ಸದಸ್ಯ:Lakshminarayana s lucky/ನನ್ನ ಪ್ರಯೋಗಪುಟ
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು
ಲಿಟ್ಮಸ್ಸನ್ನು ಕೆಂಪು ಬಣ್ಣಕ್ಕೆ ತಿರುಗಿಸುವ, ಲೋಹಗಳು ಮೃತ್‍ಗಳು (ಅರ್ತ್ಸ್, ಅಂದರೆ ಆಕ್ಸೈಡುಗಳು) ಮುಂತಾದ ವಸ್ತುಗಳನ್ನು ವಿಲೀನಗೊಳಿಸುವ ಮತ್ತು ಕ್ಷಾರದ (ಆಲ್ಕಲಿ) ಸಂಪರ್ಕದಿಂದ ಈ ಗುಣಗಳನ್ನು ಕಳೆದುಕೊಳ್ಳುವ ವಸ್ತು ಆಮ್ಲ(ಆಸಿಡ್).[೧] ಇದು ರಾಬರ್ಟ್‍ಬಾಯಿಲ್ ಮೊಟ್ಟಮೊದಲು ನೀಡಿದ ವಿವರಣೆ (1680). ಜಲ ದ್ರಾವಣದಲ್ಲಿರುವ ಹೈಡ್ರಾಕ್ಸೈಡ್ ಆಯಾನನ್ನು ಬಿಡುಗಡೆ ಮಾಡುವ, ಆಮ್ಲಗಳನ್ನು ತಟಸ್ಥಗೊಳಿಸುವ (ನ್ಯೂಟ್ರಲೈಸ್) ಅಥವಾ ಎಲೆಕ್ಟ್ರಾನ್ ಕೊರತೆ ಇರುವ ವಸ್ತುವಿನೊಡನೆ ಸಂಯೋಜನೆಗೊಂಡು ಅದಕ್ಕೆ ಎಲೆಕ್ಟ್ರಾನ್ ನೀಡುವ ವಸ್ತು ಪ್ರತ್ಯಾಮ್ಲ (ಬೇಸ್). ಈ ವಿವರಗಳನ್ನು ನಿಖರವಾದ ವ್ಯಾಖ್ಯೆಗಳೆಂದೇನೂ ಭಾವಿಸಬೇಕಾಗಿಲ್ಲ. ಕ್ಷಾರ ಲಿಟ್ಮಸ್ಸನ್ನು ನೀಲಿ ಬಣ್ಣಕ್ಕೆ ತಿರುಗಿಸುವುದು. ಮುಟ್ಟಿದರೆ ಸಾಬೂನು ಮುಟ್ಟಿದ ಭಾವನೆ ಬರುವುದು. ಖಾರವಾಗಿದ್ದು ನಾಲಿಗೆಯನ್ನು ಕೊರೆಯುವುದು. ಕ್ರಮೇಣ ಆ ಗುಣಗಳ ಜೊತೆಗೆ ಇನ್ನೂ ಕೆಲವು ವಿಶಿಷ್ಟಗುಣಗಳನ್ನು ಸೇರಿಸಲಾಯಿತು. ಮಂದ (ಡೈಲ್ಯೂಟ್) ಆಮ್ಲ ಹುಳಿ. ಆಮ್ಲಗಳು ಸಾಮಾನ್ಯವಾಗಿ ಕಾರ್ಬೊನೇಟುಗಳೊಡನೆ ವರ್ತಿಸಿ ಕಾರ್ಬನ್ ಡೈಆಕ್ಸೈಡನ್ನುಂಟುಮಾಡುವುವು. ಲಿಟ್ಮಸ್ ಅಲ್ಲದೆ ಇತರ ಅನೇಕ ಸಾವಯವ ವರ್ಣ ದ್ರವ್ಯಗಳೂ ಆಮ್ಲ ಪ್ರತ್ಯಾಮ್ಲಗಳಲ್ಲಿ ವಿಶಿಷ್ಟ ಬಣ್ಣವನ್ನು ಹೊಂದುವುವು. ಉದಾಹರಣೆಗೆ, ಮಿಥೈಲ್ ಆರೆಂಜ್, ಆಮ್ಲಗಳಲ್ಲಿ ಗುಲಾಬಿ ಕೆಂಪು ಬಣ್ಣವನ್ನೂ ಪ್ರತ್ಯಾಮ್ಲಗಳಲ್ಲಿ ಹಳದಿ ಬಣ್ಣವನ್ನೂ ಹೊಂದುವುದು. ಫಿನಾಲ್‍ಫ್ತಲೀನ್ ಆಮ್ಲಗಳಲ್ಲಿ ನಿರ್ವರ್ಣವಾಗಿರುವುದು. ಪ್ರತ್ಯಾಮ್ಲಗಳಲ್ಲಿ ಗುಲಾಬಿ ಕೆಂಪುಬಣ್ಣ ಹೊಂದುವುದು. ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ಅನೇಕ ರಾಸಾಯನಿಕ ಪರಿವರ್ತನೆಗಳ ವೇಗವರ್ಧಕಗಳಾಗಿರುವುವು.[೨]
ಆಮ್ಲಗಳ ರಚನೆಯಲ್ಲಿ ಕಂಡುಬರುವ ಕೆಲವೊಂದು ಸಾದೃಶ್ಯಗಳು ಅವುಗಳ ವಿಶಿಷ್ಟಗುಣಗಳಿಗೆ ಕಾರಣವೆಂಬ ಭಾವನೆಯನ್ನು ಮೊಟ್ಟಮೊದಲು ಪ್ರತಿಪಾದಿಸಿದವ ಲೆವಾಸಿಯೆ. ಎಲ್ಲ ಆಮ್ಲಗಳ ಅಣುಗಳಲ್ಲಿಯೂ ಆಕ್ಸಿಜನ್ನಿನ (ಆಮ್ಲಜನಕ) ಪರಮಾಣುವಿದ್ದು, ಈ ಆಕ್ಸಿಜನ್ ವಸ್ತುವಿಗೆ ಆಮ್ಲೀಯ ಗುಣವನ್ನುಂಟುಮಾಡುವುದೆಂದು ಅವನ ಭಾವನೆಯಾಗಿತ್ತು. ಅನ್ವರ್ಥಕವಾದ ಆಕ್ಸಿಜನ್ ಎಂಬ ಹೆಸರನ್ನು ಈ ಮೂಲವಸ್ತುವಿಗೆ ಲೆವಾಸಿಯೆಯೇ ಕೊಟ್ಟ. ಇದರ ಅನಂತರ ಡೇವಿ ಮ್ಯೂರಿಯಾಟಿಕ್ ಆಮ್ಲದಲ್ಲಿ (ಹೈಡ್ರೋಕ್ಲೋರಿಕಾಮ್ಲ) ಆಕ್ಸಿಜನ್ನಿನ ಅಗತ್ಯವಿಲ್ಲವೆಂದು ತೋರಿಸಿದ. ಒಂದು ವಸ್ತು ಆಮ್ಲೀಯ ಗುಣ ಹೊಂದಲು ಆಕ್ಸಿಜನ್ನಿನ ಅಗತ್ಯವಿಲ್ಲ, ಪ್ರತಿ ಆಮ್ಲದ ಅಣುವಿನಲ್ಲಿಯೂ ಇರುವ ಹೈಡ್ರೊಜನ್ ಪರಮಾಣು ವಸ್ತುವಿನ ಆಮ್ಲೀಯಗುಣಕ್ಕೆ ಕಾರಣ ಎಂಬುದು ಇವನ ಮತ. ಲೇಬೆಗ್ ಆಮ್ಲೀಯ ಗುಣವುಳ್ಳ ಅನೇಕ ಸಾವಯವ ಸಂಯುಕ್ತಗಳ ಸಂಶೋಧನೆ ಮಾಡಿ ಪ್ರತಿಯೊಂದು ಆಮ್ಲದ ಅಣುವಿನಲ್ಲಿಯೂ ಲೋಹದಿಂದ ಪಲ್ಲಟಿಸಲ್ಪಡಬಹುದಾದ ಹೈಡ್ರೊಜನ್ ಪರಮಾಣು ಒಂದಾದರೂ ಇದ್ದು, ಇದು ವಸ್ತುವಿನ ಆಮ್ಲೀಯ ಗುಣಕ್ಕೆ ಕಾರಣವೆಂದು ಪ್ರತಿಪಾದಿಸಿ ಡೇವಿಯ ಭಾವನೆಯನ್ನು ಪುಷ್ಟೀಕರಿಸಿದ. ಪಲ್ಲಟಿಸಲ್ಪಡಬಹುದಾದ ಹೈಡ್ರೊಜನ್ ಪರಮಾಣುವನ್ನು ಅವುಗಳ ಅಣುವಿನಲ್ಲಿ ಹೊಂದಿದ ವಸ್ತುಗಳು ಆಮ್ಲಗಳು ಎಂಬ ಭಾವನೆ ಬಹುಕಾಲ ಬಳಕೆಯಲ್ಲಿತ್ತು. ಪ್ರಥಮ ಪಾಠಗಳಲ್ಲಿ ಆಮ್ಲಗಳ ಈ ವಿವರಣೆಯನ್ನು ಈಗಲೂ ನೀಡುವರು. ಆದರೆ ಈ ವಿವರಣೆ ಆಮ್ಲಗಳ ಪ್ರಬಲತೆಗಳಲ್ಲಿ (ಸ್ಟ್ರೆಂಗ್ತ್), ವೇಗವರ್ಧಕ ಸಾಮಥ್ರ್ಯದಲ್ಲಿ ಮತ್ತು ವಿದ್ಯುದ್ವಾಹಕತ್ವದಲ್ಲಿ ಕಂಡುಬರುವ ಹೆಚ್ಚಿನ ವ್ಯತ್ಯಾಸಗಳನ್ನು ವಿವರಿಸಲಾಗಲಿ ಅಥವಾ ರಚನೆಯಲ್ಲಿ ಹೈಡ್ರೊಜನ್ ಇರದ ಅಲ್ಯೂಮಿನಿಯಂ ಕ್ಲೋರೈಡ್ ಮುಂತಾದ ವಸ್ತುಗಳ ದ್ರಾವಣಗಳು ಆಮ್ಲೀಯಗುಣಗಳನ್ನು ಏಕೆ ಪ್ರದರ್ಶಿಸುವುವೆಂದು ವಿವರಿಸಲು ಸಮರ್ಥವಾಗಿಲ್ಲ. ಈಚಿನ ವರ್ಷಗಳಲ್ಲಿ ಆಮ್ಲಗಳ ವಿಷಯಗಳಲ್ಲಿ ನಮ್ಮ ಭಾವನೆಗಳು ವಿಶೇಷ ಮಾರ್ಪಾಡಾಗಿ ಅನೇಕ ಹೊಸ ಭಾವನೆಗಳು ಪ್ರತಿಪಾದಿತವಾಗಿವೆ. ಇವುಗಳಲ್ಲಿ ಮುಖ್ಯವಾದುವನ್ನು ಈ ಕೆಳಗೆ ವಿವರಿಸಿದೆ.[೩]
ಅರೇನಿಯಸ್‍ನ ವಾದ
[ಬದಲಾಯಿಸಿ]ಈ ವಾದದ ಪ್ರಕಾರ ನೀರಿನಲ್ಲಿ ವಿಲೀನವಾದಾಗ ಹೈಡ್ರೊಜನ್ ಆಯಾನನ್ನು ಊ+, ಕೊಡುವ ವಸ್ತುಗಳೆಲ್ಲವೂ ಆಮ್ಲಗಳು, ನೀರಿನ ದ್ರಾವಣದಲ್ಲಿ ಹೈಡ್ರಾಕ್ಸಿಲ್ ಆಯಾನನ್ನು ಕೊಡುವ ವಸ್ತುಗಳೆಲ್ಲವೂ ಪ್ರತ್ಯಾಮ್ಲಗಳು. ನೀರು ಆಂಫೊಟರಿಕ್ ಅಂದರೆ ಎರಡು ವರ್ಗಕ್ಕೂ ಸೇರಿದ ವಸ್ತು. ಇದು ಅಲ್ಪಪ್ರಮಾಣದಲ್ಲಿ ಅಯಾನೀಕರಿಸಿ ಹೈಡ್ರೊಜನ್ ಅಯಾನನ್ನೂ ಹೈಡ್ರಾಕ್ಸಿಲ್ ಅಯಾನನ್ನೂ ಕೊಡುವುದು.
ಶುದ್ಧ ನೀರಿನಲ್ಲಿ ಹೈಡ್ರೊಜನ್ ಅಯಾನಿನ ಮತ್ತು ಹೈಡ್ರಾಕ್ಸಿಲ್ ಅಯಾನಿನ ಪ್ರಬಲತೆಗಳು (ಕಾನ್ಸೆಂಟ್ರೇಷನ್ಸ್)-ಅಂದರೆ ಒಂದು ಲೀಟರ್ ನೀರಿನಲ್ಲಿರುವ ಈ ಅಯಾನ್‍ಗಳ ಸಂಖ್ಯೆಗಳು-ಸಮಾನವಾಗಿರುವುವು. ಆಮ್ಲ ನೀರಿನಲ್ಲಿ ಹೈಡ್ರೊಜನ್ ಅಯಾನಿನ ಪ್ರಬಲತೆಯನ್ನು ಹೆಚ್ಚಿಸುವುದು; ಹೈಡ್ರಾಕ್ಸಿಲ್ ಅಯಾನಿನ ಪ್ರಬಲತೆಯನ್ನು ತಗ್ಗಿಸುವುದು. ಪ್ರತ್ಯಾಮ್ಲ ಹೈಡ್ರಾಕ್ಸಿಲ್ ಅಯಾನಿನ ಪ್ರಬಲತೆಯನ್ನು ಹೆಚ್ಚಿಸುವುದು. ಹೈಡ್ರೊಜನ್ ಅಯಾನ್ ಮತ್ತು ಹೈಡ್ರಾಕ್ಸಿಲ್ ಅಯಾನುಗಳು ಸಂಯೋಜಿಸಿ ನೀರಿನ ಅಣುಗಳಾಗುವುದೇ ತಟಸ್ಥೀಕರಣ (ನ್ಯೂಟ್ರಲೈಸೇಷನ್). ಲವಣದ ಉತ್ಪತ್ತಿ ಅನುಷಂಗಿಕ (ಇನ್ಸಿಡೆಂಟಲ್).
ಈ ವಾದದ ಸಹಾಯದಿಂದ ಆಮ್ಲಗಳ ಪ್ರಬಲತೆಗಳಲ್ಲಿ ವೇಗವರ್ಧಕ ಸಾಮಥ್ರ್ಯಗಳಲ್ಲಿ ಮತ್ತು ವಿದ್ಯುದ್ವಾಹಕತ್ವದಲ್ಲಿ ಇರುವ ವ್ಯತ್ಯಾಸಗಳನ್ನು ವಿವರಿಸಬಹುದು. ಸಂಪೂರ್ಣವಾಗಿ ಅಯಾನೀಕರಿಸುವ ಆಮ್ಲಗಳು ಪ್ರಬಲ ಆಮ್ಲಗಳು. ಅಲ್ಪ ಪ್ರಮಾಣದಲ್ಲಿ ಅಯಾನೀಕರಿಸುವ ಆಮ್ಲಗಳು ದುರ್ಬಲ ಆಮ್ಲಗಳು. ಸಮಾನ ಪ್ರಬಲತೆಯಲ್ಲಿ ಇರುವ ಸಮಾನ ಗಾತ್ರ ಆಮ್ಲಗಳನ್ನು ತೆಗೆದುಕೊಂಡರೆ, ಪ್ರಬಲ ಆಮ್ಲಗಳಲ್ಲಿ ಹೈಡ್ರೊಜನ್ ಅಯಾನಿನ ಪ್ರಬಲತೆ ಹೆಚ್ಚಾಗಿಯೂ ದುರ್ಬಲ ಆಮ್ಲಗಳಲ್ಲಿ ಹೈಡ್ರೊಜನ್ ಅಯಾನಿನ ಪ್ರಬಲತೆ ಕಡಿಮೆಯಾಗಿಯೂ ಇರುವುದು. ಪ್ರತ್ಯಾಮ್ಲಗಳಿಗೂ ಇದೇ ಅನ್ವಯಿಸುವುದು. ಇಲ್ಲಿ ಹೈಡ್ರಾಕ್ಸಿಲ್ ಅಯಾನ್ ಗಣನೆಗೆ ಬರುವುದು. ಹೈಡ್ರೊಜನ್ ಅಯಾನ್ ಮತ್ತು ಹೈಡ್ರಾಕ್ಸಿಲ್ ಅಯಾನ್‍ಗಳು ವೇಗವರ್ಧಕಗಳಾಗಿರುವುದರಿಂದ ಪ್ರಬಲ ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ವೇಗವರ್ಧಕ ಸಾಮಥ್ರ್ಯ ಕಡಿಮೆ. ಅಯಾನುಗಳು ಮಾತ್ರ ವಿದ್ಯುದ್ವಾಹಕಗಳಾದ್ದರಿಂದ ಸಂಪೂರ್ಣ ಅಯಾನೀಕರಿಸುವ ದುರ್ಬಲ ಆಮ್ಲ ಪ್ರತ್ಯಾಮ್ಲಗಳ ವಿದ್ಯುದ್ವಾಹಕತ್ವ ಕೀಳ್ಮಟ್ಟದ್ದಾಗಿದೆ. ಜಲವಿಶ್ಲೇಷಣೆಯನ್ನೂ (ಹೈಡ್ರಾಲಿಸಿಸ್) ಇದರ ಸಹಾಯದಿಂದ ವಿವರಿಸಬಹುದು. ಆದರೆ ಈ ವಾದ ಒಂದು ಮಿತಿಯನ್ನು ಹೊಂದಿದೆ. ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳ ಕ್ಷೇತ್ರ ಇಲ್ಲಿ ನೀರಿನ ದ್ರಾವಣಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ ಹೈಡ್ರಾಕ್ಸಿಲ್ ಅಯಾನನ್ನು ಹೊಂದಿರುವ ಪ್ರತ್ಯಾಮ್ಲಗಳು ಇದರ ವ್ಯಾಪ್ತಿಯೊಳಗೆ ಬರುವುದಿಲ್ಲ. ದ್ರವ ಅವೋನಿಯಾ, ನಿರ್ಜಲ (ಅನ್‍ಹೈಡ್ರಸ್) ಹೈಡ್ರೊಜನ್ ಫ್ಲೊರೈಡ್, ಬೆಂಜೀನ್, ಕ್ಲೋರೋಫಾರಂ ಇತ್ಯಾದಿ ದ್ರವಗಳಲ್ಲಿ ವಿಲೀನವಾದ ಅನೇಕ ವಸ್ತುಗಳು ಆಮ್ಲ ಪ್ರತ್ಯಾಮ್ಲಗಳ ಗುಣಗಳನ್ನು ಪ್ರದರ್ಶಿಸುವುವು. ಹೈಡ್ರಾಕ್ಸಿಲ್ ಅಯಾನ್ ಇರದ ಪ್ರತ್ಯಾಮ್ಲಗಳು, ಉದಾ, ಏಓಊ2 ಇರುವುವು. ಅರೇನಿಯಸ್ ವಾದದಿಂದ ವಿವರಿಸಲ್ಪಡುವ ಈ ಪ್ರಾಯೋಗಿಕ ವಿಷಯಗಳನ್ನು ವಿವರಿಸುವ ಸಲುವಾಗಿ ಏಕಕಾಲದಲ್ಲಿ ಬ್ರಾನ್ಸ್‍ಟೆಡ್ ಮತ್ತು ಲೌರಿ ಎಂಬ ರಸಾಯನ ಶಾಸ್ತ್ರಜ್ಞರು ಹೊಸದೊಂದು ವಾದವನ್ನು 1923ರಲ್ಲಿ ಪ್ರತಿಪಾದಿಸಿದರು. ಇದನ್ನು ಪ್ರೊಟಾನಿಕ್ ಭಾವನೆ ಎನ್ನಬಹುದು.
