ಸದಸ್ಯ:MADHUSUDANA K/ನನ್ನ ಪ್ರಯೋಗಪುಟ
ಹೂವಿನಹಡಗಲಿಯ ಪ್ರೆಕ್ಷಣೀಯ ಸ್ಥಳಗಳು.
ಹೂವಿನಹಡಗಲಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿದ್ದು ಅವುಗಳಲ್ಲಿ ಮೈಲಾರ, ಕುರುವತ್ತಿ, ಹೊಳಲು, ಮದಲಘಟ್ಟಿ, ಅಂಗೂರು ನಡುಗಡ್ಡೆ ಸೋಗಿ ಬೆಟ್ಟದ ಮಲ್ಲೇಶ್ವರ ಹಾಗೂ ಇತರೆ ಅನೇಕ ಪ್ರೆಕ್ಷಣೀಯ ಸ್ಥಳಗಳಿದ್ದು ಅವುಗಳು ಅನೇಕ ವಿಶೇಷತೆಗಳನ್ನು ಒಳಗೊಂಡಿವೆ.
ಮೈಲಾರ ಕ್ಷೇತ್ರದಲ್ಲಿ ಶ್ರೀ ಮೈಲಾರಲಿಂಗೇಶ್ವರನ ದೇವಸ್ಥಾನವಿದ್ದು ರಾಷ್ಟ್ರದ ಮೂಲೆ ಮೂಲೆಗಳಿಂದಲೂ ಅನೇಕ ಜನರು ಪುಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಲ್ಲಿ ಗೊರವರ ಕುಣಿತ, ಕುದುರೆಕಾರರ ಕುಣಿತ, ಗೊರವಮ್ಮನವರ ಹಾಡು ಸೇರಿದಂತೆ ಇತರೆ ಬಗೆಯ ವಿಶಿಷ್ಠ ಆಚರಣೆಗಳು ನಡೆಯುತ್ತವೆ.
ಪೌರಾಣಿಕ ಹಿನ್ನಲೆಯ ಪ್ರಕಾರ ಮಣಿಕಾಸುರ ಹಾಗೂ ಮಲ್ಲಾಸುರ ಎಂಬ ರಾಕ್ಷಸರು ತುಂಗಭದ್ರಾ ನದಿ ತಟದಲ್ಲಿ ನೆಲೆಸಿದ್ದ ಜನರಿಗೆ ಅನೇಕ ತೊಂದರೆಗಳನ್ನು ನೀಡುತ್ತ ದೌರ್ಜನ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಪರಮೇಶ್ವರನ ಕುರಿತು ಪೂಜೆ ಸಲ್ಲಿಸಿದಾಗ ಪರಮೇಶ್ವರನು ಮೈಲಾರಲಿಂಗೇಶ್ವರನ ಅವತಾರದಲ್ಲಿ ಭೂಲೋಕದಲ್ಲಿ ಜನಿಸಿ ಇಬ್ಬರು ರಾಕ್ಷಸರನ್ನು ಸಂಹಾರ ಮಾಡಿದ ಎಂಬ ಐತಿಹ್ಯ ಇದೆ.