ಸದಸ್ಯ:Lichchavi harishekar/ನನ್ನ ಪ್ರಯೋಗಪುಟ/2

  ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

  ಬ್ರೆ‍ಕ್ಸಿಟ್

    ಬ್ರೆಕ್ಸಿಟ್ ಎಂದರೆ ಯೂ‍ರೋಪಿಯನ್ ಯೂನಿಯನ್‍ಯಿಂದ (ಇಯು) ಯುನೈಟೆಡ್ ಕಿಂಗ್ಡಮ್ (ಯುಕೆ) ನ ವಾಪಸಾತಿ. ಬ್ರೆಕ್ಸಿಟ್‍ ಎನ್ನುವ ಪದವನ್ನು ಬ್ರಿಟನ್ ಮತ್ತು ಎಕ್ಸಿಟ್ ಶಬ್ಧಗಳ ಜೋಡನೆಯ ಮೂಲಕ ಹುಟ್ಟಿತು. ೨೦೧೬ ರ ಜೂನ್ ೨೩ ರಂದು ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಭಾಗವಹಿಸಿದ ಯುಕೆ ಮತದಾರರ ಪೈಕಿ ೫೧.೯% ಆಗಿತ್ತು. ಇವರೆಲ್ಲರೂ ಇಯು ತೊರೆಯಲು ಮತ ಚಲಾಯಿಸಿದರು. ೨೯ ಮಾರ್ಚ್ ೨೦೧೭ ರಂದು, ಬ್ರಿಟಿಷ್ ಸರ್ಕಾರ ಯುರೋಪಿಯನ್ ಒಕ್ಕೂಟದ ಒಪ್ಪಂದದ ೫೦ನೇ ವಿಧಿಯನ್ನು ಆಹ್ವಾನಿಸಿತು. ಹೀಗೆ ೨೯ ಮಾರ್ಚ್ ೨೦೧೯ ರಿಂದ ಇಯುಯನ್ನು ಬಿಡಲು ಯುಕೆ ಯತ್ನಿಸುತ್ತಿದೆ.
    ಇಯುನಿಂದ ಹೊರಬಂದ ನಂತರ ಯುಕೆ ಏಕೈಕ ಮಾರುಕಟ್ಟೆಯ ಶಾಶ್ವತ ಸದಸ್ಯತ್ವವನ್ನು ಅಥವಾ ಕಸ್ಟಮ್ಸ್ ಒಕ್ಕೂಟವನ್ನು ಪಡೆಯುವುದಿಲ್ಲ ಎಂದು ಘೋಷಿಸಿತು ಮತ್ತು ೧೯೭೨ ರ ಯೂರೋಪಿಯನ್ ಕಮ್ಯುನಿಟೀಸ್ ಕಾಯ್ದೆ ರದ್ದುಗೊಳಿಸುವ ಭರವಸೆ ನೀಡಿತು. ಯುಕೆ ಇಯುಯೊಂದಿಗೆ ಮಾತುಕತೆಗಳನ್ನು ಅಧಿಕೃತವಾಗಿ ಜೂನ್ ೨೦೧೭ ರಲ್ಲಿ ಪ್ರಾರಂಭಿಸಿತು.
    ೧೯೭೫ ರಲ್ಲಿ ಯುಕೆ ಯುರೋಪಿಯನ್ ಕಮ್ಯುನಿಟೀಸ್ (ಇಸಿ) ಗೆ ಸೇರಿತು, ೧೯೭೫ ರಲ್ಲಿ ಜನಾಭಿಪ್ರಾಯ ಸಂಗ್ರಹದಿಂದ ಸದಸ್ಯತ್ವವು ದೃಢೀಕರಿಸಲ್ಪಟ್ಟಿತು. ೧೯೭೦ ಮತ್ತು ೧೯೮೦ ರ ದಶಕಗಳಲ್ಲಿ, ಇಸಿಯಿಂದ ಹೊರಬರಲು ಮುಖ್ಯವಾಗಿ ಲೇಬರ್ ಪಾರ್ಟಿ ಸದಸ್ಯರು ಮತ್ತು ಟ್ರೇಡ್ ಯೂನಿಯನ್ ವ್ಯಕ್ತಿಗಳಿಂದ ಬೆಂಬಲ ಸಿಕ್ಕಿತು. 
  
