ವಿಷಯಕ್ಕೆ ಹೋಗು

ಸದಸ್ಯ:MANJUNATH D YADAV/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಣುಬಾಂಬ್ ಬಳಕೆ ಸಾಧಕವೋ ಬಾಧಕವೋ?

[ಬದಲಾಯಿಸಿ]

ಇದೊಂದು ಅಂತಾರಾಷ್ಟ್ರೀಯ ಯುಗ, ಸ್ಪರ್ಧಾತ್ಮಕ ಯುಗ ಅಲ್ಲದೇ ಕಂಪ್ಯೂಟರ್ ಯುಗ ಕೂಡ ಹೌದು. ಇಂತಹ ಯುಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಗಳಿಸಬೇಕಾದರೆ ಎಲ್ಲಾ ರಾಷ್ಟ್ರಗಳಿಗೂ ಸ್ಪರ್ಧೆಯ ಅವಶ್ಯಕತೆ ಇದೆ. ಅದಕ್ಕಾಗಿ ವಿಜ್ಞಾನಿಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಅದು ಜನರಿಗೆ ಬಳಕೆಯಾಗುವಂತೆ ತಿಳಿಸಿಕೊಡುತ್ತಾರೆ. ಒಳ್ಳೆಯ ಉದ್ದೇಶಕ್ಕಾಗಿ ಕಂಡುಹಿಡಿಯುವ ವಿಧಾನ ಅವರದ್ದಾದರೂ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಅಣುಬಾಂಬ್ ತಯಾರಿಕೆ ಕೂಡ ಒಂದು. ಯಾವಾಗ ಆಮೇರಿಕಾ ರಾಷ್ಟ್ರವು ಹಿರೋಶಿಮಾ ಮತ್ತು ನಾಗಾಸಾಕಿನ ಪ್ರದೇಶಗಳ ಮೇಲೆ ಅಣುಬಾಂಬಿನ ಪ್ರಯೋಗ ಮಾಡಿತೋ, ಅದರಿಂದ ಉಂಟಾದ ಹಾನಿಗಳನ್ನು ಕಂಡು ಅಣುಬಾಂಬ್ ಬಳಕೆ ಒಂದು ಬಾಧಕ ಎಂದು ಪರಿಗಣಿಸಿ ಬಿಟ್ಟೆವು. ಆದರೆ ಅದು ತಪ್ಪು. ಇಂದಿನ ದಿನಮಾನಗಳಲ್ಲಿ ಅಮೇರಿಕಾ, ಪಾಕಿಸ್ತಾನ ಜಪಾನ್‌ನಂತಹ ರಾಷ್ಟ್ರಗಳು ಮುಂದುವರೆಯುತ್ತಿರುವುದು ಪ್ರಗತಿಪಥದತ್ತ ಮುನ್ನುಗ್ಗುತ್ತಿರುವುದು ಈ ಕಾರಣದಿಂದಲೇ ಈ ರಾಷ್ಟ್ರಗಳು ತಮ್ಮ ಮೇಲೆ ಆಗುವ ವಿದೇಶಿ ಆಕ್ರಮಣವನ್ನು ತಡೆಗಟ್ಟುವುದಕ್ಕಾಗಿ ಅನೇಕ ರೀತಿಯ ಶಸ್ತ್ರಾಸ್ತ್ರಗಳ ಬಳಕೆ ಮಾಡಿಕೊಳ್ಳುತ್ತಿವೆ. ಆದರೆ ಭಾರತವನ್ನು ಪರಿಗಣಿಸಿದಾಗ ಅದು ಹಿನ್ನಡೆಯನ್ನು ಪಡೆದಿರುವುದು ಒಂದು ದುರಂತ. ಅಮೇರಿಕಾ, ಜಪಾನ್ ನಂತಹ ರಾಷ್ಟ್ರಗಳು ಬೇರೆ ರಾಷ್ಟ್ರಗಳಿಂದ ತಮ್ಮ ದೇಶದ ಮೇಲೆ ಆಗುವ ಆಕ್ರಮಣಗಳನ್ನು ತಡೆಗಟ್ಟಲು ಅವು ಬೇರೆ ರಾಷ್ಟ್ರಗಳ ವಿರುದ್ಧ ಹರಿಹಾಯಲು ಹಿಂದೆ ಮುಂದೆ ನೋಡುವುದಿಲ್ಲ. ಈ ಸ್ವಾರ್ಥ ಮನೋಭಾವದ ನಿಟ್ಟಿನಲ್ಲಿ ಜಗತ್ತು ಮುಂದುವರೆಯುತ್ತಿರುವಾಗ ಅನೇಕ ರಾಷ್ಟ್ರಗಳು ಇದರಿಂದ ವಂಚಿತರಾಗಿರುವುದು ಒಂದು ದುಸ್ಥಿತಿ. ಭಾರತ ಇಂದು ತನ್ನ ರಕ್ಷಣೆಗಾಗಿ ಇತರ ರಾಷ್ಟ್ರಗಳೊಡನೆ ಅಣು ಒಪ್ಪಂದವನ್ನು ಮಾಡಿಕೊಂಡಿರುವುದನ್ನು ಕಾಣಬಹುದು. ಆದರೆ ಅಮೇರಿಕಾದಂತಹ ರಾಷ್ಟ್ರಗಳು ಜಗತ್ತಿನ ಹಿರಿಯಣ್ಣ ಎಂದೆನಿಸಿಕೊಳ್ಳುವ ಸಲುವಾಗಿ ತಿರುಗೇಟು ನೀಡುವ ಸಾಧ್ಯತೆಯೂ ಇರುತ್ತದೆ. ಇದನ್ನು ಒಂದು ದೃಷ್ಟಾಂತದ ಮೂಲಕ ನೋಡಿದವೆಂದರೆ; ಒಂದು ಮಂಗ ಇರುತ್ತದೆ ಅದು ಪ್ರವಾಹ ಬಂದಂತಹ ಸಂದರ್ಭದಲ್ಲಿ ತನ್ನ ಮರಿಗಳನ್ನೆಲ್ಲ ಕಂಕುಳಲ್ಲಿ ಕೂರಿಸಿಕೊಳ್ಳುತ್ತದೆ. ಪ್ರವಾಹ ಹೆಚ್ಚಾದಾಗ ತನ್ನ ತಲೆಯ ಮೇಲೆ ಕೂರಿಸಿಕೊಳ್ಳುತ್ತದೆ. ಇನ್ನೇನು ಆ ಪ್ರವಾಹ ತನ್ನನ್ನೂ ಕೂಡ ಆಹ್ವಾನಕ್ಕೆ ತೆಗೆದುಕೊಳ್ಳುತ್ತದೆ ಎಂದಾಗ ಆ ಮಂಗ ತನ್ನ ಮರಿಗಳನ್ನೆಲ್ಲ ಕೆಳಗೆ ಹಾಕಿ ತಾನು ಬದುಕುಳಿಯಲು ಯತ್ನಿಸುತ್ತದೆ. ಹೀಗೆ ಸ್ವಾರ್ಥ ರಾಷ್ಟ್ರಗಳೂ ಕೂಡ ಮೊದಲು ಎಲ್ಲ ರಾಷ್ಟ್ರಗಳು ಮುಂದೆ ಬರಲಿ ಎಂಬ ಉದ್ದೇಶದಿಂದ ಅಣು ಒಪ್ಪಂದ ಮಾಡಿಕೊಂಡರೂ ನಂತರ ಆ ರಾಷ್ಟ್ರಗಳು ಉನ್ನತ ಮಟ್ಟಕ್ಕೆರುವ ಸಂದರ್ಭವನ್ನು ಕಂಡು ಹತ್ತಿಕ್ಕಲು ಪ್ರಯತ್ನಿಸುತ್ತವೆ. ಇನ್ನೂ ಪರಿಸರವಾದಿಗಳ ವಿಷಯಕ್ಕೆ ಬಂದರೆ ಅವರು ಅಣುಬಾಂಬುವಿನ ವಿರೋಧಿಗಳು, ಅಣುಬಾಂಬ್ ಅನೇಕ ರೀತಿಯ ಸಣ್ಣ ಕಣಗಳಿಂದ ಕೂಡಿದ್ದು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಪ್ರಕೃತಿಯ ವಿನಾಶಕ್ಕೆ ಕಾರಣವಾದುದು. ಅಣುಬಾಂಬ್ ಬಳಕೆ ಮನುಷ್ಯನ ಅಸ್ತಿತ್ವಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ದೇಶದಲ್ಲಿ ನಡೆಯುವ ದುಷ್ಕೃತ್ಯಗಳಿಗೆ ಕಾರಣ ಎನ್ನುವುದು ಅವರ ವಾದ.

ಆದರೆ ಮೇಲಿನ ಅಂಶಗಳನ್ನೆಲ್ಲ ಪರಿಗಣಿಸಿ ಒಟ್ಟಾರೆಯಾಗಿ ಹೇಳುವುದಾದರೆ ಇಲ್ಲಿ ಅಣುಬಾಂಬ್ ತಯಾರಿಕೆ ಇರಲಿ, ಬಳಕೆ ಇರಲಿ ಒಂದು ಬಾಧಕ ಅಥವಾ ಸಾಧಕ ಎಂದು ಪರಿಗಣಿಸುವುದು ಕಷ್ಟಸಾಧ್ಯ. ಅದನ್ನು ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಮ್ಮ ದೇಶವನ್ನು ಪ್ರಗತಿಪಥದತ್ತ ದಾಪುಗಾಲು ಹಾಕುವಂತೆ ಮಾಡಬೇಕಾದರೆ ಸರಿಯಾದ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬೇಕು. ಪ್ರಕೃತಿಯ ಉಳಿವಿಗೂ ಕಾರಣವಾಗಬೇಕು. ಬುದ್ಧನ ತತ್ತ್ವದಂತೆ ವಜ್ರ ಕೆಸರಿನಲ್ಲಿ ಬಿದ್ದರೆ ಕೈ ಕೆಸರಾಗದಂತೆ ಬರಿ ವಜ್ರವನ್ನು ಆಯ್ದುಕೊಳ್ಳಬೇಕು. ಅಂತೆಯೇ ಅಣುಬಾಂಬಿನ ಬಳಕೆಯಿಂದ ಆಗುವ ಅನಾಹುತಗಳನ್ನು ತಡೆದು ಅದರಿಂದಾಗುವ ಉಪಯೋಗಗಳನ್ನು ಮಾತ್ರ ಆಯ್ದುಕೊಳ್ಳಬೇಕು. ಆಗ ಅದನ್ನು ಕಂಡುಹಿಡಿದಿದ್ದಕ್ಕೂ ಸಾರ್ಥಕತೆ ಸಿಗುತ್ತದೆ.