ಸದಸ್ಯ:Loy Ajith D'Souza 12345/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂವಹನ ಸಂವಹನ ವೆಂದರೆ ಅಸ್ತಿತ್ವದಲ್ಲಿರುವ ಒಂದು ವಸ್ತು ವಿನಿಂದ ಇನ್ನೊಂದಕ್ಕೆ ಮಾಹಿತಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಸಂಪರ್ಕವೆಂದೂ ಸಹ ಹೇಳುವ ಇದು ತಿಳಿವಳಿಕೆಯನ್ನು ಮನದಟ್ಟು ಮಾಡುವ ಕಾರ್ಯವೂ ಆಗಿದೆ. ಸಂವಹನ ಪ್ರಕ್ರಿಯೆಗಳೆಂದರೆ ಸಂಕೇತಗಳ ಸಂಚಯ‍‌‌ ಮತ್ತು ಸಂಕೇತ ಶಾಸ್ತ್ರದ ನಿಯಮಗಳೊಂದಿಗೆ, ಕನಿಷ್ಠ ಎರಡು ಪ್ರತಿನಿಧಿತ್ವಗಳ ನಡುವಿನ ಸಂಕೇತ-ಆಧರಿಸಿದ ಸಂಪರ್ಕದ ಕೊಂಡಿಯಾಗಿದೆ. ಸಾಮಾನ್ಯವಾಗಿ ಸಂವಹನವು ಮಾತು, ಬರಹ, ಇಲ್ಲವೆ ಸಂಜ್ಞೆಯ ಮೂಲಕ ಮಾಹಿತಿ ಅಥವಾ ವಿಚಾರ, ಅಭಿಪ್ರಾಯಗಳನ್ನು "ತಿಳಿಯಪಡಿಸುವುದು ಅಥವಾ ವಿನಿಮಯ ಮಾಡಿಕೊಳ್ಳುವುದಾಗಿದೆ". ಏಕ-ಮುಖೀಯ ಸಂವಹನದ ವೇಳೆಯಲ್ಲೂ ಸಹ, ಪರಸ್ಪರ ಅಂಗೀಕರಿಸಿದ ಗುರಿ ಅಥವಾ ದಿಕ್ಕಿನೆಡೆಗೆ (ಮಾಹಿತಿ) ಭಾವನೆ-ವಿಚಾರಗಳು, ಅನಿಸಿಕೆಗಳು ಅಥವಾ ಅಭಿಪ್ರಾಯಗಳ (ಸಶಕ್ತ) ವಿನಿಮಯವಾಗಿದೆ. ಇದು ಪ್ರಗತಿಯಲ್ಲಿರುವ ದ್ವಿಮುಖ/ಮಾರ್ಗ ಪ್ರಕ್ರಿಯೆಯಿಂದ ಸಂವಹನವನ್ನು ಉತ್ತಮಪಡಿಸಿ ಗ್ರಹಿಸಬಹುದಾಗಿದೆ.[೧]


ಸಂವಹನದಲ್ಲಿರುವ ಮಾಹಿತಿಯನ್ನು ಗುರ್ತಿಸಿ , ಅದೇ ಮಾರ್ಗ ಅಥವಾ ಮಾಧ್ಯಮದ ಮೂಲಕ ಕಳುಹಿಸುವ ಮತ್ತು ಸ್ವೀಕರಿಸುವವನಿಗೆ ಮಾಹಿತಿಯನ್ನು ತಲುಪಿಸುವ ಪ್ರಕ್ರಿಯೆಯಾಗಿದೆ. ಸಂದೇಶ ಸ್ವೀಕರಿಸಿದ ಬಳಿಕ ಅದನ್ನು ವಿಶ್ಲೇಷಿಸಿ, ಕಳುಹಿಸಿದವನಿಗೆ ಮರಳಿ ಪ್ರತಿಕ್ರಿಯೆ ನೀಡುವುದೇ ಸಂಪರ್ಕಸಾಧಕದ ಗುರಿಯಾಗಿದೆ. ಎಲ್ಲಾ ಪ್ರಕಾರದ ಸಂವಹನಕ್ಕೂ ಕಳುಹಿಸುವವ, ಸಂದೇಶ, ಮತ್ತು ಸ್ವೀಕರಿಸುವವ ಎಂದು ಮೂರು ಅಂಶಗಳ ಅಗತ್ಯವಿದೆ. ಸಂವಹನ ನಡೆಯಬೇಕಾದರೆ ಮೇಲಿನ ಈ ಎಲ್ಲಾ ಅಂಶಗಳು ಸಾಮಾನ್ಯಪ್ರದೇಶ ವ್ಯಾಪ್ತಿ ಹೊಂದಿರಬೇಕಾಗುತ್ತದೆ. ಶ್ರವಣ-ಕೇಳುವುದಕ್ಕೆ ಸಂಬಂಧಿಸಿದಂತೆ, ಧ್ವನಿ ಮಾಧ್ಯಮದ ಮಾತು, ಹಾಡು, ಮತ್ತು ಶೈಲಿ ಅಥವಾ ಮಾತಲ್ಲದ ಆಂಗಿಕ ಭಾಷೆ, ಸಂಕೇತ , ಪೂರಕ ಭಾಷೆ, ಸ್ಪರ್ಶ, ಕಣ್ಣ ನೋಟ, ಮತ್ತು ಬರಹದಂತಹವನ್ನೂ ಸಂವಹನ ಎನ್ನಬಹುದು.ಈ ಸಂಪರ್ಕ ಸಾಧನಗಳ ಮೂಲಕ ಸಂವಹನದ ವ್ಯಾಪಕತೆ ಹೆಚ್ಚುತ್ತದೆ

ಈ ಕೆಳಗಿನವುಗಳು ಸಮೂಹ ಸಂವಹನಗಳಿಗೆ ಉದಾಹರಣೆಗಳಾಗಿವೆ:

ಸಮೂಹ ಮಾಧ್ಯಮಗಳು ರೇಖಾಚಿತ್ರ ಸಂವಹನ ವಿಜ್ಞಾನ ಸಂವಹನ ಸಮರ ತಂತ್ರದ ಸಂವಹನ ಬೆಳಕಿಗಿಂತ ಹೆಚ್ಚಿನ ವೇಗದ ಸಂವಹನ ತಾಂತ್ರಿಕ ಸಂವಹನ ಸಾರ್ವಜನಿಕ ಸಂಬಂಧ ಪ್ರಸಾರ ಮಾಧ್ಯಮ ಪತ್ರಿಕೋದ್ಯಮ

ಸಂವಹನದ ವಿಧಗಳು[ಬದಲಾಯಿಸಿ] ಆಂಗಿಕ ಭಾಷೆ, ಧ್ವನಿ ಶೈಲಿ ಮತ್ತು ಶಬ್ದಗಳು ಮನುಷ್ಯರ ಮುಖದಲ್ಲಿ ಕಂಡುಬರುವ ಸಂವಹನದ ಮೂರು ಪ್ರಮುಖ ಅಂಶಗಳಾಗಿದೆ. ಸಂಶೋಧನೆಯ ಪ್ರಕಾರ:[೪] ದೇಹ ಭಾಷೆಯ ಅಂಶಗಳಾದ ನಿಲವು,ಭಂಗಿ, ಆಂಗಿಕ ಸನ್ನೆಗಳು ಮತ್ತು ಕಣ್ಣ ಸಂಪರ್ಕದಿಂದ 55%ರಷ್ಟು ಸಂವಹನವನ್ನು ನಿರ್ಧರಿಸಬಹುದು, ಧ್ವನಿಯ ಮಟ್ಟದ ಮೂಲಕ 38%ರಷ್ಟು ಮತ್ತು ಸಂವಹನ ಪ್ರಕ್ರಿಯೆಯಲ್ಲಿ ಬಳಸಿದ ವಿಷಯ ಅಥವಾ ಪದಗಳಿಂದ 7%ರಷ್ಟನ್ನು ನಿರ್ಧರಿಸಬಹುದು. ಸಂವಹನವು ಸಾಮಾನ್ಯವಾಗಿ ಕೇಳುಗ ಮತ್ತು ಮಾತನಾಡುವವರನ್ನು ಆಧರಿಸಿದೆ. ಈ ಶೇಕಡಾವಾರಿನಲ್ಲಿ ವ್ಯತ್ಯಾಸವಾದರೂ ಸಹ, ಈ ಎಲ್ಲಾ ಸಂವಹನದ ಪ್ರಯತ್ನಗಳ ಉದ್ದೇಶವು ಒಂದೇ ಆಗಿರುವುದು. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಈ ಮೇಲಿನ ಅಂಕಿಅಂಶಗಳು ಸಾರ್ವತ್ರಿಕವಾಗಿ ಸಾಮಾನ್ಯವಾಗಿರುತ್ತವೆ. ಧ್ವನಿ, ರಾಗ ಅಥವಾ ಶ್ರುತಿ, ಸಂಜ್ಞಾಪದ್ದತಿ ಅಥವಾ ಬರಹ ರೂಪದ ಸಂಕೇತಗಳ ವ್ಯವಸ್ಥೆಯ ಮೂಲಕ ಯೋಚನೆ-ವಿಚಾರಗಳು ಮತ್ತು ಅಭಿಪ್ರಾಯಗಳನ್ನು ತಿಳಿಸಬಹುದು. ಸನ್ನೆ-ಸಂಕೇತಗಳು, ಧ್ವನಿ, ಶಬ್ದಗಳು, ಆಂಗಿಕ ಅಥವಾ ಬರಹ ರೂಪದ ಸಂಕೇತಗಳನ್ನು ಬಳಸಿ ಸಂವಹನ ನಡೆಸುವುದನ್ನು ಭಾಷೆಯೆಂದು ಕರೆಯಬಹುದಾದರೆ, ಪ್ರಾಣಿಗಳ ಸಂವಹನವನ್ನು ಭಾಷೆಯೆಂದು ಪರಿಗಣಿಸಬಹುದೇ? ಪ್ರಾಣಿಗಳು ಯಾವುದೇ ಬರಹ ರೂಪದ ಭಾಷೆಯನ್ನು ಹೊಂದಿಲ್ಲವಾದರೂ ಪರಸ್ಪರ ಸಂವಹನ ನಡೆಸಲು ಭಾಷಾಸಂಕೇತವನ್ನು ಬಳಸುತ್ತವೆ. ಹಾಗಾಗಿ, ಪ್ರಾಣಿಗಳ ಸಂವಹನವನ್ನು ಪ್ರತ್ಯೇಕ ಭಾಷೆಯೆಂದು ಪರಿಗಣಿಸಬಹುದು.