  ಬ್ರೆಕ್ಸಿಟ್ ಪ್ರತಿಭಟನೆ

  ೨೦೧೬ ರ ಜನಾಭಿಪ್ರಾಯ ಸಂಗ್ರಹ[ಬದಲಾಯಿಸಿ]

    ೨೦೧೨ರಲ್ಲಿ ಪ್ರಧಾನಮಂತ್ರಿ ಡೇವಿಡ್ ಕ್ಯಾಮೆರಾನ್ ಯುಕೆಯ ಇಯು ಸದಸ್ಯತ್ವದ ಜನಾಭಿಪ್ರಾಯ ಸಂಗ್ರಹಕ್ಕಾಗಿ ಕರೆಗಳನ್ನು ತಿರಸ್ಕರಿಸಿದರು, ಆದರೆ ಸಾರ್ವಜನಿಕ ಬೆಂಬಲವನ್ನು ಅಳೆಯಲು ಭವಿಷ್ಯದ ಜನಾಭಿಪ್ರಾಯದ ಸಾಧ್ಯತೆಯನ್ನು ಸೂಚಿಸಿದರು. ಬಿಬಿಸಿ ಪ್ರಕಾರ, "ಯೂರೋಪಿಯನ್ ಒಕ್ಕೂಟದ ಒಳಗಿನ ಯುಕೆ ಸ್ಥಾನವು ಬ್ರಿಟಿಷ್ ಜನರ ಪೂರ್ಣ ಹೃದಯದ ಬೆಂಬಲವನ್ನು ಹೊಂದಿದೆಯೆಂದು ಅವರು ಖಚಿತಪಡಿಸಬೇಕೆಂದು ಪ್ರಧಾನಿ ಒಪ್ಪಿಕೊಂಡರು, ಆದರೆ ಅವರು 'ಯುದ್ಧತಂತ್ರದ ಮತ್ತು ಕಾರ್ಯತಂತ್ರದ ತಾಳ್ಮೆ' ಯನ್ನು ತೋರಿಸಬೇಕಾಗಿತ್ತು. ಅವರ ಅನೇಕ ಸಂಸದರು ಮತ್ತು ೨೦೧೩ ರ ಜನವರಿಯಲ್ಲಿ ಯುಕೆಐಪಿ ಉನ್ನತಿಯ ಒತ್ತಡದಿಂದ ೨೦೧೭ ರ ಅಂತ್ಯದ ವೇಳೆಗೆ ‍ಸಂಪ್ರದಾಯವಾದಿ ಸರ್ಕಾರವು ಇಯು ಸದಸ್ಯತ್ವದ ಮೇಲೆ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಲಿದೆ ಎಂದು ೨೦೧೫ ರಲ್ಲಿ ಕ್ಯಾಮೆರಾನ್ ಘೋಷಿಸಿದರು.
    ಸಂಪ್ರದಾಯವಾದಿ ಪಾರ್ಟಿಯು ೨೦೧೫ ರ ಸಾಮಾನ್ಯ ಚುನಾವಣೆಯಲ್ಲಿ ಬಹುಮತದೊಂದಿಗೆ ಅನಿರೀಕ್ಷಿತವಾಗಿ ಗೆದ್ದಿತು. ಅವರು ಶೀಘ್ರದಲ್ಲೇ ಜನಮತಸಂಗ್ರಹವನ್ನು ಸಕ್ರಿಯಗೊಳಿಸಲು ಯುರೋಪಿಯನ್ ಯೂನಿಯ‍ನ್ ಆಕ್ಟ್ ೨೦೧೫ ಅನ್ನು ಸಂಸತ್ತಿನಲ್ಲಿ ಪರಿಚಯಿಸಲಾಯಿತು.ಕ್ಯಾಮೆರಾನ್‍ರವರು ಯುಕೆಯು ಇಯು ನ ಸದಸ್ಯತ್ವವನ್ನು ಉಳಿಸಿಕೊಳ್ಳಬೇಕು ಎಂದು ಪ್ರಚಾರ ಮಾಡಿದರು ಹಾಗು ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಮರು ಮಾತುಕತೆ ಮಾಡಲಾಗುವುದು ಎಂದು ಘೋಷಿಸಿದರು. ಅವು ಯಾವುವು ಎಂದರೆ: ಯೂರೋಜೋನ್ ಅಲ್ಲದ ರಾಷ್ಟ್ರಗಳಿಗೆ ಏಕ ಮಾರುಕಟ್ಟೆಯ ರಕ್ಷಣೆ, "ಕೆಂಪು ಟೇಪ್" ನ ಕಡಿತ, "ನಿಕಟ-ಹತ್ತಿರ ಒಕ್ಕೂಟ" ದಿಂದ ಬ್ರಿಟನ್‍ಗೆ ವಿನಾಯಿತಿ ಮತ್ತು ಇಯು ವಲಸೆಯ ನಿರ್ಬಂಧ‍ನೆ.
