ಸದಸ್ಯ:MSPriya

ವಿಕಿಪೀಡಿಯ ಇಂದ
Jump to navigation Jump to search

ಕೃಷಿಯ ವಾಣಿಜ್ಯೀಕರಣ[ಬದಲಾಯಿಸಿ]

ಪೀಠಿಕೆ[ಬದಲಾಯಿಸಿ]

ಆಹಾರ ದಾನ್ಯಗಳ ಹೊರತಾದ ಉಪ ಉತ್ಪನ್ನವಾಗಿಯೂ ಮಾರ್ಪಡಿಸಬಲ್ಲ ಹತ್ತಿ,ನೀಲಿ,ಕಬ್ಬು,ಸೆಣಬು,ಹೊಗೆಸೊಪ್ಪು ಮೊದಲಾದ ಬೆಳೆಗಲನ್ನು ನಗದು ಬೆಳೆಗಳೆಂದು ಕರೆಯಲಾಗಿದೆ.ಇವುಗಳನ್ನು ಬಹು ವಿಧದಲ್ಲಿ ಉಪ ಉತ್ಪನ್ನಗಳಿಗಾಗಿಯೂ ಬಳಸಬಹುದಾಗಿದೆ.ಆದ್ದರಿಂದ ವಿಶ್ವದ ಎಲ್ಲೆಡೆ ಬಳಕೆಯಾಗುವಂತಹವುಗಳಾಗಿರುವುದರಿಂದ ವಿಶ್ವಮಾರುಕಟ್ಟೆ ಗಳಿಸಿವೆ.ಹಾಗಾಗಿ ಬೇಡಿಕೆಯೂ ಅಧಿಕವೆ.ಇವುಗಳಿಂದ ಪಡೆಯಬಹುದಾದಷ್ಟು ಅಧಿಕ ಲಾಭ ಆಹಾರ ಧಾನ್ಯಗಳಿಂದ ಸಿಗುವುದಿಲ.ಹಾಗೂ ಎಲ್ಲೆಡೆ ಬಿಕಾರಿಯೂ ಆಗುವುದಿಲ್ಲ.ಈ ಹಿನ್ನೆಲೆಯಲ್ಲಿ ಬ್ರಿಟಿಷರು ಭರತದಲ್ಲಿ ಅಧಿಕಾರ ಹಿಡಿದ ಮೇಲೆ ಅಂಥಹ ಬೆಳೆಗಳನ್ನು ಬೆಳೆಯುವಂತೆ ಭಾರತದ ರೈತರ ಮೇಲೆ ಒತ್ತಡ ಹೇರಿದರು.ಈ ತೆರನಾದ ನಗದು ಬೆಳೆಗಳ ಕೃಷಿ ಸಾಗುವಳಿಯನ್ನು ಕೃಷಿವಾಣಿಜ್ಯೀಕರಣ ಎಂದು ಕರೆಯಲಾಗಿದೆ.

ಕಾರಣಗಳು[ಬದಲಾಯಿಸಿ]

  1. ೧೮೬೦-೭೦ರ ದಶಕದಲ್ಲಿ ಹತ್ತಿಗೆ ಬೇಡಿಕೆ ಅಧಿಕವಾಯಿತು. ಏಕೆಂದರೆ ಇಂಗ್ಲೆಂಡಿನ ಲಂಕಾಷೈರ್ ಮತ್ತು ಮ್ಯಾಂಚೆಸ್ಟೆರ್ ಗಳಲ್ಲಿ ಭರದಿಂದ ಬೆಳೆದ ಬಟ್ಟೆ ಕಾರ್ಖಾನೆಗಳಿಗೆ ಹತ್ತಿ ಅವಶ್ಯವಿದ್ದಿತು.
  2. ಇಂಗ್ಲೆಂಡಿನ ವಾತಾವರಣ ಹತಿ ಬೆಳೆಗೆ ಅನುಕೂಲವಾಗಿರಲಿಲ್ಲ. ಆದ್ದರಿಂದ ಭಾರತದಲ್ಲಿ ಹತ್ತಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಯೋಜನೆಗಳನ್ನು ರೂಪಿಸತೊಡಗಿದರು. ಕೇವಲ ಆಹಾರ ಧಾನ್ಯಗಳ ಬೆಳೆಗೆ ಸೀಮಿತವಾಗಿದ್ದ ಭಾರತದ ಕೃಷಿ ಈಗ ಮಾರ್ಪಾಡು ಹೊಂದ ಬೇಕಯಿತು.
  3. ಆವರೆಗೂ ಸ್ಢಳೀಯ ಕೈಮಗ್ಗಗಳಿಗೆ ಬೇಕಾಗುವಷ್ಟು ಹತ್ತಿ ಮಾತ್ರ ಬೆಳೆಯಲಾಗುತ್ತಿದ್ದಿತು.ಅದರೆ ಅದು ಯಂತ್ರಚಾಲಿತ ಕಾರ್ಖಾನೆಗಳಿಗಾಗುವಷ್ಟು ಪ್ರಮಾಣದಲ್ಲಿರಲಿಲ್ಲ. ಈ ಕೊರತೆಯನ್ನು ನೀಗಲು ಬ್ರಿಟಿಷ್ ಸರ್ಕಾರ ಹತ್ತಿಯನ್ನು ವಾಣೆಜ್ಯಿ ಬೆಳೆಯಾಗಿ ಬೆಳೆಯಲು ಒತ್ತಯ ತರಲಾರಂಭಿಸಿತು.
  4. ವಾಣಿಜ್ಯೀಕರಣ ಬೆಳೆಯಿಂದ ಹೆಚ್ಚಿನ ನಗದು ಗಳಿಸಬಹುದಾದ್ದರಿಂದ ಜಮೀನ್ದಾರರು ಸ್ವಗತಿಸಿದರು.ಆದರೆ ಸಣ್ಣ ರೈತರಿಗೆ ಅದರಿಂದ ಅನಾನುಕೂಲವಾಗಲಾರಂಭಿಸಿತು.ಏಕೆಂದರೆ ಇರುವ ಅಲ್ಪಭೂಮಿ ಆಹಾರ ಪದಾರ್ಥಗಳನ್ನು ಬೆಳೆಯಲು ಸಾಕಾಗಿದ್ದಿತು.

ಕೃಷಿಯ ವಾಣಿಜ್ಯೀಕರಣಗಳು[ಬದಲಾಯಿಸಿ]

ಹತ್ತಿ ಬೆಳೆ ವಾಣಿಜ್ಯೀಕರಣ[ಬದಲಾಯಿಸಿ]

ಆರಂಭದಲ್ಲಿ ಹತ್ತಿ,ಸೆಣಬು,ಇಂಡಿಗೊ ಬೆಳೆಯನ್ನು ಅಧಿಕಗೊಳಿಸಲು ಸಣ್ಣ ರೈತರನ್ನು ಒತ್ತಾಯಿಸಿ ಬೆಳೆಯುವಂತೆ ಮಾಡಲಾಯಿತು.ಕ್ರಮೇಣ ಹೊಗೆಸೊಪ್ಪು,ಟೀ ಮತ್ತು ಕಬ್ಬು ಬೆಳೆಗೂ ಕೂಡ ಒತ್ತಾಯ ತರಲಾಯಿತು. ಆದರೆ ಈ ಬೆಳೆ ಬೆಳೆಯದವರ ಮೇಲೆ ದೌರ್ಜನ್ಯ ಎಸಗಲಾಯಿತು.ಇಷ್ಟಾದರೂ ಈ ಬೆಳೆಗಳ ಬೆಲೆಯ ನಿಷ್ಕರ್ಷೆ ಬ್ರಿಟಿಷ್ ಸರಜಕಾರವೇ ನಿರ್ಧರಿಸಬೇಕಿದ್ದಿತು.ಬ್ರಿಟಿಷರು,ಪಟೇಲರು ಮತ್ತು ಕುಲಕರ್ಣಿಗಳ ಮೂಲಕ ರೈತರ ಮೇಲೆ ದೌರ್ಜನ್ಯ ನಡೆಸಿದರು.ಕೃಷಿ ವಾಣಿಜ್ಯೀಕರಣಗೊಂಡಂತೆ ಜಮೀನ್ದಾರರು ಲೇವಾದೇವಿ ಗಾರರೂ ಆಗಿ ಧನಿಕರಾದರು.ಆದರೆ ಜಮೀನ್ದಾರರು ಹಾಗು ಸಣ್ಣ ರೈತರು ಆಹಾರ ಬೆಳೆಯದೆ ನಿರ್ಲಕ್ಷಿತಗೊಡವು.ಇದರ ಪರಿಣಾಮವಾಗಿ ಅವುಗಳ ಕೊರತೆಯಿಂದಾಗಿ ಆಗಿಂದಾಗ್ಗೆ ಕ್ಷಾಮಗಳು ತಲೆದೋರ ತೊಡಾಗಿದವು.ಈ ಹಿನ್ನೆಲೆಯಲ್ಲಿ ಕ್ಷಾಮ ಪರಿಹಾರ ಕಾರ್ಯಗಳಲ್ಲದೆ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.

ಕಬ್ಬು ಬೆಳೆ ವಾಣೀಜ್ಯೀಕರಣ[ಬದಲಾಯಿಸಿ]

ಇದೇ ರೀತಿ ಉತ್ತರ ಭಾರತದ ಗಂಗಾನದಿ ಬಯಲು ಪ್ರದೇಶದಲ್ಲಿ ಕಬ್ಬನ್ನು ಹೆಚ್ಚು ಬೆಳೆಯಲು ಪ್ರೋತ್ಸಾಹಿಸಲಾಯಿತು.ಬ್ರಿಟಿಷ್ ವಾಣಿಜ್ಯೋದ್ಯಮಿಗಳಲ್ಲಿದೆ ಸ್ಥಳೀಯ ಲೇವಾದೇವಿಗಾರರು ಸಹ ರೈತರಿಗೆ ಕಬ್ಬು ಬೆಳೆಯಲು ಸಾಲ ನೀಡಲು ಮುಂದೆ ಬಂದರು.ಸಕ್ಕರೆ ಕಾರ್ಖಾನೆಗಳನ್ನು ಸ್ಥಪಿಸಲು ಜಮೀನ್ದಾರ ಮತ್ತು ಲೇವಾದೇವಿಗಾರರಿಗೆ ಪ್ರೋತ್ಸಾಹ ನೀಡಲಾಯಿತು.ಹಾಗಾಗಿ ಸಕ್ಕರೆ ಉತ್ಪಾದನೆ ವೃದ್ದಿಗೊಂಡಿತು.ಅದನ್ನು ವಿದೇಶಗಳಿಗೆ ರಫ್ತು ಮಾಡಲಾರಂಭಿಸಿದರು.

ಟೀ ಬೆಳೆ ವಾಣೀಜ್ಯೀಕರಣ[ಬದಲಾಯಿಸಿ]