ಪ್ರೊಟಾನಿಕ್ ಭಾವನೆ
[ಬದಲಾಯಿಸಿ]ಈ ವಾದದ ಪ್ರಕಾರ ಪ್ರೊಟಾನನ್ನು (ಊ+) ಕೊಡಲು ಸಮರ್ಥವಾದ ಹೈಡ್ರೊಜನ್ ಇರುವ ಯಾವ ವಸ್ತುವೇ ಆಗಲಿ ಅದು ಅಣುವಾಗಿರಲಿ, ಅಯಾನ್ ಆಗಿರಲಿ ಆಮ್ಲ. ಪ್ರೊಟಾನನ್ನು ಗ್ರಹಿಸುವ ಸಾಮಥ್ರ್ಯವುಳ್ಳ ಪ್ರತಿಯೊಂದು ವಸ್ತುವೂ ಅದು ಅಣುವಾಗಿರಬಹುದು ಅಥವಾ ಅಯಾನ್ ಆಗಿರಬಹುದು ಪ್ರತ್ಯಾಮ್ಲ.
ಒಂದು ಆಮ್ಲದ ಪ್ರಬಲತೆ ಅದರ ಪ್ರೊಟಾನ್‍ದಾಯಕ ಸಾಮಥ್ರ್ಯಕ್ಕೆ ಅನುಗುಣವಾಗಿರುವುದು. ಪ್ರತ್ಯಾಮ್ಲದ ಪ್ರಬಲತೆ ಪ್ರೊಟಾನ್ ಗ್ರಾಹಕ ಸಾಮಥ್ರ್ಯಕ್ಕೆ ಅನುಗುಣವಾಗಿರುವುದು. ಆಮ್ಲಪ್ರತ್ಯಾಮ್ಲಗಳ ವರ್ತನೆಗಳನ್ನು ಸರ್ವಸಮನ್ವಯವಾಗಿ ಕೆಳಗಿನಂತೆ ಬರೆಯಬಹುದು. ಆಮ್ಲ1 +ಪ್ರತ್ಯಾಮ್ಲ1 ಆಮ್ಲ2+ಪ್ರತ್ಯಾಮ್ಲ2. ಪರಿವರ್ತನೆಯ ದುರ್ಬಲ ಆಮ್ಲ ಪ್ರತ್ಯಾಮ್ಲಗಳ ದಿಕ್ಕಿನಲ್ಲಿ ನಡೆಯುವುದು.ಹಾಗೆಯೇ ದ್ರಾವ್ಯವಸ್ತುವೂ ಸೊಲ್ಯುಟ್. ಅದು ವಿಲೀನವಾಗಿರುವ ದ್ರಾವಕವನ್ನು ಅವಲಂಬಿಸಿ ಆಮ್ಲವಾಗಿ ಅಥವಾ ಪ್ರತ್ಯಾಮ್ಲವಾಗಿ ವರ್ತಿಸಬಹುದು. ಯುರಿಯ ದ್ರವ ಅಮೋನಿಯದಲ್ಲಿ ಆಮ್ಲವಾಗಿಯೂ ನಿರ್ಜಲ ಫಾರ್ಮಿಕ್ ಆಮ್ಲದಲ್ಲಿ ಪ್ರತ್ಯಾಮ್ಲವಾಗಿಯೂ ವರ್ತಿಸುವುದು.
ಈ ವಾದ ಹೈಡ್ರಾಕ್ಸಿ ಸಂಯುಕ್ತಗಳಲ್ಲದ ಇತರ ಸಂಯುಕ್ತಗಳನ್ನು ಪ್ರತ್ಯಾಮ್ಲಗಳ ವರ್ಗದಲ್ಲಿ ಗಣಿಸಿದರೆ ಮತ್ತು ತಟಸ್ಥೀಕರಣ ಆಮ್ಲ ಪ್ರತ್ಯಾಮ್ಲಗಳ ಒಂದು ವಿಶಿಷ್ಟ ಗುಣವೆಂದು ಭಾವಿಸಿಲ್ಲ. ಈ ಕಾರಣಗಳಿಂದ ಇದು ಅರೇನಿಯಸ್‍ನ ವಾದದ ಕೆಲವು ನ್ಯೂನತೆಗಳನ್ನು ಸರಿಪಡಿಸಿದೆ. ಹಾಗಿದ್ದರೂ ಈ ವಾದ ಸಹ ಅನ್ಯೂನವೇನಾಗಿಲ್ಲ. ಪ್ರೊಟಾನ್ ವರ್ಗಾವಣೆಯ ಮೇಲೆ ವಿಶೇಷಲಕ್ಷ್ಯ ಹೊಂದಿರುವ ಈ ವಾದದಲ್ಲಿ ಪ್ರೊಟಾನು ಭಾಗವಹಿಸದ ಇತರ ಅನೇಕ ಆಮ್ಲ ಪ್ರತ್ಯಾಮ್ಲಗಳಿಗೆ ಸ್ಥಾನವಿಲ್ಲ. ಪ್ರೊಟಾನು ಭಾಗವಹಿಸದ ಆಮ್ಲ ಪ್ರತ್ಯಾಮ್ಲ ವಸ್ತುಗಳನ್ನೂ ಗಣನೆಗೆ ತೆಗೆದುಕೊಂಡಿರುವ ಇನ್ನೊಂದು ವಾದದಲ್ಲಿ ಈ ನ್ಯೂನತೆ ಇಲ್ಲ. ಈ ವಾದವನ್ನು ದ್ರಾವಕ ವ್ಯವಸ್ಥೆಗಳ ವಾದ (ಥಿಯೊರಿ ಆಫ್ ಸಾಲ್‍ವೆಂಟ್ ಸಿಸ್ಟಮ್) ಎನ್ನುವರು.
ದ್ರಾವಕ ವ್ಯವಸ್ಥೆಗಳ ವಾದ
[ಬದಲಾಯಿಸಿ]ದ್ರಾವಣದಲ್ಲಿರುವ ವಸ್ತು ದ್ರಾವಕೀಯ ಧನಯಾನಿನ ಪ್ರಬಲತೆ ಹೆಚ್ಚಿಸಿದರೆ ಆ ವಸ್ತು ಆಮ್ಲ. ಇದು ದ್ರಾವಕೀಯ ಋಣಅಯಾನಿನ ಪ್ರಬಲತೆಯನ್ನು ಹೆಚ್ಚಿಸಿದರೆ ಆ ವಸ್ತು ಪ್ರತ್ಯಾಮ್ಲ. ದ್ರವ ಅಮೋನಿಯದಲ್ಲಿ ವಿಲೀನವಾದ ಓಊ4ಅI ದ್ರಾವಕೀಯ ಧನಯಾನ್ ಆದ ಅಯಾನಿನ ಪ್ರಬಲತೆಯನ್ನು ಹೆಚ್ಚಿಸುವುದು. ಆದ್ದರಿಂದ ಇದು ಆಮ್ಲ. ಏಓಊ2 ದ್ರಾವಕೀಯ ಋಣಅಯಾನಾದ ಓಊ2— ಅಯಾನಿನ ಪ್ರಬಲತೆ ಹೆಚ್ಚಿಸುವುದು. ಆದ್ದರಿಂದ ಇದು ಪ್ರತ್ಯಾಮ್ಲ. ದ್ರಾವಕೀಯ ಧನಅಯಾನು ಮತ್ತು ದ್ರಾವಕೀಯ ಋಣಅಯಾನುಗಳು ವರ್ತಿಸಿ ದ್ರಾವಕದ ಅಣು ಉಂಟಾಗುವುದೇ ತಟಸ್ಥೀಕರಣ.
ಈ ವಾದ ಆಮ್ಲ ಪ್ರತ್ಯಾಮ್ಲಗಳು ಪ್ರೊಟಾನಿಕ್ ವ್ಯವಸ್ಥೆಗಳಿಗೆ ಮಾತ್ರ ಸೀಮಿತವಾಗಿರುವ ನ್ಯೂನತೆಯನ್ನು ಹೋಗಲಾಡಿಸಿರುವುದು. ಆದರೆ ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳನ್ನು ದ್ರಾವಣದಲ್ಲಿ ನಡೆಯುವ ಅಯಾನಿಕ್ ವರ್ತನೆಗಳಿಗೆ ಮಾತ್ರ ಸೀಮಿತಮಾಡಿದೆ. ದ್ರಾವಣದಲ್ಲಿರುವ ಮತ್ತು ಅಯಾನ್ ವರ್ತನೆಗಳಲ್ಲದ ಅನೇಕ ಪರಿವರ್ತನೆಗಳು ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳ ಸ್ವರೂಪವನ್ನು ಹೊಂದಿರುವುವು. ಇಂಥ ವರ್ತನೆಗಳನ್ನೂ ಆಮ್ಲ ಪ್ರತ್ಯಾಮ್ಲಗಳ ವರ್ತನೆಗಳ ವ್ಯಾಪ್ತಿಯಲ್ಲಿ ತಂದಿರುವ ಇನ್ನೊಂದು ವಾದ ಜಿ.ಎನ್. ಲೂಯಿಯಿಂದ ಪ್ರತಿಪಾದಿತವಾಗಿದೆ. ಇದಕ್ಕೆ ಲೂಯಿಯ ಎಲೆಕ್ಟ್ರಾನಿಕ್ ವಾದವೆಂದು ಹೆಸರು.
ಲೂಯಿಯ ಎಲೆಕ್ಟ್ರಾನಿಕ್ ವಾದ
[ಬದಲಾಯಿಸಿ]೧೯೨೩ರಲ್ಲಿ ಪ್ರತಿಪಾದಿಸಿದ ಈ ವಾದದಲ್ಲಿ ಎರಡು ಭಾಗಗಳಿವೆ. ಯಾವುದೊ ಒಂದು ವಿಶಿಷ್ಟ ಮೂಲ ವಸ್ತುವಿನ ಅಥವಾ ಅಯಾನಿನ ಅಸ್ತಿತ್ವದ ಭಾವನೆ ಆಮ್ಲ ಪ್ರತ್ಯಾಮ್ಲಗಳ ವಿವರಣೆಗೆ ಅಗತ್ಯವೆಂಬ ವಾದವನ್ನು ಇವನು ನಿರಾಕರಿಸಿದ. ಒಂದು ವಸ್ತುವನ್ನು ಆಮ್ಲ ಅಥವಾ ಪ್ರತ್ಯಾಮ್ಲವಾಗಿ ವರ್ಗೀಕರಿಸಲು ಅದು ಕೆಳಗಿನ ನಿರ್ಧಾರ ಲಕ್ಷಣಗಳನ್ನು ಹೊಂದಿರಬೇಕು. ಈ ನಿರ್ಧಾರಲಕ್ಷಣಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಪ್ರಾಯೋಗಿಕವಾಗಿ ನಿರ್ಧಾರಕಗಳು (ಫಿನಾಮೆನಲಾಜಿಕಲ್ ಕ್ರೈಟೀರಿಯಾ) : ಇವು i ಶೀಘ್ರ ತಟಸ್ಥೀಕರಣ (ರ್ಯಾಪಿಡ್ ನ್ಯೂಟ್ರಲೈಸೇಷನ್) : ಪ್ರಚೋದಕ ಶಕ್ತಿ (ಆಕ್ಟಿವೇಷನ್ ಎನರ್ಜಿ) ಅನವಶ್ಯವಾಗುವಷ್ಟು ಶೀಘ್ರವಾಗಿ ತಟಸ್ಥೀಕರಣ ಸಂಭವಿಸುವುದು. ii ದುರ್ಬಲ ಆಮ್ಲ ಅಥವಾ ಪ್ರತ್ಯಾಮ್ಲದ ಪಲ್ಲಟನ ನಿಂದ ಕ್ಯುಪ್ರಿಕ ಅಯಾನನ್ನು ಹೈಡ್ರೊಜನ್ ಅಯಾನು ಪಲ್ಲಟಿಸುವುದು. ಏಕೆಂದರೆ ಹೈಡ್ರೊಜನ್ ಅಯಾನು ಕ್ಯುಪ್ರಿಕ್ ಅಯಾನಿಗಿಂತ ಹೆಚ್ಚು ಪ್ರಬಲವಾದ ಆಮ್ಲ. ಅಸಿಟೇಟ್ ಅಯಾನನ್ನು ಹೈಡ್ರಾಕ್ಸಿಲ್ ಅಯಾನು ಪಲ್ಲಟಿಸುವುದು. ಏಕೆಂದರೆ ಹೈಡ್ರಾಕ್ಸಿಲ್ ಅಯಾನು ಅಸಿಟೇಟ್ ಅಯಾನಿಗಿಂತಲೂ ಹೆಚ್ಚು ಪ್ರಬಲವಾದ ಪ್ರತ್ಯಾಮ್ಲ. iii ಸೂಚಕಗಳನ್ನುಪಯೋಗಿಸಿ ಅನುಮಾಪನ (ಟೈಟ್ರೇಷನ್ ಯೂಸಿಂಗ್ ಇಂಡಿಕೇಟರ್ಸ್): ಮೀಥೈಲ್ ವಯೊಲೆಟಅನ್ನು ಉಪಯೋಗಿಸಿ ಆಮ್ಲ ಊಅIಅನ್ನು ಪ್ರತ್ಯಾಮ್ಲ ಓಊ3ರೊಡನೆ ನೀರಿನ ದ್ರಾವಣದಲ್ಲಿ ಅನುಮಾಪಿಸಬಹುದು. ಆಮ್ಲ ಪ್ರತ್ಯಾಮ್ಲ ಫ್ರಾಲಿಕ್ ಅನ್‍ಹೈಡ್ರೈಡಿನೊಡನೆ ಕ್ಲೋರೋ ಬೆಂಜೀನಿನ ದ್ರಾವಣದಲ್ಲಿ ಅನುಮಾಪಿಸಬಹುದು. ಆಮ್ಲ ನೊಡನೆ ಕ್ಲೋರೋಫಾರಂ ದ್ರಾವಣದಲ್ಲಿ ಅನಿಮಾಪಿಸಬಹುದು. ಪ್ರತಿ ಸಂದರ್ಭದಲ್ಲಿಯೂ ಆಮ್ಲ ಹೆಚ್ಚಿನ ಪ್ರಮಾಣದಲ್ಲಿದ್ದಾಗ ಸೂಚಕ ಹಳದಿ ಬಣ್ಣವನ್ನೂ ಪ್ರತ್ಯಾಮ್ಲ ಹೆಚ್ಚಿದ್ದಾಗ ಸೂಚಕ ನೇರಳೆ ಬಣ್ಣವನ್ನೂ ಹೊಂದಿರುವುದು. iv ವೇಗವರ್ಧಕತ್ವ : ಆಮ್ಲಗಳು ಮತ್ತು ಸಾವಯವ ಅಮೀನುಗಳು, ಅಮೈಡುಗಳು ಇತ್ಯಾದಿ ಪ್ರತ್ಯಾಮ್ಲಗಳು ಇವುಗಳ ಸುವಿದಿತವೇಗವರ್ಧಕಗುಣಗಳನ್ನು ಲೂಯಿವಾದ ಸಂಪೂರ್ಣ ಸುವ್ಯವಸ್ಥಿತಗೊಳಿಸಿದೆ. ರಾಚನಿಕ ನಿರ್ಧಾರಕಗಳು (ಸ್ಟ್ರಕ್ಚರಲ್ ಕ್ರೈಟೀರಿಯ) : ರಾಚನಿಕವಾಗಿ ಒಂದು ಜೊತೆ ಎಲೆಕ್ಟ್ರಾನನ್ನು ಕೊಡುವ ಸಾಮಥ್ರ್ಯವುಳ್ಳ ಪರಮಾಣುವನ್ನು ಹೊಂದಿರುವ ಎಲ್ಲ ವಸ್ತುಗಳೂ ಪ್ರತ್ಯಾಮ್ಲಗಳು. ಒಂದು ಜೊತೆ ಎಲೆಕ್ಟ್ರಾನನ್ನು ಗ್ರಹಿಸುವ ಸಾಮಥ್ರ್ಯ ಹೊಂದಿರುವ ಎಲ್ಲ ವಸ್ತುಗಳೂ ಆಮ್ಲಗಳು. ಈ ಪ್ರತ್ಯಾಮ್ಲ ಆಮ್ಲಗಳು ನಿರ್ದೇಶಕ ಸಹ ಸಂಯೋಜಕ ಸಾಮಥ್ರ್ಯವಿರುವ ಕೋಆರ್ಡಿನೇಟ್ ಕೋವೆಲೆಂಟ್ ಬಂಧದ ಮೂಲಕ ಸಂಯೋಜಿಸಿ ಸಂಯುಕ್ತವಾಗುವುದೇ ತಟಸ್ಥೀಕರಣ. ಇದರಿಂದಾಗಿ ಫಲಿತವಸ್ತು ಅಯಾನ್‍ಗಳಾಗಿ ವಿಶ್ಲೇಷಿಸಬಹುದು. ಅಥವಾ ಬೇರೊಂದು ರೀತಿಯಲ್ಲಿ ಪುನರ್ಯೋಜಿತವಾಗಬಹುದು. ಇಲ್ಲವೆ, ಯಾವ ವ್ಯತ್ಯಾಸವನ್ನೂ ಹೊಂದದೆ ಇರಬಹುದು.
ಲೂಯಿಯ ಎಲೆಕ್ಟ್ರಾನಿಕವಾದ ಯಾವುದೇ ಒಂದು ಮೂಲವಸ್ತುವನ್ನಾಗಲಿ ಅಥವಾ ಅಯಾನನ್ನಾಗಲಿ ಅಥವಾ ದ್ರಾವಕವನ್ನಾಗಲಿ ಅವಲಂಬಿಸಿಲ್ಲ. ಹಿಂದಿನವಾದಗಳೆಲ್ಲ ಲೂಯಿವಾದದ ಕೆಲವು ವಿಶಿಷ್ಟ ಸಂದರ್ಭಗಳು.
ಉಸನೊವಿಷ್‍ನವಾದ
[ಬದಲಾಯಿಸಿ]೧೯೩೯ರಲ್ಲಿ ಉಸನೊವಿಷ್ ಪ್ರತಿಪಾದಿಸಿದ ಈ ವಾದ ಲೂಯಿಯ ವಾದಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯುಳ್ಳದ್ದು. ಈ ವಾದದ ಪ್ರಕಾರ ಅನಯಾನ್‍ಗಳನ್ನು ಅಥವಾ ಎಲೆಕ್ಟ್ರಾನುಗಳನ್ನು ಕೊಡುವ ಅಥವಾ ಕ್ಯಾಟಯಾನ್‍ಗಳೊಡನೆ ಸಂಯೋಜಿಸುವ ಯಾವ ವಸ್ತುವೇ ಆಗಲಿ ಪ್ರತ್ಯಾಮ್ಲವಾಗಿರುವುದು. ಕ್ಯಾಟಯಾನ್‍ಗಳನ್ನು ಕೊಡುವ ಅಥವಾ ಅಯಾನ್ ಅಥವಾ ಎಲೆಕ್ಟ್ರಾನ್‍ಗಳೊಡನೆ ಸಂಯೋಜಿಸುವ ಯಾವ ವಸ್ತುವೇ ಆಗಲಿ ಆಮ್ಲವಾಗಿರುವುದು. ಈ ವಾದ ಇತರ ಎಲ್ಲ ವಾದಗಳ ವ್ಯಾಪ್ತಿಯಲ್ಲಿ ಬರುವ ಪರಿವರ್ತನೆಗಳನ್ನು ಒಳಗೊಂಡಿರುವುದಲ್ಲದೆ ಉತ್ಕರ್ಷಣ, ಅಪಕರ್ಷಣ, (ಆಕ್ಸಿಡೇಷನ್, ರಿಡಕ್ಷನ್) ಪರಿವರ್ತನೆಗಳೂ ಇದರಲ್ಲಿ ಅಡಕವಾಗಿವೆ. ಇದನ್ನು ಸ್ವಷ್ಟೀಕರಿಸುವ ಕೆ
ಈ ವರ್ಗೀಕರಣದ ಸಮರ್ಥನೆ
[ಬದಲಾಯಿಸಿ]i ಓಚಿ2—ಔವು ಔ2—2— ಅಯಾನನ್ನು ಕೊಡುವುದು. ಆದ್ದರಿಂದ ಇದು ಪ್ರತ್ಯಾಮ್ಲ. Sಔ3 ಯು ಔ2— ನೊಡನೆ ಸಂಯೋಜಿಸುವುದು. ಆದ್ದರಿಂದ ಇದು ಆಮ್ಲ. ii ಏಅಓ ಅಯಯಾನ್ ಆದ ಅಓ— ಅನ್ನು ಕೊಡುವುದು. ಆದ್ದರಿಂದ ಇದು ಪ್ರತ್ಯಾಮ್ಲ. ಆ್ಯನಯಾನ್ ಆದ ಅಓ— ನೊಡನೆ ಈ e(ಅಓ)2 ಸಂಯೋಜಿಸುವುದು. ಆದ್ದರಿಂದ ಇದು ಆಮ್ಲ. iii ಓಚಿ ಎಲೆಕ್ಟ್ರಾನನ್ನು ಕೊಡುವುದು. ಆದ್ದರಿಂದ ಇದು ಪ್ರತ್ಯಾಮ್ಲ. ಅI ಎಲೆಕ್ಟ್ರಾನಿನೊಡನೆ ಸಂಯೋಜಿಸುವುದು. ಆದ್ದರಿಂದ ಇದು ಆಮ್ಲ. ಈವರೆಗೆ ವಿಮರ್ಶೆಯಿಂದ ಆಮ್ಲ ಮತ್ತು ಪ್ರತ್ಯಾಮ್ಲಗಳೆಂಬ ಪದಗಳು ನಿರಪೇಕ್ಷ ಪದಗಳಲ್ಲ. ಇವು ಸಾಪೇಕ್ಷ ಪದಗಳಾಗಿದ್ದು ಕೆಲವೊಂದು ವಿಶಿಷ್ಟ ಸನ್ನಿವೇಶಕ್ಕೆ ಸಂಬಂಧ ಹೊಂದಿರುವ ಪದಗಳು ಎನ್ನುವುದು ಸ್ಪಷ್ಟವಾಗಿರುವುದು. ಈಗ ನಾವು ಸಂಬಂಧ ವಿಮರ್ಶಿಸಿದ ಬೇರೆ ಬೇರೆ ವಾದಗಳು ಪರಸ್ಪರ ವಿರುದ್ಧ ವಾದಗಳಾಗಿಲ್ಲ. ಒಂದು ರೀತಿಯಲ್ಲಿ ಇವು ಪರಸ್ಪರ ಪೂರಕಗಳು. ಪ್ರತಿಯೊಂದು ವಾದವೂ ಆಯಾ ದೃಷ್ಟಿಯಿಂದ ಸರಿಯಾಗಿರುವುದು. ಉದಾಹರಣೆಗೆ, ನೀರಿನ ದ್ರಾವಣದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ- ಸೋಡಿಯಂ ಹೈಡ್ರಾಕ್ಸೈಡ್‍ಗಳ ಅನುಮಾಪನವನ್ನು ಪರಿಶೀಲಿಸುವಾಗ ನಾವು ಅರೀನಿಯಸ್ ವಾದಕ್ಕಿಂತ ಮುಂದೆ ಹೋಗಬೇಕಾದುದಿಲ್ಲ. ದ್ರವ ಅಮೋನಿಯದಂಥ ಜಲೇತರ (ನಾನಾಏಕ್ವಿಯಸ್) ದ್ರಾವಕಗಳಲ್ಲಿ ನಡೆಯುವ ಪರಿವರ್ತನೆಗಳ ಪರಿಶೀಲನೆಯಲ್ಲಿ ದ್ರಾವಕ ವ್ಯವಸ್ಥೆಗಳ ವಾದವನ್ನು ಅನುಸರಿಸಬೇಕಾಗುವುದು. ಯಾವುದೇ ಒಂದು ದೃಷ್ಟಿಕೋನ ಎಲ್ಲ ಸನ್ನಿವೇಶಗಳನ್ನು ವಿವರಿಸಲು ಸಮರ್ಥವಾಗಿದೆ ಎನ್ನಲಾಗುವುದಿಲ್ಲ. ಸರ್ವಸಮನ್ವಯತೆ ಹೆಚ್ಚು ಜಟಿಲವಾಗಿರುವುದು. ವ್ಯಾಪ್ತಿ ಕಡಿಮೆಯಾಗಿದ್ದರೂ ಅನೇಕ ದೃಷ್ಟಿಕೋನಗಳು ಅವುಗಳ ಸರಳತೆಯ ಕಾರಣದಿಂದ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಬಳಸಲಾಗದಿದ್ದರೂ ಹೆಚ್ಚು ಉಪಯುಕ್ತವಾದವು. ಒಂದೊಂದು ವಾದ ಒಂದೊಂದು ಅನ್ವಯ ಕ್ಷೇತ್ರವನ್ನು ಹೊಂದಿದ್ದು ಈ ಎಲ್ಲ ವಾದಗಳ ಮೂಲಭೂತ ಜ್ಞಾನ ಆಮ್ಲ-ಪ್ರತ್ಯಾಮ್ಲಗಳ ಪೂರ್ಣ ವಿವರಣೆಯನ್ನರಿಯಲು ಅಗತ್ಯ. ಸಿದ್ಧಾಂತದ ಆಧಾರದ ಮೇಲೆ ಯಾವ ವಸ್ತುಗಳು ಆಮ್ಲಗಳು, ಯಾವ ವಸ್ತುಗಳು ಪ್ರತ್ಯಾಮ್ಲಗಳು ಎಂದು ನಿರ್ಣಯಿಸುವುದು ಕಷ್ಟವಾದುದಾದರೂ ಕೆಲವು ವಸ್ತುಗಳು ಆಮ್ಲಗಳೆಂದೂ ಕೆಲವು ವಸ್ತುಗಳು ಪ್ರತ್ಯಾಮ್ಲಗಳೆಂದೂ ದೀರ್ಘ ಕಾಲದಿಂದಲೂ ಸುಪರಿಚಿತವಾಗಿದೆ. ಇಂಥ ಕೆಲವು ಸುವಿಧಿತ ಪ್ರಮುಖ ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಇವುಗಳ ಪ್ರಾಮುಖ್ಯವನ್ನು ಈ ಕೆಳಗೆ ಸಂಗ್ರಹವಾಗಿ ಕೊಟ್ಟಿದೆ. ಆಮ್ಲಗಳು: ಅಮ್ಲಗಳನ್ನು ಖನಿಜ ಆಮ್ಲಗಳು ಮತ್ತು ಸಾವಯವ ಆಮ್ಲಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಖನಿಜ ಆಮ್ಲಗಳ ಪೈಕಿ ಔಪಯೋಗಿಕ ದೃಷ್ಟಿಯಿಂದ ಸಲ್ಫ್ಯೂರಿಕ್ ಆಮ್ಲ (ಊ2Sಔ4) ಅಗ್ರಸ್ಥಾನ ಹೊಂದಿದೆ. ಫಲವತ್ಕಾರಿಗಳು (ಫರ್ಟಿಲೈಸರ್ಸ್), ರೇಯಾನ್, ನೂಲುಗಳು (ಟೆಕ್ಸ್‍ಟೈಲ್ಸ್), ವರ್ಣ ದ್ರವ್ಯಗಳು, ಸ್ಪೋಟಕಗಳು, ಸಂಶ್ಲೇಷಿತ ಶುದ್ಧಿಕಾರಕಗಳು (ಸಿಂಥೆಟಿಕ್‍ಡಿಟರ್ಜೆಂಟ್), ಅಯಾನ್ ವಿನಿಮಯಿಗಳು (ನೋಡಿ- ಅಯಾನ್-ವಿನಿಮಯಿಗಳು), ವಿವಿಧ ನಿರವಯವ ಮತ್ತು ಸಾವಯವ ಸಂಯುಕ್ತಗಳು, ಇತ್ಯಾದಿಗಳ ತಯಾರಿಕೆಗಳಲ್ಲಿಯೂ ಪೆಟ್ರೋಲಿಯಂ ಶುದ್ಧೀಕರಣ, ಲೋಹಗಳ ಶುದ್ಧೀಕರಣ, ಅದುರುಗಳಿಂದ ಲೋಹಗಳನ್ನು ತೆಗೆಯುವುದು ಮುಂತಾದ ಕಾರ್ಯಗಳಲ್ಲಿಯೂ ಸೀಸ ಸಂಗ್ರಾಹಕಗಳಲ್ಲಿಯೂ (ಲೆಡ್‍ಅ ಕ್ಯುಮ್ಯುಲೇಟರ್ಸ್) ಈ ಆಮ್ಲವನ್ನು ಆಗಾಧ ಪ್ರಮಾಣದಲ್ಲಿ ಬಳಸುವರು. ಹೈಡ್ರೊಕ್ಲೋರಿಕ್ ಆಮ್ಲ (ಊಅಟ) ಉಪಯುಕ್ತತೆಯಲ್ಲಿ ಎರಡನೆಯ ಸ್ಥಾನ ಹೊಂದಿದೆ. ಉಕ್ಕಿನ ಸಾಮಾನುಗಳ ಮೇಲೆ ತವರ ಅಥವಾ ಸತುವಿನ ಲೇಪ ಕೊಡುವ ಮುಂಚೆ ಅಥವಾ ಇವುಗಳನ್ನು ಎನ್ಯಾಮೆಲ್ ಮಾಡುವ ಮುಂಚೆ, ಈ ವಸ್ತುಗಳನ್ನು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಅದ್ದಿ, ಇವುಗಳ ಮೇಲ್ಮೈಯನ್ನು ಶುದ್ಧಗೊಳಿಸುವರು. ಇದಕ್ಕಾಗಿ ಈ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲಾಗುವುದು. ಇದನ್ನು ವಿವಿಧ ಲೋಹಗಳ ಕ್ಲೋರೈಡುಗಳ ತಯಾರಿಕೆಯಲ್ಲಿಯೂ ವರ್ಣ ದ್ರವ್ಯಗಳೂ, ಔಷಧಗಳು ಮತ್ತು ಇತರ ಅನೇಕ ವಸ್ತುಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು. ನೈಟ್ರಿಕ್ ಆಮ್ಲ (ಊಓಔ3) ಕೈಗಾರಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ, ಈ ಆಮ್ಲವನ್ನು ವಿಶೇಷವಾಗಿ ವರ್ಣ ದ್ರವ್ಯಗಳ ಮತ್ತು ಸ್ಫೋಟಕಗಳ ತಯಾರಿಕೆಗಳಲ್ಲಿ ಉಪಯೋಗಿಸುವರು. ನೈಟ್ರೇಟುಗಳು ಉತ್ತಮವಾದ ಸಸಾರಜನಕ ಫಲವತ್ಕಾರಿಗಳು (ನೈಟೋಜಿನಸ್ ಫರ್ಟಿಲೈಸರ್ಸ್). ಫಾಸ್ಫಾರಿಕ್ ಆಮ್ಲ (ಊ2ಅಔ4) ಇನ್ನೊಂದು ಖನಿಜ ಆಮ್ಲ. ಫಾಸ್ಫರಸ್ ಅಂಶದಲ್ಲಿ ಸಮೃದ್ಧವಾಗಿರುವ ಟ್ರಿಪಲ್ ಫಾಸ್ಫೇಟ್ ಎಂಬ ಫಾಸ್ಫಾಟಿಕ್ ಫಲವತ್ಕಾರಿಯ ತಯಾರಿಕೆಯಲ್ಲಿ ಇದನ್ನು ವಿಶೇಷವಾಗಿ ಬಳಸಬಹುದು. ಕಾರ್ಬಾನಿಕ್ ಆಮ್ಲ (ಊ2ಅಔ3) ದ್ರಾವಣದಲ್ಲಿ ಮಾತ್ರ ಅಸ್ತಿತ್ವವನ್ನು ಹೊಂದಿರುವ ಆಮ್ಲ. ಎಲ್ಲ ಅನಿಲ ಸಂಸ್ಕಾರಿಕ (ಏರೇಟೆಡ್) ಪಾನೀಯಗಳಲ್ಲಿಯೂ ಈ ಆಮ್ಲ ವಿಲೀನವಾಗಿರುವುದಲ್ಲದೆ ಇದನ್ನು ಪ್ರಮುಖ ಪ್ರತ್ಯಾಮ್ಲಗಳಲ್ಲಿ ಒಂದಾದ ವಾಷಿಂಗ್ ಸೋಡ ಅಥವಾ ಸೋಡಿಯಂ ಕಾರ್ಬೋನೇಟನ ಓಚಿ2ಅಔ3 ತಯಾರಿಕೆಯಲ್ಲಿ ವಿಶೇಷವಾಗಿ ಬಳಸಬಹುದು. ಬೋರಿಕ್ ಆಮ್ಲ (ಊ2ಃಔ3): ರೋಗಾಣುನಿರೋಧಕ ಗುಣವನ್ನು ಹೊಂದಿರುವ ಈ ಆಮ್ಲವನ್ನು ಔಷಧಾಲಯಗಳಲ್ಲಿ ಗಾಯಗಳ ಚಿಕಿತ್ಸೆಯಲ್ಲಿ ಉಪಯೋಗಿಸುವರು. ಸಾವಯವ ಆಮ್ಲಗಳು: ಎಲ್ಲ ಸಾವಯವ ಆಮ್ಲಗಳ ಅಣುಗಳಲ್ಲಿಯೂ ಮತ್ತು ಅಸಿಟಿಕ್ ಆಮ್ಲಗಳ ಅಣುಗಳಲ್ಲಿಯೂ ಕಾರ್ಬಾಕ್ಸಿಲಿಕ್ ಗುಂಪು ಅಔಔಊ ಇರುವುದು. ಫಾರ್ಮಿಕ್ ಆಮ್ಲ ಊ.ಅಔಔಊ ಮತ್ತು ಅಸಿಟಿಕ್ ಆಮ್ಲ ಅಊ3ಅಔಔಊ ಗಳು ಅತ್ಯಂತ ಸರಳವಾದ ಎರಡು ಸಾವಯವ ಆಮ್ಲಗಳು. ಅಸಿಟಿಕ್ ಆಮ್ಲವನ್ನು ಪಾಶ್ಚಾತ್ಯ ದೇಶಗಳಲ್ಲಿ ವಿನಿಗರ್ ಎಂಬ ಹೆಸರಿನಿಂದ ಹುಳಿ ರುಚಿ ಕೊಡಲು ಆಹಾರ ಪದಾರ್ಥಗಳಲ್ಲಿ ವಿಶೇಷವಾಗಿ ಬಳಸುವರು. ಅನೇಕ ಸಾವಯವ ಸಂಯುಕ್ತಗಳ ತಯಾರಿಕೆಯಲ್ಲಿಯೂ ಸಫೇಡು (ವೈಟ್‍ಲೆಡ್) ಎಂಬ ಪ್ರಮುಖ ಬಿಳಿಯ ಬಣ್ಣದ ತಯಾರಿಕೆಯಲ್ಲಿಯೂ ಅಸಿಟಿಕ್ ಆಮ್ಲವನ್ನು ಬಳಸುವರು. ಹೆಚ್ಚಿನ ಇಂಗಾಲ ಪರಮಾಣುಗಳು ಅಣುವಿನಲ್ಲಿರುವ ಇದೇ ಗುಂಪಿನ ಅಮ್ಲಗಳಾದ ಸ್ಟೀರಿಕ್ ಆಮ್ಲ ಅ17ಊ35.ಅಔಔಊ ಮತ್ತು ಪಾಮಿಟಿಕ್ ಆಮ್ಲ ಊ3ಅ. ಗಳನ್ನು ಹೆಚ್ಚಿನ ಉಷ್ಣದಲ್ಲಿರುವ ಹಬೆಯ (ಸೂಪರ್‍ಹೀಟೆಡ್ ಸ್ಟೀಂ) ಸಹಾಯದಿಂದ ಕೊಬ್ಬಿನ ಜಲ ವಿಶ್ಲೇಷಣ (ಹೈಡ್ರೊಲಿಸಿಸ್) ಮಾಡಿ ತಯಾರಿಸುವರು. ಈ ಆಮ್ಲಗಳನ್ನು ಮೇಣದ ಬತ್ತಿಯ ತಯಾರಿಕೆಯಲ್ಲಿ ಉಪಯೋಗಿಸುವರು. ಬ್ಯುಟರಿಕ್ ಅ3ಊ7.ಅಔಔಊ: ಇದು ಬೆಣ್ಣೆಯಲ್ಲಿ ಗ್ಲಿಸರೀನ್ ಸಂಯುಕ್ತ ರೂಪದಲ್ಲಿರುವುದು. ಬಹಳ ಕಾಲವಿಟ್ಟ ಬೆಣ್ಣೆ ನಿಧಾನವಾಗಿ ವಿಶ್ಲೇಷಿಸಿ ಬ್ಯುಟರಿಕ್ ಆಮ್ಲವನ್ನು ಕೊಡುವುದು. ಈ ಬ್ಯುಟರಿಕ್ ಆಮ್ಲವೇ ಬಹಳ ದಿನವಿಟ್ಟ ಬೆಣ್ಣೆಯ ಕೊಳಕು ವಾಸನೆಗೆ ಕಾರಣ. ಬೆಣ್ಣೆಯನ್ನು ಅಡಿಗೆ ಸೋಡದ (ಓಂಊಅಔ3) ದ್ರಾವಣದಿಂದ ತೊಳೆದರೆ ಈ ಆಮ್ಲ ಅದರೊಡನೆ ವರ್ತಿಸಿ ಬೆಣ್ಣೆಯ ಕೆಟ್ಟ ವಾಸನೆ ಹೋಗುವುದು. ಡೈಕಾರ್ಬಾಕ್ಸಿಲಿಕ್ ಆಮ್ಲ ಮತ್ತು ಟ್ರೈಕಾರ್ಬಾಕ್ಸಿಲಿಕ್ ಆಮ್ಲಗಳಲ್ಲಿ ಎರಡು ಮತ್ತು ಮೂರು ಕಾರ್ಬಾಕ್ಸಿಲಿಕ್ ಗುಂಪುಗಳಿರುವುವು. ಟಾರ್ಟಾರಿಕ್ ಆಮ್ಲ ಊಔಔಅ(ಅಊಔಊ)2ಅಔಔಊ ಹುಣಿಸೆಹಣ್ಣಿನಲ್ಲಿಯೂ ಸಿಟ್ರಿಕ್ ಆಮ್ಲ ಅ(ಔಊ),ಅಔಔಊ.ಅಊ2ಅಔಔಊ ನಿಂಬೆ ಹಣ್ಣಿನ ಜಾತಿಯ ಹಣ್ಣುಗಳಲ್ಲಿಯೂ ಇರುವುದು. ಈ ಆಮ್ಲಗಳನ್ನು ಪಾನೀಯ ವಿಶೇಷಗಳಿಗೆ ಹುಳಿರುಚಿಕೊಡಲು ಉಪಯೋಗಿಸುವರು. ಹಣ್ಣುಗಳ ಹುಳಿಗೆ ಒಂದಲ್ಲೊಂದು ಸಾವಯವ ಆಮ್ಲ ಕಾರಣ.
ಸ್ಯಾಲಿಸಿಲಿಕ್ ಆಮ್ಲ : ಇದೊಂದು ಆರೋಮ್ಯಾಟಿಕ್ ಹೈಡ್ರಾಕ್ರ್ಸಿ ಆಮ್ಲ. ಇದರ ಅನೇಕ ಸಂಯುಕ್ತಗಳನ್ನು ಔಷಧಗಳಲ್ಲಿ ಉಪಯೋಗಿಸುವರು. ಇಂಥ ಸಂಯುಕ್ತಗಳಲ್ಲಿ ಒಂದಾದ ಅಸಿಟೈಲ್ ಸ್ಯಾಲಿಸಿಕ್ ಆಮ್ಲ ಸುವಿದಿತ ವೇದನಾಹಾರಿಯಾದ ಆಸ್ಪರಿನ್. ಫ್ರ್ಯಾಲಿಕ್ ಆಮ್ಲ ಅಥವಾ 1-2 ಕಾರ್ಬಾಲಿಕ್ ಬೆನ್‍ಜೋಯಿಕ್ ಆಮ್ಲ. ಇಂಡಿಗೋ ಎಂಬ ನೀಲಿ ಬಣ್ಣದ ತಯಾರಿಕೆಯಲ್ಲಿ ಇದು ಪ್ರಮುಖಪಾತ್ರ ಹೊಂದಿರುವುದು. ಟ್ಯಾನಿಕ್ ಆಮ್ಲ ಟ್ಯಾನ್ ಮರದ ತೊಗಟೆಗಳಲ್ಲಿದ್ದು ಚರ್ಮ ಹದಮಾಡುವ ಕಾರ್ಯಕ್ಕೆ ವಿಶೇಷವಾಗಿ ಬಳಸಲ್ಪಡುವುದು. ಫೀನಾಲ್ ಅ6ಊ5ಔಊ; ಇದನ್ನು ಕಾರ್ಬಾಲಿಕ್ ಆಮ್ಲವೆಂದೂ ಕರೆಯುವರು. ಇದು ಸೋಡಿಯಂ ಹೈಡ್ರಾಕ್ಸೈಡಿನೊಡನೆ ವರ್ತಿಸಿ ಸೋಡಿಯಮ ಫೀನೆಟನ್ನು ಅ6ಊ5ಔಓಚಿ ಕೊಡುವುದು. ಈ ಕ್ರಿಮಿನಾಶಕವಾಗಿ ಉಪಯೋಗಿಸವ ಪಿನೈಲ್‍ನ ಕ್ರಿಯಾತ್ಮಕಾಂಶದ ಬಹು ಭಾಗ ಇದೇ ಆಗಿರುವುದು. ಬೇಕಲೈಟ್ ಎಂಬ ಪ್ಲಾಸ್ಟಿಕು ಫೀನಾಲ್-ಫಾರ್ಮಾಲ್ಡಿಹೈಡುಗಳ ಸಾಂದ್ರೀಕರಣ ಫಲಿತವಸ್ತು. ಅಮೈನೊ ಆಮ್ಲಗಳು: ಸಾವಯವ ಆಮ್ಲಗಳ ಪೈಕಿ ಇನ್ನೊಂದು ಪ್ರಮುಖ ಗುಂಪು. ಇವುಗಳ ಅಣುಗಳಲ್ಲಿ ಆಮ್ಲೀಯ ಗುಂಪಾದ_ಅಔಔಊ ಮತ್ತು ಪ್ರತ್ಯಾಮ್ಲೀಯ ಗುಂಪಾದ - ಓಊ2 ಎರಡೂ ಇದ್ದು ; ಇವು ಆಮ್ಲ-ಪ್ರತ್ಯಾಮ್ಲಗಳೆರಡರ ಸ್ವಭಾವವನ್ನೂ ಹೊಂದಿರುವುವು. ಈ ಗುಂಪಿನ ಆಮ್ಲಗಳ ಪೈಕಿ ಗ್ಲೈಸಿನ್ ಊ2ಓ.ಅಊ2.ಅಔಔಊ ಅತ್ಯಂತ ಸರಳವಾದುದು. 21 ಅಮೈನೊ ಆಮ್ಲಗಳು ಪ್ರಾಣಿಜ-ಪ್ರೋಟೀನುಗಳ ರಚನೆಯಲ್ಲಿ ಪಾತ್ರ ವಹಿಸಿರುವುವು. ಜೀವಿಯ ಸಮಸ್ತ ಜೈವಿಕ ಚಟುವಟಿಕೆಗಳೂ ಪ್ರೋಟೀನುಗಳ ಸಹಾಯದಿಂದಲೇ ನಡೆಯುತ್ತಿರುವವು. ಅಮೈನೊ ಆಮ್ಲದ ಒಂದು ಅಣುವಿನ- ಓಊ2 ಗುಂಪು ಇನ್ನೊಂದು ಅಣುವಿನ-ಅಔಔಊ ನೊಡನೆ ಜೊತೆಗೂಡಿ ಇವೆರಡು ಅಣುಗಳು ಒಂದಾಗುವುವು.
ಹೀಗೆ ಜೊತೆಗೂಡಿ ಆದ ಎರಡು ಅಣುಗಳು ಪುನಃ ಇದೇ ಮಾದರಿಯಲ್ಲಿ ಜೊತೆಗೂಡುವುವು. ಈ ವಿಧವಾದ ಸಂಯೋಜನೆಯ ಆವರ್ತನದಿಂದ ಅತಿ ದೀರ್ಘ ಶ್ರೇಣಿಯ ಪ್ರೋಟಿನ್ ಅಣುಗಳಾಗುವುವು. ಪ್ರೊಟೀನ್ ಅಣುಗಳ ರಚನೆಯಲ್ಲಿರುವ ಅಮೈನೋ ಅಮ್ಲಗಳು ಅವು ಜೋಡಿಸಿರುವ ರೀತಿ, ಇವುಗಳ ವ್ಯತ್ಯಾಸಗಳು ಪ್ರೊಟೀನುಗಳ ವೈವಿಧ್ಯಕ್ಕೆ ಕಾರಣ. ಶರೀರದ ಸಮಸ್ತ ಚಟುವಟಿಕೆಗಳನ್ನೂ ನಿರ್ದೇಶಿಸುವ ಮತ್ತು ನಿಯಂತ್ರಿಸುವ ಈ ಪ್ರೊಟೀನುಗಳ ಇತ್ತೀಚಿನ ಸಂಶೋಧನೆಗಳು ಮಹತ್ತ್ವಪೂರ್ಣವಾದ ಮತ್ತು ಸ್ವಾರಸ್ಯವಾದ ಅಂಶಗಳನ್ನು ಬಯಲಿಗೆ ತಂದಿವೆ.
ಪ್ರತ್ಯಾಮ್ಲಗಳು: ಪ್ರತ್ಯಾಮ್ಲಗಳನ್ನು ಸಹ ನಿರವಯವ ಮತ್ತು ಸಾವಯವ ಎಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಅವುಗಳಲ್ಲಿ ಪ್ರಮುಖವಾದ ಎಲ್ಲವನ್ನೂ ಈ ಕೆಳಗೆ ಸಂಗ್ರಹವಾಗಿ ವಿವರಿಸಿದೆ.
ನಿರವಯವ ಪ್ರತ್ಯಾಮ್ಲಗಳು: ಕ್ಷಾರಲೋಹಗಳ ಹೈಡ್ರಾಕ್ಸೈಡುಗಳು (ಅಲ್ಕಲಿಮೆಟಲ್ ಹೈಡ್ರಾಕ್ಸೈಡ್) ಇವುಗಳ ಪೈಕಿ ಸೋಡಿಯಂ ಹೈಡ್ರಾಕ್ಸೈಡ್ ಓಚಿಔಊ ಮತ್ತು ಪೊಟ್ಯಾಸಿಯ ಹೈಡ್ರಾಕ್ಸೈಡ್ ಏಔಊ ಮುಖ್ಯವಾದವು. ಇವುಗಳ ಪೈಕಿ ಸೋಡಿಯಂ ಹೈಡ್ರಾಕ್ಸೈಡು ಹೆಚ್ಚು ಬಳಸಲ್ಪಡುವ ಪ್ರತ್ಯಾಮ್ಲ. ಇದನ್ನು ಅನೇಕ ರಾಸಾಯನಿಕ ವಸ್ತುಗಳು, ರೇಯಾನು, ವಿಸ್ಕೋಸ್ ರೇಷ್ಮೆ, ಸೆಲ್ಯುಲೋಸ್ ಫಿಲ್ಮುಗಳು, ಸೋಪುಗಳು ಕಾಗದ ಮುಂತಾದುವುಗಳ ತಯಾರಿಕೆಗಳಲ್ಲಿಯೂ ಪೆಟ್ರೋಲಿಯಂ ಶುದ್ಧೀಕರಣದಲ್ಲಿಯೂ ಟಾಕ್ಸೈಟ್ ಅದುರನ್ನು ಶುದ್ಧ ಮಾಡಲೂ ಇತರ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು.
ಕ್ಷಾರಲೋಹಗಳ ಕಾರ್ಬೋನೇಟುಗಳು: ಸೋಡಿಯಂ ಕಾರ್ಬೋನೇಟ್ ಅಥವಾ ವಾಷಿಂಗ್‍ಸೋಡ ಓಚಿ2ಅಔ3 ಮತ್ತು ಪೊಟ್ಯಾಸಿಯಂ ಕಾರ್ಬೋನೇಟ್ ಏ2ಅಔ3ಗಳು ವಿಶೇಷವಾಗಿ ಬಳಸಲ್ಪಡುವ ಅಲ್ಕಲಿ ಕಾರ್ಬೋನೇಟುಗಳು, ಸೋಡಿಯಂ ಕಾರ್ಬೋನೇಟನ್ನು ಗಾಜು, ಸೋಪಿನ ಪುಡಿ ಮತ್ತು ಇತರ ಶುದ್ಧಿಕಾರಕ ವಸ್ತುಗಳ (ಕ್ಲೀನ್‍ಸಂಗ್ ಏಜೆಂಟ್ಸ) ತಯಾರಿಕೆಯಲ್ಲಿಯೂ, ನೀರನ್ನು ಮೆದು ಮಾಡಲು ಮತ್ತು ಇತರ ಅನೇಕ ರಾಸಾಯನಿಕ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು. ಪೊಟ್ಯಾಸಿಯಂ ಕಾರ್ಬೋನೇಟನ್ನು ಗಟ್ಟಿಗಾಜಿನ ತಯಾರಿಕೆಯಲ್ಲಿಯೂ ಅನೇಕ ಉಪಯುಕ್ತ ಪೊಟ್ಯಾಸಿಯಂ ಸಂಯುಕ್ತಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು.
ಕ್ಯಾಲ್ಸಿಯಂ ಆಕ್ಸೈಡ್ ಅಚಿಔ, ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅಚಿ(ಔಊ)2 ಮತ್ತು ಕ್ಯಾಲ್ಸಿಯಂ ಕಾರ್ಬೋನೇಟ್ ಅಚಿಅಔ3 ಅತ್ಯಂತ ವಿಸ್ತøತವಾಗಿ ಮತ್ತು ಅಗಾಧ ಪ್ರಮಾಣಗಳಲ್ಲಿ ಉಪಯೋಗಿಸಲ್ಪಡುವ ಪ್ರತ್ಯಾಮ್ಲಗಳಲ್ಲಿ ಇವು ಅಗ್ರಸ್ಥಾನವನ್ನು ಹೊಂದಿವೆ.
ಕ್ಯಾಲ್ಸಿಯಂ ಹೈಡ್ರಾಕ್ಸೈಡನ್ನು ಕಟ್ಟಡ ನಿರ್ಮಾಣಗಳಲ್ಲಿ ಅವಶ್ಯವಾದ ಗಾರೆಯನ್ನು ತಯಾರಿಸಲೂ, ನೂಲುಗಳನ್ನು ಚೆಲುವೆಮಾಡಲು ಉಪಯೋಗಿಸುವ ಚೆಲುವೆಪುಡಿಯ (ಬ್ಲೀಚಿಂಗ್ ಪೌಡರ್) ತಯಾರಿಕೆಯಲ್ಲಿಯೂ ಇನ್ನೊಂದು ಪ್ರಮುಖ ಪ್ರತ್ಯಾಮ್ಲವಾದ ಕಾಸ್ಟಿಕ್ ಸೋಡದ ತಯಾರಿಕೆಯಲ್ಲಿಯೂ ಚರ್ಮ ಹದಮಾಡುವ ಕಾರ್ಖಾನೆಗಳಲ್ಲಿಯೂ ಉಪಯೋಗಿಸುವರು. ಕ್ಯಾಲ್ಸಿಯಂ ಆಕ್ಸೈಡ್‍ನ್ನು ಇದರ ಹೈಡ್ರಾಕ್ಸೈಡಿನ ತಯಾರಿಕೆಯಲ್ಲಿ ಉಪಯೋಗಿಸುವರಲ್ಲದೆ ಭೂಮಿಯ ಆಮ್ಲೀಯತೆಯನ್ನು ಸರಿಪಡಿಸಲೂ ಹಾಗೂ ಕ್ಯಾಲ್ಸಿಯಂ ಕಾರ್ಬೈಡ್ ಮುಂತಾದ ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿಯೂ ಉಪಯೋಗಿಸುವರು. ಕ್ಯಾಲ್ಸಿಯಂ ಕಾರ್ಬೋನೇಟು ವಿವಿಧ ರೂಪಗಳಲ್ಲಿ ದೊರೆಯುವುದು. ಕಟ್ಟಡಗಳಲ್ಲಿ ಸೌಂದರ್ಯಕ್ಕಾಗಿ ಉಪಯೋಗಿಸುವ ಅಮೃತಶಿಲೆ ಕ್ಯಾಲ್ಸಿಯಂ ಕಾರ್ಬೋನೇಟಿನ ಒಂದು ರೂಪ. ಸುಣ್ಣಕಲ್ಲಿನ ರೂಪದಲ್ಲಿ ಪ್ರಕೃತಿಯಲ್ಲಿ ಅಗಾಧ ಪ್ರಮಾಣದಲ್ಲಿ ದೊರೆಯುವ ಕ್ಯಾಲ್ಸಿಯಂ ಕಾರ್ಬೋನೇಟ್‍ನ್ನು ಕ್ಯಾಲ್ಸಿಯಂ ಆಕ್ಸೈಡಿನ ತಯಾರಿಕೆಯಲ್ಲಿಯೂ ಲೋಹ ತಯಾರಿಕೆಯಲ್ಲಿ ಸ್ರಾವಕ (ಫ್ಲಕ್ಸ್) ಆಗಿಯೂ ಇತರ ರಾಸಾಯನಿಕ ಕೈಗಾರಿಕೆಗಳಲ್ಲಿಯೂ ಉಪಯೋಗಿಸುವರು. ಕ್ಯಾಲ್ಸಿಯಂ ಕಾರ್ಬೋನೇಟ್-ಮೆಗ್ಮೀಸಿಯಂ ಕಾರ್ಬೋನೇಟುಗಳ ಯುಗ್ಮ ಲವಣವಾದ ದಾಲಮೈಟ್ ಅಚಿಅಔ3,ಒgಅಔ3 ಅನ್ನು ಉಕ್ಕು ಮತ್ತು ಅನೇಕ ಲೋಹಗಳ ತಯಾರಿಕೆಯಲ್ಲಿ ಉಪಯೋಗಿಸುವ ಕುಲುಮೆಗಳಿಗೆ ಅಸ್ತರಿ ಕೊಡಲು (ಲೈನಿಂಗ್) ಉಪಯೋಗಿಸುವರು.
ಸೋಡಿಯಂ ಫಾಸ್ಫೇಟ್ ಓಚಿ3Pಔ4 ಮತ್ತು ಬೋರಾಕ್ಸ್ ಓಚಿ2ಃ4ಔ7 ಗಳನ್ನು ಅನೇಕ ಶುದ್ಧಿಕಾರಕ ಪುಡಿಗಳಲ್ಲಿ ಉಪಯೋಗಿಸುವರು. ಇವು ದ್ರಾವಣದಲ್ಲಿ ಕ್ಷಾರಗಳಂತೆ ವರ್ತಿಸಿ ಜಿಡ್ಡು ಮೊದಲಾದ ಕಶ್ಮಲಗಳನ್ನು ತೊಡೆದು ಹಾಕಲು ಸಮರ್ಥವಾಗುವುವು. ಸೋಡಿಯಂ ಫಾಸ್ಫೇಟನ್ನು ನೀರನ್ನು ಮೆದುಮಾಡಲು ಉಪಯೋಗಿಸುವರು.
ಸಾವಯವ ಪ್ರತ್ಯಾಮ್ಲಗಳು: ಇವುಗಳ ಪೈಕಿ ಅಲಿಫ್ಯಾಟಿಕ್ ಮತ್ತು ಅರೋಮ್ಯಾಟಿಕ್ ಅಮೀನ್‍ಗಳು ಮುಖ್ಯವಾದುವು. ಮೀಥೈಲ್-, ಈಥೈಲ್-, ಬ್ಯೂಟೈಲ್- ಮತ್ತು ಅಮೈಲ್- ಅಮೀನ್‍ಗಳನ್ನು ಖ-ಓಊ2(ಖ=ಅಊ3) ಅಥವಾ -ಅ2ಊ5 - ಅಥವಾ ಅ3ಊ7- ಅಥವಾ ಅ4ಊ10) ವರ್ಣದ್ರವ್ಯಗಳು, ಕ್ರಿಮಿನಾಶಕಗಳು, ಸಂಶ್ಲೇಷಿತ ಶುದ್ಧಿಕಾರಕಗಳು ಕೃತಕ ನೂಲುಗಳು, ತುಕ್ಕು ಹಿಡಿಯುವುದನ್ನು ತಡೆಗಟ್ಟುವ ವಸ್ತುಗಳು ಮತ್ತು ವಿಶೇಷ ತರಹದ ದ್ರಾವಕಗಳು-ಇವುಗಳ ತಯಾರಿಕೆಗಳಲ್ಲಿ ಕಚ್ಚಾ ವಸ್ತುಗಳಾಗಿ ಉಪಯೋಗಿಸುವರು. ಟೆಟ್ರಮಿಥಿಲೀನ್ ಡೈಅಮೀನ್ ಊ2ಓ(ಅಊ2)4ಓಊ2 ಮತ್ತು ಅಡಿಪಿಕ್ ಆಮ್ಲ ಊಔಔಅ(ಅಊ2)6ಅಔಔಊ ಸಾಂದ್ರೀಕರಣದಿಂದ ಸುಪ್ರಸಿದ್ಧವಾದ ನೈಲಾನ್‍ನ ನೂಲನ್ನು ತಯಾರಿಸುವರು.
ಅನಿಲೀನ್ ಅ6ಊ5ಓಊ2 ಮತ್ತು ಮೆಟಫಿನಿಲೀನ್ ಡೈಅಮೀನ್ ಮುಂತಾದ ವಿವಿಧ ಆರೋಮ್ಯಾಟಿಕ್ ಅಮೀನ್‍ಗಳನ್ನು ಅನಿಲೀನ್ ವರ್ಣ ದ್ರವ್ಯಗಳು ಮತ್ತು ಅeóÉೂ ಗುಂಪಿನ ವರ್ಣದ್ರವ್ಯಗಳು-ಇವುಗಳ ತಯಾರಿಕೆಯಲ್ಲಿ ಉಪಯೋಗಿಸುವರು.
ಪಿರಿಡೀನ್ ಅ5ಊ5ಓ ಮತ್ತು ಈ ಗುಂಪಿಗೆ ಸೇರಿದ ಇತರ ಅನೇಕ ಸಂಯುಕ್ತಗಳು ಹೆಟರೋ ಸೈಕ್ಲಿಕ್ ಸಂಯುಕ್ತಗಳ ಗುಂಪಿಗೆ ಸೇರಿದ ಪ್ರತ್ಯಾಮ್ಲಗಳು. ಸುಪ್ರಸಿದ್ಧವಾದ ಕ್ವಿನೈನ್ ಮತ್ತು ಹೊಗೆಸೊಪ್ಪಿನಲ್ಲಿರುವ ನಿಕೊಟಿನ್‍ಗಳೂ ಈ ಗುಂಪಿನ ಪ್ರತ್ಯಾಮ್ಲಗಳು. ಇವುಗಳನ್ನು ಅನೇಕ ಔಷಧಗಳ ತಯಾರಿಕೆಯಲ್ಲಿಯೂ ಬೂಷ್ಟು ನಿರೋಧಕ ವಸ್ತುಗಳ (ಫಂಗಿಸೈಡ್ಸ್) ತಯಾರಿಕೆಯಲ್ಲಿಯೂ ವಿಶೇಷವಾಗಿ ಬಳಸುವರು