ ತರಗತಿಯನ್ನು ಬೆಂಗಳೂರಿನಲ್ಲಿ ಓದಿದನು, ಅವನ ೧೦ ನೇ ತರಗತಿಯ ನಂತರ ನನ್ನ ತಾಯಿ ಅವನನ್ನು ಮಂಗಳೂರಿನಲ್ಲಿ ಹಾಸ್ಟೆಲ್‌ಗೆ ಸೇರಿಸಿದರು ಏಕೆಂದರೆ ಅವನು ತುಂಬಾ ಹಠಮಾರಿಯಾಗಿದ್ದನು, ಅವನು ತನ್ನ ಡಿಗ್ರಿ ಮುಗಿಯುವವರೆಗೆ ೫ ವರ್ಷಗಳ ಕಾಲ ಹಾಸ್ಟೆಲ್‌ನಲ್ಲಿ ಇದ್ದನು. ಮಂಗಳೂರು ನಲ್ಲಿ ಇರುವ ಅಲ್ಳ್ವಾಸ್ ಕಾಲೇಜಿನಲ್ಲಿ ಡಿಗ್ರಿ ಓದಿದ್ದ. ಹಾಗಾಗಿ ಅವನೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ನನ್ನ ಅಕ್ಕನಿಗೆ ಶ್ರವಣ ಸಮಸ್ಯೆ ಇದೆ ಆದ್ದರಿಂದ ಅವಳು ಶೀಲಾ ಕೊಥವಾಲಾ ಇನ್‌ಸ್ಟಿಟ್ಯೂಟ್ ಫಾರ್ ದಿ ಡೆಫ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮಾಡಿದಳು. ತನ್ನ ಶಾಲಾ ಶಿಕ್ಷಣದ ನಂತರ ಅವಳು ತನ್ನ ಪಿ.ಯು.ಸಿ, ಡಿಗ್ರಿ ಮತ್ತು ಎಂ.ಎಸ್‌.ಸಿಯನ್ನು ಕ್ರೈಸ್ಟ್ ಯೂನಿವರ್ಸಿಟಿ ಬೆಂಗಳೂರಿನಲ್ಲಿ ಮಾಡಿದಳು..


ನನ್ನ ವಿದ್ಯಾಭ್ಯಾಸ

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಒಂದರಿಂದ ಮೂರನೇ ತರಗತಿಯವರೆಗೂ ಎಸ್.ವ್.ಈ.ಎಸ್ ಪ್ರೈಮರಿ ಶಾಲೆಯಲ್ಲಿ ಮುಗಿಸಿ ನಂತರ ನಾಲ್ಕರಿಂದ ಹತ್ತನೇ ತರಗತಿಯವರೆಗೂ ಬಾಲ್ಡ್ವಿನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಗಿಸಿದೆ ಹಾಗೂ ನನ್ನ ಹತ್ತನೇ ತರಗತಿಯಲ್ಲಿ ೮೩% ಅಂಕಗಳನ್ನು ಗಳಿಸಿ ಉತ್ತೀರ್ಣಳಾದೆ. ನನ್ನ ಶಾಲೆಯ ಜೀವನದಲ್ಲಿ ಆಸಕ್ತಿ ಇದ್ದ ವಿಷಯ ಕನ್ನಡ ಮತ್ತು ಗಣಿತ. ನನ್ನ ಪ್ರಿಯ ಶಿಕ್ಷಕಿಯ ಹೆಸರು ಲಾವಣ್ಯ ಮೇಡಂ ಅವರು ಎಲ್ಲಾ ವಿಷಯದಲ್ಲೂ ನನಗೆ ಹುಮ್ಮಸ್ಸು ತುಂಬಿ ಪ್ರೋತ್ಸಾಹಿಸುತ್ತಿದ್ದರು ಹಾಗೂ ನನ್ನ ಗೆಳತಿಯರ ಹೆಸರು ಸರಣ್ಯ, ಸಾಕ್ಷಿ, ಪೂಜಾ ಇವರೆಲ್ಲರೂ ನನ್ನ ಜೊತೆ ಇರುತ್ತಿದ್ದರು. ನಂತರ ನನ್ನ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಯನ್ನು ಕ್ರೈಸ್ಟ್ ಪಿ.ಯು ಕಾಲೇಜಿನಲ್ಲಿ ಪ್ರಾರಂಭಿಸಿದ ಸಮಯದಲ್ಲಿ ನಮಗೆ ಆನ್ಲೈನ್ ಶಿಕ್ಷಣವಿತ್ತು. ಆದರಿಂದ ನನ್ನ ಗೆಳತಿ, ಗೆಳೆಯರೊಂದಿಗೆ ಬಹಳ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ನನ್ನ ಕಾಲೇಜು ಜೀವನ ಇದ್ದದ್ದು ಸುಮಾರು ಆರು ತಿಂಗಳು ಮಾತ್ರ. ನನ್ನ ಕಾಲೇಜಿನಲ್ಲಿ ನನಗೆ ಇಷ್ಟವಾದ ವಿಷಯ ಅಕೌಂಟೆನ್ಸಿ ಮತ್ತು ಕನ್ನಡ. ನನ್ನ ಪ್ರಿಯ ಶಿಕ್ಷಕಿಯ ಹೆಸರು ಮೋನಿಕಾ ಹಾಗೂ ರೋಸ್ಮಾ ಮೇಡಂ. ನನ್ನ ಕಾಲೇಜಿನಲ್ಲಿ ನನ್ನ ಗೆಳತಿಯರ ಹೆಸರು ಅಸ್ಮಿತ, ಮರ್ಸಿ ಹಾಗೂ ಚೈತ್ರ.

ಪಿ.ಯು.ಸಿ ಮುಗಿದ ನಂತರ ನಾನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ಯೂನಿವರ್ಸಿಟಿ ಬೆಂಗಳೂರು ದಲ್ಲಿ ಬಿಕಾಂ ಮಾರ್ನಿಂಗ್ಗೆ ಆರ್ಜಿ ಸಲ್ಲಿಸಿದೆ. ಆದರೆ ಮೊದಲ ಎರಡು ಬಾರಿಗೆ ಅರ್ಜಿಯನ್ನು ತಿರಕರಿಸಿ. ನಂತರ ಮೂರನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದರು. ಈಗ ನಾನು ನನ್ನ ವ್ಯಾಸಂಗವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಂ (ಮಾರ್ನಿಂಗ್)ನಲ್ಲಿ ಮಾಡುತ್ತಿದ್ದೇನೆ. ಹಾಗೂ ನನ್ನ ಗೆಳೆಯರ ಹೆಸರು ಅಸ್ಮಿತ, ಶರ್ಮಿಳ, ಭವ್ಯ, ಗುರುರಾಜ್, ಲಕ್ಷ್ಮಿಕಾಂತ್, ಅದ್ವೈತ್.


ನನ್ನ ಹವ್ಯಾಸ

ನನಗೆ ಚಲನಚಿತ್ರ ನೋಡುವುದರಲ್ಲಿ, ನೃತ್ಯ ಹಾಗೂ ನನಗೆ ಚಿತ್ರ ಬಿಡಿಸುವುದು ಮತ್ತು ಮನೆಯಲ್ಲಿ ಮಾಡುವ ಪೂಜೆ ಮತ್ತು ಸಂಪ್ರದಾಯಕ ಕಾರ್ಯಕ್ರಮಗಳಲ್ಲಿ ನಾನು ನನ್ನ ತೊಡಗಿಸಿಕೊಳ್ಳಲು ಇಷ್ಟ ಪಡುತ್ತೇನೆ. ಹಾಗೂ ನನಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಇಷ್ಟ.