ಟೀ ಉತ್ಪನ್ನ ಹೆಚ್ಚಿಸಲು ಬಂಗಾಳ,ಅಸ್ಸಾಂ,ಮೆಘಾಲಯ,ಮನಿಪುರ ಮೊದಲದ ಗುಡ್ಡ ಗಾಡು ಜನರನ್ನು ಒಕ್ಕಲೆಬ್ಬಿಸಿ ಅವರ ಕೃಷಿ ಭೂಮಿಗಳಲ್ಲಿ,ಟೀ ತೋಟಗಳನ್ನು ಅಭಿವೃದ್ದಿಗೊಳಿಸಲು ಉತ್ತೇಜನ ನೀಡಲಾಯಿತು.೧೮೨೩ರಲ್ಲಿ ರಾಬರ್ಟ್ ಬ್ರೂಸ್,ಅಲೆಗ್ಸಾಂಡರ್,ಬ್ರೂಸ್,ಕ್ಯಪ್ಟನ್ ಜಂಕಿನ್ಸ್,ಲೆಫ್ಟಿನೆಂಟ್ ಕಾರ್ಲಟನ್ ಮೊದಲಾದ ಬಿಳಿಯರು ಟೀ ತೋಟಗಳನ್ನು ಅಭಿವೃದ್ಧಿಗೊಳಿಸಿದರು.ಅವರಿಗೆ ಬ್ರಿಟಿಷ್ ಸರ್ಕಾರ ಕಡಿಮೆ ಬೆಲೆಯಲ್ಲಿ ಗುಡ್ಡಗಾಡು ಪ್ರದೇಶಗಳನ್ನು ನೀಡಿತು.ಗವರ್ನರ್ ಜನರಲ್ ಲಾರ್ಡ್ ವಿಲಿಯಮ್ ಬೆಂಟಿಂಕನು ಟೀ ತೋಟಗಳ ಅಭಿವೃದ್ಧಿಗಾಗಿ ೧೮೩೪ರಲ್ಲಿ 'ಟೀ ಸಮಿತಿ'ಯನ್ನು ನೇಮಿಸಿದನು.ಈ ಸಮಿತಿ ಡಾIIವಾಲಿಚ್ ಎಂಬ ವಿಜ್ನ್ಯಾನಿಯ ಸಲಹೆಗಳ ಆಧಾರದ ಮೇಲೆ ಟೀಗಾರ್ಡನ್ ಗಳನ್ನು ಅಭಿವೃದ್ಧಿಗೊಳಿಸಿತು.ಕ್ರಮೇಣ ಬಂದವಾಳದ ಕೊರತೆಯನ್ನು ನೀಗಲು ಷೇರುದಾರರನ್ನು ನೊಂದಾಯಿಸಿಕೊಂಡ ಟೀ ಕಂಪನಿಗಳು ಟೀ ತೋಟಗಳು ಅಭಿವೃದ್ಧಿಯಲ್ಲಿ ತೊಡಗಿದವು. ಉದಾ;ಕಾಕರಿಲ್ ಅಂಡ್ ಕಂಪನಿ, ಬಾಯ್ಡ್ ಅಂಡ್ ಕ್ಂಪನಿ (೧೮೩೯), ಕಾರ್ ಅಂಡ್ ದ್ವಾರಕನಾಥ ಟ್ಯಾಗೂರ್ ಕಂಪನಿ (೧೮೪೦), ಅಸ್ಸಾಂ ಟೀ ಕಂಪನಿ, ಜೋರಹತ್ ಟೀ ಕಂಪನಿ (೧೮೪೫)ಮೊದಲಾದವು. ೧೮೬೫ರ ಹೊತ್ತಿಗೆ ಟೀ ಕಂಪನಿಗಳ ಸಂಖ್ಯೆ ೨೦ಕ್ಕೆ ಏರಿ ಟೀ ಉತ್ಪನ್ನ ದ್ವಿಗುಣಗೊಂಡಿತು. ಟೀ ತೋಟಗಳಿಂದ ಷೇರುದಾರರಿಗೆ ಆರಂಭದಲ್ಲಿ ಶೇ.೮ ೧/೨ಯಿದ್ದ ಲಾಭಾಂಶ ೧೯೮೦ ವೇಳೆಗೆ ಶೇ ೩೫ಕ್ಕೆ ಏರಿತು. ಈ ಮಧ್ಯೆ ಲಿಪ್ಟ್ನ್ ಟೀಕ್ಂಪನಿ, ಬ್ರೂಕ್ ಬಾಂಡ್ ಕ್ಂಪನಿಗಳು ಟೀ ತೋಟಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವು. ೧೯೦೦ರ ನ್ಂತರ ಟೀ ತೋಟಗಳನ್ನು ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಗುಡ್ಡಗಾಡು ರೈತರನ್ನು ಒಕ್ಕಲೆಬ್ಬಿಸಿ ಅಲ್ಲೆಲ್ಲ ಟೀ ತೋಟಗಳನ್ನು ಅಭಿವೃದ್ದಿ ಗೊಳಿಸಲಾಯಿತು. ಒಕ್ಕಲೆದ್ದವರಲ್ಲಿ ಬಹುಮಂದಿ ಅಲ್ಲಿನ ಟೀ ತೋಟಗಳಲ್ಲೆ ಕೂಲಿ ಕಾರ್ಮಿಕರಾಗಿ ಮುಂದುವರಿದರು.

ಇಂಡಿಗೊ ಬೆಳೆ ವಾಣೀಜ್ಯೀಕರಣ[ಬದಲಾಯಿಸಿ]

ವಾಣಿಜ್ಯ ಬೆಳೆಗಳಲ್ಲಿ ಇಂಡಿಗೊ ಅಥವ ನೀಲಿಸೊಪ್ಪಿನ ಬೆಳೆ ಅತ್ಯಂತ ಲಾಭದಾಯಕ ಬೆಳೆಯಾಗಿದ್ದಿತು. ಏಕೆಂದರೆ ಯೂರೋಪಿನ ಬಟ್ಟೆ ತಯಾರಿಕಾ ಉದ್ದಿಮೆಯಲ್ಲಿ ಬಣ್ನದ ಬೇಡಿಕೆಯಿದ್ದಿತು. ಭಾರತೀಯ ರೈತರು ತಮ್ಮ ಕೃಷಿ ಭೂಮಿಯ ಕನಿಷ್ಟ ೧/೬ ಭಾಗದಲ್ಲಿ ನೀಲಿಸೊಪ್ಪು ಬೆಳೆಯುವುದನ್ನು ಕಡ್ಡಾಯಗೊಳಿಸಸಲಾಯಿತು. ಅದು ಅತ್ಯಂತ ಫಲವತ್ತದ ಭುಮಿಗಳಲ್ಲಿ ಬೆಳೆಯಬೇಕೆಂದು ತಾಕೀತು ಮಾದಲಾಗುತ್ತಿದ್ದಿತು. ಬಂಗಾಳದ ಗವರ್ನರ್ ಆದ ಜೆ.ಬಿ.ಗ್ರಂಟ್ ಆಗ್ನೆ ಪ್ರಕಾರ (೧೮೬೦) ಅಷ್ಟು ಭಾಗದ ಭೂಮಿಯಲ್ಲಿ ನೀಲಿಸೊಪ್ಪನ್ನು ಕಡ್ದಾಯವಾಗಿ ಮತ್ತು ಉಚಿತವಾಗಿ ಬ್ರಿಟಿಷ್ ಭಾರತ ಸರ್ಕಾರಕ್ಕೆ ಬೆಳೆದು ಕೊಡಬೇಕಿದ್ದಿತು. ತಪ್ಪಿದಲ್ಲಿ ಹಲವು ಬಗೆಯ ತೊಂದರೆಗಳನ್ನು ಅನುಭವಿಸ ಬೇಕಾಗಿದ್ದಿತು.