    ಡಿಸೆಂಬರ್ ೨೦೧೫ ರಲ್ಲಿ ಇಯು ನಲ್ಲಿ ಉಳಿದಿರುವ ಪರವಾಗಿ ಯುಕೆಯ ಅಭಿಪ್ರಾಯ ಸಂಗ್ರಹಗಳು ಸ್ಪಷ್ಟವಾದ ಬಹುಮತವನ್ನು ತೋರಿಸಿದವು. ಆದರೆ ಕ್ಯಾಮೆರಾನ್‍ನವರು ಯೂರೋಜೋನ್ ಅಲ್ಲದ ಸದಸ್ಯ ರಾಷ್ಟ್ರಗಳಿಗೆ ಸಾಕಷ್ಟು ಸುರಕ್ಷತೆಗಳನ್ನು ನೀಡುವ ಮತ್ತು ಇಯು ನಾಗರೀಕರಿಗೆ ಲಭ್ಯವಿರುವ ಪ್ರಯೋಜನಗಳ ಮೇಲೆ ನಿರ್ಬಂಧ ಹೇರುವ ಮಾತುಕತೆ ಮುಂದುವರಿಸದಿದ್ದರೆ ಅವರು ಈ ಬಹುಮತವನ್ನು ಕಳೆದುಕೊಳ್ಳುತ್ತಿದ್ದರು. ಮರು ಮಾತುಕತೆಯ ಫಲಿತಾಂಶವು ಫೆಬ್ರವರಿ ೨೦೧೬ ರಲ್ಲಿ ಘೋಷಿಸಲಾಯಿತು. ಹೊಸ ಇಯು ವಲಸಿಗರ ಕೆಲಸದ ಪ್ರಯೋಜನಗಳಿಗೆ ಕೆಲವು ಮಿತಿಗಳನ್ನು ಹೇರಲು ಒಪ್ಪಿಗೆ ನೀಡಲಾಯಿತು, ಆದರೆ ಅವುಗಳನ್ನು ಅನ್ವಯಿಸುವ ಮೊದಲು, ಯುಕೆ ದೇಶವು ಯುರೋಪಿಯನ್ ಕಮಿಷನ್ ಮತ್ತು ಯುರೋಪಿಯನ್ ಕೌನ್ಸಿಲ್‍ನ ಅನುಮತಿಯನ್ನು ಪಡೆಯಬೇಕಾಗಿತ್ತು.೨೦೧೬ರ ಫೆಬ್ರವರಿ ೨೨ರಂದು ಹೌಸ್ ಆಫ್ ಕಾಮನ್ಸ್ ನಲ್ಲಿ ನೀಡಿದ ಭಾಷಣದಲ್ಲಿ, ಕ್ಯಾಮರಾನ್ ೨೩ ಜೂನ್ ೨೦೧೬ ರನ್ನು ಜನಾಭಿಪ್ರಾಯ ಸಂಗ್ರಹದ ದಿನಾಂಕವೆಂದು ಘೋಷಿಸಿದರು ಮತ್ತು ಮರುಸಂಧಾನದ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಿದರು. ಯುಕೆ ಇಯುನಿಂದ ಹೊರಬರಲು ಮತ ಚಲಾಯಿಸಿದ್ದಲ್ಲಿ ತಕ್ಷಣವೇ ಲೇಖನ ೫೦ನ ಪ್ರಕ್ರಿಯೆಯನ್ನು ಪ್ರಚೋದಿಸುವುದಾಗಿ ಮತ್ತು ನಿರ್ಗಮನದ ವ್ಯವಸ್ಥೆಯ ಬಗ್ಗೆ ಮಾತುಕತೆ ನಡೆಸಲು ಎರಡು ವರ್ಷಗಳ ಅವಧಿಗಾಗಿ ಪ್ರಚೋದಿಸುವ ಒಂದು ಉದ್ದೇಶವನ್ನು ಕ್ಯಾಮರಾನ್‍ನವರು ಹೇಳಿದರು.
  