ನನಗೆ ಖೋ ಖೋ, ಕ್ರಿಕೆಟ್, ಬ್ಯಾಡ್ಮಿಂಟನ್‌ನಂತಹ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ನನ್ನ ತಂದೆಯ ಕಾರಣದಿಂದ ನಾನು ಮೊದಲು ಕ್ರಿಕೆಟ್ ಅನ್ನು ಇಷ್ಟಪಡಲು ಪ್ರಾರಂಭಿಸಿದೆ. ನಾನು ಮೊದಲ ಬಾರಿಗೆ ಕ್ರಿಕೆಟ್ ನೋಡಿದ್ದು ನನ್ನ ತಂದೆಯೊಂದಿಗೆ, ಅವರು ನನಗೆ ಹೇಗೆ ಆಡಬೇಕೆಂದು ಕಲಿಸಿದರು. ನನಗೆ ಸಮಯ ಸಿಕ್ಕಾಗಲೆಲ್ಲಾ ನಾನು ನನ್ನ ನೆರೆಹೊರೆಯವರನ್ನು ಕರೆದುಕೊಂಡು ಮೈದಾನಕ್ಕೆ ಹೋಗಿ ಕ್ರಿಕೆಟ್ ಆಡುತ್ತಿದ್ದೆ. ಅದು ಸುವರ್ಣ ದಿನಗಳು, ಆದರೆ ಶಾಲೆಯ ಕೆಲಸ, ಕಾರ್ಯಯೋಜನೆಗಳು, ಬೋರ್ಡ್ ಪರೀಕ್ಷೆಗಳ ಕಾರಣ ನಾನು ಬೆಳೆಯುತ್ತಿದ್ದಂತೆ ನಾನು ಹೊರಗೆ ಹೋಗಿ ಹೆಚ್ಚು ಆಡುವುದಿಲ್ಲ.


