ಸದಸ್ಯ:Lasya shetty/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                  ಬಾಲ ಕಾರ್ಮಿಕರ ಮೇಲೆ ನಡೆಯುವ ಶೋಷಣೆ 

ಮಕ್ಕಳು ದೇವರಿಗೆ ಸಮಾನ.ಸಣ್ಣ ಮಕ್ಕಳು ಆಟ ಆಡುವುದನನ್ನು ನೋಡುವುದೇ ಚಂದ.ಅಂಥ ಚಿಕ್ಕ ಮಕ್ಕಳು ಮನೆಯ ಬಡತನದ ಕಾರಣದಿಂದಾಗಿ ಇಂದು ಶಾಲೆಗೆ ಹೋಗದೆ, ಆಟವಾಡದೆ ಇನ್ನೊಬ್ಬರ ಮನೆಗೆ ಕೆಲಸಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ.ಹೆತ್ತವರು ಸಂಸಾರದ ಅಗತ್ಯಗಳನ್ನು ಪೂರೈಸಲು ವಿಫಲರಾದಾಗ ಮಕ್ಕಳನ್ನು ಇತರರ ಮನೆಗೆ ಕೆಲಸಕ್ಕೆ ಕಳಿಸುತ್ತಾರೆ.ಅವರ ದುಡಿಮೆಯಿಂದ ದೊರೆತ ಸಂಬಳದಿಂದ ಸಂಸಾರ ತೂಗಿಸುತ್ತಾರೆ. ಆದರೆ ಈ ಮಕ್ಕಳು ಧನಿಗಳ ಮನೆಯಲ್ಲಿ ಶೋಷಣೆಗೆ ಒಳಗಾಗುತ್ತಾರೆ.ಮನೆಯ ಯಜಮಾನನಿಂದ ಪೆಟ್ಟು ತಿನ್ನುತ್ತಾರೆ, ಬೈಗುಳ ತಿನ್ನುತ್ತಾರೆ,ಒದೆತಗಳನ್ನು ತಿನ್ನುತ್ತಾರೆ. ಕೆಲವು ಸಲ ಹಿಡೆತ ಎಷ್ಟು ತೀವ್ರವಾಗಿರುತ್ತದೆಂದರೆ ಮಕ್ಕಳ ಕೈ ಕಾಲು ಮುರಿಯಬಹುದು.ಊಟ ಮಾಡಬೇಕಾದ ಸಮಯಕ್ಕೆ ಊಟ ಮಾಡದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ.ಇದರಿಂದಾಗಿ ಅನಾರೋಗ್ಯಪೀಡಿತರಾಗುತ್ತಾರೆ.ಹಕ್ಕಿಗಳಂತೆ ಆಕಾಶದಲ್ಲಿ ಹಾರಬೇಕಾದವರು ಪಂಜರದಲ್ಲಿ ಹಾಕಿದ ಹಕ್ಕಿಗಳಂತಾಗಿದ್ದಾರೆ.ಅವರ ಬದುಕು ಕಷ್ಟ ಹಾಗೂ ನೋವಿನಲ್ಲಿ ತುಂಬಿದೆ.