  ಜನಾಭಿಪ್ರಾಯ ಸಂಗ್ರಹದ ಫಲಿತಾಂಶ[ಬದಲಾಯಿಸಿ]

   ಜೂನ್ ೨೪ ರ ಬೆಳಿಗ್ಗೆ ಜನಾಭಿಪ್ರಾಯ ಸಂಗ್ರಹದ ಫಲಿತಾಂಶವನ್ನು ಘೋಷಿಸಲಾಯಿತು: ೫೧.೯% ಯುಕೆಯ ಮತದಾರರು ಯುರೋಪಿಯನ್ ಒಕ್ಕೂಟವನ್ನು ಬಿಡುವ ಪರವಾಗಿ ಮತ ಚಲಾಯಿಸಿದರು ಮತ್ತು ೪೮.೧% ಮತದಾರರು ಯುರೋಪಿಯನ್ ಒಕ್ಕೂಟದ ಸದಸ್ಯರಾಗಿ ಉಳಿಯಲು ಮತ ಚಲಾಯಿಸಿದರು. ಎರಡನೇ ಜನಾಭಿಪ್ರಾಯಕ್ಕಾಗಿ ಕರೆ ಸಲ್ಲಿಸಿದ ಅರ್ಜಿಯು ನಾಲ್ಕು ದಶಲಕ್ಷಕ್ಕೂ ಹೆಚ್ಚಿನ ಜನರ ಸಹಿಯನ್ನು ಆಕರ್ಷಿಸಿತು,ಆದರೆ ಜುಲೈ 9 ರಂದು ಯುಕೆಯ ಸರ್ಕಾರವು ಅದನ್ನು ತಿರಸ್ಕರಿಸಿತು.
   ಇಯುವನ್ನು ತ್ಯಜಿಸಿದ ಪರಿಣಾಮವಾಗಿ ಯುಕೆ ರಾಷ್ಟ್ರ‍ವು ಆರ್ಥಿಕ ಅಸ್ಥಿರತೆಯನ್ನು ಅನುಭವಿಸಿತು. ಇದರ ಇನ್ನಷ್ಟು ಪರಿಣಾಮಗಳು ಮುಂದಿನ ದಿನಗಳಲ್ಲಿ ಕಾಣಬಹುದಾಗಿ ಯತ್ನಿಸಲಾಗಿದೆ.
  

  https://en.wikipedia.org/wiki/Brexit http://www.bbc.com/news/uk-politics-32810887