ನನ್ನ ಬಾಲ್ಯ

ನಾನು ಮೂರನೇ ತರಗತಿ ಓದುತ್ತಿದ್ದಾಗ ನನಗೆ ಇನ್ನು ನೆನಪಿದೆ ನನ್ನ ತಂದೆ ಮನೆಗೆ ಒಂದು ನಾಯಿಮರಿಯನ್ನು ಕರೆದಿದ್ದರು. ನನ್ನ ಚಿಕ್ಕಪ್ಪ ಅದನ್ನು ನನ್ನ ತಂದೆಗೆ ಕೊಟ್ಟರು ಏಕೆಂದರೆ ಅವರು ತಮ್ಮ ಊರಿಗೆ ಹೋಗುತ್ತಿದ್ದರು ಮತ್ತು ಅದನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮೊದಲಿಗೆ ನನಗೆ ಅದನ್ನು ನೋಡಿದಾಗ ಸ್ವಲ್ಪ ಭಯವಾಯಿತು ಆದರೆ ಕೆಲವು ದಿನಗಳ ನಂತರ ನಾನು ಅದನ್ನು ಇಷ್ಟಪಡಲು ಪ್ರಾರಂಭಿಸಿದೆ ನನ್ನ ಹೆಚ್ಚಿನ ಸಮಯವನ್ನು ಅದರೊಡನೆ ಆಟ ಆಡುತ್ತಾ ಕಳೆಯುತ್ತಿದ್ದೆ. ಅದು ನನ್ನ ಉತ್ತಮ ಸ್ನೇಹಿತ ಮತ್ತು ನಮ್ಮ ಕುಟುಂಬದಲ್ಲಿ ಪ್ರಮುಖ ವ್ಯಕ್ತಿ ಆಯಿತು. ಅದು ಚಿಕ್ಕದಾಗಿ ಮತ್ತು ಕಂದು ಬಣ್ಣದಾಗಿತ್ತು. ಪ್ರತಿದಿನ ನಾನು ಶಾಲೆಗೆ ಹೊರಡುವಾಗ ಅದು ನಾನು ರಸ್ತೆಯ ಮೂಲೆಗೆ ಹೋಗುವವರೆಗೂ ಬೊಗಳತ್ತಲೆ ಇರುತ್ತದೆ ಮತ್ತು ನಾನು ಶಾಲೆಯಿಂದ ಹಿಂತಿರುಗುವವರೆಗೂ ಅದು ಗೇಟ್ ಬಳಿಯೇ ಕಾಯುತ್ತಿರುತ್ತದೆ. ನನ್ನ ಶಾಲೆಯಲ್ಲಿ ಕೊಟ್ಟಿರುವ ಕೆಲಸವನ್ನು ಮಾಡದೆ ಇಂದ ಬಂದಿದ ನಂತರ ನಾನು ಅದರೊಂದಿಗೆ ಆಟವಾಡುತ್ತಿದ್ದೆ. ಒಂದು ದಿನ ನಾನು ಶಾಲೆಯಿಂದ ಹಿಂತಿರುಗಿದಾಗ ಅಲ್ಲಿ ನಾಯಿಮರಿ ಇಲ್ಲ ಎಂದು ನಾನು ನನ್ನ ತಂದೆಯನ್ನು ಕೇಳಿದಾಗ ಅವರು ನಾಯಿಮರಿಯನ್ನು ಚಿಕ್ಕಪ್ಪ ತೆಗೆದುಕೊಂಡರು ಎಂದು ಹೇಳಿದರು. ನಾಲ್ಕು ಐದು ದಿನಗಳವರೆಗೆ ನಾನು ನನ್ನ ತಂದೆಗೆ ನಾಯಿಮರಿಯನ್ನು ಹಿಂತಿರುಗಿಸಬೇಕೆಂದು ಹಠ ಮಾಡುತ್ತಿದ್ದೆ ಮತ್ತು ನಂತರ ಅದನ್ನು ಮರೆತೇ ಬಿಟ್ಟೆ. ನಾನು ಅದರೊಂದಿಗೆ ಕಳೆದ ದಿನಗಳು ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ. ಕೆಲವು ವರ್ಷಗಳ ನಂತರ ದಟ್ಟನೆ ಅದರ ಬಗ್ಗೆ ನೆನಪಾಗಿ ನನ್ನ ತಂದೆಯನ್ನು ಕೇಳಿದೆ ನಂತರ ಅವರು 'ನಾಯಿಮರಿಗೆ ಏನೋ ಒಂಥರದ ಕಾಯಿಲೆ ಇತ್ತು ಮತ್ತು ವೈದ್ಯರು ಅದು ಹೆಚ್ಚು ದಿನಗಳವರೆಗೆ ಬದುಕುವುದಿಲ್ಲ ಎಂದರು' ಹೇಳಿದರು ಆದರಿಂದ ಅವರು ಅದನ್ನು ನಮ್ಮ ಚಿಕ್ಕಮ್ಮ ಮನೆಯಲ್ಲಿ ಬಿಟ್ಟರಂತೆ. ಆ ನಾಯಿ ಮರಿ ಕೆಲವೇ ದಿನಗಳಲ್ಲಿ ಸತ್ತು ಹೋಯಿತಂತೆ. ನಾನು ಅದನ್ನು ಮರೆತಿದ್ದರು ಇದನ್ನು ಕೇಳಿದ ನಂತರ ನನ್ನ ಹೃದಯ ತುಂಡು ತುಂಡಾಯಿತು. ಆ ದಿನ ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ವಾಗಿತ್ತು. ಇದು ನನ್ನ ಜೀವನದಲ್ಲಿ ಸಂಭವಿಸಿದ ವಿಷಯದ ಅತ್ಯುತ್ತಮ ಮತ್ತು ಕೆಟ್ಟ ಭಾಗವಾಗಿದೆ.

