ಸದಸ್ಯ:Leesha kamala/sandbox 7

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಬನ್ ಚಕ್ರ[ಬದಲಾಯಿಸಿ]

ಎಲ್ಲಾ ಜೀವಕ್ಕೂ ಕಾರ್ಬನ್ (ಇಂಗಾಲ) ಒಂದು ಅವಶ್ಯಕ ಮೂಲ ವಸ್ತು.ಜೀವದ್ರವದಲ್ಲಿರುವ ಎಲ್ಲಾ ಕಾರ್ಬನಿಕ ಪದಾರ್ಥಗಳ ಒಂದು ಅವಶ್ಯಕ ಘಟಕ ಕಾರ್ಬನ್. ಕಾರ್ಬನ್ ಚಕ್ರವು ಒಂದು ಮಾದರಿಯ ಜೀವ ಭೂರಾಸಯನಿಕ ಚಕ್ರವಾಗಿದ್ದು, ಕಾರ್ಬನ್ ಅನಿಲವು ವಾತವರಣ, ಜಲಾವರಣ,ಶಿಲಾವರಣಗಳೊಂದಿಗೆ ವಿನಿಮಯವಾಗುತ್ತದೆ. ಅನಿಲದ ಚಕ್ರಗಳಾದ ಕಾರ್ಬನ್ ಚಕ್ರವು ನೈಟ್ರೋಜನ್ ಚಕ್ರ ಮತ್ತು ಜಲಚಕ್ರದೊಂದಿಗೆ ಜೀವಗೋಳದಲ್ಲಿ ಜೈವಿಕ ಮತ್ತು ಅಜೈವಿಕ ಘಟಕಗಳ ನಡುವಿನ ಪರಸ್ಪರಾವಲಂಬನೆಯನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.ಈ ಚಕ್ರದಲ್ಲಿ ವಾತವರಣ ಅಥವಾ ಜಲಾವರಣ ಸಾಮನ್ಯವಾಗಿ ಸಂಗ್ರಹ ಮೂಲವಾಗಿರುತ್ತದೆ.ಈ ಚಕ್ರವು ಪರಿಪೂರ್ಣ ಚಕ್ರಗಳು ಎನ್ನಬಹುದು. ಸ್ವಪೋಷಕ ಹಸಿರು ಸಸ್ಯಗಳಿಗೆ ಕಾರ್ಬನಿಕ ಪದಾರ್ಥಗಳನ್ನು, ಅದರಲ್ಲಿಯೂ ಶರ್ಕರಗಳನ್ನು ಉತ್ಪಾದಿಸಲು ಅಗತ್ಯವಾದ ಕಾರ್ಬನ್ ನ ಮೂಲವಾಗಿ ವಾತಾವರಣದ ಇಂಗಾಲದ ಡೈ ಆಕ್ಸಡ್ ಒದಗಿಸುತ್ತದೆ.ಜಲ ಪರಿಸರ ವ್ಯವಸ್ಥೆಯಲ್ಲಿ ನೀರಿನಲ್ಲಿ ಕರಗಿರುವ ಕಾರ್ಬನೇಟ್ ಗಳು ಮತ್ತು ಬೈ ಕಾರ್ಬನೇಟ್ ಗಳು ಇಂಗಾಲದ ಮೂಲವಾಗಿರುತ್ತದೆ.ಪೋಷಕ ಮೂಲಕ್ಕೆ ಇಂಗಾಲವು ಸ್ಥಿರಿಕರಣಗೊಳ್ಳುವುದಕ್ಕೆ ಹೀಗೆ ದ್ಯುತಿ ಸಂಶ್ಲೇಷಣೆ ಕ್ರಿಯೆಯು ಕಾರಣವಾಗುತ್ತುದೆ. ಸಸ್ಯಗಳು ಉತ್ಪಾದಿಸಿದ ಆಹಾರದಲ್ಲಿರುವ ಕಾರ್ಬನಿಕ ಪದಾರ್ಥಗಳು ಪ್ರಾಣಿಗಳಿಗೆ ಇಂಗಾಲದ ಮೂಲವಾಗಿ ಒದಗುತ್ತದೆ.ಆಹಾರ ಸರಪಳಿಯ ಮೂಲಕ ಇಂಗಾಲವು ಸಸ್ಯಗಳಿಂದ ಸಸ್ಯಹಾರಿ ಪ್ರಾಣಿಗಳಿಗೆ ಹಾಗು ಅವುಗಳಿಂದ ಮಾಂಸಾಹಾರಿಗಳಿಗೆ ವರ್ಗವಣೆಯಾಗುತ್ತದೆ.ಈ ರೀತಿಯಲ್ಲಿ ಇಂಗಾಲವು ವಿನಿಮಯ ಮೂಲದಲ್ಲಿ ಸಂಚಾರಗಳ್ಳುತ್ತದೆ. ಬ್ಯಾಕ್ಡೀರಿಯ ,ಶಿಲೀಂಧ್ರ,ಸಸ್ಯಗಳು ಹಾಗು ಪ್ರಾಣಿಗಳ ಉಸಿರಾಟ ಕ್ರಿಯೆಯಲ್ಲಿ ಬಿಡುಗಡೆಯಾಗುವ ಮೂಲಕ ಇಂಗಾಲದ ಡೈ ಆಕ್ಸಡ್ ನ ವಿನಿಮಯ ಮೂಲದಿಂದ ಸಂಗ್ರಹ ಮೂಲವಾದ ವಾತಾವರಣವನ್ನು ಸೇರುತ್ತದೆ.ಬ್ಯಾಕ್ಡೀರಿಯ ಮತ್ತು ಶಿಲೀಂಧ್ರಗಳ ವಿಘಟನೆ ಕ್ರಿಯೆಯಿಂದ ಸ್ವಲ್ಪಭಾಗ ಇಂಗಾಲ ಹಿಂದಿರುಗುತ್ತದೆ.

ಕಾರ್ಬನ್ ಚಕ್ರ

ಕಾರ್ಬನ್ ಚಕ್ರದಲ್ಲಿನ ಪ್ರಮುಖ ಹಂತಗಳು ಹೀಗಿವೆ[ಬದಲಾಯಿಸಿ]

  1. ಸಂಗ್ರಹ ಮೂಲದಿಂದ ಇಂಗಾಲದ ಡೈ ಆಕ್ಸಡ್ ಸ್ಥಿರಿಕರಣಗೊಳ್ಳುವ ಜೈವಿಕ ಕ್ರಿಯೆಯೆ ದ್ಯುತಿ ಸಂಶ್ಲೇಷಣೆ.
  2. ಹಸಿರು ಸಸ್ಯಗಳನ್ನು ಸಸ್ಯಹಾರಿ ಪ್ರಾಣಿಗಳು ಭಕ್ಷಿಸುತ್ತದೆ.ಹೀಗೆ ಸಸ್ಯಗಳ ಜೈವಿಕ ತೂಕ ಆಹಾರದ ರೂಪದಲ್ಲಿ ಆಹಾರದ ಸರಪಳಿಯು ವಿವಿಧ ಸ್ತರಗಳಲ್ಲಿ ಇಂಗಾಲವು ಸಂಚರಿಸುತ್ತದೆ.
  3. ಸಸ್ಯಗಳ ಮತ್ತು ಪ್ರಾಣಿಗಳ ಉಸಿರಾಟ ಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸಡ್ ಒಂದು ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ.ಈ ಸಸ್ಯಗಳು ಮತ್ತು ಪ್ರಾಣಿಗಳು ಸತ್ತಾಗ ಮೃತದೇಹದ ವಿಘಟನೆಯಿಂದಲೂ ಇಂಗಾಲದ ಡೈ ಆಕ್ಸಡ್ ಬಿಡುಗಡೆಯಾಗುತ್ತದೆ.
  4. ಸತ್ತ ಕೆಲವು ಸಸ್ಯಗಳ ಮತ್ತು ಪ್ರಾಣಿಗಳ ದೇಹದ ವಿಘಟನೆಯಿಂದ ತಪ್ಪಿಸಿಕೊಂಡು ಭೂಮಿಯ ಚರಟ ಭಾಗದಲ್ಲಿ ಸಂಗ್ರಹಗೊಳ್ಳುತ್ತದೆ.ಕ್ರಮೇಣ ಇವು ಕೆಲವು ಮಂದ ರಾಸಾಯನಿಕ ಬದಲಾವಣೆಗಳಿಗೆ ಒಳಪಟ್ಟು ಪಳೆಯುಳಿಕೆ ಇಂಧನಗಳಾಗಿ ಮಾರ್ಪಡುತ್ತದೆ.ಈ ರೀತಿಯ ಇಂಧನಗಳು ದಹನಕ್ರಿಯೆ ಒಳಪಟ್ಟಾಗ ಇಂಗಾಲದ ಡೈ ಆಕ್ಸಡ್ ಬಿಡುಗಡೆಯಾಗುತ್ತದೆ.
  5. ಅಪರೂಪಕ್ಕೆ ಉಂಟಾಗುವ ಜ್ವಾಲಾಮುಖಿಯ ಸ್ಫೋಟದಿಂದಲೂ ಇಂಗಾಲದ ಡೈ ಆಕ್ಸಡ್ ಹೊರಬಂದು ವಾತಾವರಣವನ್ನು ಸೇರುತ್ತದೆ.