ಸದಸ್ಯ:M D APOORVA/sandbox
ಗೋಚರ
ಮೈಟೊಕಾಂಡ್ರಿಯವನ್ನು ಜೀವಕೋಶದ ಶಕ್ತಿಕೇಂದ್ರ ಎಂದು ಕರೆಯಲಾಗುತ್ತದೆ.ಮೈಟೊಕಾಂಡ್ರಿಯ ಸಾಮಾನ್ಯವಾಗಿ ಎಲ್ಲಾ ಯೂಕರಿಯೋಟ್ಗಳಲ್ಲಿ ಕಾಣಿಸುತ್ತದೆ.ಮೈಟೊಕಾಂಡ್ರಿಯದ ವ್ಯಾಪ್ತಿಯು 0.5 ವ್ಯಾಸ 1.0 ಮೈಕ್ರೊಮೀಟರ್ನಷ್ಟಿರುತ್ತದೆ.ಮೈಟೊಕಾಂಡ್ರಿಯ ಜೀವಕೋಶದ ವಿಧಕ್ಕೆ ಅನುಗುಣವಾಗಿ ಸಂಖ್ಯೆ ಮತ್ತು ನೆಲೆಯು ವ್ಯತ್ಯಾಸವಾಗುತ್ತದೆ. .ಒಂದು ಜೀವಕೋಶದಲ್ಲಿ ಮೈಟೊಕಾಂಡ್ರಿಯದ ಸಂಖ್ಯೆಯು ಜೀವಿ, ಅಂಗಾಂಶ, ಮತ್ತು ಜೀವಕೋಶದ ರೀತಿಯ ಮೂಲಕ ವ್ಯಾಪಕವಾಗಿ ಬದಲಾಗಬಹುದು.ಮೈಟೊಕಾಂಡ್ರಿಯ ಪ್ರಮುಖ ಪಾತ್ರ ಶಕ್ತಿ ತಯಾರಿಸುವುದು.ಮೈಟೊಕಾಂಡ್ರಿಯಾ ಎ.ಟಿ.ಪಿ ಉತ್ಪಾದಿಸುವುದೇ ಅಲ್ಲದೆ ಇನ್ನೂ ಅನೇಕ ಕೆಲಸಗಳನ್ನು ಮಾಡುತ್ತದೆ. ಮೈಟೊಕಾಂಡ್ರಿಯ ಅನೇಕ ಮೆಟಬಾಲಿಕ್ ಕಾರ್ಯಗಳಲ್ಲಿ ಒಂದು ಪ್ರಮುಖವಾದ ಪಾತ್ರವಹಿಸುತ್ತದೆ.ಅವು ಯಾವುವೆ೦ದರೆ : • ಪೊರೆಯ ವಿಭವದ ನಿಯಂತ್ರಣ. • ಅಪೊಪ್ಟೋಸಿಸ್-ಯೋಜಿತ ಕೋಶ ಮರಣ . • ಕೋಶಗಳ ಜೀವರಸಾಯನಿಕ ನಿಯಂತ್ರಣ. • ಕೆಲವೊಂದು ಹೀಮ್ ಸಂಶ್ಲೇಷಣೆಯಾಗುವ ಪ್ರತಿಕ್ರಿಯೆಗಳು . • ಸ್ಟಿರಾಯ್ಡ್ಗಳ ಸಂಶ್ಲೇಷಣೆ.