.ನನ್ನ ಬಾಲ್ಯದಲ್ಲಿ ನನಗೆ ನೆನಪಿರುವ ಒಂದು ಸಂತೋಷದ ಘಟನೆಯೆಂದರೆ ನಾನು ನನ್ನ ೪ ನೇ ತರಗತಿಯಲ್ಲಿದ್ದಾಗ ನನ್ನ ತಂದೆ ನನಗೆ ನನ್ನ ಮೊದಲ ಸೈಕಲ್ ತಂದರು. ನನಗೆ ಇನ್ನೂ ನೆನಪಿದೆ ನಾನು ನನ್ನ ಹೆತ್ತವರಿಗೆ ಬೈಸಿಕಲ್ ಅನ್ನು ಕೇಳುತ್ತಿದ್ದೆ, ಏಕೆಂದರೆ ನನ್ನ ಇತರ ಸ್ನೇಹಿತರೆಲ್ಲರೂ ತಮಗಾಗಿ ಬೈಸಿಕಲ್ ಅನ್ನು ಹೊಂದಿದ್ದರು ಆದ್ದರಿಂದ ನಾನು ಆಗಾಗ್ಗೆ ಬಿಟ್ಟುಬಿಡುತ್ತಿದ್ದೆ . ನನ್ನ ತಂದೆ ನನಗೆ ಸೈಕಲ್ ತಂದುಕೊಟ್ಟ ದಿನ ನನಗೆ ತುಂಬಾ ಸಂತೋಷವಾಯಿತು. ಅದು ನಾಲ್ಕು ಚಕ್ರದ ಮತ್ತು ನಿಯಾನ್ ಕಿತ್ತಳೆ ಬಣ್ಣದ ಬೈಸಿಕಲ್ ಆಗಿತ್ತು.

ನನ್ನ ಜೀವನದಲ್ಲಿ ಒಂದು ಮಧುರವಾದ ನೆನಪು ನನ್ನ ೧೦ ನೇ ತರಗತಿ. ನನ್ನ ಶಾಲಾ ಜೀವನದ ಕೊನೆಯ ವರ್ಷ, ಆ ವರ್ಷದಲ್ಲಿ ನಾನು ತುಂಬಾ ಎಂಜಾಯ್ ಮಾಡಿದ್ದೆವು, ನಾವು ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನ್‌ಗೆ ಹೋಗುತ್ತಿದ್ದೆವು, ಮೇಡಮ್‌ಗೆ ನಮಗೆ ಹುಷಾರಿಲ್ಲ ಎಂದು ಹೇಳಿ ನರ್ಸ್ ರೂಮ್‌ಗೆ ಹೋಗುತ್ತಿದ್ದೆವು, ಮಾರ್ಚ್ ಫಾಸ್ಟ್‌ಗೆ ಹಾಜರಾಗಲು ಮತ್ತು ನಮ್ಮ ಜೂನಿಯರ್‌ಗಳೊಂದಿಗೆ ಕ್ಲಾಸ್ ಬಂಕ್ ಮಾಡಲು ಅನುಮತಿ ಕೇಳುತ್ತಿದ್ದೆವು. . ಶಾಲೆಯ ನಂತರ ನಾನು ಟ್ಯೂಷನ್‌ಗೆ ಹೋಗುತ್ತಿದ್ದೆ ೫ ಗಂಟೆಗೆ ಶಾಲೆ ಬಿಡುತ್ತದೆ ಮತ್ತು ೪ ಗಂಟೆಗೆ ಟ್ಯೂಷನ್, ಶಾಲೆ ಮತ್ತು ಟ್ಯೂಷನ್ ನಡುವೆ ೧ ಗಂಟೆಯ ಅಂತರವಿದೆ, ನಾನು ಮತ್ತು ನನ್ನ ಸ್ನೇಹಿತರು ಹೊರಗೆ ಹೋಗಿ ಮೊಮೊಸ್ ತಿಂದುಕೊಂಡು ೪:೩೦ ಗೆ ಹಿಂತಿರುಗುತ್ತಿದ್ದೇವೆ ಆದರೆ ನಮ್ಮ ಸರ್ ನಾವು ಅವರ ಪ್ರಿಯವಾದ ವಿದ್ಯಾರ್ಥಿಗಳಾಗಿದ್ದರಿಂದ ಗದರಿಸದೆ ನಮ್ಮನ್ನು ಒಳಗೆ ಬಿಡುತ್ತಿದ್ದರು.