ಕಾಫಿ ಬೆಳೆಯ ವಾಣೀಜ್ಯೀಕರಣ[ಬದಲಾಯಿಸಿ]

ಕಾಫಿ ಬೆಳೆಯನ್ನು ೧೮೨೦ರ ದಶಕದಲ್ಲಿ ಬಂಗಾಳದಲ್ಲಿ ಮಿಸ್ಟರ್ ಎಂಬುವನು ಆರ್ಂಭಿಸಿದನು. ಆದರೆ ಅಲ್ಲಿ ಹವಾಮಾನ ಪ್ರತಿಕೂಲವಾದದ್ದರಿಂದ ಕಾಫಿ ಬೆಲೆಗೆ ದಕ್ಷಿಣ ಭಾರತವನ್ನು ೧೮೪೩ರಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು.ಇಲ್ಲಿನ ಬ್ರಿಟಿಷ್ ಕಮೀಷನರ್ಸ್ ಮತ್ತು ರೆಸೆಡೆಂಟ್ರುಗಳು ಕಾಫಿ ತೋಟ ಅಭಿವೃದ್ದಿಗೆ ಪ್ರೋತ್ಸಾಹ ನೀಡಿದರು. ಬ್ರಿಟಿಷ್ ಸರಕಾರ ಕಾಫಿ, ಟೀ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬಿಳಿಯರಿಗೆ ಸೂಕ್ತ ಭೂಮಿಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲು ಅನುಕೂಲವಾಗುವಂತೆ ಕಾಯಿದೆಗಳನ್ನು ಜಾರಿಮಾಡಿತಿ. ಹಗಾಗಿ ದಕ್ಷಿಣ ಭಾರತದ ಬಾಬಾ ಬುಡನ್ ಗಿರಿ, ನೀಲಗಿರಿ, ವೈನಾಡು, ಕೊಡಗಿನ ಬ್ರಹ್ಮಗಿರಿ, ಶಿವಮೊಗ್ಗದ ಸಹ್ಯಾದ್ರಿ, ಹಾಸನ, ದಕ್ಷಿಣ ಕನ್ನಡ ಮೊದಲಾದ ಪ್ರದೇಶಗಳಲ್ಲಿ ಕಾಫಿ ತೋಟಗಳು ಅಭಿವೃದ್ದಿ ಗೊಂಡವು. ಅವುಗಳಲ್ಲಿ ಕರ್ನಾಟಕವೊಂದರಲ್ಲೆ ಆರಂಭದಲ್ಲಿ ೧೧,೦೦೦ ಎಕರೆ ಇದ್ದ ಪ್ರದೇಶ ೧೮೬೦ರ ವೇಳೆಗೆ ಸುಮಾರು ೩೦,೦೦೦ ಎಕರೆ ಪ್ರದೇಶದಲ್ಲಿ ಕಾಫಿ ತೋಟ ಅಭಿವೃದ್ದಿಗೊಳಿಸಲಾಯಿತು. ಮುಂದಿನ ೧೦ ವರ್ಷಗಳಲ್ಲಿ ೧೮೦,೦೦೦ ಎಕರೆ ಕಾಫಿ ತೋಟ ವಿಸ್ತಾರಗೊಂಡಿತು. ನಂತರದ ದಿನಗಳಲ್ಲಿ ೨,೧೬,೦೦೦ ಎಕರೆಗೆ ಹೆಚ್ಚಿಸಲಾಯಿತು.

Indian School.pngThis user is a member of WikiProject Education in India