ಸದಸ್ಯ:Larren joy

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಲ್ಯಾರನ್ ಜೋಯ್ ಮಿನೇಜಸ್.ನಾನು ೧೯೯೫ರ, ಅಗೋಸ್ಟ್ ೩೦ರಂದು, ಮಂಗಳೂರು ತಾಲೂಕಿನ, ಮೂಡಬಿದ್ರಿ ಎಂಬ ಊರಿನಲ್ಲಿ ಹುಟ್ಟಿದೆ.ನನ್ನ ತಂದೆಯ ಹೆಸರು, ಲ್ಯಾನ್ಸಿ ಜೋಸೆಫ್ ಮಿನೇಜಸ್ ಮತ್ತು ನನ್ನ ತಾಯಿ, ಜುಲಿಯಾನ ತೆರೇಜಾ ಮಿನೇಜಸ್. ನಾನು ನನ್ನ ಪ್ರಾಥಾಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಣವನ್ನು ಸಂತ ಥೋಮಸ್ ಅಂಗ್ಲ ಮಾಧ್ಯಮ ಶಾಲೆ,ಅಲಂಗಾರಿನಲ್ಲಿ ಮುಗಿಸಿದೆ.ತದನಂತರ, ಪದವಿ ಪೂರ್ವ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದೆ.ಪದವಿ ಪೂರ್ವ ಶಿಕ್ಷಣದಲ್ಲಿ, ವ್ಯಾಸಂಗಕ್ಕಾಗಿ ವಾಣಿಜ್ಯವನ್ನು ಅರಿಸಿಕೊಂಡೆ. ನನ್ನ ಜೀವನದಲ್ಲಿ, ನಾನು ಕ್ರೈಸ್ತ ಧರ್ಮ ಗುರು ಆಗಬೇಕೆಂಬ ಆಸೆ ಇದ್ದರಿಂದ ಪದವಿ ಪೂರ್ವ ಶಿಕ್ಷಣ ಪಡೆದ ನಂತರ ಯೇಸು ಸಭೆಯೆಂಬ ಗುರುಗಳ ಸಭೆಗೆ ಸೇರಿಕೊಂಡೆ.ಮುಂದೆ, ಧಾರ್ಮಿಕ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ನಡೆದೆ.ಬೆಂಗಳೂರಿನಲ್ಲಿ ಎರಡು ವರ್ಷಗಳ ತರಭೇತಿಯ ನಂತರ, ಒಂದು ವರ್ಷದ ಅವಧಿಗೆ ಕೇರಳದ ತಿರುವನಂತಪುರಕ್ಕೆ ತೆರಳಿದೆ. ಅಲ್ಲಿ ನಾನು ಆಂಗ್ಲ ಭಾಷೆಯಲ್ಲಿ ತರಭೇತಿಯನ್ನು ಪಡೆದೆ.ಈ ವ್ಯಾಸಂಗವನ್ನು ಮುಗಿಸಿ ಪದವಿ ಶಿಕ್ಷಣಕ್ಕಾಗಿ ಮಗದೊಮ್ಮೆ ಸಂತ ಅಲೋಶಿಯಸ್ ಕಾಲೇಜಿಗೆ ಬಂದೆ.ಪದವಿ ಶಿಕ್ಷಣಕ್ಕಾಗಿ ಕಲಾ ವಿಭಾಗವನ್ನು ಆರಿಸಿಕೊಂಡೆ. ಆಟ ಆಡುವುದು,ಪುಸ್ತಕ ಒದುವುದು, ಬರೆಯುವುದು,ಹೂ ತೋಟದಲ್ಲಿ ಕೆಲಸ ಮಡುವುದು ಇವು ನನ್ನ ಕೆಲವು ಹವ್ಯಸಹಗಳು. ಮತ್ತು ಶಾಲೆಯಲ್ಲಿ ಇರಬೇಕಾದರೆ ಹಾಕಿ, ಫುಟ್-ಬಾಲ್, ವೋಲಿ-ಬಾಲ್, ಥ್ರೋ-ಬಾಲ್ ಇಂಥಹ ಆಟೋಟಗಳಲ್ಲಿ ಅನೇಕ ಪ್ರಶಸ್ತಿಗಳು ಲಭಿಸಿವೆ.ಇದು ನನ್ನ ಕುರಿತು ಒಂದು ಸಣ್ಣ ಪರಿಚಯ. ಧನ್ಯವದಗಳು