ವಿಷಯಕ್ಕೆ ಹೋಗು

ಸದಸ್ಯ:MANTESH.P.TALLUR/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಲ್ಸಿಯಂ ಒಂದೇ ಮಟ್ಟದಲ್ಲಿರುವುದು ತುಂಬ ಕುತೂಹಲಕಾರಿ ಅಂಶ. ಅದರ ಮಟ್ಟವನ್ನು ಮೂರು ಮುಖ್ತ ಸಂಗತಿಗಳು ನಿಯಂತ್ರಸುತ್ತವೆ. ೧)ಪ್ಯಾರಾಥಾರ್ಮೊನ್-ಎಂಬ ರಸದೂತ ೨)ವಿಟಮಿನ್-ಡಿ-೩ ೩)ಕ್ಯಾಲ್ಸಿಟೊನಿನ್-ಎಂಬ ಇನ್ನೊಂದು ರಸದೂತ ರಕ್ತದಲ್ಲಿ-ಕ್ಯಾಲ್ಸಿಯಂ ಮಟ್ಟ ಇಳಿಯುವ ಕಾರಣಗಳು ಹಾಗೂ ಲಕ್ಷಣಗಳು ೧)ಮೂತ್ರಪಿಂಡದ ದೀರ್ಘವಧಿಯ ಸೋಲುವಿಕೆ-ಮಂದಗತಿಯ ಕ್ರಿಯೆ ೨)ಅನುವಂಶಿಕ ಹಾಗೂ ಮಧ್ಯದಲ್ಲಿ ಬಂದ ಪ್ಯಾರಾ ಥ್ಯೆರಾಯಡ್-ರಸದೂತ ಕೊರತೆ ೩)ಮಿಥ್ಯ ಥ್ಯೆರಾಯಡ್-ಕೊರತೆ ೪)ಮಾಗ್ನೀಶಿಯಂ-ಕೊರತೆ ೫)ತತ್ಕಾಲೀನ-ಕ್ಯಾಲ್ಸಿಯಂ ಕೊರತೆ ಇಳಿದ ಮಟ್ಟ ದಿಂದಾಗುವ ತೊದರೆಗಳು -ತೀವ್ರತೆರವಾದ ಸೋಂಕು. -ಪ್ರೂಟೀನುಗಲ ಅಭಾವ ಮಕ್ಕಳ ಬೆಳವಣಿಗೆ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ಪೂರೈಕೆಯಾಗಬೇಕು. ಅದರಲ್ಲೂ ಕ್ಯಾಲ್ಸಿಯಂ ಕೊರತೆ ಉಂಟಾದರೆ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದು. ಕ್ಯಾಲ್ಸಿಯಂ ದೇಹದಲ್ಲಿ ಕಡಿಮೆಯಾದರೆ ಉಗುರುಗಳಲ್ಲಿ ಹೊಳಪು ಕಡಿಮೆಯಾಗಿ ಬಿಳಿಯಾದ ಚುಕ್ಕಿಗಳು ಉಂಟಾಗುವುದು, ಕೂದಲು ಸೊಂಪಾಗಿ ಬೆಳೆಯದಿರುವುದು, ಕೈಕಾಲುಗಳಲ್ಲಿ ನೋವು ಈ ಎಲ್ಲಾ ಲಕ್ಷಣಗಳು ಕಂಡು ಬರುತ್ತವೆ. ಕ್ಯಾಲ್ಸಿಯಂ ಕೊರತೆ ಉಂಟಾದರೆ ನಿರ್ಲಕ್ಷ್ಯ ಮಾಡಬಾರದು ಏಕೆಂದರೆ ಅದು ಮುಂದೆ ಏರೊತ್ತಡ (ಅಧಿಕ ರಕ್ತದೊತ್ತಡ)ದಂತಹ ಸಮಸ್ಯೆಗಳನ್ನು ತರುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಂಡರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ. 1. ಮಕ್ಕಳನ್ನು ವೈದ್ಯರಿಗೆ ತೋರಿಸಿ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಸೇವಿಸಿದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನೀಗುವುದು. ಆದರೆ ಕೆಲವೊಮ್ಮೆ ಮಾತ್ರೆಗಳು ಅಡ್ಡ ಪರಿಣಾಮ ಬೀರುವುದು ಉಂಟು. 2. ಕ್ಯಾಲ್ಸಿಯಂ ಇರುವ ಆಹಾರಗಳ ಅಂದರೆ ಹಾಲಿನ ಉತ್ಪನ್ನಗಳು, ಸೊಪ್ಪು ತರಕಾರಿ, ಹಣ್ಣುಗಳು, ಬಾದಾಮಿ, ಸಮುದ್ರ ಆಹಾರಗಳನ್ನು ಸೇವಿಸಲು ಕೊಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. 3. ಬೆಳಗ್ಗೆ ಸೂರ್ಯನ ಕಿರಣಗಳು ಮೈಗೆ ತಾಗಿದರೆ ದೇಹಕ್ಕೆ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮಾರ್ಥ್ಯ ಹೆಚ್ಚುತ್ತದೆ. ಪುರುಷ ಮತ್ತು ಮಹಿಳೆಯರಲ್ಲಿ ವಯಸ್ಸಾದಂತೆ ಖನಿಜಾಂಶಗಳು ಕಡಿಮೆಯಾಗತೊಡಗುತ್ತದೆ. ಆದ್ದರಿಂದ ಪ್ರತಿ ನಿತ್ಯ ಒಂದು ಲೋಟ ಹಾಲು ಕುಡಿಯುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗದಂತೆ ನೋಡಿಕೊಳ್ಳಬಹುದು. 4.ಮೃದ್ವಂಗಿ, ಬ್ರೆಡ್, ಕಿತ್ತಳೆ ಜ್ಯೂಸ್, ದವಸ ಧಾನ್ಯಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಇರುತ್ತದೆ. 5. ಐಸ್ ಕ್ರೀಮ್, ಬಾಳೆಹಣ್ಣು, ಚೀಸ್ ಇವುಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆ ನೀಗಿಸಬಹುದು. ಬುದ್ಧಿಶಕ್ತಿಯನ್ನು ಚುರುಕುಗೊಳಿಸಲು ಮತ್ತು ದೇಹದ ಆರೋಗ್ಯ ಕಾಪಾಡಲು ಕನಿಷ್ಠವೆಂದರೆ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು.