ಸದಸ್ಯ:Likhitha0810/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಲಿಖಿತ. ನನ್ನ ತಂದೆಯ ಹೆಸರು ಡಾ| ದಿನಕರ್ ನಾಯ್ಕ್ . ತಾಯಿ ಸುಮನ. ಅಕ್ಟೋಬರ್ 8 , 1998ರಂದು ಪುತ್ತೂರಿನಲ್ಲಿ ಜನಿಸಿದೆ. ನಾನು ನನ್ನ ಬಾಲ್ಯವನ್ನು ಕಳೆದದ್ದು ಬಂಟ್ವಾಳ ತಾಲ್ಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ. ನಮ್ಮದು ಅವಿಭಕ್ತ ಕುಟುಂಬ. ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ತಂದೆ, ತಾಯಿಯ ಪ್ರೀತಿಯ ನೆರಳಲ್ಲಿ ಬೆಳೆದ ನನಗೆ 'ಬಾಲ್ಯ ಜೀವನ' ನನ್ನ ಪಾಲಿಗೆ ಅವಿಸ್ಮರಣೀಯ. ನಮ್ಮ ಹಳ್ಳಿಯು ಸುಂದರ ವಾತಾವರಣದಿಂದ ಕೂಡಿದೆ. ಸುತ್ತ ತೆಂಗು ಕಂಗಿನ ಮರಗಳು, ಬೇಸಿಗೆಯಲ್ಲಿ ಫಲ ನೀಡುವ ಮಾವು ಹಾಗೂ ಹಲಸಿನ ಮರಗಳಿಂದ ಹಚ್ಚ ಹಸಿರಿನ ನೋಟ, ಸಾಕು ಪ್ರಾಣಿಗಳಾದ ದನ-ಕರು,ನಾಯಿ-ಬೆಕ್ಕುಗಳೊಂದಿಗೆ ಆಟವಾಡಿದ ಸುಂದರ ಕ್ಷಣಗಳನ್ನು ಮೆಲುಕು ಹಾಕುವಾಗ ಮನಸ್ಸು ಮುದಗೊಳ್ಳುತ್ತದೆ.

ಬಾಲ್ಯದ ಮೂರು ವರ್ಷಗಳನ್ನು ಹಳ್ಳಿಯಲ್ಲಿ ಕಳೆದ ನಂತರ ಪುತ್ತೂರಿನಲ್ಲಿ ನನ್ನ ನರ್ಸರಿ ಶಿಕ್ಷಣ ಪ್ರಾರಂಭವಾಯಿತು. ಎರಡು ವರ್ಷ ಕಳೆದ ನಂತರ ನಾನು ಮಂಗಳೂರಿನಲ್ಲಿ ನನ್ನ ಶಿಕ್ಷಣ ಮುಂದುವರಿಸಿದೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕಾರ್ಮೆಲ್ ಇಂಗ್ಲಿಷ್ ಸ್ಕೂಲ್ನಲ್ಲಿ ಹಾಗೂ ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸಂತ ಅನ್ನರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ನನ್ನ ಶಾಲಾ ದಿನಗಳಲ್ಲಿ 'ಗಣಿತ' ನನ್ನ ನೆಚ್ಚಿನ ವಿಷಯವಾಗಿತ್ತು. ಅರುಣ ಮೇಡಂ ಮತ್ತು ನತಾಶ ಮೇಡಂ ನನ್ನ ನೆಚ್ಚಿನ ಗಣಿತ ಶಿಕ್ಷಕಿಯರು. ಗಣಿತದಲ್ಲಿ ಯಾವುದೇ ಕ್ಲಿಷ್ಟಕರವಾದ ಪ್ರಶ್ನೆಗಳಿದ್ದರೂ ಇವರು ಬಿಡಿಸಿ ವಿವರಿಸುವ ರೀತಿಯಿಂದ ಎಂಥವರಿಗೂ ಗಣಿತ 'ಕಬ್ಬಿಣದ ಕಡಲೆ' ಎಂದು ಅನಿಸಲಿಲ್ಲ. ಹೀಗೆ ಅನೇಕ ಶಿಕ್ಷಕಿಯರ ಮಾರ್ಗದರ್ಶನದಿಂದ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದೆ.

ಇನ್ನು ನನ್ನ ಹವ್ಯಾಸಗಳ ಬಗ್ಗೆ ಹೇಳುವುದಾದರೆ , ಚಲನಚಿತ್ರಗಳನ್ನು ವೀಕ್ಷಿಸುವುದು , ಹಾಡುಗಳನ್ನು ಕೇಳುವುದು, ದೂರದರ್ಶನವನ್ನು ನೋಡುವುದು ಇತ್ಯಾದಿ. ಇವುಗಳಲ್ಲಿ ಕತೆ,ಕಾದಂಬರಿಗಳನ್ನು ಓದುವುದು ನನ್ನ ನೆಚ್ಚಿನ ಹವ್ಯಾಸ.

ನಾನು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದೆ. ಕೇವಲ ನಮ್ಮ ಕಾಲೇಜಿನ ನುರಿತ ಪ್ರಾಧ್ಯಾಪಕರ ಬೋಧನೆಯಿಂದ ನಾನು ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿಯೂ ಸಹ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಸಂತಸದ ವಿಷಯ.

ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜು ( ಸ್ವಾಯತ್ತ ) , ಇಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ಈ ಮೂರು ಮುಖ್ಯ ವಿಷಯಗಳನ್ನು ಆಯ್ದಕೊಂಡು ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ.