ವಿಷಯಕ್ಕೆ ಹೋಗು

ಸದಸ್ಯ:Lakshmi Narayana A/ನನ್ನ ಪ್ರಯೋಗಪುಟ5

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣಾಪುರ ಮಠ

(ಶ್ರೀಜನಾರ್ಧನತೀರ್ಥ ಪೀಠ)[]

ಕೃಷ್ಣಾಪುರ ಮಠ ಅಥವ ಮಾದವ ಮಠ ಉಡುಪಿ ಅಷ್ಟ_ಮಠಗಳಲ್ಲಿ ಒಂದು.ಶ್ರೀ ಮಧ್ವಾಚಾರ್ಯರು ಈ ಮಠವನ್ನು ಸ್ಥಾಪಿಸಿದರು.ಮಠದ 35ನೇ ಯತಿಗಳಾಗಿರುವ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮಿಗಳು ಪ್ರಸ್ತುತ ಮಠದ ಪೀಠಾಧಿಪತಿಗಳಾಗಿರುವರು[]. ಈ ಮಠದ ಸಂಸ್ಥಾಪಕ ಪೀಠಾಧಿಪತಿಗಳು ಶ್ರೀ ಜನಾರ್ಧನತೀರ್ಥರು.ಕಾಳಿಂಗಮರ್ದನ ಕೃಷ್ಣ ಇಲ್ಲಿನ ಪಟ್ಟದ ದೇವರು. ಮಠದಲ್ಲಿ ಮುಖ್ಯಪ್ರಾಣ ಹನುಮನ ಗುಡಿ ಇದ್ದು,ಅಲ್ಲಿ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಮಠದ ಶಾಖೆಗಳನ್ನು ಉಡುಪಿ,ರಾಮನಕಟ್ಟೆ,ಪಡಿಗಾರು,ಪೇಜಾವರ,ದಂಡಿತೀರ್ಥ,ಪಡುಬಿದ್ರೆ,ದಕ್ಷಿಣಕನ್ನಡ ಜಿಲ್ಲೆ,ಪ್ರಯಾಗ(ಅಲಹಾಬಾದ್) ಮತ್ತು ಭಾರತದ ವಿವಿದ ಕ್ಷೇತ್ರಗಳಲ್ಲಿ ಕಾಣಬಹುದು.

ಮಠದ ಸಂಪತ್ತಿನಡಿಯಲ್ಲಿ ನೂರಾರು ಎಕರೆ ಭೂಮಿ ಇದ್ದರೂ. ೧೯೭೪ ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೆವರಾಜ ಅರಸ್ ಅವರ "ಉಳುವವನಿಗೆ ಭೂಮಿ" ಕಾಯ್ದೆ ಅಡಿಯಲ್ಲಿ ಸಾಕಷ್ಟು ಭೂಮಿ ಕಳೆದುಕೊಂಡಿದೆ.[]

ಈ ಮಠವು ಮಂಗಳೂರಿನ ಸೂರತ್ಕಲ್ ನಿಂದ ೩ ಕಿ.ಮಿ. ದೂರದಲ್ಲಿ ಇರುವ ಕೃಷ್ಣಾಪುರ, ಕರ್ನಾಟಕ ದಲ್ಲಿ ಇದೆ. ಪ್ರಸ್ತುತ ಇರುವ ಮಠವನ್ನು ೩೫ನೇ ಯತಿಗಳಾಗಿದ್ದ ವಿದ್ಯಾಮೂರ್ತಿ ತೀರ್ಥರು ಪುನಷ್ಚೇತನಗೊಳಿಸಿರುವರು. ಮಠದ ಕಟ್ಟಡ ಪೂರ್ಣ ಮರದಿಂದ ಕಟ್ಟಲ್ಪಟ್ಟಿದೆ.


ಚಿತ್ರಗಳು

[ಬದಲಾಯಿಸಿ]
Sanctum Santorum

ಕೃಷ್ಣಾಪುರ ಮಠದ ಪೀಠಾಧಿಪತಿಗಳು

[ಬದಲಾಯಿಸಿ]
  • ಶ್ರೀ ಮದ್ವಾಚಾರ್ಯ(1238-1317)
  • ಶ್ರೀ ಜನಾರ್ಧನ ತೀರ್ಥ(1317-1319)
  • ಶ್ರೀ ಶ್ರೀವತ್ಸಂಗ ತೀರ್ಥ(1319-1359)
  • ಶ್ರೀ ವಗೀಶ ತೀರ್ಥ(1359-1407)
  • ಶ್ರೀ ಲೋಕೇಶ ತೀರ್ಥ(1407-1447)
  • ಶ್ರೀ ಲೋಕನಾಥ ತೀರ್ಥ(1447-1461)
  • ಶ್ರೀ ಲೋಕಪೂಜ್ಯ ತೀರ್ಥ(1461-1473)
  • ಶ್ರೀ ವಿದ್ಯಾರಾಜ ತೀರ್ಥ(1473-1483)
  • ಶ್ರೀ ವಿಶ್ವಾದಿರಾಜ ತೀರ್ಥ(1483-1493)
  • ಶ್ರೀ ವಿಶ್ವಾದೀಶ ತೀರ್ಥ(1493-1506)
  • ಶ್ರೀ ವಿಶ್ವೇಶ ತೀರ್ಥ(1506-1519)
  • ಶ್ರೀ ವಿಶ್ವವನ್ದ್ಯ ತೀರ್ಥ(1519-1530)
  • ಶ್ರೀ ವಿಶ್ವರಾಜ ತೀರ್ಥ(1530-1541)
  • ಶ್ರೀ ಧರಣೀಧರ ತೀರ್ಥ(1541-1555)
  • ಶ್ರೀ ಧರಾಧರ ತೀರ್ಥ(1555-1567)
  • ಶ್ರೀ ಪ್ರಙ್ಙಾಮೂರ್ತಿ ತೀರ್ಥ - ೧(1567-1578)
  • ಶ್ರೀ ತಪೋಮೂರ್ತೀ ತೀರ್ಥ(1578-1589)
  • ಶ್ರೀ ಸುರೇಶ್ವರ ತೀರ್ಥ(1589-1601)
  • ಶ್ರೀ ಜಗನ್ನಾಥ ತೀರ್ಥ(1601-1614)
  • ಶ್ರೀ ಸುರೇಶ ತೀರ್ಥ(1614-1627)
  • ಶ್ರೀ ವಿಶ್ವಪುಂಗವ ತೀರ್ಥ(1627-1638)
  • ಶ್ರೀ ವಿಶ್ವವಲ್ಲಭ ತೀರ್ಥ(1638-1649)
  • ಶ್ರೀ ವಿಶ್ವಭೂಶಣ ತೀರ್ಥ(1649-1659)
  • ಶ್ರೀ ಯಾದವೇಂದ್ರ ತೀರ್ಥ(1659-1670)
  • ಶ್ರೀ ಪ್ರಙ್ಞಮೂರ್ತಿ ತೀರ್ಥ -೨(1670-1701)
  • ಶ್ರೀ ವಿದ್ಯಾದೀರಜ ತೀರ್ಥ(1701-1705)
  • ಶ್ರೀ ವಿದ್ಯಾಮೂರ್ತಿ ತೀರ್ಥ(1705-1766)
  • ಶ್ರೀ ವಿದ್ಯಾವಲ್ಲಭ ತೀರ್ಥ(1766-1775)
  • ಶ್ರೀ ವಿದ್ಯೈಂದ್ರ ತೀರ್ಥ(1775-1784)
  • ಶ್ರೀ ವಿದ್ಯಾನಿಧಿ ತೀರ್ಥ(1784-1799)
  • ಶ್ರೀ ವಿದ್ಯಾಸಮುದ್ರ ತೀರ್ಥ(1799-1820)
  • ಶ್ರೀ ವಿದ್ಯಾಪತಿ ತೀರ್ಥ ( Expired before assuming office )(1820-1820)
  • ಶ್ರೀ ವಿದ್ಯಾದೀಶ ತೀರ್ಥ(1820-1886)
  • ಶ್ರೀ ವಿದ್ಯಾಪೂರ್ಣ ತೀರ್ಥ(1886-1938)
  • ಶ್ರೀ ವಿದ್ಯಾರತ್ನ ತೀರ್ಥ(1938-1972)
  • ಶ್ರೀ ವಿದ್ಯಾಸಾಗರ ತೀರ್ಥ(ಪ್ರಸ್ತುತ ಸ್ವಾಮಿಜೀ)(1972)

ಉಲ್ಲೇಖಗಳು

[ಬದಲಾಯಿಸಿ]
  1. https://kannada.oneindia.com/news/udupi/udupi-sri-krishna-mutt-and-eight-seers/articlecontent-pf28268-085402.html
  2. https://www.thehindu.com/archive/print/2005/12/31/ | ದಿ ಹಿಂದು ದಿನಪತ್ರಿಕೆ
  3. "Special court for disposal of land disputes". Chennai, India: The Hindu, English daily newspaper of India. 2009-09-05. Retrieved 2009-09-23.